ಗೋರಕ್ಷಕರ ದಾಳಿ ಭೀತಿ; ಸಾಕುದನವನ್ನು ಪೊಲೀಸ್ ಠಾಣೆಗೆ ಒಪ್ಪಿಸಿದ ಕಾರ್ಪೋರೇಟರ್

Source: sonews | By Staff Correspondent | Published on 18th January 2018, 1:24 AM | National News | Don't Miss |

ಲಕ್ನೊ: ತನ್ನ ಮೇಲೆ ‘ಗೋರಕ್ಷಕ’ರಿಂದ ದಾಳಿ ನಡೆಯಬಹುದೆಂಬ ಭೀತಿಯಿಂದ ಉತ್ತರಪ್ರದೇಶದ ಮೀರತ್ ನಗರದ ಮುಸ್ಲಿಂ ಕಾರ್ಪೊರೇಟರ್ ತಮ್ಮ ಮನೆಯಲ್ಲಿ ಸಾಕುತ್ತಿದ್ದ ದನವನ್ನು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

ವಾರ್ಡ್ 73ರ ಕಾರ್ಪೊರೇಟರ್, ಬಹುಜನ ಸಮಾಜವಾದಿ ಪಕ್ಷದ ಮುಖಂಡ ಅಬ್ದುಲ್ ಗಫ್ಫಾರ್ ಮಂಗಳವಾರ ತಮ್ಮ ಸಾಕುದನದೊಂದಿಗೆ ನೌಚಾಂಡಿ ಪೊಲೀಸ್ ಠಾಣೆಗೆ ಆಗಮಿಸಿ, ಹಸುವನ್ನು ನೋಡಿಕೊಳ್ಳುವಂತೆ ಪೊಲೀಸ್ ಅಧಿಕಾರಿ ಸಂಜಯ್ ಕುಮಾರ್  ರನ್ನು ಕೋರಿದ್ದಾರೆ. ಇವರೊಂದಿಗೆ ಕುಟುಂಬದ ಸದಸ್ಯರು ಹಾಗೂ ನೆರೆಮನೆಯವರಿದ್ದರು. ಈ ದನವನ್ನು ಸಾಕುವವರಿಗೆ ಹಸ್ತಾಂತರಿಸಬೇಕು. ಪ್ರತೀ ತಿಂಗಳು ಅವರ ಮನೆಗೆ ಹೋಗಿ ನನ್ನ ದನವನ್ನು ನೋಡಿಕೊಂಡು ಬರುತ್ತೇನೆ ಎಂದು ಪೊಲೀಸರನ್ನು ವಿನಂತಿಸಿರುವುದಾಗಿ ಗಫ್ಫಾರ್ ತಿಳಿಸಿದ್ದಾರೆ. ಹಸುವನ್ನು ಠಾಣೆಗೆ ಹಸ್ತಾಂತರಿಸಿದ ಬಗ್ಗೆ ಗಫ್ಫಾರ್  ಗೆ ರಶೀದಿ ನೀಡಲಾಗಿದೆ. ಎರಡು ವರ್ಷದ ಹಿಂದೆ ತನ್ನ ಸೋದರಿ ನೀಡಿದ ಕರುವನ್ನು ಅತ್ಯಂತ ಕಾಳಜಿಯಿಂದ ಸಾಕಿದ್ದೇನೆ. ಆದರೆ ಈಗ ತಥಾಕಥಿತ ಗೋರಕ್ಷಕರ ದಾಳಿಯ ಭೀತಿಯ ಕಾರಣ ಅತ್ಯಂತ ನೋವಿನಿಂದ ದನವನ್ನು ಮನೆಯಿಂದ ಹೊರಗೆ ಕಳಿಸುತ್ತಿದ್ದೇನೆ . ಇದು ತನ್ನ ವೈಯಕ್ತಿಕ ನಿರ್ಣಯ. ಇದರಲ್ಲಿ ಪಕ್ಷದ ಪಾತ್ರವೇನೂ ಇಲ್ಲ ಎಂದು ಗಫ್ಫಾರ್ ಹೇಳಿದ್ದಾರೆ. 
ಹಸುವನ್ನು ಗಫ್ಫಾರ್  ಗೆ ಮರಳಿಸುವುದಾಗಿ ಪೊಲೀಸ್ ಅಧೀಕ್ಷಕ ಮಾನ್  ಸಿಂಗ್ ಚೌಹಾಣ್ ಹೇಳಿದ್ದಾರೆ. ಆದರೆ ತನ್ನ ನಿರ್ಧಾರ ಬದಲಿಸುವುದಿಲ್ಲ ಎಂದು ಗಫ್ಫಾರ್ ತಿಳಿಸಿದ್ದಾರೆ. 
ಕಳೆದ ಕೆಲ ವರ್ಷಗಳಲ್ಲಿ ದೇಶದಾದ್ಯಂತ ಗೋರಕ್ಷಣೆಯ ಹೆಸರಲ್ಲಿ ನಡೆಯುತ್ತಿರುವ ಹಿಂಸಾಚಾರ ಹೆಚ್ಚಿದ್ದು ತಥಾಕಥಿಕ ಗೋರಕ್ಷಕರು ಜನರನ್ನು ಥಳಿಸುವುದು, ಅವರ ಬಳಿಯಿದ್ದ ಹಸುಗಳನ್ನು ಸೆಳೆದೊಯ್ಯುವುದು ಇತ್ಯಾದಿ ಕೃತ್ಯಗಳಿಂದ ಒಂದು ವರ್ಗದ ಜನರಲ್ಲಿ ಭೀತಿಯ ವಾತಾವರಣ ಮೂಡಿಸಿದ್ದಾರೆ. ಕೆಲವು ಸಂಘಟನೆಗಳು ಅಲ್ಪಸಂಖ್ಯಾತ ಸಮುದಾಯದವರನ್ನು ಗುರಿಯಾಗಿಸಿ ನಡೆಸುತ್ತಿರುವ ಈ ಹಿಂಸಾಚಾರವನ್ನು ಹತ್ತಿಕ್ಕಲು ಕೇಂದ್ರದ ಬಿಜೆಪಿ ನೇತೃತ್ವದ ಸರಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ವಿಪಕ್ಷಗಳು ಟೀಕಿಸಿವೆ.

