ಮತದಾರರ ನೋಂದಣಿಗೆ ನ.20 ಕೊನೆಯ ದಿನ: ಚುನಾವಣಾಧಿಕಾರಿ ಸಂಜೀವ್‌ ಕುಮಾರ್

Source: sonews | By sub editor | Published on 10th October 2018, 11:44 PM | Coastal News | Don't Miss |

ಬೆಂಗಳೂರು: ಮುಂದಿನ ಲೋಕಸಭಾ ಚುನಾವಣೆಗೆ 2019ರ ಜನವರಿ 1ಕ್ಕೆ 18ವರ್ಷ ತುಂಬಿದ ಪ್ರತಿಯೊಬ್ಬರು ಮತದಾನಕ್ಕೆ ಅರ್ಹರಾಗಿದ್ದು, ನ.20ರೊಳಗೆ ನೋಂದಣಿ ಮಾಡಿಕೊಳ್ಳಬೇಕೆಂದು ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ನಿರ್ದೇಶಿಸಿದ್ದಾರೆ.

ಬುಧವಾರ ನಗರದ ಮುಖ್ಯ ಚುನಾವಣಾಧಿಕಾರಿ ಕಚೇರಿಯಲ್ಲಿ ಆಯೊಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಉಪಚುನಾವಣೆ ನಡೆಯುತ್ತಿರುವ ಕ್ಷೇತ್ರಗಳನ್ನು ಹೊರತುಪಡಿಸಿ 198 ವಿಧಾನಸಭಾ ಕ್ಷೇತ್ರಗಳ ಮತದಾರರ ಕರಡು ಪಟ್ಟಿ ಪ್ರಕಟಿಸಲಾಗಿದ್ದು, ಒಟ್ಟು 4,48,89,191 ಮತದಾರರಿದ್ದಾರೆ ಎಂದು ತಿಳಿಸಿದರು.

ಈಗ ಮತದಾರರ ಕರಡು ಪಟ್ಟಿ ಪ್ರಕಟಿಸಲಾಗಿದೆ. ಈ ಪಟ್ಟಿಗೆ ಹೊಸದಾಗಿ ಸೇರ ಬಯಸುವವರು ನ.20ರೊಳಗೆ ಗ್ರಾಮಾಂತರ ಪ್ರದೇಶದಲ್ಲಿ ತಹಶೀಲ್ದಾರ್ ಕಚೇರಿ, ನಗರಗಳಲ್ಲಿ ಕಂದಾಯ ಕಚೇರಿ ಹಾಗೂ ಆನ್‌ಲೈನ್‌ನಲ್ಲಿ ನೋಂದಾಣಿಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಅವರು ಹೇಳಿದರು.

ಜ.4ಕ್ಕೆ ಅಂತಿಮ ಪಟ್ಟಿ ಪ್ರಕಟ: ಮತದಾರರ ಪಟ್ಟಿಗೆ ಅರ್ಜಿ ಸಲ್ಲಿಸಿದ ಹೊಸ ಮತದಾರರ ವೈಯಕ್ತಿಕ ವಿವರ ಹಾಗೂ ವಾಸ ಸ್ಥಳದ ಕುರಿತು ದೃಢೀಕರಿಸಲು ಪರಿಶೀಲನೆ ನಡೆಸಲಾಗುವುದು. ನಂತರ ಜ.4ಕ್ಕೆ ಮತದಾರರ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಅವರು ಹೇಳಿದರು.

ಬಿಬಿಎಂಪಿ ವ್ಯಾಪ್ತಿ: ಇಲ್ಲಿನ 28ವಿಧಾನಸಭಾ ಕ್ಷೇತ್ರಗಳಲ್ಲಿರುವ ಮತದಾರರು ಕರಡು ಪ್ರತಿಯಲ್ಲಿ 89,57,064 ಮತದಾರರಿದ್ದು, ಹೊಸ ಮತದಾರರ ಸೇರ್ಪಡೆಗೆ ಅರ್ಜಿ ಸಲ್ಲಿಸಲು ನ.20ಕೊನೆಯ ದಿನವಾಗಿದ್ದು, ಅರ್ಹ ಪ್ರತಿಯೊಬ್ಬರು ನೋಂದಣಿ ಮಾಡಿಕೊಳ್ಳಬೇಕೆಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದರು.

ಪ್ರತಿಯೊಂದು ವಿಧಾನಸಭಾ ಕ್ಷೇತ್ರಗಳಲ್ಲಿ ಸರಾಸರಿ ಶೇ.66 ರಿಂದ ಶೇ.68ರಷ್ಟು ಮತದಾರರಿಬೇಕು. ಆದರೆ, ಯಶವಂತಪುರ-ಶೇ.73.99, ಕೆ.ಆರ್.ಪುರಂ-72.47, ಯಲಹಂಕ-71.78, ರಾಜರಾಜೇಶ್ವರಿ ನಗರ-ಶೇ.69.67 ಕ್ಷೇತ್ರಗಳಲ್ಲಿ ಹೆಚ್ಚಿನ ಮತದಾರರಿದ್ದಾರೆ. ಹಾಗೂ ಮಹಾಲಕ್ಷ್ಮಿ ಲೇಔಟ್, ಪದ್ಮನಾಭನಗರ, ರಾಜಾಜಿನಗರ, ಜಯನಗರ, ಗಾಂಧಿನಗರ, ಬಿಟಿಎಂ ಲೇಔಟ್‌ಗಳಲ್ಲಿ ಸರಾಸರಿ ಕಡಿಮೆ ಮತದಾರರಿದ್ದಾರೆ. ಈ ಕುರಿತು ಪರಿಶೀಲನೆ ನಡೆಸಿ, ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ಅ.10ರಿಂದ ನ.20ರವರೆಗೆ ಮತದಾನ ಪಟ್ಟಿಗೆ ನೋಂದಾಯಿಸಿಕೊಳ್ಳುವಾಗ ಗೊಂದಲ, ಸಮಸ್ಯೆಗೆ ಆಸ್ಪದ ಕೊಡದಂತೆ ಮುನ್ನೆಚ್ಚರಿಕೆ ವಹಿಸಲು ರಾಜಕೀಯ ಪಕ್ಷಗಳು ಪ್ರತಿ ಬೂತ್ ಮಟ್ಟದಲ್ಲಿ ಏಜೆಂಟ್‌ನ್ನು ನೇಮಿಸಬೇಕು. ಇದರಿಂದ ಮತದಾರರ ಪಟ್ಟಿ ಪ್ರಕಟಗೊಂಡ ನಂತರ ಭಿನ್ನಾಭಿಪ್ರಾಯಕ್ಕೆ ಆಸ್ಪದ ಇರುವುದಿಲ್ಲ.

