ಮಾವಿನಕುರ್ವೆ: ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ಯೋಜನೆ ಉದ್ಘಾಟಿಸಿದ: ಶಾಸಕ ಮಂಕಳ ವ್ಯೆದ್ಯ

Source: S O News | By MV Bhatkal | Published on 29th April 2017, 10:01 PM | Coastal News | Don't Miss |

ಭಟ್ಕಳ: ಈ ಹಿಂದೆ ಜಿಲ್ಲಾ ಪಂಚಾಯತ್ ಚುನಾವಣೆಗೆ ನಿಂತಾಗ ಮಾವಿನಕುರ್ವೆ ಗ್ರಾಮಕ್ಕೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಡುವ ಕುರಿತು ನೀಡಿದ್ದ ಭರವಸೆ ಈಗ ಸಂಪೂರ್ಣವಾಗಿಯೆನ್ನುವ ತೃಪ್ತಿ ಇದೆ ಎಂದು ಶಾಸಕ ಮಂಕಾಳ ವೈದ್ಯ ಹೇಳಿದರು.
ಅವರು ಮಾವಿನಕುರ್ವೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ಯೋಜನೆಯಡಿಯಲ್ಲಿ ಕಡವಿನಕಟ್ಟಾ ಡ್ಯಾಂ ನಿಂದ ಮಾವಿನಕುರ್ವೆ ಗ್ರಾಮ ಪಂಚಾಯತಕ್ಕೆ ಕುಡಿಯುವ ನೀರು ಯೋನೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಮನುಷ್ಯನಿಗೆ ಪ್ರಥಮವಾಗಿ ಬೇಕಾಗಿರುವುದು ನೀರು, ನೀರಿಲ್ಲದಿದ್ದರೇ ನಾವೇ ಇಲ್ಲ ಅಂದ ಮೇಲೆ ಬೇರೆ ಯಾವುದೇ ಭಾಗ್ಯಕ್ಕಿಂತ ಇದು ಮುಖ್ಯವಾದುದು. ಮಾವಿನಕುರ್ವೆ ಗ್ರಾಮ ಪಂಚಾಯತ್ ಪ್ರದೇಶದಲ್ಲಿ ನೀರಿದ್ದರೂ ಕೂಡಾ ಇದು ಕುಡಿಯಲು ಯೋಗ್ಯವಲ್ಲ ಎಂದು ವರದಿ ಬಂದಿದೆ.  ಹಾಗಾಗಿ ಇಲ್ಲಿಗೆ ಶಾಶ್ವತವಾಗಿ ಕುಡಿಯುವ ನೀರಿನ ಯೋಜನೆಯೊಂದನ್ನು ಮಾಡಬೇಕೆನ್ನುವ ನನ್ನ ಆಸೆ ಇಂದು ಈಡೇರಿದ ತೃಪ್ತಿ ಇದೆ.  ವರ್ಷದ 365 ದಿನವೂ ಕೂಡಾ ಇಲ್ಲಿಗೆ ನೀರು ಪೂರೈಕೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಮನೆ ಮನೆ ಸಂಪರ್ಕಕ್ಕೆ ಸರಕಾರದ ನಿಯಮವಿದೆ. ನೀರಿನ ಸಂಪರ್ಕ ಬೇಕಾದವರು ಗ್ರಾಮ ಪಂಚಾಯತಕ್ಕೆ ಹಣ ತುಂಬಿ ಪಡೆಯಬೇಕಾಗುತ್ತದೆ ಎಂದರು. ಜಿಲ್ಲಾ ಪಂಚಾಯತ್ ಅವಧಿಯಲ್ಲಿಯೇ 1 ಕೋಟಿ ರೂಪಾಯಿಯನ್ನು ತೆಗೆದಿರಿಸಿ ಕಾಮಗಾರಿ ಆರಂಭಿಸಲಾಗಿದ್ದು ಇಂದು ಸುಮಾರು 4 ಕೋಟಿಯನ್ನು ಕಾಮಗಾರಿ ಮುಕ್ತಾಯವಾಗಿದೆ.  ನೀರಿನ ಕಾಮಗಾರಿಗೆ ಯಾವುದೇ ಹಣದ ಕೊರತೆ ಇಲ್ಲ ಎಂದೂ ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷೆ ಕುಸುಮಾ ನಾಯ್ಕ ವಹಿಸಿದ್ದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಹಿರಿಂರಾದ ವಸಂತ ಖಾರ್ವಿ ಮಂಕಾಳ ವೈದ್ಯ ಅವರು ಚುನಾವಣೆಯ ಸಂದರ್ಭದಲ್ಲಿ ನೀಡಿದ ಆಶ್ವಾಸನೆಗಿಂತ ಹೆಚ್ಚಿನ ಕೆಲಸವನ್ನು ಈ ಭಾಗಕ್ಕೆ ನೀಡಿದ್ದಾರೆ.  ಕೊಂಕಣ ಖಾರ್ವಿ ಸಮಾಜದ ವತಿಯಿಂದ ಕುಡಿಯುವ ನೀರಿನ ಕುರಿತು ಅನೇಕ ಬಾರಿ ಬೇಡಿಕೆ ಸಲ್ಲಿಸಲಾಗಿತ್ತು. ಇಲ್ಲಿನ ಜನತೆ ಎಲ್ಲರೂ ಬಿ.ಪಿ.ಎಲ್. ಕಾರ್ಡ ಹೊಂದಿದವರಾಗಿದ್ದು ಬೇರೆ ಯಾವುದೇ ರೀತಿಯಿಂದ ನೀರು ಸರಬರಾಜು ಯೋಜನೆ ತರುವುದು ಕಷ್ಟಕರವಾಗಿತ್ತು. ಶಾಸಕರ ಮುತುವರ್ಜಿಯಿಂದ ಶಾಶ್ವತ ಕುಡಿಯುವ ನೀರಿನ ಯೋಜನೆಗೆ ಚಾಲನೆ ನೀಡಿದ್ದನ್ನು ಶ್ಲಾಘಿಸಿದರು.
ಮಾವಿನಕುರ್ವೆ ಬಂದರಿನಲ್ಲಿ ಬಹು ಮುಖ್ಯವಾಗಿ ಬ್ರೇಕ್ ವಾಟರ್ ಕಾಮಗಾರಿ ಆಗಲೇ ಬೇಕಾಗಿದೆ. ಮಾವಿನಕುರ್ವೆ ಬಂದರನ್ನು ಮೀನುಗಾರಿಕಾ ಬಂದರನ್ನಾಗಿ ಮಾಡುವುದು, 5 ಕೋಟಿ ರೂಪಾಯಿ ವೆಚ್ಚದಲ್ಲಿ ಧಕ್ಕೆ ಅಭಿವೃದ್ಧಿ, ಬೆಳ್ನಿ ಭಾಗದಲ್ಲಿ 3 ಕೋಟಿ ವೆಚ್ಚದಲ್ಲಿ ಧಕ್ಕೆ ಅಭಿವೃದ್ಧಿ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳಾಗಿವೆ ಎಂದರು.


ಜಿಲ್ಲಾ ಪಂಚಾಯತ್ ಅಧ್ಯಕ್ಷ ಜಯಶ್ರೀ ಮೊಗೇರ ಮಾತನಾಡಿ ಈ ಭಾಗದ ಜನತೆಯ ಬೇಡಿಕೆ ಪ್ರಥಮವಾಗಿ ಕುಡಿಯುವ ನೀರಿನದ್ದಾಗಿತ್ತು. ಶಾಸಕರ ಸತತ ಪ್ರಯತ್ನದಿಂದ ಕುಡಿಯುವ ನೀರಿನ ಯೋಜನೆ ಜ್ಯಾರಿಯಾಗಿದ್ದು ಈ ಭಾಗದ ಬಹುದಿನದ ಬೇಡಿಕೆಯೊಂದು ಈಡೇರಿದಂತಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಖಾರ್ವಿ ಸಮಾಜದ ಪ್ರಮುಖರಾದ ನಾರಾಯಣ ಖಾರ್ವಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಠಲ ಹೊನ್ನಪ್ಪ ನಾಯ್ಕ, ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮಂಜುನಾಥ ಖಾರ್ವಿ ಮಾತನಾಡಿದರು. ವೇದಿಕೆಯಲ್ಲಿ ತಾ.ಪಂ. ಈಶ್ವರ ನಾಯ್ಕ, ಜಾಲಿ ಪ.ಪಂ. ಅಧ್ಯಕ್ಷ ಅಬ್ದುರ್ ರಹೀಂ ಶೇಖ್, ಜಿ.ಪಂ. ಇಂಜಿನಿಯರಿಂಗ್ ವಿಭಾಗದ ಫಯಾಜ್ ಅಹಮ್ಮದ್, ಗ್ರಾಮ ಪಂಚಾಯತ್ ಸದಸ್ಯರು ಮುಂತಾದವರು ಉಪಸ್ಥಿತರಿದ್ದರು.
ಗ್ರಾಮ ಪಂಚಾಯತ್ ಲೆಕ್ಕಾಧಿಕಾರಿ ರಾಘವೇಂದ್ರ ಪೂಜಾರಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಂತಿ ನಾಯ್ಕ ಸಹಕರಿಸಿದರು.

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...