ಮೇಕ್ ಇನ್ ಇಂಡಿಯಾ  : ನಮ್ಮ ದೇಶದ ರಕ್ಷಣೆ ನಮ್ಮಿಂದ ಸಾಧ್ಯ.

Source: jagadish vaddina | By Arshad Koppa | Published on 8th March 2017, 8:34 AM | Special Report | Technology |

ಭಾರತ ದೇಶವು ಶಾಂತಿಪ್ರಿಯ ರಾಷ್ಟ್ರವಾಗಿದೆ. ಯಾವತ್ತೂ ನೆರೆರಾಷ್ಟ್ರಗಳ ವಿರುದ್ಧ ಸುಮ್ಮ ಸುಮ್ಮನೆ ಯುದ್ಧ ಮಾಡಿಲ್ಲ. ಆದರೆ ನೆರೆಯಲ್ಲಿ ಶತ್ರುಗಳಿರುವಾಗ ನಮ್ಮ ದೇಶದ ರಕ್ಷಣೆಗಾಗಿ ಸೈನ್ಯ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಅವಶ್ಯಕ ರಕ್ಷಣೆಗಾಗಿ ಕೋಟ್ಯಾಂತರ ಡಾಲರ್ ವಿದೇಶಿ ವಿನಿಮಯ ವೆಚ್ಚ ಮಾಡುವ ಬದಲು ರಕ್ಷಣಾ ಸಾಮಗ್ರಗಳನ್ನು ದೇಶಿಯವಾಗಿ ತಯಾರಿಸಿ ವಿದೇಶಿ ವಿನಿಮಯ ಗಳಿಸುವ ನಮ್ಮ ಪ್ರಧಾನಮಂತ್ರಿಯ ಯೋಜನೆ ಯಶಸ್ವಿಯಾಗಿದೆ. ‘ಮೇಕ್ ಇನ್ ಇಂಡಿಯಾ’ ಯೋಜನೆ ಅಡಿಯಲ್ಲಿ ಬಹುರಾಷ್ಟ್ರೀಯ ಕಂಪನಿಗಳು ಭಾರತದ ರಕ್ಷಣಾ ಸಾಮಗ್ರಿ ಉತ್ಪಾದನಾ ಕ್ಷೇತ್ರದಲ್ಲಿ ಬಂಡವಾಳ ತೊಡಗಿಸಲು ಮುಂದೆ ಬಂದಿವೆ.

