ಖಾಲಿ ತಟ್ಟೆಗಳು ಕಾಣುತ್ತಿವೆಯೇ?

Source: sonews | By Staff Correspondent | Published on 29th October 2018, 10:48 PM | State News | National News | Special Report | Don't Miss |

ಮರುಕಳಿಸುತ್ತಲೇ ಇರುವ ಹಸಿವು ಜಗತ್ತಿನ ಅತಿ ದೊಡ್ಡ ಸಮಸ್ಯೆಯಾಗಿದ್ದರೂ ನವಉದಾರವಾದಿ ಪ್ರಭುತ್ವಗಳು ಅದನ್ನು ನಿರಕರಿಸುತ್ತವೆ.

ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಘಟನೆ (ಫುಡ್ ಅಂಡ ಅಗ್ರಿಕಲ್ಚ್ರರಲ್ ಆರ್ಗನೈಸೇಷನ್- ಎಫ್ಎಒ)ಯು ೨೦೧೮ರಲ್ಲಿ ವಿಶ್ವದ ಅಹಾರ ಭದ್ರತೆ ಮತ್ತು ಪೌಷ್ಟಿಕಾಂಶದ ಸ್ಥಿತಿಗತಿಯ ಬಗ್ಗೆ ಒಂದು ವರದಿಯನ್ನು ಬಿಡುಗಡೆ ಮಾಡಿದೆ. ಅದರ ಪ್ರಕಾರ ೨೦೧೫ರಿಂದಾಚೆಗೆ ವಿಶ್ವದಲ್ಲಿ ಪ್ರತಿವರ್ಷವೂ ಹಸಿವಿನಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದ್ದು ೨೦೧೭ಕ್ಕೆ ವಿಶ್ವದ ಜನಸಂಖ್ಯೆಯಲ್ಲಿ ಶೇ.೧೧ರಷ್ಟು ಜನ ಅಂದರೆ ೮೨. ಕೋಟಿ ಜನ ಹಸಿವಿನಿಂದ ಬಾಧಿತರಾಗಿದ್ದರು. ಇದು ಕಳೆದ ಒಂದು ದಶಕದಿಂದ ಜಾಗತಿಕ ದ್ವಿದಳ ಧಾನ್ಯ ಮಾರುಕಟ್ಟೆಯಲಿ ಸಕಾರಾತ್ಮಕ ಮಧ್ಯಪ್ರವೇಶ ಮಾಡುವಂತಹ ಹಲವಾರು ಕಾರ್ಯಕ್ರಮಗಳ ಮೂಲಕ ಹಸಿವಿನ ವಿರುದ್ಧ ನಡೆಸುತ್ತಿದ್ದ ಯುದ್ದದಿಂದಾಗಿ ಕಂಡುಬಂದಿದ್ದ ಧನಾತ್ಮಕ ಬೆಳವಣಿಗೆಗಳಿಗೆ ತದ್ವಿರುಧ್ಹವಾದ ಬೆಳವಣಿಗೆಯಾಗಿದೆ. ಇದು ೨೦೩೦ರ ವೇಳೆಗೆ ಹಸಿವು ಮುಕ್ತ ಜಗತ್ತು ಮಾಡುವ ಸುಸ್ಥಿರ ಅಭಿವೃದ್ಧಿಯ ಗುರಿಗಳ ಬಗ್ಗೆ ಜಾಗತಿಕ ಸಮುದಾಯದ ರಾಜಕೀಯ ಬದ್ಧತೆಯ ಬಗ್ಗೆಯೂ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಎಫ್ಎಒ ಸಂಸ್ಥೆಯ ೨೦೧೮ರ ಮಾರ್ಚ್ ತಿಂಗಳ ಬೆಳೆ ಭವಿಷ್ಯ ಮತ್ತು ಆಹಾರ ಸ್ಥಿತಿಗತಿಗೆ ಸಂಬಂಧಪಟ್ಟ ವರದಿಯು ಜಾಗತಿಕ ದ್ವಿದಳ ಧಾನ್ಯ ಉತ್ಪಾದನೆಯು ೨೦೧೬ಕ್ಕಿಂತ ೨೦೧೭ರಲ್ಲಿ ಶೇ..೨ರಷ್ಟು ಹೆಚ್ಚಲಿದೆಯೆಂದು ಅಂದಾಜು ಮಾಡಿದೆ. ಇದಕ್ಕೆ ಪ್ರಧಾನ ಕಾರಣ ದಕ್ಷಿಣ ಅಮೆರಿಕ (೨೦೧೬ಕ್ಕಿಂತ ಶೇ.೨೫.೪ರಷ್ಟು ಉತ್ಪಾದನಾ ಹೆಚ್ಚಳ) ಮತ್ತು ಆಫ್ರಿಕಾ (೨೦೧೬ಕ್ಕೆ ಹೋಲಿಸಿದಲ್ಲಿ ಶೇ.೧೦.೮ರಷ್ಟು ಹೆಚ್ಚಳ)ಗಳಲ್ಲಿ ದ್ವಿದಳ ಧಾನ್ಯಗಳ ಉತ್ಪಾದನೆಯು ಹೆಚ್ಚಾಗಿರುವುದೇ ಕಾರಣ. ಆದರೂ ಎಫ್ಎಒ ಪ್ರಕಾರ ಅಂತರಿಕ ಸಂಘರ್ಷ/ಎತ್ತಂಗಡಿ/ವಾತಾವರಣ ಏರುಪೇರುಗಳಂಥ ಕಾರಣಗಳಿಂದಾಗಿ ಆಹಾರಕ್ಕಾಗಿ ಹೊರಗಿನ ಸಹಾಯದ ಮೇಲೆ ಅವಲಂಬಿತವಾಗಿರುವ ೩೭ ದೇಶಗಳಲ್ಲಿ ೨೯ ದೇಶಗಳು ಆಫ್ರಿಕಾದ ದೇಶಗಳೇ ಆಗಿವೆ. ಅಂತರಿಕ ಆಡಳಿತ ವೈಫಲ್ಯಗಳು ಆಹಾರ ಅಭದ್ರತೆಗಳನ್ನು ಸ್ಥಳೀಯಗೊಳಿಸಿದರೆ ಹೊರಗಿನ ಸಹಾಯ ಎಟುಕಿಸಿಕೊಳ್ಳುವ ಅಸಾಮರ್ಥ್ಯಗಳು ಹಸಿವನ್ನು ತೊಡೆದುಹಾಕಲು ಬೇಕಾದ ಅಂತರರಾಷ್ಟ್ರೀಯ ಸಹಕಾರದ ವಿಧಿವಿಧಾನಗಳಬಗ್ಗೆ ತಕ್ಷಣದ ಗಮನ ಹರಿಸುವ ಅಗತ್ಯವನ್ನು ಮನದಟ್ಟುಮಾಡುತ್ತದೆ.

