ಬೈಕ್ ಸವಾರನ ಮೇಲೆ ಚಿರತೆ ದಾಳಿ

Source: so news | By MV Bhatkal | Published on 26th March 2019, 12:19 AM | Coastal News | Don't Miss |

 

ಭಟ್ಕಳ:ಗಡಿಭಾಗವಾದ ಸಾಗರ ತಾಲೂಕಿನ ಕಾಗಲ್ ವ್ಯಾಪ್ತಿಯ ನಾಗವಳ್ಳಿ ಪ್ರಾಥಮಿಕ ಶಾಲೆ‌‌ ಬಳಿ ಭಾನುವಾರದಂದು ಸಂಜೆ ವೇಳೆ ಬೈಕ್ ಸವಾರನ ಮೇಲೆ ಚಿರತೆಯೊಂದು ದಾಳಿ ನಡೆಸಿದೆ.
ಚಿರತೆ ದಾಳಿಗೊಳಗಾದವರವರು ಕೆ.ವಿ.ಥೋಮಸ್ (35)  ನಾಗವಳ್ಳಿ ನಿವಾಸಿ ಎಂದು ತಿಳಿದು ಬಂದಿದೆ. ಬೈಕ ಸವಾರ ತನ್ನ‌‌‌ ಕೆಲಸ ಮುಗಿಸಿ ನಾಗವಳ್ಳಿಯ ಮನೆ‌ ಕಡೆ ಬರುತ್ತಿದ್ದ ವೇಳೆ ಚಿರತೆ ದಾಳಿ ನಡೆಸಿದೆ.‌ ದಾಳಿಯಿಂದ ಸವಾರ ಬೈಕನಿಂದ‌ ಕೆಳಗೆ ಬಿದ್ದಿದ್ದು ಬೈಕ್ ಸವಾರನ ಬಲಗೈ, ಹೊಟ್ಟೆ, ಎಡಗಾಲನ್ನು ತನ್ನ ಉಗುರಿನಿಂದ ಪರಚಿದ್ದು, ಕೈಗೆ ಬಲವಾದ ಗಾಯವಾಗಿದೆ.‌ ಇದೇ ವೇಳೆ ಚಿರತೆ ಸವಾರನ ಕುತ್ತಿಗೆಗೆ ಬಾಯಿ ಹಾಕುವುದನ್ನು ಗಮನಿಸಿದ್ದು, ತಾನು ಧರಿಸಿದ ಲುಂಗಿಯನ್ನು ಕಳಚಿ ಚಿರತೆ ಕುತ್ತಿಗೆಯನ್ನು  ಹಿಡಿದು ದಾಳಿಯಿಂದ‌ ತಪ್ಪಿಸಿಕೊಂಡಿದ್ದಾನೆ.
ನಂತರ ಚಿರತೆ ಅಲ್ಲಿನ ಮನೆಯೊಂದರ ಕೊಟ್ಟಿಗೆಯಲ್ಲಿನ ಎರಡು ದನ ಕರದ‌ ಮೇಲೆ‌ ದಾಳಿ‌ ನಡೆಸಿ ದನದ ಕುತ್ತಿಗೆಯನ್ನು‌ ಮುರಿದು ಹೋಗಿದೆ ಎಂದು ತಿಳಿದು ಬಂದಿದೆ.
ಅದ್ರಷ್ಟವಶಾತ ದಾಳಿಗೊಳಗಾದ ಬೈಕ‌ ಸವಾರ ಪ್ರಾಣಾಪಾಯದಿಂದ‌ ಪಾರಾಗಿದ್ದಾನೆ. ಇದಾದ ಕೆಲ ಗಂಟೆಯ ಬಳಿಕ‌ ಮತ್ತೋರ್ವ ಬೈಕ ಸವಾರನ ಮೇಲೆ‌ ಚಿರತೆ ದಾಳಿ‌‌‌‌ ನಡೆಸಿದ್ದು, ಸವಾರ ದಾಳಿಯಿಂದ ಪಾರಾಗಿರುವ ಬಗ್ಗೆ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ‌. 
ತಕ್ಷಣಕ್ಕೆ ಅಲ್ಲಿನ ಸ್ಥಳೀಯರು ಚರ್ಚ ಬಳಿ ತೆರಳಿ ಸವಾರನಿಗೆ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆ ಹಿನ್ನಲೆ ಭಟ್ಕಳ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. 
ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಬಂದಿದ್ದು ಪರಿಶೀಲನೆ ನಡೆಸಿ ಕಾರ್ಗಲ ಪೊಲೀಸ್ ಠಾಣೆಗೆ ಮಾಹಿತಿ ತಿಳಿಸಿದ್ದಾರೆ

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...

ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ ಪ್ರಶ್ನೆ

ಬಾಳೆಹೊನ್ನೂರು: ಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ಮಲೆನಾಡಿನ ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ...