'ಲೈಟ್ ಫಿಶ್ಶಿಂಗ್ ಮೀನುಗಾರಿಕೆ ವಿವಾದ : ವೆಂಕಟಾಪುರದಲ್ಲಿ ಮೀನುಗಾರಿಕಾ ಇಲಾಖೆಯಿಂದ ಸೌಹಾರ್ದ ಸಭೆ'

Source: sonews | By Staff Correspondent | Published on 7th February 2019, 12:03 AM | Coastal News | Don't Miss |

ಭಟ್ಕಳ: ಇಲ್ಲಿನ ಪರ್ಷಿಯನ್ ಬೋಟ್ ಹಾಗೂ ಫಿಶ್ಶಿಂಗ್ ಬೋಟ್ ಮೀನುಗಾರರು, ನಾಡದೋಣಿ ಮೀನುಗಾರರು, ಟ್ರಾಲ್ ಬೋಟ್ ಹಾಗೂ ಸಣ್ಣ ಬೋಟ್ ಮೀನುಗಾರರನ್ನೊಳಗೊಂಡಂತೆ ಇಲ್ಲಿನ ಮೀನುಗಾರಿಕಾ ಇಲಾಖೆಯಿಂದ ಇಲ್ಲಿನ ಶಿರಾಲಿ ವೆಂಕಟಾಪುರ ಲಕ್ಷ್ಮೀ ನಾರಾಯಣ ಸಭಾಭವನದಲ್ಲಿ ಲೈಟ್ ಫಿಶ್ಶಿಂಗ್ ಕುರಿತಾಗಿ ಸೌಹಾರ್ದತಯುತ ಸಭೆಯೂ ನಡೆಯಿತು.

ಸಭೆಯಲ್ಲಿ ತಾಲುಕಾ ಮೀನುಗಾರಿಕಾ ಸಹಾಯಕ ನಿರ್ದೇಶಕ ರವಿ ಸಾಂಪ್ರದಾಯಿಕ ಪರ್ಷಿಯನ್ ಬೋಟ್, ಫಿಶ್ಶಿಂಗ್ ಬೋಟ್ ಮೀನುಗಾರರು, ನಾಡದೋಣಿ ಮೀನುಗಾರರು, ಟ್ರಾಲ್ ಬೋಟ್ ಹಾಗೂ ಸಣ್ಣ ಬೋಟ್ ಮೀನುಗಾರರಿಗೆ ಇಲಾಖೆಗಳ ಹಾಗೂ ಕಾನೂನು ವ್ಯಾಪ್ತಿಯಲ್ಲಿನ ವಿವರನ್ನು ತಿಳಿಸಿದರು. ಹಾಗೂ ಕಾನೂನು ಬದ್ಧವಾಗಿ ಇರುವ ಕ್ರಮವನ್ನು ಮೀನುಗಾರರು ಅನುಸರಿಸಬೇಕಾದ ರೀತಿಯ ಬಗ್ಗೆ ಮನವೋಲಿಕೆ ಮಾಡಿಕೊಡಲಾಯಿತು.