-ಸಂಜೀವ್‌ಕುಮಾರ್, ಮುಖ್ಯ ಚುನಾವಣಾಧಿಕಾರಿ

Read These Next

ದಸರಾ ಉತ್ಸವವನ್ನು ವಿಶಿಷ್ಠವಾಗಿ ಸಂಘಟಿಸುತ್ತಿರುವ ಯುವ ಸಂಘಟಕರ ಕಾರ್ಯ ಶ್ಲಾಘನೀಯ:ಡಾ,ಆರ್. ನರಸಿಂಹ ಮೂರ್ತಿ

ಭಟ್ಕಳ:ಶಿರಾಲಿಯ ಸಾಲೆಮನೆಯ ಮಠದ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ನಡೆಯುತ್ತಿರುವ ದಸರಾ ಉತ್ಸವ ಅತ್ಯಂತ ವಿಶಿಷ್ಟವಾದುದು. ...

'ಪಾಳು ಬಿದ್ದಿದೆ ಮಹಿಳಾ ಮೀನು ವ್ಯಾಪಾರಿಗಳಿಗೆ ಹಸ್ತಾಂತರಗೊಳ್ಳಬೇಕಾದ ಸುಸಜ್ಜಿತ ಮೀನು ಮಾರುಕಟ್ಟೆ'

ಭಟ್ಕಳ: ಇಲ್ಲಿನ ಪುರಸಭೆ ವ್ಯಾಪ್ತಿಯಲ್ಲಿನ ಸಂತೆ ಮಾರುಕಟ್ಟೆಯ ಆವರಣದೊಳಗೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅನುದಾನದಡಿಯಲ್ಲಿ 1.30 ...

'ಭಟ್ಕಳ ಬೈಲೂರಿನಲ್ಲಿ ನಿಶ್ಚಯವಾದ ಬಾಲ್ಯ ವಿವಾಹವನ್ನು ತಡೆದ ಇಲಾಖೆ ಅಧಿಕಾರಿಗಳು'

ಭಟ್ಕಳ: ಇಲ್ಲಿನ ಬೈಲೂರಿನ ಗುಡಿಗಾರಬೋಲೆಯ ಸಮೀಪ 17 ವರ್ಷದ 1 ತಿಂಗಳ ಮುಸ್ಲಿಂ ಹುಡುಗಿಗೆ ಅದೇ ಊರಿನ 24 ವರ್ಷದ ಯುವಕನೊಂದಿಗೆ ಬಾಲ್ಯ ವಿವಾಹ ...

'ಕೆ.ಎಸ್.ಆರ್.ಟಿ.ಸಿ. ನಿಲ್ದಾಣದಲ್ಲಿ ಪ್ರಯಾಣಿಕರಿಗೆ ತಾತ್ಕಾಲಿಕ ಶೆಡ್‍ಗಳನ್ನು ನಿರ್ಮಾಣಕ್ಕೆ ನಾಗರಿಕ ವೇದಿಕೆ ಆಗ್ರಹ'

ಭಟ್ಕಳ: ಇಲ್ಲಿನ ಕೆ.ಎಸ್.ಆರ್.ಟಿ.ಸಿ. ನಿಲ್ದಾಣದಿಂದ ಸಾರ್ವಜನಿಕರಿಗೆ ಮತ್ತು ಪ್ರಯಾಣಿಕರಿಗೆ ಆಗುವ ತೊಂದರೆ ಹಾಗೂ ಅವ್ಯವಸ್ಥೆಯನ್ನು ...

'ಪಂಚಾಯತ ವ್ಯಾಪ್ತಿಯ ಅನಧೀಕೃತ ಕಟ್ಟಡದ ಶೀಘ್ರ ತೆರವು ಕ್ರಮಕ್ಕೆ ಅಧಿಕಾರಿಗಳಿಗೆ ಸದಸ್ಯರ ತಾಕೀತು'

ಭಟ್ಕಳ: ಇಲ್ಲಿನ ಜಾಲಿ ಪಟ್ಟಣ ಪಂಚಾಯತ್ ಅಧ್ಯಕ್ಷ ಸೈಯದ್ ಅದಮ್ ಪಣಂಬೂರ ಅವರ ಅಧ್ಯಕ್ಷತೆಯಲ್ಲಿ ಮೊದಲ ಹಂತದ ಸಾಮಾನ್ಯ ಸಭೆಯೂ ಪಂಚಾಯತ ...