ಮಿಸೈಲ್ ಮ್ಯಾನ್ ಎಪಿಜೆ ಅಬ್ದುಲ್ ಕಲಾಂರ  ಕನಸನ್ನು Dfence Research AndDevelopment Organization ( ಡಿ ಆರ್ ಡಿ ಒ) haagU  Indian  Sface Research Organization (ಇಸ್ರೋ) ವಿಜ್ಞಾನಿಗಳು ನನಸು ಮಾಡಿದ್ದಾರೆ. ಹಿಂದೆ ಯುದ್ಧ ವಿಮಾನ, ಹೆಲಿಕ್ಯಾಪ್ಟರ್ ಟ್ಯಾಂಕರ್ ಖರೀದಿಸುವುದಕ್ಕೂ ನಾವು ರಷ್ಯಾ , ಬ್ರಿಟನ್, ಫ್ರಾನ್ಸ, ಅಮೇರಿಕಾ ದೇಶಗಳಿಂದ ಖರೀದಿಸುತ್ತಿದ್ದೆವು. ರಕ್ಷಣಾ ಬಜೆಟ್‍ನ ಬಹು ದೊಡ್ಡ ಪಾಲು ಅನುದಾನ ಶಸ್ತ್ರಾಸ್ತ್ರ ಹಾಗೂ ವಿಮಾನ ಖರೀದಿಗೆ ಖರ್ಚಾಗುತ್ತಿತ್ತು. ಆದರೆ ಪ್ರಸಕ್ತ ವರ್ಷ 3650 ಕೋಟಿ ರೂ ವಿದೇಶಿ ವಿನಿಮಯವನ್ನು ಭಾರತ ರಕ್ಷಣಾ ಸಾಮಗ್ರಿಗಳನ್ನು ಮಾರಾಟ ಮಾಡಿಗಳಿಸಿದೆ. ಇನ್ನು ಕೆಲವೇ ವರ್ಷಗಳಲ್ಲಿ ಭಾರತ ಇಡೀ ವಿಶ್ವಕ್ಕೆ ಅತ್ಯಾಧುನಿಕ ಶಸ್ರ್ತಾಸ್ತ್ರಗಳನ್ನು ಮಾರಾಟ ಮಾಡುವ ಸೂಪರ್ ಮಾರ್ಕೆಟ್ ಆಗುವ ಮಾರ್ಗದಲ್ಲಿ ಮುನ್ನಡೆದಿದೆ.  ಈಗಾಗಲೇ ಸೌದಿ ಅರೇಬಿಯಾ, ವಿಯಟ್ನಾಮ್, ಫ್ರಾನ್ಸ ಮೊದಲಾದ ರಾಷ್ಟ್ರಗಳು ಹೈಪರ್ ಸಾನಿಕ್ ತಂತ್ರಜ್ಞಾನವನ್ನು ಖರೀದಿಸಲು ಭಾರತ ಸರಕಾರದೊಂದಿಗೆ ಪ್ರಭಾವ ಬೀರುತ್ತಿವೆ.
    11 ಮೇ 1998 ರಲ್ಲಿ ಭಾರತ ಪ್ರೋಕಾನಲ್ಲಿ ಅಣ್ವಸ್ತ್ರ (ಶಕ್ತಿ) ಪರೀಕ್ಷೆ ನಡೆಸಿದಾಗ ಅಮೆರಿಕಾ ದಿಗ್ಧಂಧನ ವಿಧಿಸಿತು. ರಷ್ಯಾದಿಂದ ಬರಬೆಕಾಗಿದ್ದ ಕ್ರಿಯೋಸಾನಿಕ್ ತಂತ್ರಜ್ಞಾನವೂ ಇದರಿಂದ ವಿಳಂಬವಾಯಿತು. ಇದರಿಂದಾಗಿ ನಮ್ಮ ವಿಜ್ಞಾನಿಗಳು ಹೆದರಲಿಲ್ಲ ತಮ್ಮ ಬುದ್ದಿ ಶಕ್ತಿಯಿಂದ ಇಸ್ರೋ ಹಾಗೂ ಡಿ.ಆರ್.ಡಿ.ಓ ವಿಜ್ಞಾನಿಗಳು ಅಬ್ದುಲ್ ಕಲಾಂ ಅವರ ಮಾರ್ಗದರ್ಶನದಲ್ಲಿ ಸಂಶೋಧನೆಯನ್ನು ಮುಂದುವರಿಸಿ ರಾಕೆಟ್ ಉಡಾಯನ ತಂತ್ರವನ್ನು ದೇಶಿಯವಾಗಿಯೇ ಅಭಿವೃದ್ಧಿಪಡಿಸಿದರು.
    ಭಾರತೀಯ ವಿಜ್ಞಾನಿಗಳು ಮಾಡಿರುವ ಸಾಧನೆ ಹಾಗೂ ಸಂಶೋಧನೆ ನೋಡಿ ಇಡಿ ವಿಶ್ವವೇ ಬೆರಗಾಗಿದೆ.ನಮ್ಮ ವಿಜ್ಞಾನಿಗಳು ರಹಸ್ಯವಾಗಿ ಅಭಿವೃದ್ದಿ ಪಡಿಸಿರುವ ‘ಹೈಪರ್ ಸಾನಿಕ್ ರೀ ಯೂಸೆಬಲ್ ಬ್ಯಾಲೆಸ್ಟಿಕ್ ಮಿಸೈಲ್’ ತಂತ್ರಜ್ಞಾನ ಯಶಸ್ವಿಯಾಗಿದೆ. ವಿಶ್ವದ ಬೃಹತ್ ಶಕ್ತಿಶಾಲಿ ರಾಷ್ಟ್ರಗಳಾದ ಅಮೇರಿಕಾ, ಬ್ರಿಟನ್, ಫ್ರಾನ್ಸ್, ಚೀನಾ ಮೊದಲಾದ ದೇಶಗಳಿಗೂ ಈ ತಂತ್ರಜ್ಞಾನ ಗೊತ್ತಿಲ್ಲ. ಪ್ರಸ್ತುತ ಭಾರತ ರಕ್ಷಣಾ ತಂತ್ರಜ್ಞಾನ ಕ್ಷೇತ್ರದಲ್ಲಿ ವಿಶ್ವದ ಯಾವುದೇ ಬಲಿಷ್ಠ ರಾಷ್ಟ್ರಕ್ಕೂ ಸವಾಲೊಡ್ಡಬಲ್ಲದು. ಗಂಟೆಗೆ 12500 ಕಿ.ಮೀ ವೇಗದಲ್ಲಿ ನಿರ್ದಿಷ್ಟ ಗುರಿಯನ್ನು ತಲುಪಿ ಬಾಂಬುಗಳನ್ನು ಎಸೆದು. ಅಲ್ಲಿಯೇ ಅಂತರಿಕ್ಷದಲ್ಲಿ ಸುತ್ತು ಹೊಡೆದು ಎಷ್ಟರ ಮಟ್ಟಿಗೆ ಹಾನಿಯಾಗಿದೆ. ಎಂಬುದನ್ನು ಖಾತ್ರಿಮಾಡಿಕೊಂಡು ಛಾಯಾ ಚಿತ್ರಗಳ ಸಹಿತ ಅಷ್ಟೆ ವೇಗದಲ್ಲಿ ವಾಪಾಸ್ಸು ಬರುವ ಸಾಮಥ್ರ್ಯ ಈ ಕ್ಷಿಪಣ ಗಳಾಗಿದೆ. ‘ಅಗ್ನಿ-4’ ಖಂಡಾಂತರ ಕ್ಷಿಪಣ  ಅಂತಿಮ ಪರೀಕ್ಷೆ ಯಶಸ್ವಿಯಾಗಿದೆ. ‘ಪಿನಾಕಾ’ ಯುದ್ಧ ಕ್ಷಿಪಣ ಯು ದೇಶೀಯ ನಿರ್ಮಿತ ಪಿನಾಕಾ ಮಾಕ್-1 ಮತ್ತು ಪಿನಾಕಾ ಮಾಕ್-2 ರ ಪರಿಷ್ಕøತ ಶ್ರೇಣ ಯಾಗಿದ್ದು, ಹೆಚ್ಚಿನ ಸ್ಪೋಟ ಸಾಮಥ್ರ್ಯದ ಜೊತೆಗೆ ನಿರ್ದಿಷ್ಟವಾಗಿ ಗುರಿತಲುಪುವ ಸಾಮಥ್ರ್ಯ ಹೊಂದಿದೆ. ಒಂದು ಕ್ಷಿಪಣೆಯನ್ನು ಸ್ಪೋಟಿಸುವ ಮೂಲಕ 3.9 ಚ. ಕಿಮೀ ವ್ಯಾಪ್ತಿಯನ್ನು ತಟಸ್ಥಗೊಳಿಸಬಹುದಾಗಿದೆ. ಹಾಗೂ ಶತ್ರು ಪಡೆಗಳ ಬಂಕರ್‍ನ್ನು ಧ್ವಂಸಗೊಳಿಸುವ  ಸಾಮಥ್ರ್ಯ ಹೊಂದಿದೆ.  ಭಾರತೀಯ ಸೇನೆ, ಸಂಚಾರಿ ಫಿರಂಗಿ, ತೋಪು ‘ಧನುಷ್’ ಯಶಸ್ವಿಯಾಗಿ ಪರೀಕ್ಷಿಸಿದೆ. 5 ಸಾವಿರ ಕಿ.ಮೀ ವ್ಯಾಪ್ತಿಯಲ್ಲಿ ದಾಳಿ ನಡೆಸಬಲ್ಲ ‘ಅಗ್ನಿ-5’ ಕ್ಷಿಪಣ ಯ ಪರೀಕ್ಷೆಯು ಯಶಸ್ವಿಯಾಗಿದೆ. ‘ಪೃಥ್ವಿ ಡಿಫೆನ್ಸ್ ವೆಹಿಕಲ್’ ಇದು ಭಾರತದತ್ತ ಶತ್ರಗಳು ಹಾರಿಸುವ ಖಂಡಾಂತರ ಕ್ಷಿಪಣ ಯನ್ನು ಸುಮಾರು ಎರಡು ಸಾವಿರ ಕಿ.ಮೀ ದೂರದಿಂದಲೇ ಗುರುತಿಸಿ, ಧ್ವಂಸ ಮಾಡುವ ವ್ಯವಸ್ಥೆಯನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಫೆಬ್ರುವರಿ 11 ರಂದು ಯಶಸ್ವಿಯಾಗಿ ಪರೀಕ್ಷಿಸಿದೆ. 

