ಶಾಂತಿಯಿಂದ ಸಂಪನ್ನಗೊಂಡ ಎರಡು ದಿನಗಳ ಮಾರಿ ಹಬ್ಬ

Source: sonews | By Staff Correspondent | Published on 9th August 2018, 7:12 PM | Coastal News | Don't Miss |

ಭಟ್ಕಳ:ಬುಧವಾರದಂದು ಮೆರವಣೆಗೆಯ ಮೂಲಕ ವಿಶೇಷವಾಗಿ ನಿರ್ಮಿಸಿದ ಮಾರಿಯ ಮೂರ್ತಿಯನ್ನು ಮುಖ್ಯರಸ್ತೆಯಲ್ಲಿರು ಮಾರಿ ಮಂದಿರದಲ್ಲಿ ಪ್ರತಿಸ್ಠಾಪಿಸುವುದುರ ಮೂಲಕ ಆರಂಭಗೊಂಡಿದ್ದ ತಾಲೂಕಿನ ಪ್ರಸಿದ್ದ ಮಾರಿಹಬ್ಬವು ಗುರವಾರ ಮಾರಿ ಮೂರ್ತಿಯನ್ನು ವಿಸರ್ಜಿಸುವ ಮೂಲಕ ಸಂಪನ್ನಗೊಂಡಿತು.

ಅತ್ಯಂತ ಶ್ರದ್ಧಾಭಕ್ತಿಯಿಂದ ಭಕ್ತರು ಮಾರಿಯ ದರ್ಶನ ಪಡದು ಪುನಿತರಾದರು. ಸಂಜೆ ಸಾವಿರಾರು ಭಕ್ತರು ಮಾರಿ ಮೂರ್ತಿಯನ್ನು ಮೆರವಣೆಗೆ ಮೂಲಕ ತಂದು ಸಮುದ್ರದಲ್ಲಿ ವಿಸರ್ಜನೆ ಮಾಡಿದರು. 

ತಾಲೂಕಿನ ಗ್ರಾಮೀಣ ಭಾಗದ ಸಾವಿರಾರು ಭಕ್ತರು ಮಾರಿ ಮಂದಿರದಲ್ಲಿ ಪೂಜೆಯನ್ನು ಸಲ್ಲಿಸಿ ಹರಕೆ ಕಾಣಿಕೆಗಳನ್ನು ಅರ್ಪಿಸಿದರು. ಮಹಿಳೆಯರು ಮಕ್ಕಳು  ಮಾರಿ ಗೆ ಪೂಜೆ ಸಲ್ಲಿಸಿದ್ದು ವಿಶೇಷವಾಗಿತ್ತು. 

Read These Next