ವಿಶ್ವಸಂಸ್ಥೆಯ ವಿಶ್ವ ಅಹಾರ ಕಾರ್ಯಕ್ರಮವು ಅಂತರರಾಷ್ಟ್ರೀಯ ಆಹಾರ ಸಹಕಾರದಲ್ಲಿ ಒಂದು ಗಮನಾರ್ಹ ಬದಲಾವಣೆ ಬಂದಿರುವುದನ್ನು ಗಮನಿಸಿದೆ. ಅದರ ಪ್ರಕಾರ ಜಾಗತಿಕ ಆಹಾರ ಸಹಕಾರದ ತುರ್ತನ್ನು ಉಂಟು ಮಾಡುತ್ತಿದ್ದ ಸಂಭವಗಳು ೧೯೮೦ರಲ್ಲಿ ವರ್ಷಕ್ಕೆ ೧೫ ಮಾತ್ರ ಸಂಭವಿಸುತ್ತಿದ್ದು ೨೦೦೦ದ ವೇಳೆಗೆ ವರ್ಷಕ್ಕೆ ೩೦ನ್ನು ತ್ಲುಪಿತುಅಂಥ ತುರ್ತು ಸಂದರ್ಭಗಳು ಆಗ್ರಹಿಸುವ ತುರ್ತು ಆಹಾರ ಸಹಕಾರವನ್ನು ತ್ವರಿತವಾಗಿ ಒದಗಿಸುವೆಡೆ ಅಂತರರಾಷ್ಟ್ರೀಯ ಆಹಾರ ಸಹಕಾರ ಯೋಜನೆಗಳು ನಿಧಾನವಾಗಿ ಪಲ್ಲಟಗೊಳ್ಳುತ್ತಿವೆ. ಇದು ನಿಜಕ್ಕೂ ಹಸಿವಿನಿಂದ ಬಾಧೆಗೊಳಗಾದವರಿಗೆ ತಲುಪಿದೆಯೇ ಎಂಬುದು ಸಂದೇಹಾಸ್ಪದವಾದ ವಿಷಯ. ತತ್ಕ್ಷಣದ ಸಹಕಾರಗಳು ಜೀವಗಳನ್ನು ಉಳಿಸುತ್ತವೆ. ಆದರೆ ದೀರ್ಘ ಕಾಲೀನವಾದ ಹಸಿವನ್ನು ನಿವಾರಿಸುವ ಯೋಜನೆಗಳನ್ನು ಮಾಡಲಾಗದ ಸಂದರ್ಭವನ್ನು ಸೃಷ್ಟಿಸುತ್ತವೆ. ಸದಾ ಅಹಾರ ಕೊರತೆ ಇರುವಂಥ ದೇಶಗಳಲ್ಲಿ ಹೆಚ್ಚೂ ಕಡಿಮೆ ಶಾಶ್ವತ ಹಸಿವಿನ ಸ್ಥಿತಿ ಇದೆಯೆಂದೇ ಭಾವಿಸಬೇಕು. ಅಂಥಾ ದೇಶಗಳ ಹಸಿವನ್ನು ಕೇವಲ ತುರ್ತು ಸಹಾಯದ ಮೂಲಕ ತಣಿಸಲು ಸಾಧ್ಯವಿಲ್ಲ. ಏಕೆಂದರೆ ಅಂಥಾ ಸಹಕಾರಗಳು ಹಸಿವಿನಿಂದ ಬಳಲುತ್ತಿರುವ ಪರಿಸ್ಥಿತಿಗೆ ಹುಟ್ಟಿಕೊಂಡಿರುವ ಪ್ರತಿಕ್ರಿಯೆಗಳೇ ವಿನಃ ಅವುಗಳನ್ನು ತಡೆಗಟ್ಟಲು ಹಾಕಿಕೊಂಡ ಕಾರ್ಯಕ್ರಮಗಳಲ್ಲ. ಹೀಗಾಗಿ ಇಂಥಾ ತಾತ್ಕಾಲಿಕ ಕಾರ್ಯಕ್ರಗಳು ಅಹಾರ ಸಹಕಾರ ಯೋಜನೆಯಲ್ಲಿ ತೊಡಗಿರುವ ಸ್ವಯಂ ಸೇವಾ ಸಂಸ್ಥೆಗಳೇ ಪ್ರತಿಪಾದಿಸುವ ಹಕ್ಕು ಆಧಾರಿತ ಆಹಾರ ಭದ್ರತಾ ಪ್ರನಾಳಿಯನ್ನು ಉಲ್ಲಂಘಿಸಿದರೂ ನವ ಉದಾರವಾದಿ ರಾಜಕೀಯದ ಜೊತೆ ಚೆನ್ನಾಗಿ ಬೆಸೆದುಕೊಳ್ಳುತ್ತದೆ. ನವ ಉದಾರವಾದಿ ಆಹಾರ ವ್ಯವಸ್ಥೆಗಳ ಆಡಳಿತದ ಖಾಸಗೀಕರಣವಾಗುತ್ತಿರುವಂತೆ ಜಾಗತಿಕ ಆಹಾರ ಸರಪಳಿಯ ಮೇಲೆ ತಮ್ಮ ಯಾಜಮಾನ್ಯವನ್ನು ಸ್ಥಾಪಿಸಿಕೊಂಡಿರುವ ದೊಡ್ಡ ದೊಡ್ಡ ಬಹುರಾಷ್ಟ್ರೀಯ ಕಂಪನಿಗಳಿಗೆ ಆಹಾರ ವರ್ಗಾವಣೆ ದಂಧೆಯಲ್ಲಿ ಬಲು ದೊಡ್ಡ ಲಾಭ ದೊರೆಯುತ್ತಿದೆ. ಆಹಾರದ ರೂಪದಲ್ಲಿ ದೇಣಿಗೆ ನೀಡುವ ದೇಶಗಳಿಂದ ಹೆಚ್ಚುವರಿಯನ್ನು ರಫ್ತು ಮಾಡುವಲ್ಲಿ ಬಹುರಾಷ್ಟ್ರೀಯ ಕಂಪನಿಗಳು ತೋರಿರುವ ವಾಣಿಜ್ಯ ಹಿತಾಸಕ್ತಿಗಳಿಂದಾಗಿ ಆಹಾರ ಸಹಕಾರದ ಪ್ರಕ್ರಿಯೆಯಲ್ಲಿ ಸ್ಥಳೀಯ ಮೂಲಗಳಿಂದ ಅಥವಾ/ ತ್ರಿಪಕ್ಷೀಯ ಮೂಲಗಳಿಂದ ಆಹಾರ ಸಹಕಾರವನ್ನು ಪಡೆದುಕೊಳ್ಳುವ ಪ್ರಕ್ರಿಯೆಯನ್ನು ಸಾಧ್ಯವಾಗದಂತೆ ಮಾಡಿದೆ. ತ್ರಿಪಕ್ಷೀಯ ಆಹಾರ ಸಹಕಾರವು ಸಾಧ್ಯವಾಗಿದ್ದಲ್ಲಿ ಅವು ಅಭಿವೃದ್ಧಿಶೀಲ ದೇಶಗಳ ನಡುವೆ ಸಮರ್ಥವಾದ ಆಹಾರ ವಿತರಣೆಯನ್ನು ಸಾಧ್ಯವಾಗಿಸುತ್ತಿತ್ತು.