ನಮ್ಮ ಭಾರತ ದೇಶದ ಅಭಿವೃದ್ಧಿಪಡಿಸಿರುವ ಇಂಟರ್‍ಸೆಕ್ಟರ್ ಆ್ಯಂಟಿ  ಮಿಸೈಲ್ ತಂತ್ರಜ್ಞಾನ ನಮ್ಮ ಸೈನ್ಯದ ಶಕ್ತಿಯನ್ನು ನೂರು ಪಟ್ಟು ಹೆಚ್ಚಿಸಿದೆ. ಚೀನಾ, ಪಾಕಿಸ್ತಾನದಿಂದ ಒಂದೇ ಒಂದು ಕ್ಷಿಪಣ ಯೂ ನಮ್ಮ ನೆಲದ ಮೇಲೆ ಬಂದು ಬೀಳಲು ಇದು ಬಿಡುವುದಿಲ್ಲ. ಅತ್ಯುತ್ತಮ ರಾಡಾರ್ ವ್ಯವಸ್ಥೆಯನ್ನು ಹೊಂದಿರುವ ಇಂಟರ್‍ಸೆಕ್ಟರ್ ಆಗಸದಲ್ಲಿ 260 ಕಿ.ಮೀ ದೂರದಿಂದಲೇ ಶತ್ರುಗಳ ಮಿಸೈಲ್‍ಗಳನ್ನು ಹೊಡೆದುರುಳಿಸುತ್ತದೆ. ಭೂಮಿ, ಆಕಾಸ, ನೀರಿನಲ್ಲಿಯೂ ಕಾರ್ಯಚರಣೆ ನಡೆಸುವ ಸಾಮಥ್ರ್ಯ ಹೊಂದಿದೆ.

