ಮೋದಿ ತಂಡದೊಂದಿಗೆ ಯೂರೋಪ್ ಪ್ರವಾಸ ಕೈ ತೆರಳುವ:ಕನ್ನಡಿಗ ಐ.ಎಫ್.ಎಸ್.ಅಧಿಕಾರಿ ಎ.ಟಿ.ದಾಮೋದರ ನಾಯ್ಕ 

Source: so news | By MV Bhatkal | Published on 18th June 2018, 8:41 PM | Coastal News | State News |

ಭಟ್ಕಳ:ಲಕ್ಷದ್ವೀಪದಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಭಟ್ಕಳ ಗಡಿಭಾಗದ ನಿವಾಸಿ ಐ.ಎಫ್.ಎಸ್. ಅಧಿಕಾರಿ ಕನ್ನಡಿಗ ಎ.ಟಿ. ದಾಮೋದರ  ನಾಯ್ಕ ಮೋದಿಯ ತಂಡದೊಂದಿಗೆ ಜೂನ್ 28ರಿಂದ ಜುಲೈ 9ರ ವರೆಗೆ ಯೂರೋಪ್ ಪ್ರವಾಸ ಕೈಗೊಳ್ಳಲಿದ್ದಾರೆ
ಪ್ರಸ್ತುತ ಕೇಂದ್ರಾಡಳಿತ ಪ್ರದೇಶ ಲಕ್ಷದ್ವೀಪದಲ್ಲಿ ದೇಶದ ಅತೀ ಕಿರಿಯ ವಯಸ್ಸಿನ ಪ್ರಧಾನ ಕಾರ್ಯದರ್ಶಿಯಾಗಿ ದಾಮೋದರ ಕಾರ್ಯನಿರ್ವಹಿಸಿ ಮಹತ್ತರ ಬದಲಾವಣೆಗೆ ನಾಂದಿ ಹಾಡಿದ್ದಾರೆ. ಕರ್ತವ್ಯದಲ್ಲಿನ ಉತ್ಸುಕತೆ, ದೇಶಕ್ಕಾಗಿ ಎನಾದರೂ ಮಾಡುವ ತುಡಿತ ಗಮನಿಸಿದ ಕೇಂದ್ರ ಸರ್ಕಾರ ಅಧ್ಯಯನಕ್ಕಾಗಿ ಯೂರೋಪ ಪ್ರವಾಸಕ್ಕಾಗಿ ರಾಜ್ಯದ ಏಕೈಕ ಅಧಿಕಾರಿಯನ್ನಾಗಿ ಇನರನ್ನು ಆಯ್ಕೆ ಮಡಿದೆ. ಮೂವರು ಕೇಂದ್ರ ಸಂಪುಟ ಸಚಿವರೂ ಹಾಗೂ ದೇಶದ ಹಿರಿಯ ಅಧಿಕಾರಿಗಳನ್ನೊಳಗೊಂಡ 16 ಜನ ಸದಸ್ಯರ ತಂಡದಲ್ಲಿ ಇವರು ಒಬ್ಬರು. 
ದೇಶದ ಬೆನ್ನೆಲುಬಾದ ರೈತರ ಅಭಿವೃದ್ಧಿ ಮತ್ತು ಕೃಷಿ ಕ್ಷೇತ್ರದಲ್ಲಿ ಪಾಶ್ಚಿಮಾತ್ಯ ದೇಶಗಳ ಆಧೂನಿಕ ತಂತ್ರಜ್ಞಾನ ಹಾಗೂ ನೀರಾವರಿ ವಿಧಾನಗಳನ್ನು ಅಳವಡಿಸಿಕೊಂಡು ದೇಶದ ಕೃಷಿ ಉತ್ಪಾದನೆಯನ್ನು ಹೆಚ್ಚಿಸುವ ಗುರು ಇಟ್ಟುಕೊಂಡಿದೆ. ಆಸ್ಟ್ರೇಲಿಯ ದೇಶದ ವಿಯನ್ನಾದಲ್ಲಿ ಜುಲೈ 1ರಂದು ಆಯೋಜನೆಗೊಂಡ ಅಂತರಾಷ್ಟ್ರೀಯ ಕೃಷಿ ಆಣೆಕಟ್ಟು ಸಮಾವೇಶ ಮತ್ತು ವಿವಿಧ ದೇಶಗಳೊಂದಿಗೆ ಆಯೋಜನೆಗೊಂಡ ಸಭೆಯಲ್ಲಿ ಭಾರತ ದೇಶವನ್ನು ಈ ತಂಡ ಪ್ರತಿನಿಧಿಸಲಿದೆ. ದೇಶದ ಪ್ರವಾಸೋದ್ಯಮ ಅಭಿವೃದ್ಧಿಯ ಸಲುವಾಗಿ ಆಯೋಜನೆಗೊಂಡ ವಿವಿಧ ಕಾರ್ಯಾಗಾರದಲ್ಲಿ ಭಾಗವಹಿಸಿ, ಯೂರೋಪ್‍ನ ವಿವಿಧ ಸ್ಥಳ ಪ್ರಾತ್ಯಕ್ಷಿಕೆಯನ್ನು ಬೇಟಿ ನೀಡಲಿದೆ. 