ಆದರೆ ಇದು ಗಂಭೀರವಾಗಿ ಆತ್ಮವಿಮರ್ಶೆಯಲ್ಲಿ ತೊಡಗಿಕೊಳ್ಳುವ ಸಂದರ್ಭವೂ ಆಗಿದೆ. ಹಸಿವಿನ ಬಾಧೆಗೊಳಪಟ್ಟ ದೇಶಗಳು ಹಸಿವೆಂಬುದು ಪದೇಪದೇ ಮರುಕಳಿಸುವ/ತಮ್ಮ ವ್ಯವಸ್ಥೆಯ ಅಂತರ್ಭಾಗವಾಗಿರುವ ವಿದ್ಯಮಾನವೆಂಬುದನ್ನು ಗುರುತಿಸುವಲ್ಲಿ ರಾಜಕೀಯ ಜಡತ್ವವನ್ನು ತೋರಬಾರದು. ಉದಾಹರಣೆಗೆ ಆಹಾರ ಭದ್ರತೆಯ ಬಗ್ಗೆ ತನ್ನದೇ ಆದ ಕಾನೂನು-ನ್ಯಾಯಿಕ ವ್ಯವಸ್ಥೆಯನ್ನು ಮಾಡಿಕೊಂಡಿದ್ದರೂ ಏಷಿಯಾದಲ್ಲಿ ಅಪೌಷ್ಟಿಕತೆಯಿಂದ ನರಳುತ್ತಿರುವ ೫೧. ಕೋಟಿ ಜನರಲ್ಲಿ ಮೂರನೇ ಎರಡು ಭಾಗದಷ್ಟು ಜನರನ್ನು ಹೊಂದಿರುವ  ಭಾರತದ ಉದಾಹರಣೆಯನ್ನು ತೆಗೆದುಕೊಳ್ಳಿ. ಅಂತರರಾಷ್ಟ್ರೀಯ ಆಹಾರ ನೀತಿ ಅಧ್ಯಯನ ಸಂಸ್ಥೆಯು ಹೊರತಂದ ೨೦೧೭ರ ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತವನ್ನು ೧೧೯ ದೇಶಗಳಲ್ಲಿ ೧೧೦ನೇ ಸ್ಥಾನದಲ್ಲಿರಿಸಿತ್ತು. ಆದರೆ ಇದನ್ನು ತಿರಸ್ಕರಿಸಿದ ನಮ್ಮ ನೀತಿ ಅಯೋಗದ ಪಂಡಿತರು ಮಕ್ಕಳ ಅಪೌಷ್ಟಿಕತೆಯ ವಿಷಯಕ್ಕೆ ಅಗತ್ಯಕ್ಕಿಂತ ಹೆಚ್ಚಿನ ಮೌಲ್ಯವನ್ನು ನೀಡಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಹಸಿವಿನ ಪರಿಸ್ಥಿತಿಯನ್ನು ಕೆಟ್ಟದಾಗಿ ಚಿತ್ರಿಸಲಾಗಿದೆ ಎಂದು ದೂರಿದರು. ಸರ್ಕಾರದ ಸೌಲಭ್ಯಗಳನ್ನು ಎಟುಕಿಸಿಕೊಳ್ಳಲಾಗದೆ ನಿರ್ಲಕ್ಷ್ಯಕ್ಕೆ ತುತ್ತಾಗಿ ಅಂಚಿನಲ್ಲಿರುವ ಭಾರತದ ಲಕ್ಷಾಂತರ ಜನತೆ ಅತಂತ್ರದ ಜೀವನವನ್ನು ನಡೆಸುತ್ತಿರುವಾಗ ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ನಮ್ಮ ದೇಶದ ಸೇರ್ಪಡೆಯಾಗುವುದರಲ್ಲಿ ತಪ್ಪೇನಿದೆ? ಅಂಥಾ ಪರಿಸ್ಥಿತಿಗಳಲ್ಲಿ ಹಸಿವೆಂಬುದು ಪದೇಪದೇ ಮರುಕಳಿಸುವ ವಿಷಯ ಮಾತ್ರವಲ್ಲ ತಾತ್ಕಾಲಿಕವಾಗಿಯಾದರೂ ಅದೂ ವ್ಯವಸ್ಥೆಯ ಅಂತರ್ಭಾಗವೇ ಆಗಿಬಿಟ್ಟಿರುತ್ತದೆ. ಕಳೆದ ಎಂಟು ತಿಂಗಳಲ್ಲಿ ಹಲವಾರು ರಾಜ್ಯಗಳಿಂದ ಹಸಿವಿನ ಬಳಲಿಕೆಯಿಂದ ಉಂಟಾದ ಸಾವಿನ ವರದಿಗಳಾಗಿವೆ. ಸಾವುಗಳು ಒಂದು ಸುದೀರ್ಘ ಕಾಲದವರೆಗೆ ಹಸಿವಿನಿಂದಲೇ ಬದುಕಿದ್ದರ ಪರಿಣಾಮವಾಗಿದ್ದು ತಮ್ಮ ಹಕ್ಕಿನ ಸೌಲಭ್ಯಗಳನ್ನು ಎಟುಕಿಸಿಕೊಳ್ಳಲಾಗದ ವೈಫಲ್ಯದಿಂದಾಗಿ ಭಾರತದ ಮೂರನೇ ಒಂದು ಭಾಗದಷ್ಟು ಜನ ಇಂಥಾ ಪರಿಸ್ಥಿತಿಯಲ್ಲಿ ಈಗಲೂ ಬದುಕುತ್ತಿದ್ದಾರೆ. ಮತ್ತು ಹಕ್ಕಿನ ಸೌಲಭ್ಯಗಳು ಕೇವಲ ಆಹಾರದ ಲಭ್ಯತೆ ಮತ್ತು ಅದನ್ನು ದಕ್ಕಿಸಿಕೊಳ್ಳುವ ವಿಷಯಕ್ಕೆ ಮಾತ್ರ ಸಂಬಂಧಪಟ್ಟಿಲ್ಲ. ಏಕೆಂದರೆ ಹಸಿವೆಂಬುದು ಕೇವಲ ಖಾಲಿ ಹೊಟ್ಟೆಯ ವಿಷಯವಲ್ಲ. ಅದು ಜನರು ತಮ್ಮ ಸಕ್ರಿಯ  ಮತ್ತು ಆರೋಗ್ಯಕರ ಜೀವನವನ್ನು ಕಂಡುಕೊಳ್ಳಲು ಬೇಕಾದ ಆಯ್ಕೆಯ ವೈವಿಧ್ಯದ ಆಹಾರಗಳನ್ನು ಗಳಿಸಿಕೊಳ್ಳಲು ಅಗತ್ಯವಿರುವ ಪುಷ್ಟಿದಾಯಕ, ಸುರಕ್ಷಿತ ಮತ್ತು ಸಾಕಷ್ಟು ಪ್ರಮಾಣದ ಆಹಾರವನ್ನು ಪಡೆದುಕೊಳ್ಳಲು ಬೇಕಾದ ಭೌತಿಕ ಮತ್ತು ಆರ್ಥಿಕ ಸಾಧ್ಯತೆಗಳ ನಿರಾಕರಣೆಯಾಗಿದೆ.

ಹೀಗೆ ಫಲಾನುಭವಿಗಳಿಗೆ ಬೇಕಾದ ಆಹಾರವು ಎಲ್ಲೆಡೆ ಮತ್ತು ನಿರಂತರವಾಗಿ ಲಭ್ಯವಾಗುವುದನ್ನು ಖಾತರಿಪಡಿಸ್ಕೊಳ್ಳಬೇಕೆಂದರೆ ಸಾಮಾಜಿಕ ನ್ಯಾಯದ ಆಶೋತ್ತರಗಳನ್ನು ಹೊಂದಿರುವ ಆದಾಯ ಮರುವಿತರಣಾ ನೀತಿಗಳನ್ನು ಜಾರಿಗೆ ತರಬೇಕೇ ವಿನಃ ನವ ಉದಾರವಾದವು ಕಲ್ಪಿಸಿಕೊಳ್ಳುವಂಥ ಕೇವಲ ಆರ್ಥಿಕ ಸಾಮರ್ಥ್ಯದ ಆರ್ಥಿಕ ನೀತಿಗಳನ್ನಲ್ಲ. ಅಷ್ಟು ಮಾತ್ರವಲ್ಲದೆ ಸರ್ಕಾರಗಳು ಆಹಾರವನ್ನು ಒಂದು ಮೂಲಭೂತ ಹಕ್ಕನ್ನಾಗಿಯೂ ಘೋಷಿಸಬೇಕಲ್ಲದೆ ಹಕ್ಕನ್ನು ಪರಿರಕ್ಷಿಸಲು ಮತ್ತು ಪರಿಣಾಮಕಾರಿಯಾಗಿ ಜಾರಿ ಮಾಡಲು ಬೇಕಾದ ವಾತಾವರಣವನ್ನು ನಿರ್ಮಿಸುವ ಮೂಲಕ ಅದರ ಬಗ್ಗೆ ತನ್ನ ಬದ್ಧತೆಯನ್ನೂ ಬಹಿರಗವಾಗಿ ಪ್ರದರ್ಶಿಸಬೇಕು. ಸಮರ್ಥ ಆರ್ಥಿಕತೆ ಮತ್ತು ಮುಕ್ತ ಮಾರುಕಟ್ಟೆಗಳು ಅಂತಾ ಸೌಲಭ್ಯಗಳು ಫಲಾನುಭವಿಗಳಿಗೆ ತೊಟ್ಟಿಕ್ಕುವಂಥ ಪರಿಸ್ಥಿತಿಗಳನು ಸೃಷ್ಟಿಸಬಲ್ಲವೇ ಎಂಬುದು ಪ್ರಶ್ನಾರ್ಹ. ಏಕೆಂದರೆ ನವ ಉದಾರವಾದವು ಅಸಮಾನತೆಯ ಹಂದರವನ್ನು ಬಲಪಡಿಸುತ್ತದೆ. ಹೀಗಿರುವಾಗ ಮರುಕಳಿಸುವ ಅಪೌಷ್ಟಿಕತೆ ಮತ್ತು ಹಸಿವುಗಳನ್ನು ತಡೆಗಟ್ಟುವುದಿರಲಿ ಅರ್ಥಮಾಡಿಕೊಳ್ಳಲೂ ಸಾಧ್ಯವಿಲ್ಲ. ಹೀಗಾಗಿ ಹಸಿವನ್ನು ನಿವಾರಿಸಲು ಸಹಕಾರವನ್ನು ಹೆಚ್ಚಿಸುವ ಮತ್ತು ಇನ್ನೂ ಉತ್ತಮವಾದ ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸುವಂಥಾ ಮತ್ತು ಮಾನವ ಹಕ್ಕುಗಳಂಥಾ ಪ್ರಭಾವಶಾಲಿ ಸಿದ್ಧಾಂತಕ್ಕೆ ಮಧ್ಯೆ ಎಲ್ಲರೂ ಮೊರೆಹೋಗುತ್ತಿದ್ದಾರೆ. ಆದರೆ ಅವುಗಳ ಜಾರಿಯ ವಿಷಯವು ಮಾತ್ರ ಪ್ರಧಾನವಾಗಿ ಒಂದು ರಾಜಕೀಯ ನಿರ್ಧಾರವೇ ಆಗಿರುತ್ತದೆ.

