ಭಟ್ಕಳ ಓಣಿ ಕೇರಿಗೆ ಸಂಪೂರ್ಣ ಬೆಳಕು ನೀಡದ ಎಲ್‍ಇಡಿ!

Source: S O New service | By I.G. Bhatkali | Published on 25th May 2018, 11:08 PM | Coastal News | Don't Miss | Sports News |

ಭಟ್ಕಳ: ಇನ್ನೇನು ಒಂದು ವಾರದಲ್ಲಿ ಮಳೆಗಾಲ ಆರಂಭವಾಗಲಿದೆ. ರಸ್ತೆಯ ಮಳೆಯ ನೀರು ಮೈ ಮೇಲೆ ಎರಚುವ ಕಿರಿಕಿರಿ ಒಂದೆಡೆ ಇದ್ದರೆ, ಅಲ್ಲಲ್ಲಿ ಇರುವ ಹೊಂಡಗಂಡಿಗಳಿಂದ ಪಾರಾಗುವ ಸರ್ಕಸ್ ಬೇರೆ! ಮಳೆಗಾಲದಲ್ಲಿ ಕರೆಂಟ್ ಕೈ ಕೊಡುವುದು ಇಲ್ಲಿ ಸರ್ವೇ ಸಾಮಾನ್ಯವಾಗಿದ್ದು, ಬೀದಿ ದೀಪ ನಿರ್ವಹಣೆ ದೊಡ್ಡ ಸವಾಲಿನ ಸಂಗತಿಯಾಗಿದೆ.

 ಭಟ್ಕಳ ಪುರಸಭೆ ಬೀದಿ ದೀಪಕ್ಕೆಂದೇ ವಾರ್ಷಿಕ ಅಂದಾಜು 48 ಲಕ್ಷ ರುಪಾಯಿಯನ್ನು ವ್ಯಯಿಸುತ್ತಿದೆ. ಆದರೂ ಬೆಳೆಯುತ್ತಿರುವ ಭಟ್ಕಳದಲ್ಲಿ ರಸ್ತೆ, ವಿದ್ಯುದ್ದೀಪಕ್ಕೆ ಸಂಬಂಧಿಸಿದಂತೆ ಆಧುನಿಕತೆಯನ್ನು ಮೈಗೂಡಿಸಿಕೊಳ್ಳಲು ಇನ್ನೂ ಸಾಧ್ಯವಾಗಿಲ್ಲ. ನೇತಾಡುವ ತಂತಿಗಳಿಗೆ ಇನ್ನೂ ಮುಕ್ತಿ ಸಿಕ್ಕಿಲ್ಲ. ಟ್ಯೂಬ್ ಲೈಟ್, ಸೋಡಿಯಮ್ ಲೈಟ್ ಬಳಕೆಯನ್ನು ಸ್ಥಗಿತಗೊಳಿಸಿ ಎಲ್‍ಇಡಿ ಬಳಸುವಂತೆ ಸರಕಾರದ ನಿರ್ದೇಶನ ನೀಡಿದ್ದರೂ ಸ್ಥಳೀಯಾಡಳಿತ ಆ ಬಗ್ಗೆ ಉತ್ಸುಕತೆ ಹೊಂದಿಲ್ಲ. ಅದಲ್ಲದೇ ಈ ಹಿಂದೆ ಜನರ ಕಣ್ಣೊರೆಸಲು ಎಲ್‍ಇಡಿ ಬಲ್ಬ್‍ಗಾಗಿ ಹಾವೇರಿ ಮೂಲದ ಪ್ರಾಂಪ್ಟೆಕ್ ಕಂಪನಿಗೆ ಕೆಲಸ ನೀಡಲಾಯಿತಾದರೂ ಅದು ಹೆಚ್ಚು ದಿನ ಬಾಳಿಕೆ ಬರಲಿಲ್ಲ. ಇದೀಗ 6 ತಿಂಗಳ ಈಚೆಗೆ ಹಾವೆಲ್ಸ್ ಕಂಪನಿಯ ಎಲ್‍ಇಡಿ ದೀಪಗಳು ಭಟ್ಕಳ ಶಹರ ವ್ಯಾಪ್ತಿಯಲ್ಲಿ ಗೋಚರಿಸಲಾರಂಭಿಸಿವೆ. ಆದರೆ ಭಟ್ಕಳದಲ್ಲಿ ಸರಿಸುಮಾರು 2000 ಬೀದಿದೀಪಗಳು ಇದ್ದರೂ ಎಲ್‍ಇಡಿ ಅಳವಡಿಕೆ ಕೇವಲ 180! ಜಾಲಿ ಪಟ್ಟಣ ಪಂಚಾಯತ ಪ್ರದೇಶದಲ್ಲಿ 1900 ಬೀದಿ ದೀಪಗಳಲ್ಲಿ ಎಲ್‍ಇಡಿ ಇದ್ದಿರುವುದು 115 ಕಡೆಯಷ್ಟೇ! ಅಲ್ಲೀಗ ಬೀದಿ ದೀಪದ ವಾರ್ಷಿಕ ಕರೆಂಟ್ ಬಿಲ್ ರು. 5.88 ಲಕ್ಷ. ಭಟ್ಕಳ ಪುರಸಭೆ ಹಾಗೂ ಜಾಲಿ ಪಟ್ಟಣ ಪಂಚಾಯತ ಎರಡರಲ್ಲಿಯೂ ಹಣ ಹೊಂದಿಸಿಕೊಂಡು ಹಂತಹಂತವಾಗಿ ಎಲ್‍ಇಡಿ ಅಳವಡಿಸುವುದಾಗಿ ಹೇಳುತ್ತಲೇ ಇದ್ದಾರೆ. ಭಟ್ಕಳ ಗ್ರಾಮೀಣ ಭಾಗದಲ್ಲಿಯೂ ಎಲ್‍ಇಡಿ ಬಗ್ಗೆ ಜನರು ಜಾಗೃತರಾಗಬೇಕಿದೆ. 

