ಲೋಕಸಭಾ ಚುನಾವಣೆ; ಕಾಂಗ್ರೇಸ್ ನಿಂದ ಎರಡನೇ ಪಟ್ಟಿ ಬಿಡುಗಡೆ

Source: sonews | By Staff Correspondent | Published on 14th March 2019, 11:24 PM | National News |

ಹೊಸದಿಲ್ಲಿ, ಮಾ. 14: ಮುಂಬೈಯ ಉತ್ತರ ಕೇಂದ್ರ ಲೋಕಸಭಾ ಕ್ಷೇತ್ರದಿಂದ ಪ್ರಿಯಾ ದತ್ ಹಾಗೂ ಮೊರದಾಬಾದ್‌ನಿಂದ ಪಕ್ಷದ ಉತ್ತರಪ್ರದೇಶ ಘಟಕದ ವರಿಷ್ಠ ರಾಜ್ ಬಬ್ಬರ್ ಅವರನ್ನು ಒಳಗೊಂಡಂತೆ 20 ಮಂದಿ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಕಾಂಗ್ರೆಸ್ ಬುಧವಾರ ಬಿಡುಗಡೆ ಮಾಡಿದೆ.

ತಾನು ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸುವುದಿಲ್ಲ ಎಂದು ಕಳೆದ ಜನವರಿಯಲ್ಲಿ ಪ್ರಿಯಾ ದತ್ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಪತ್ರ ಬರೆದಿದ್ದರು. ಆದರೆ, ಬುಧವಾರಕ್ಕಿಂತ ಮುನ್ನ ಅವರು ಚುನಾವಣೆಯಲ್ಲಿ ಸ್ಪರ್ಧಿಸುವ ಆಕಾಂಕ್ಷೆ ವ್ಯಕ್ತಪಡಿಸಿದ್ದರು. ದತ್ತ್ ಅವರು 2005ರಲ್ಲಿ ರಾಜಕೀಯ ಪ್ರವೇಶಿಸಿದ್ದರು. ಮುಂಬೈಯ ಉತ್ತರ ಕೇಂದ್ರ ಸಂಸದೀಯ ಕ್ಷೇತ್ರದಿಂದ ಅವರು ಸ್ಪರ್ಧಿಸಿದ್ದರು. ಅವರು ಮೂರು ವಿಧಾನ ಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಅವರು ಕೊನೆಯದಾಗಿ ಸ್ಪರ್ಧಿಸಿದ್ದು 2014ರಲ್ಲಿ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಅವರು ಬಿಜೆಪಿಯ ಪೂನಂ ಮಹಾಜನ್ ಅವರ ಎದುರು ಸೋತಿದ್ದರು. 21 ಮಂದಿ ಅಭ್ಯರ್ಥಿಗಳಲ್ಲಿ ಐವರು ಮಹಾರಾಷ್ಟ್ರದವರು ಹಾಗೂ 16 ಮಂದಿ ಉತ್ತರಪ್ರದೇಶದವರು. ಲೋಕಸಭಾ ಸ್ಥಾನ ಮಹಾರಾಷ್ಟ್ರದಲ್ಲಿ 48 ಇದ್ದರೆ, ಉತ್ತರಪ್ರದೇಶದಲ್ಲಿ 80 ಇದೆ. ಎಪ್ರಿಲ್ 11ರಿಂದ ಆರಂಭವಾಗಲಿರುವ 7 ಹಂತದ ಲೋಕಸಭಾ ಚುನಾವಣೆಗ ಕಾಂಗ್ರೆಸ್ ಇದುವರೆಗೆ 36 ಮಂದಿ ಅಭ್ಯರ್ಥಿಗಳನ್ನು ಘೋಷಿಸಿದೆ. ಕೊನೆಯ ಹಂತದ ಮತದಾನ ಮೇ 19ರಂದು ನಡೆಯಲಿದೆ. ಮತ ಎಣಿಕೆ ಮೇ 23ರಂದು ನಡೆಯಲಿದೆ. ಮಾಜಿ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಮಹಾರಾಷ್ಟ್ರದ ಸೋಲಾಪುರದ ಮೀಸಲು ಕ್ಷೇತ್ರದಿಂದ, ಉತ್ತರಪ್ರದೇಶದ ಕಾನ್ಪುರದಿಂದ ಕೇಂದ್ರದ ಮಾಜಿ ಸಚಿವ ಶ್ರೀಪ್ರಕಾಶ್ ಜೈಸ್ವಾಲ್, ಬಹ್ರಿಯಾರ್ಕ್‌ನಿಂದ ಸಾವಿತ್ರಿ ಬಾ ಪುಲೆ ಸ್ಪರ್ಧಿಸಲಿದ್ದಾರೆ. ನಾಗಪುರ ಕ್ಷೇತ್ರದಿಂದ ಬಿಜೆಪಿಯ ಮಾಜಿ ನಾಯಕ ನಾನಾ ಪಾಟೋಲೆ, ಮುಂಬೈ ದಕ್ಷಿಣದಿಂದ ಕೇಂದ್ರದ ಮಾಜಿ ಸಚಿವ ಮಿಲಿಂದ್ ದಿಯೋರ ಸ್ಪರ್ಧಿಸಲಿದ್ದಾರೆ. ಡಾ. ನಾಮ್‌ದೇವ್ ದಲ್ಲುಜಿ ಉಸೆಂದಿ ಗಡ್ಚಿರೋಲಿ-ಚಿಮೂರ್ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ. 

Read These Next

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಗುಂಪಿನಿಂದ ಹತ್ಯೆ, ಗೋರಕ್ಷಣೆ ಹೆಸರಿನಲ್ಲಿ ಹಿಂಸಾಚಾರ ತಡೆಯಲು ಕೈಗೊಂಡ ಕ್ರಮಗಳ ಬಗ್ಗೆ ತಿಳಿಸಿ; ರಾಜ್ಯಗಳಿಗೆ ಸುಪ್ರೀಂ ಸೂಚನೆ

ಗುಂಪಿನಿಂದ ಥಳಿಸಿ ಹತ್ಯೆ ಮತ್ತು ಗೋರಕ್ಷಣೆಯ ಹೆಸರಿನಲ್ಲಿ ಹಿಂಸಾಚಾರದ ಘಟನೆಗಳನ್ನು ತಡೆಯಲು ಕೈಗೊಂಡಿರುವ ಕ್ರಮಗಳ ಬಗ್ಗೆ ಆರು ...