ಆಕಾಶ, ಪೃಥ್ವಿ, ಅಗ್ನೀ, ಬ್ರಹ್ಮೋಸ್ ಸರಣ ಯ ಮಿಸೈಲ್‍ಗಳ ಸಾಲಿಗೆ ಇನ್ನು ಕೆಲವೇ ವರ್ಷಗಳಲ್ಲಿ ಸೂರ್ಯ ಸೇರ್ಪಡೆಯಾಗಲಿವೆ. ಬ್ರಹ್ಮೋಸ್ ಕ್ಷಿಪಣ ಗಳು ಪ್ರಸ್ತುತ ಗಂಟೆಗೆ 3500 ಕಿ.ಮೀ. ವೇಗದಿಂದ ಗುರಿ ತಲುಪುತ್ತವೆ. ಅತ್ಯಾಧುನಿಕ ತಂತ್ರಜ್ಞಾನವನ್ನು ಈ ಕ್ಷಿಪಣ ಗಳಲ್ಲಿ ಅಳವಡಿಸಿ ಅದರ ಸಾಮಥ್ರ್ಯವನ್ನು ಮೂರು ಪಟ್ಟು ಹೆಚ್ಚಿಸುವುದಕ್ಕೆ ಡಿ.ಆರ್.ಡಿ.ಓ. ಸಿದ್ಧವಾಗಿದೆ.