Read These Next

ರಿಲಯನ್ಸ್ ಜೊತೆ ನಂಟು ಹೊಂದಿರುವ ಕಂಪೆನಿಯಿಂದ ಬಿಜೆಪಿಗೆ 375 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್

ರಿಲಯನ್ಸ್ ಗುಂಪಿನೊಂದಿಗೆ ನಂಟು ಹೊಂದಿರುವ, ಆದರೆ ಹೊರಜಗತ್ತಿಗೆ ಅಪರಿಚಿತವಾಗಿರುವ ಕಂಪೆನಿ ಕ್ವಿಕ್ ಸಪ್ಪೆ ಚೇನ್ ಪ್ರೈವೇಟ್ ...

ಲೋಕಸಭಾ ಚುನಾವಣೆ; ಕಾಂಗ್ರೇಸ್ ನ ಎರಡನೇ ಪಟ್ಟಿ ಬಿಡುಗಡೆ; ಉ.ಕ ಕ್ಷೇತ್ರಕ್ಕೆ ಅಂಜಲಿ ನಿಂಬಾಳ್ಕರ್

ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಪಕ್ಷ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಕರ್ನಾಟಕದ 17, ಅರುಣಾಚಲ ...

ಸಿಎಎ ನಿಯಮಾವಳಿಗಳಿಗೆ ತಡೆ ಕೋರುವ ಅರ್ಜಿಗಳ ವಿಚಾರಣೆ ; ಸು.ಕೋರ್ಟ್‌ನಿಂದ ಕೇಂದ್ರಕ್ಕೆ ನೋಟಿಸ್

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯ ನಿಯಮಗಳಿಗೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಮಂಗಳವಾರ ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...