ಸಭೆಯಲ್ಲಿ ಟ್ರಾಲ್ ಬೋಟ ಮೀನುಗಾರ ಪ್ರಮುಖರು ಮೀನುಗಾರರಿಗೆ ಮೀನುಗಾರಿಕೆಗೆ ಉಪಯೋಗಿಸುವ ಬಲೆಯ ಮೆಸ್ 35 ಎಮ್ ಎಮ್ ಇದ್ದು ಇದನ್ನು 18-20 ಎಮ್.ಎಮ್. ಆಗುವಂತೆ ಸರಕಾರದ ಗಮನಕ್ಕೆ ತರುವಂತೆ ಮನವಿ ಮಾಡಿಕೊಂಡರು. ಇನ್ನು ಮಹಾರಾಷ್ಟ್ರ ಗೋವಾದಿಂದ ಕರಾವಳಿಯ ಮಂಗಳುರಿನ ವರೆಗೆ ಅವ್ಯಾಹತವಾಗಿ ಮೀನುಗಾರಿಕೆ ನಡೆಯುತ್ತಿದ್ದು ತಾಲೂಕಿನ ಎಲ್ಲಾ ಮೀನುಗಾರಿಕಾ ಸಂಘ ಮೀನುಗಾರಿಕೆ ಮಾಡಿದ ಬಳಿಕ ಪರ್ಷಿಯನ್ ಮೀನುಗಾರರು ಮೀನುಗಾರಿಕೆ ತೆರಳುವದು ಸಾಂಪ್ರದಾಯಿಕವಾಗಿ ನಡೆದುಕೊಂಡು ಬಂದಿದೆ. ಗೋವಾ ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಲೈಟ್ ಫಿಶ್ಶಿಂಗ್ ತಾಲೂಕಿನಲ್ಲಿ ಯಾಕೆ ಅವಕಾಶವಿಲ್ಲ. ಅವರಿಗೆ ನೀಡಿದಂತೆ ನಮಗೂ ಸಹ ಸಡಿಲತೆ ನೀಡಿ ಲೈಟ್ ಫಿಶ್ಶಿಂಗ್ ಮಾಡಲು ಅವಕಾಶ ನೀಡಿ. ಹಾಗೂ ಲೈಟ ಫಿಶ್ಶಿಂಗ್ ಸ್ಥಗಿತಗೊಳಿಸುವುದಾದರೆ ಕಾನೂನು ಒಂದೇ ಮಾಡಿ ಎಂದು ಹೇಳಿದರು.
ಇದಕ್ಕೆ ಮೀನುಗಾರಿಕಾ ಸಹಾಯಕ ನಿರ್ದೇಶಕ ರವಿ ಇಲಾಖೆಗಳು ಕಾನೂನಾತ್ಮಕವಾಗಿ ಕಾರ್ಯ ಮಾಡುತ್ತಿದ್ದು, ಪದೇ ಪದೇ ಇಲಾಖೆಗಳ ಮೇಲೆ ತಪ್ಪು ಹೋರಿಸಬೇಡಿ. ತಾಲೂಕಾ ವ್ಯಾಪ್ತಿಯಲ್ಲಿ ವಿಚಾರದಲ್ಲಿ ನಾವು ಅಧಿಕಾರಿ ವಹಿಸಿಕೊಂಡು ಕೆಲಸ ಮಾಡಬಹುದಾಗಿದ್ದು ಆದರೆ ಎಲ್ಲೆಡೆ ಲೈಟ್ ಫಿಶ್ಶಿಂಗ್ ಸ್ಥಗಿತಗೊಳಿಸುವ ಅಧಿಕಾರ ನಮ್ಮಲ್ಲಿಲ್ಲ ಎಂದು ತಿಳಿಸಿದ ಅವರು ಸಭೆಯಲ್ಲಿ ಚರ್ಚಿಸಲಾದ ವಿಷಯವನ್ನು ಸರಕಾರದ ಗಮನಕ್ಕೆ ತಂದಿದ್ದು ಎಲ್ಲಾ ಅಹವಾಲನ್ನು ಸ್ವೀಕರಿಸಿದ್ದೇವೆ. 

ಇದೇ ವೇಳೆ ನಾಡದೋಣಿ ಮೀನುಗಾರರ ಪ್ರಮುಖ ಮಾತನಾಡಿ'ಲೈಟ್ ಫಿಶ್ಶಿಂಗ್ ಸ್ಥಗಿತಗೊಳಿಸುವ ವಿಚಾರದಲ್ಲಿ ನಾಡದೋಣಿ ಮೀನುಗಾರರನ್ನೇ ಗುರಿಯಾಗಿಸುತ್ತಿರುವುದು ಸಮಂಜಸವಲ್ಲ. ಲೈಟ್ ಫಿಶ್ಶಿಂಗ್ ನಡೆಸಲು ಪರ್ಷಿಯನ್ ಬೋಟ ಮೀನುಗಾರರಿಗೆ ಒಪ್ಪಿಗೆ ಬೇಕಾಗಿದ್ದು ಆದರೆ ಎಲ್ಲಾ ಸಾಂಪ್ರದಾಯಿಕ ಮೀನುಗಾರರ ಒಪ್ಪಿಗೆ ಸಹಮತ ಪಡೆದು ಮುಂದುವರೆಯಲಿ ಎಂದು ಹೇಳಿದರು.
ಈ ವೇಳೆ ಸಭೆಯಲ್ಲಿ ನಾಡದೋಣಿ ಮೀನುಗಾರರು ಹಾಗೂ ಪರ್ಷಿಯನ ಮೀನುಗಾರರ ಪ್ರಮುಖರ ನಡುವೆ ಮಾತಿನ ಚಕಮಕಿ ಉಂಟಾಗಿದ್ದು, ಈ ವೇಳೆ ಮೀನುಗಾರಿಕಾ ಸಹಾಯಕ ನಿರ್ದೇಶಕ ರವಿ ಮೀನುಗಾರರನ್ನು ಸಮಾಧಾನ ಪಡಿಸಿದರು. ಎಲ್ಲಾ ಸಾಂಪ್ರದಾಯಿಕ ಮೀನುಗಾರರು ಕಾನೂನು ಬದ್ಧವಾಗಿ ಮೀನುಗಾರಿಕೆಗೆ ತೆರಳುವಂತೆ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು. ಹಾಗೂ ಈ ಬಗ್ಗೆ ಒಪ್ಪಂದ ಪತ್ರಕ್ಕೆ ಎಲ್ಲಾ ಸಾಂಪ್ರದಾಯಿಕ ಮೀನುಗಾರರ ಸಂಘದ ಅಧ್ಯಕ್ಷರ ಸಹಿ ಪಡೆದು ಆ ಮೂಲಕ ಮುಂದಿನ ಕಾರ್ಯವನ್ನು ನಡೆಸಲಿರುವ ಬಗ್ಗೆ ಮೀನುಗಾರಿಕಾ ಸಹಾಯಕ ನಿರ್ದೇಶಕ ರವಿ ಸಭೆಯಲ್ಲಿ ತಿಳಿಸಿದರು. ಅಂತ್ಯದಲ್ಲಿ ಎಲ್ಲಾ ಸಾಂಪ್ರದಾಯಿಕ ಮೀನುಗಾರ ಸಂಘದ ಮೀನುಗಾರರು 2 ತಿಂಗಳ ಕಾಲಾವಕಾಶ ಪಡೆದುಕೊಂಡರು.  ಈ ಬಗ್ಗೆ ಮೀನುಗಾರಿಕಾ ಸಹಾಯಕ ನಿರ್ದೇಶಕ ರವಿ ಮೇಲಾಧಿಕಾರಿಗಳಿಗೆ ಸಭೆಯ ಬೆಳವಣಿಗೆಯ ಬಗ್ಗೆ ತಿಳಿಸಿ ಮುಂದಿನ ಕ್ರಮದಂತೆ ಕಾರ್ಯಪ್ರವೃತ್ತರಾಗಲಿದ್ದೇವೆ ಎಂದು ಹೇಳಿದರು.  

