ಯಲ್ಲಾಪುರ: ಕಾರು-ಲಾರಿ ಢಿಕ್ಕಿ : ಮಗು ಸೇರಿದಂತೆ ಮೂವರ ಸಾವು

Source: sonews | By sub editor | Published on 26th June 2018, 9:58 PM | Coastal News | State News | Don't Miss |

ಯಲ್ಲಾಪುರ : ಕಾರು ಲಾರಿ ಮುಖಾಮುಖಿ ಢಿಕ್ಕಿ ಸಂಭವಿಸಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ಘಟನೆ ಯಲ್ಲಾಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63 ರ ಚಿಕ್ಕಮಾವಳ್ಳಿ ಗ್ರಾಮದಲ್ಲಿ ನಡೆದಿದೆ.

ಅಪಘಾತ ವೇಳೆ ಶಿರಸಿ ಅರಗಿನ ಮನೆ ನಿವಾಸಿಗಳಾದ ವಿನಾಯಕ ಹೆಗಡೆ(35) ಅರ್ಚನಾ(30) ಹಾಗೂ ಶ್ರಾವಣಿ(2) ಎಂಬವರು ಮೃತಪಟ್ಟಿದ್ದಾರೆ. ನಾಲ್ಕು ವರ್ಷದ ಮಗು ಗಂಭೀರವಾಗಿ ಗಾಯಗೊಂಡಿದ್ದು, ಯಲ್ಲಾಪುರ ತಾಲೂಕಿನ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾರಿನಲ್ಲಿ 4 ಜನರು ಪ್ರಯಾಣಿಸುತ್ತಿದ್ದರು. ಶಿರಸಿಯಿಂದ ಹುಬ್ಬಳ್ಳಿ ಕಡೆಗೆ ತೆರಳುತ್ತಿದ್ದ ಕಾರು ಹಾಗು ಹುಬ್ಬಳ್ಳಿಯಿಂದ ಯಲ್ಲಾಪುರಕ್ಕೆ ಬರುತ್ತಿದ್ದ ಲಾರಿ ಮಧ್ಯೆ  ಚಿಕ್ಕಮಾವಳ್ಳಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಮುಖಾಮುಖಿ ಢಿಕ್ಕಿಯಾಗಿದೆ. 

ಘಟನಾ ಸ್ಥಳಕ್ಕೆ ಯಲ್ಲಾಪುರ ಪಿಐ ಮಂಜನಾಥ ನಾಯಕ ಪಿಎಸ್ಸೈ ಎಮ್.ಎಸ್.ಹೂಗಾರ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Read These Next