ದಾಮೋದರ ಅವರು ಕೃಷಿ, ಹಣಕಾಸು, ಆರೋಗ್ಯ ಮೀನುಗಾರಿಕೆ, ಲೋಕೋಪಯೋಗಿ, ಪರಿಸರ, ಪಶುಸಂಗೋಪನೆ, ಆಹಾರ ಮತ್ತು ನಾಗರಿಕ ಸರಬರಾಜು, ಸಹಕಾರ, ಪ್ರವಾಸೋದ್ಯಮ, ಕಾರ್ಮಿಕ, ಅರಣ್ಯ, ಉದ್ಯೋಗ ಮತ್ತು ತರಬೇತಿ, ಮಾಹಿತಿ ತಂತ್ರಜ್ಞಾನ, ಕಾನೂನು ಹಾಗೂ ವಾರ್ತಾ ಮತ್ತು ಪ್ರಸಾರ ಇಲಾಖೆಗಳನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸುತ್ತಿದ್ದಾರೆ. ಮೂಲತಃ ಕೃಷಿ ಕುಟುಂಬದವರಾಗಿದ್ದು ಕೃಷಿಯಲ್ಲಿ ಸ್ನಾತಕೋತ್ತರ ಪದವೀದರರಾದ ಇವರಿಗೆ ಕೃಷಿಯಲ್ಲಿ ಅಪಾರ ಆಸಕ್ತಿ ಹಾಗೂ ದೇಶರ ರೈತವರ್ಗದವರ ಕುರಿತು ವಿಶೇಷ ಕಾಳಜಿ, ಕೃಷಿ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾದ ಅವರು ಲಕ್ಷದ್ವೀಪದಲ್ಲಿ ಈಗಾಗಲೇ ಸಾವಯವ ಕೃಷಿ ಮತ್ತು ಇಸ್ರೇಲ್ ದೇಶದ ಆಧುನಿಕ ಹೈಡ್ರೋಪಾನಿಕ್ಸ್ (ಪೋಷಕಾಂಶಯುಕ್ತ ನೀರಿನಲ್ಲಿ ನೇರ ಕೃಷಿ)ವಿಧಾನಗಳನ್ನು ಅಭಿವೃದ್ಧಿಪಡಿಸಲು ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದಾರೆ. ಇವರ ಕವರತ್ತಿ ಸ್ಮಾರ್ಟ್ ಸಿಟಿ ಯೋಜನೆಗೆ ಈಗಾಗಲೇ ಕೇಂದ್ರ ಸರ್ಕಾರದ ಅನುಮೋದನೆ ದೊರಕಿದೆ. ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಸ್ಮಾರ್ಟ್ ಸಿಟಿ ಯೋಜನೆಯ ಹೆಚ್ಚಿನ ತರಬೇತಿಯ ಸಂಬಂಧ ಎ.ಟಿ. ದಾಮೋದರ ನಾಯ್ಕ ಇವರನ್ನು ಜುಲೈ 16ರಿಂದ ಆಗಸ್ಟ್ 2ರ ತನಕ ಜಪಾನ ದೇಶಕ್ಕೆ ಕಳುಹಿಸಿಕೊಡಲು ಆದೇಶಿಸಲಾಗಿದೆ. ಕೆಲವು ತಿಂಗಳುಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರು ಲಕ್ಷದ್ವೀಪ ಬೇಟಿ ನೀಡಿದ್ದ ಸಂದರ್ಭದಲ್ಲಿ ಎ.ಟಿ. ದಾಮೋದರ ನಾಯ್ಕ ರವರು ಪ್ರಸ್ತುತ ಪಡಿಸಿದ್ದ ಪ್ರವಾಸೋದ್ಯಮ ಯೋಜನೆಯ ಮೋದಿಯವರ ಪ್ರಶಂಸೆಗೆ ಪಾತ್ರರಾಗಿದ್ದು ಇವರ ಕರ್ತವ್ಯ ನಿಷ್ಠಗೆ ಒಂದು ಉದಾಹರಣೆ.

Read These Next

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!