ನಂತರ ಮಾಧ್ಯಮದವರೊಂದಿಗೆ ಮಾತನಾಡಿ ಮೀನುಗಾರಿಕಾ ಸಹಾಯಕ ನಿರ್ದೇಶಕ ರವಿ 'ಸಾಂಪ್ರದಾಯಿಕ ಮೀನುಗಾರರ ಮಧ್ಯೆ ಲೈಟ್ ಫಿಶ್ಶಿಂಗ್ ವಿಚಾರವಾಗಿ ಸಂಘರ್ಷ ಉಂಟಾಗಿದ್ದರ ಹಿನ್ನೆಲೆ ಸೌಹಾರ್ದಯುತ ಸಭೆ ನಡೆಸಲಾಯಿತು. ಎಲ್ಲಾ ಬಂದರದಲ್ಲಿ ಕಾನೂನು ಬದ್ಧವಾಗಿ ಮೀನುಗಾರಿಕೆಗೆ ತೆರಳುವಂತೆ ಎಲ್ಲಾ ಮೀನುಗಾರರಿಗೆ ಸೂಚನೆ ನೀಡಲಾಗಿದೆ. ಇಲಾಖೆ ಅಧಿಕಾರಿಗಳು ಆಯಾ ಬಂದರದಲ್ಲಿ ಕಾರ್ಯಪ್ರವೃತ್ತರಾಗಲಿದ್ದಾರೆ. ಈ ವೇಳೆ ಕಾನುನು ಉಲ್ಲಂಘನೆ ಮಾಡಿ ಮೀನುಗಾರಿಕೆಗೆ ತೆರಳಿದರೆ ಅಂತಹ ಬೋಟ್ ಅಥವಾ ದೋಣಿಗಳ ಮೇಲೆ ಕಾನೂನು ಕ್ರಮ ಜರುಗಿಸಲಾಗಿವದು ಎಂದು ಸಭೆಯಲ್ಲಿ ತಿಳಿಸಿದ್ದೇವೆ ಎಂದು ಪ್ರತಿಕ್ರಿಯಿಸಿದರು.

ಈ ಸಂಧರ್ಭದಲ್ಲಿ ಪರ್ಷಿಯನ ಬೋಟ್ ಅಧ್ಯಕ್ಷ ಗಣೇಶ ಮೋಗೇರ, ಕರಾವಳಿ ಕಾವಲು ಪಡೆ ಸಿಪಿಐ ಸುರೇಶ ನಾಯಕ ಸೇರಿದಂತೆ ನಾಡದೋಣಿ ಬೋಟ್ ಮೀನುಗಾರ ಪ್ರಮುಖರು, ಸಣ್ಣ ಬೋಟ್ ಮೀನುಗಾರರ ಪ್ರಮುಖ ಮುಂತಾದವರು ಇದ್ದರು. 

Read These Next

ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 19 ಅಭ್ಯರ್ಥಿಗಳಿಂದ 36 ನಾಮಪತ್ರ ಸಲ್ಲಿಕೆ.

ಕಾರವಾರ :12- ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ , ನಾಮಪತ್ರಗಳ ಸಲ್ಲಿಕೆಗೆ ಕೊನೆಯ ದಿನವಾದ ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...

ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 19 ಅಭ್ಯರ್ಥಿಗಳಿಂದ 36 ನಾಮಪತ್ರ ಸಲ್ಲಿಕೆ.

ಕಾರವಾರ :12- ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ , ನಾಮಪತ್ರಗಳ ಸಲ್ಲಿಕೆಗೆ ಕೊನೆಯ ದಿನವಾದ ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...