ಕಳೆದ ತಿಂಗಳು ಇಸ್ರೋದ ವಿಜ್ಞಾನಿಗಳು ಇಡೀ ವಿಶ್ವವೇ ಕಣ್ಣರಳಿಸಿ ನೋಡುವಂತೆ ಒಂದೇ ರಾಕೆಟ್‍ನಲ್ಲಿ 104 ಉಪಗ್ರಹಗಳನ್ನು ಅಂತರಿಕ್ಷಕ್ಕೆ ಹಾರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಸ್ರೋದ ಮುಂದಿನ ಯೋಜನೆ 300 ಉಪಗ್ರಹಗಳನ್ನು ಅಂತರಿಕ್ಷಕ್ಕೆ ಒಂದೇ ರಾಕೆಟ್‍ನಲ್ಲಿ ಅಂತರಿಕ್ಷಗೆ ಹಾರಿಸುವುದು. ಮಂಗಳಯಾನದಲ್ಲಿಯು ಸಹ ಯಶಸ್ವಿಯಾಗಿದ್ದು, 2018 ರಲ್ಲಿ ಮಂಗಳಯಾನ-2ಗೆ ತಯಾರಿ ನಡೆಸಿದ್ದಾರೆ. ಅಷ್ಟೇ ಏಕೆ ಶುಕ್ರನ ಅಂಗಳದಲ್ಲಿಯೂ ವ್ಯೂಮನೌಕೆ ಇಳಿಸುವ ತಮ್ಮ ಛಲಗಾರಿಕೆ ತಮ್ಮಲ್ಲಿದ ಎಂದು ಘೋಷಿಸಿದ್ದಾರೆ.ಸೂರ್ಯನನ್ನು ಅಧ್ಯಯನ ಮಾಡಲು 2019 ರಲ್ಲಿ ಆದಿತ್ಯ ಎಲ್ 1 ಉಪಗ್ರಹದ ಉಡಾವಣೆ ಇಸ್ರೋದ ಮುಂದಿನ ಯೋಜನೆಗಳಾಗಿವೆ. ಭೂಮಿಯ ನೈಸರ್ಗಿಕ ಉಪಗ್ರಹವಾದ ಚಂದ್ರನಿಗೆ ಹಾಗೂ ಮಂಗಳ ಗ್ರಹಕ್ಕೆ ಕೃತಕ ಉಪಗ್ರಹಗಳನ್ನು ಉಡಾಯಿಸಿದ್ದು ನಮ್ಮ ಭಾರತ ದೇಶ ಮಾತ್ರ. ಆದರೆ ಯಾವುದೇ ಮುಂದುವರೆದ ದೇಶವು ಈ ಸಾಹಸಕ್ಕೆ ಕೈ ಹಾಕಿಲ್ಲ. ಚಂದ್ರಯಾನ-1 ಕೃತಕ ಉಪಗ್ರಹದ ಸಹಾಯದಿಂದ ಚಂದ್ರನಲ್ಲಿ ನೀರು ಆವಿ ರೂಪದಲ್ಲಿದೆ ಎಂದು ಮೊದಲಿಗೆ ಕಂಡು ಹಿಡಿದವರು ನಮ್ಮ ಭಾರತೀಯ ವಿಜ್ಞಾನಿಗಳು. 
ನಮ್ಮ ದೇಶದ ವಿಜ್ಞಾನಿಗಳು ಭಾರತವನ್ನು ವಿಶ್ವದಲ್ಲಿಯೇ ಬಲಿಷ್ಠ ರಾಷ್ಟ್ರವನ್ನಾಗಿ ನಿರ್ಮಿಸುವ ಕನಸು ಸಾಕಾರ ಮಾಡುತ್ತಿದ್ದಾರೆ. ಇವರ ಕಾರ್ಯಕ್ಕೆ ಪ್ರತಿಯೊಬ್ಬ ಭಾರತೀಯ ಪ್ರಜ್ಞೆಯಿಂದ ಹೃದಯ ಪೂರ್ವಕ ಅಭಿನಂದನೆಗಳು. ’ಮೇರಾ ದೇಶ ಮಹಾನ’.

ಜಗದೀಶ ವಡ್ಡಿನ
ಗ್ರಂಥಪಾಲಕರು
ಶಿವಾಜಿ ಶಿಕ್ಷಣ ಮಹಾವಿದ್ಯಾಲಯ
ಬಾಡ ಕಾರವಾರ.
ಮೋ ನಂ.: 9632332185.

Read These Next

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

ಹೊಸದಿಲ್ಲಿ: ಧೂಳು ತಿನ್ನುತ್ತಿರುವ5,500ಕ್ಕೂ ಅಧಿಕ ವೆಂಟಿಲೇಟರ್‌ಗಳು ಉ.ಪ್ರ., ಗುಜರಾತ್, ಕರ್ನಾಟಕ ಮುಂಚೂಣಿಯಲ್ಲಿ

ಕೊರೋನ ಎರಡನೇ ಅಲೆಯಲ್ಲಿ ವೆಂಟಿಲೇಟರ್‌ಗಳ ಕೊರತೆಯಿಂದಾಗಿ ಹಲವಾರು ರೋಗಿಗಳು ಸಾವನ್ನಪ್ಪಿದ್ದರೆ, ವಿವಿಧ ರಾಜ್ಯಗಳಲ್ಲಿ ಈ ಜೀವರಕ್ಷಕ ...

ಎ.ಜೆ.ಅಕಾಡೆಮಿ ಹಾಗೂ ನ್ಯೂಶಮ್ಸ್ ಸ್ಕೂಲ್ ವತಿಯಿಂದ ಭಟ್ಕಳ ತಾಲೂಕು ಮಟ್ಟದ ವಿಜ್ಞಾನ ಮತ್ತು ಸಂಶೋಧನೆ ಕುರಿತ ಸ್ಪರ್ಧೆ

ತಾಲೂಕಿನ ಸರ್ಕಾರಿ, ಅನುದಾನಿತ, ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ವಿಜ್ಞಾನ, ಗಣಿತ, ಸಮಾಜ ವಿಜ್ಞಾನ ಹಾಗೂ ಪರಿಸರ ...