ಕೃಪೆ: Economic and Political Weekly   ಅನು: ಶಿವಸುಂದರ್ 

Read These Next

ಶಿಕ್ಷಕಿನಿಂದ ಪುರಸಭೆ ಆಸ್ತಿ ಹಾನಿ  ವಿಡಿಯೋ ವೈರಲ್ ಸಾರ್ವಜನಿಕರ ಹಿತದೃಷ್ಟಿಯಿಂದ ಕಾನೂನು ಕ್ರಮಕ್ಕೆ ಆಗ್ರಹ - ಅಸ್ಲಂ

ಶ್ರೀನಿವಾಸಪುರ: ಪಟ್ಟಣದ ವಾರ್ಡ್ ಸಂಖ್ಯೆ 14 ಗಫಾರ್‌ ಖಾನ್‌ ಮೊಹಲ್ಲಾದಲ್ಲಿ ಪುರಸಭೆ ವತಿಯಿಂದ ನಿರ್ಮಿಸಿರುವ ಕೊಳವೆ ಬಾವಿಗೆ ...

ಕೋವಿಡ್-19 ಜಾಗೃತಿ-ಮಣಿಪಾಲ್ ಆಸ್ಪತ್ರೆಯಿಂದ ಅಂತರ್ಜಾಲ ಸಮ್ಮೇಳನ ಪತ್ರಿಕೆಗಳಿಂದ ಸೋಂಕು ಹರಡುವಿಕೆಗೆ ಆಧಾರವಿಲ್ಲ-ಡಾ.ಸುನೀಲ್ ಕಾರಂತ್

ಕೋಲಾರ: ಪತ್ರಿಕೆಗಳಿಂದ ಕೊರೋನಾ ಹರಡುತ್ತದೆ ಎಂಬುದಕ್ಕೆ ಈವರೆಗೂ ಯಾವುದೇ ಆಧಾರಗಳಿಲ್ಲ, ಏಕೆಂದರೆ ವೈರಸ್ ಪತ್ರಿಕೆಗಳ ಮೇಲೆ ಕೇವಲ 15 ...

ಗೃಹ ಸಚಿವ ಅಮಿತ್ ಶಾಗೆ ಎಲುಬು ಕ್ಯಾನ್ಸರ್? ಇದು ವದಂತಿ ಎಂದ ಆಲ್ಟ್ ನ್ಯೂಸ್‌ ಫ್ಯಾಕ್ಟ್ ಚೆಕ್

ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾರವರು ಟ್ವೀಟ್‌ ಮಾಡಿದ್ದಾರೆ ಎನ್ನಲಾಗಿರುವ ನಕಲಿ ಟ್ವೀಟ್‌ವೊಂದರ ಸ್ಕ್ರೀನ್‌ಶಾಟ್ ...

ತಬ್ಲಿಗಿ ಜಮಾಅತ್ ಸಮ್ಮೇಳನ; ಸುಳ್ಳು ಸುದ್ದಿ ಹರುತ್ತಿರುವ ಮಾಧ್ಯಮಗಳ ವಿರುದ್ಧ ಸುಪ್ರಿಂ ಕೋರ್ಟ್ ಮೆಟ್ಟಲೇರಿದ ಯತ್ ಉಲೇಮಾ ಹಿಂದ್

ನವದೆಹಲಿ: ಮಾರ್ಚ್ ನಲ್ಲಿ ದೆಹಲಿಯಲ್ಲಿ ನಡೆದ ತಬ್ಲಿಗೀ ಜಮಾಅತ್ ಸಮ್ಮೇಳನದ ಹೆಸರಲ್ಲಿ ಮಾಧ್ಯಮದ ಒಂದು ವರ್ಗವು ಮುಸ್ಲಿಂ ಸಮುದಾಯದ ...