ಎಲ್‍ಇಡಿ ಏಕೆ ಬೇಕು?: ಬೀದಿ ದೀಪಕ್ಕೆ ಎಲ್‍ಇಡಿ ಹೇಳಿ ಮಾಡಿಸಿದಂತಿದೆ. ಸೋಡಿಯಮ್, ಇತರೇ ವಿದುದ್ದೀಪಗಳಲ್ಲಿನ 400 ವ್ಯಾಟ್ ಸಾಮಥ್ರ್ಯದ ಬೆಳಕನ್ನು ಕೇವಲ 42 ವ್ಯಾಟ್ ಎಲ್‍ಇಡಿಯಲ್ಲಿ ಪಡೆಯಬಹುದು. ಇದರಿಂದ ಒಂದಕ್ಕೆ 10 ಪಟ್ಟು ಹಣ ಉಳಿತಾಯವಾಗುತ್ತದೆ. ಅಂದರೆ ಭಟ್ಕಳ ಪುರಸಭೆಯ 9 ಲಕ್ಷ ರುಪಾಯಿ ಬೀದಿದೀಪದ ಖರ್ಚುವೆಚ್ಚ ಕೇವಲ 90 ಸಾವಿರ ರುಪಾಯಿಗೆ ಇಳಿಯುತ್ತದೆ. ಆದರೆ ಗಮನ ಕೇಂದ್ರೀಕರಿಸಬೇಕಾಗುವುದು ಎಲ್‍ಇಡಿ ಗುಣಮಟ್ಟದ ಬಗ್ಗೆ. ಆಧುನಿಕತೆ ಮಾತನಾಡುತ್ತಿರುವ ಪುರಸಭೆ, ಪಟ್ಟಣ ಪಂಚಾಯತ ಆಡಳಿತ ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲಿ ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ. 

Read These Next

ಬಿಜೆಪಿ ಹಿಂದುಳಿದವರನ್ನು ತುಳಿಯುವ ಸಂಚು ರೂಪಿಸಿದೆ, ಭಟ್ಕಳದಲ್ಲಿ ಬಿಜೆಪಿ ವಿರುದ್ಧ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ

ಬಿಜೆಪಿ ಮೇಲ್ನೋಟಕ್ಕೆ ಅಲ್ಪಸಂಖ್ಯಾತರನ್ನು ವಿರೋಧಿಸುವ ಪಕ್ಷವಾಗಿ ಮೇಲ್ನೋಟಕ್ಕೆ ಕರೆಯಿಸಿಕೊಳ್ಳುತ್ತಿದೆಯಾದರೂ, ವಾಸ್ತವಾಗಿ ...

ಹ್ಯಾಮರ್ ಥ್ರೋ; ಇಸ್ಲಾಮಿಯಾ ಆಂಗ್ಲೋ ಉರ್ದು ಪ್ರೌಢಶಾಲೆ ವಿದ್ಯಾರ್ಥಿ ರಾಷ್ಟ್ರಮಟ್ಟಕ್ಕೆ ಆಯ್ಕೆ

ಭಟ್ಕಳ: ಮಂಡ್ಯ ಜಿಲ್ಲೆಯ ಆದಿಚುಂಚನಗಿರಿಯಲ್ಲಿ ಬುಧವಾರ ನಡೆದ ಪ್ರೌಢಶಾಲಾ ವಿದ್ಯಾರ್ಥಿಗಳ ರಾಜ್ಯಮಟ್ಟದ ಅಥ್ಲೆಟಿಕ್ಸ್ ನಲ್ಲಿ ...

ಕ್ರೀಡಾ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಆಸಕ್ತಿ ವಹಿಸುವಂತೆ ಕ್ಷೇತ್ರಶಿಕ್ಷಣಾಧಿಕಾರಿ ಕರೆ

ಭಟ್ಕಳ:  ವಿದ್ಯಾರ್ಥಿಗಳು  ಪಟ್ಯಪುಸ್ತಕದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿ ವಹಿಸಿದ್ದಲ್ಲಿ ವಿದ್ಯಾರ್ಥಿಗಳ ಸರ್ವಾಂಗೀಣ ...