ಸಾಲಮನ್ನಾ ಯೋಜನೆ : ರಾಷ್ಟ್ರೀಕೃತ ಬ್ಯಾಂಕ್‍ಗೆ ಉಪವಿಭಾಗಧಿಕಾರಿ ಭೇಟಿ

Source: sonews | By Staff Correspondent | Published on 30th December 2018, 12:49 AM | Coastal News |

ಮುಂಡಗೋಡ : ತಾಲೂಕಿನ ರೈತರು ಸರಕಾರ ಸಾಲಮನ್ನಾ ಘೋಷಿಸಿದರು ಸಹಿತ ಶೇ.49 ರಷ್ಟು ಮಾತ್ರ ಪ್ರಗತಿ ಹೊಂದಿರುವುದರಿಂದ ಶಿರಸಿ ಉಪವಿಭಾಗಧಿಕಾರಿ ರಾಜು ಮೋಗೆರ ತಹಶೀಲ್ದಾರ ಅಶೋಕ ಗುರಾಣಿ ಅವರೊಂದಿಗೆ ಎಸ್‍ಬಿಆಯ್ ಬ್ಯಾಂಕ್ ಭೇಟಿ ನೀಡಿ ಅಲ್ಲಿಯೇ ಎಸ್‍ಬಿಆಯ್ ಬ್ಯಾಂಕ್ ಸೇರಿದಂತೆ ಇತರೆ  ಬ್ಯಾಂಕ್ ಗಳ ವ್ಯವಸ್ಥಾಪಕರೊಂದಿಗೆ ಚರ್ಚಿಸಿ ಸಾಲಮನ್ನಾ ಪ್ರಕ್ರಿಯೆಯಲ್ಲಿ ಸಹಕರಿಸಬೇಕು ಬ್ಯಾಂಕ್ ವ್ಯವಸ್ಥಾಪಕರಿಗೆ ಸೂಚಿಸಿದರು

ಬೆಳೆಹಾನಿ ಸಂಭವಿಸಿದಾಗ ಸಾಲಮನ್ನಾ ಮಾಡುವಂತೆ ರೈತರು ಆಗ್ರಹಿಸುತ್ತಾರೆ. ಆದರೆ ಸರಕಾರ ಸಾಲಮನ್ನಾ ಘೋಷಣೆ ಮಾಡಿದರೂ ಸಹ ಅದರ ಪ್ರಯೋಜನೆ ಪಡೆದುಕೊಳ್ಳಲು ಹಿಂದೇಟು ಹಾಕುತ್ತಿರುವುದು ಯಾಕೆ ಎನ್ನುವ ಪ್ರಶ್ನೆ ಉದ್ಭವವಾಗಿದೆ ರಾಷ್ಟ್ರೀಕೃತ ಬ್ಯಾಂಕಗಳಲ್ಲಿನ ರೈತರಸಾಲವನ್ನು ರಾಜ್ಯ ಸರಕಾರ ಮನ್ನಾ ಎಂದು ಘೋಷಣೆ ಮಾಡಿದ್ದರೂ ತಾಲೂಕಿನ ಗ್ರಾಮೀಣ ಭಾಗದ ರೈತರು ಬ್ಯಾಂಕ್ ಗಳಿಗೆ ತೆರಳಿ ಸೂಕ್ತ ದಾಖಲೆಗಳನ್ನು ನೀಡಿ ಸಾಲ ಮನ್ನಾ ಯೋಜನೆಯ ಸುದುಪಯೋಗ ಪಡಿದುಕೊಳ್ಳಲು ಹಿಂದೇಟು ಹಾಕುತ್ತಿದ್ದರೆ ಏಕೆ ಎನ್ನುವ ಪ್ರಶ್ನೆ ಉದ್ಭವಿಸುತ್ತದೆ

ಅನ್ನದಾತರಿಗೆ ಅನುಕೂಲವಾಗಲೇಂದು ರಾಜ್ಯ ಸರಕಾರ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ರೈತರು ಮಾಡಿದ ಸಾಲವನ್ನು ಮನ್ನಾ ಮಾಡಲು ಘೋಷಿಸಿದೆ. ಈ ಯೋಜನೆಯ ಪ್ರಯೋಜನವನ್ನು ಪ್ರತಿಯೊಬ್ಬ ರೈತರು ಪಡೆದುಕೊಳ್ಳುವಂತೆ ಈಗಾಗಲೇ ಸೂಚಿಸಲಾಗಿದೆ. ಆದರೆ ಹಲವು ರೈತರು ಸಾಲಮನ್ನ ಯೋಜನೆಗೆ ದಾಖಲೆ ಒದಗಿಸಲು ಹಿಂದೇಟು ಹಾಕುತ್ತಿರುವುದು ಕಂಡು ಬಂದಿದೆ.

ಬ್ಯಾಂಕ್ ತೆರಳದ ರೈತರು : ಸಾಲಮನ್ನಾ ಯೋಜನೆಯ ಸೌಲಭ್ಯ ಪಡೆದುಕೊಳ್ಳಬೇಕಾದರೆ ರೈತರು ತಾವು ಸಾಲ ಪಡೆದ ರಾಷ್ಟ್ರೀಕೃತ ಬ್ಯಂಕ್ ಗೆ ತೆರಳಿ ಭೂ ದಾಖಲೆ ಆಧಾರ ಕಾರ್ಡ್ ಸೇರಿದಂತೆ ಕೆಲ ಕಾಖಲೆಗಳನ್ನು ನೀಡುವಂತೆ ಸೂಚಿಸಲಾಗಿದೆ ಆದರೆ ಇದೂವರೆಗೂ 776 ರೈತರು ಮಾತ್ರ ಬ್ಯಾಂಕಗಳಿಗೆ ತೆರಳಿ ದಾಖಲೆ ನೀಡಿ ಸಾಲಮನ್ನಾ ಯೋಜನೆಯ ಸೌಲಭ ಪಡೆಯಲು ಮುಂದಾಗಿದ್ದಾರೆ ಇನ್ನೂ 818 ರೈತರು ಬ್ಯಾಕ್‍ಗೆ ಹೋಗಿರುವುದಿಲ್ಲ     ಡಿ. 31 ವರೆಗೆ ಮಾತ್ರ ಈ ಯೋಜನೆ ಅನ್ವಯವಾಗುತ್ತದೆ ಎಂದು ಹೇಳಲಾಗುತ್ತಿದೆ ಅದರೂ ಸಮಯ ವನ್ನು ಮುಂದೂಡ ಬಹುದಾಗಿದೆ ಎಂದು ಹೇಳಲಾಗುತ್ತಿದೆ ರೈತರು ತಕ್ಷಣ ನೀಡಬೇಕಾಗಿದೆ

ರೈತರಿಗೆ ಮಾಹಿತಿ : ಸಾಲಮನ್ನಾ ಯೋಜನೆಯ ಸೌಲಭ್ಯ ಪಡೆದುಕೊಳ್ಳುವಂತೆ ಕಂದಾಯ ಇಲಾಖೆಯವರು ರೈತರ ಮನೆಗಳಿಗೆ ತೆರಳಿ ಮಾಹಿತಿ ನೀಡುತ್ತಿದ್ದಾರೆ. ಇನ್ನು ಬ್ಯಾಕ್‍ನವರು ಸಹ ರೈತರಿಗೆ ಫೋನ್ ಮಾಡಿ ದಾಖಲೆಗಳನ್ನು ತೆಗೆದುಕೊಂಡು ಬನ್ನಿ ಸಾಲಮನ್ನಾ ಯೋಜನೆಯ ಸೌಲಭ್ಯ ಪಡೆದುಕೊಳ್ಳಿ ಎಂದು  ಹೇಳುತ್ತಿದ್ದಾರೆ ಆದರೂ ಸಹ ರೈತರು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬ ಮಾತು ಕೇಳಿ ಬರುತ್ತಿದೆ. ತಾಲೂಕಿನ ರೈತರು ಇಂತಹ ಯೋಜನೆಗಳ ಸದುಪಯೋಗ ಪಡೆದುಕೊಳ್ಳುವುದ ಅತಿ ಅವಶ್ಯ ಎಂಬುದು  ಪ್ರಜ್ಞಾವಂತ ನಾಗರಿಕರ ಮಾತಾಗಿದೆ