ನಿಝಾಮುದ್ದೀನ್ ಮರ್ಕಝ್ ಖಾಲಿ ಮಾಡಿಸುವಾಗ ತಬ್ಲೀಗಿಗಳು ಒಮ್ಮೆಯೂ ಕೆಟ್ಟದಾಗಿ ವರ್ತಿಸಿಲ್ಲ: ಡಾ. ಊರ್ವಿ ಶರ್ಮ

ದಿಲ್ಲಿಯ ನಿಝಾಮುದ್ದೀನ್ ಮರ್ಕಝ್ ನ ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಂದ ದೇಶದ ವಿವಿಧೆಡೆಗೆ ಕೊರೊನ ಹರಡಿತು ಎಂಬ ಮಾಧ್ಯಮ ವರದಿಗಳ ...

ಮಂಗಳೂರು ಆಸ್ಪತ್ರೆಯಿಂದ ಭಟ್ಕಳಕ್ಕೆ ಶಿಫ್ಟಾದ ಕೊರೋನಾ;12 ಹೊಸ ಕೊರೋನಾ ಪ್ರಕರಣ ಪತ್ತೆ

ಭಟ್ಕಳ: ಇಂದು ಶುಕ್ರವಾರ ಎಲ್ಲರಿಗೂ ಶುಭವನ್ನು ತರುವ ವಾರ. ಆದರೆ ಭಟ್ಕಳಕ್ಕದು ಶುಭವಾಗದೆ 12 ಹೊಸ ಕೊರೋನಾ ಪ್ರಕರಣ ಪತ್ತೆಯಾದ ದಿನವಾಗಿ ...

ಭಟ್ಕಳಕ್ಕೆ ಸಧ್ಯಕ್ಕಿಲ್ಲ ಲಾಕ್‍ಡೌನ್ ಸಡಿಲಿಕೆಯ ಭಾಗ್ಯ; ಅಗತ್ಯ ಸೇವೆ ಹೊರತುಪಡಿಸಿ ಯಥಾಸ್ಥಿತಿ ಮುಂದುವರಿಕೆ

ಕರಾವಳಿ ಜಿಲ್ಲೆಗಳಲ್ಲಿ ಮೊದಲ ಕೊರೋನಾ ಪ್ರಕರಣ ದಾಖಲು ಮಾಡಿದ ಅಪಕೀರ್ತಿಗೆ ಪಾತ್ರವಾಗಿರುವ ಉತ್ತರಕನ್ನಡ ಜಿಲ್ಲೆಯ ಭಟ್ಕಳ ಮಾತ್ರ ...

ಕೋವಿಡ್-19; ಹಸಿರು ವಲಯದತ್ತ ಹೆಜ್ಜೆ ಹಾಕುತ್ತಿದೆ ಭಟ್ಕಳ ಕೇವಲ ಒಂದು ಸಕ್ರಿಯ ಪ್ರಕರಣ ಬಾಕಿ

ಉತ್ತರಕನ್ನಡ ಜಿಲ್ಲೆಯಲ್ಲಿ ಕೋವಿಡ್-19 ನ ಕೊರೋನಾ ಸೋಂಕಿನ ಪ್ರಥಮ ಪ್ರಕರಣ ದಾಖಲಾಗಿದ್ದು ಮಾ.19 ಹಾಗೂ ಕೊನೆಯ ಪ್ರಕರಣ ದಾಖಲಾಗಿದ್ದು ಎ.14 ಈ ...

ಶಿಕ್ಷಕಿನಿಂದ ಪುರಸಭೆ ಆಸ್ತಿ ಹಾನಿ  ವಿಡಿಯೋ ವೈರಲ್ ಸಾರ್ವಜನಿಕರ ಹಿತದೃಷ್ಟಿಯಿಂದ ಕಾನೂನು ಕ್ರಮಕ್ಕೆ ಆಗ್ರಹ - ಅಸ್ಲಂ

ಶ್ರೀನಿವಾಸಪುರ: ಪಟ್ಟಣದ ವಾರ್ಡ್ ಸಂಖ್ಯೆ 14 ಗಫಾರ್‌ ಖಾನ್‌ ಮೊಹಲ್ಲಾದಲ್ಲಿ ಪುರಸಭೆ ವತಿಯಿಂದ ನಿರ್ಮಿಸಿರುವ ಕೊಳವೆ ಬಾವಿಗೆ ...