ಸ್ಥಳೀಯ ಸಂಸ್ಥೆ ಚುನಾವಣೆ: ಮತದಾರರ ಪಟ್ಟಿ ಪ್ರಕಟ

Source: S.O. News Service | By Mohammed Ismail | Published on 14th June 2018, 2:26 PM | Coastal News |

ಕಾರವಾರ: ನಗರ ಸ್ಥಳೀಯ ಸಂಸ್ಥೆಗಳಿಗೆ ಸಾರ್ವತ್ರಿಕ ಚುನಾವಣೆ 2018ಕ್ಕೆ ಸಂಬಂಧಿಸಿ ಉತ್ತರ ಕನ್ನಡ ಜಿಲ್ಲೆಯಲ್ಲಿ 3 ನಗರಸಭೆ *ಕಾರವಾರ, ಶಿರಸಿ, ದಾಂಡೇಲಿ), 3 ಪುರಸಭೆ (ಅಂಕೋಲ, ಕುಮಟಾ, ಹಳಿಯಾಳ) ಮತ್ತು 2 ಪಟ್ಟಣ ಪಂಚಾಯ್ತಿ ( ಯಲ್ಲಾಪುರ, ಮುಂಡುಗೋಡ)ಗಳಿಗೆ ಚುನಾವಣೇ ಜರುಗಲಿದ್ದು, ರಾಜ್ಯ ಚುನಾವಣಾ ಆಯೋಗ ನಿಗದಿಪಡಿಸಿ ವೇಳಾ ಪಟ್ಟಿಯಂತೆ ದಿನಾಂಕ 11-06-2018ರಂದು ಕರಡು ಮತದಾರರ ಪಟ್ಟಿಯನ್ನು ಸಾರ್ವಜನಿಕ ಮತದಾರರ ತಿಳಿವಳಿಕೆಗಾಗಿ ನಗರ ಸ್ಥಳೀಯ ಸಂಸ್ಥೆಗಳ ಹಾಗೂ ತಹಸೀಲ್ದಾರ್ ಕಾರ್ಯಾಲಯಗಳಲ್ಲಿ ಪ್ರಕಟಿಸಲಾಗಿದೆ.

 ಸದರಿ ಮತದಾರರ ಪಟ್ಟಿಯಲ್ಲಿ ಆಕ್ಷೇಪಣೆಗಳಿದ್ದಲ್ಲಿ ತಮ್ಮ ಆಕ್ಷೇಪಣೆಗಳನ್ನು ದಿನಾಂಕ 17-06-2018ರೊಳಗೆ ಸಲ್ಲಿಸುವಂತೆ ಜಿಲ್ಲಾಧಿಕಾರಿ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.

Read These Next