ಯಾವ ಯಾವ ಬ್ಯಾಂಕ್ ಗಳಲ್ಲಿ ಎಷ್ಟು ರೈತರು  ಸಾಲ  ಪಡೆದಿದ್ದಾರೆ: ಎಸ್.ಬಿ.ಆಯ್ 146, ಸಿಂಡಿಕೇಟ್ 76, ಕೆನರಾ ಬ್ಯಾಂಕ್ 12, ಕೆವಿಜಿ ಬ್ಯಾಂಕ್ ಮುಂಡಗೋಡ 311, ವಿಜಯಾ ಬ್ಯಾಂಕ್ ಕಾತೂರ 48, ಎಸ್.ಬಿ.ಆಯ್ ಮಳಗಿ 395, ಕೆವಿಜಿ ಬ್ಯಾಕ್ ನಂದಿಕಟ್ಟಾ 74, ಕೆವಿಜಿ ಬ್ಯಾಂಕ್ ಬೆಡಸ್‍ಗಾಂವ 12, ಕೆವಿಜಿ ಬ್ಯಾಂಕ ಹುಗುಂದ 252, ಸಿಂಡಿಕೇಟ್ ಬ್ಯಾಂಕ್ ಇಂದೂರ 27, ಕೆರರಾ ಬ್ಯಾಂಕ್ ಪಾಳಾ 62 ಸಿಂಡಿಕೇಟ್ ಬ್ಯಾಂಕ್ ತಟ್ಟಿಹಳ್ಳಿ 29 ಯೋಜನೆಯ ಸೌಲಭ್ಯ ಪಡೆಯಲು ಬಾರದ ರೈತರ ಮಾಹಿತಿ ಪಡೆದುಕೊಂಡು ಸೌಲಭ್ಯ ಪಡೆದುಕೋಳಲು ನೋಟಿಸ್ ನೀಡಲಾಗುವುದು ಈ ಬಗ್ಗೆ ಸಭೆ ಮಾಡಿ ನಮ್ಮ ಗ್ರಾಮಲೆಕ್ಕಾಧಿಕಾರಿಗೆ ಸೂಚಿಸಿದ್ದು ಈಗಾಗಲೇ ಶೇ.50 ರೈತರು ಸಾಧನೆ ಯಾಗಿದೆ ರೈತರು ಈ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಬೇಕು
-ರಾಜು ಮೊಗನೀರ ಉಪವಿಭಾಗಾಧಿಕಾರಿ ಶಿರಸಿ

ರೈತರು ಹಿಂದೇಟು ಹಾಕುತ್ತಿರುವುದು ಕಂಡು ಬಂದಿದೆ. ಪ್ರಯೋಜನ ಪಡೆದುಕೊಳ್ಳಲು ರೈತರಿಗೆ ತಿಳಿಸುತ್ತಿದ್ದೇವೆ ಹಾಗೂ ಬ್ಯಾಂಕ್ ನವರಿಗೂ ರೈತರಿಗೆ ಮಾಹಿತಿ ನೀಡಲು ಹೇಳಿದ್ದೇವೆ ಹಾಗೂ ಸಹಕರಿಸುವಂತೆ ತಿಳಿಸಿದ್ದೇವೆ
-ಅಶೋಕ ಗುರಾಣಿ ತಹಶೀಲ್ದಾರ ಅಶೋಕ ಗುರಾಣಿ

ನಮ್ಮ ಬ್ಯಾಂಕ್‍ನಲ್ಲಿ ಸಾಲ ಪಡೆದ ರೈರಿಗೆ ನಾವು ಫೋನ್ ಮಾಡಿ ಕರೆಯಿಸಿ ಸಾಲಮನ್ನಾ ಯೋಜನೆಯ ಸೌಲಭ್ಯ ಮಾಹಿತಿ ನೀಡುತ್ತಿದ್ದೇವೆ ನಮ್ಮಲಲಿ 311 ರೈತರು  ಸಾಲ ಪಡೆದುಕೊಂಡಿದ್ದು ಈಗಾಗಲೇ 260 ರೈತರು ಸಾಲಮನ್ನಾ ಯೋಜನೆಗೆ ದಾಖಲೆ ನೀಡಿದ್ದಾರೆ
-ರೋಷನಕುಮಾರ ವ್ಯವಸ್ಥಾಪಕ ಕೆವಿಜಿಬ್ಯಾಂಕ್ ಮುಂಡಗೋಡ


 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...