ಲಾರಿ ಚಾಲಕನಿಂದ 17 ಲಕ್ಷ ರೂ ದರೋಡೆ ಪ್ರಕರಣ ಭೇದಿಸಿದ ಪೊಲೀಸರು

Source: S O News | By MV Bhatkal | Published on 27th March 2017, 10:11 PM | Coastal News | Don't Miss |

ಯಲ್ಲಾಪುರ: ಯಲ್ಲಾಪುರ-ಹಳಿಯಾಳ ರಾಜ್ಯ ಹೆದ್ದಾರಿ ತಾಲೂಕಿನ ಕಣ್ಣಿಗೇರಿ ಗ್ರಾಮದ ಬಳಿ ಲಾರಿಯೊಂದನ್ನು ತಡೆದು ಚಾಲಕನಲ್ಲಿದ್ದ 17 ಲಕ್ಷ ರೂ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾ;ಲ್ವರು ಆರೋಪಿಗಳನ್ನು ಬಂದಿಸಿದ್ದು, ಕೃತ್ಯಕ್ಕೆ ಬಳಸಲಾದ ಕಾರು ಹಾಗೂ ಮೊಬೈಲ್‍ಗಳನ್ನು ಯಲ್ಲಾಪುರ ಪೊಲೀಸರು ವಶ ಪಡಿಸಿಕೊಳ್ಲವಲ್ಲಿ ಯಶಸ್ವಿಯಾಗಿದ್ದಾರೆ.
  ಜನವರಿ 30, 2017 ರಂದು ಬೆಳಿಗ್ಗೆ 08-45 ಗಂಟೆಯ ಸುಮಾರಿಗೆ ಅಡಿಕೆ ಮಾರಾಟದ ಹಣವನ್ನು ತೆಗೆದುಕೊಂಡು ಪೂಣಾ ದಿಂದ ಮಂಗಳೂರು ಕಡೆಗೆ ಹೊರಟಿದ್ದ ಲಾರಿಯನ್ನು ಕಾರಿನಲ್ಲಿ ಬೆನ್ನತ್ತಿ ಬಂದ ದರೋಡೆಕೋರರು ಂiiಲ್ಲಾಪುರ ತಾಲೂಕಿನ ಕಣ್ಣಗೇರಿ ಗ್ರಾಮದ ಹತ್ತಿರ ಹಳಿಯಾಳ ರಸ್ತೆಯಲ್ಲಿ ಅಡ್ಡಗಟ್ಟಿ ನಿಲ್ಲಿಸಿ ಲಾರಿ ಚಾಲಕರ ಮೇಲೆ ಹಲ್ಲೆ ಮಾಡಿ 17 ಲಕ್ಷ ರೂಪಾಯಿ ನಗದು ಹಣ ಹಾಗೂ ಮೊಬೈಲ್‍ಗಳನ್ನು ದರೋಡೆ ಮಾಡಿಕೊಂಡು ಹೋಗಿದ್ದರು.
  ಈ ಕುರಿತು ಚಾಲಕ ಯಲ್ಲಾಪುರ ಠಾಣೆಯಲ್ಲಿ ಅಂದೆ ದೂರು ದಾಖಲಿಸಿದ್ದ, ಜಿಲ್ಲಾ ಪೊಲೀಸ್ ಅಧೀಕ್ಷಕ ವಿನಾಯಕ ಪಾಟೀಲ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೆ.ಜಿ. ದೇವರಾಜ್, ಶಿರಸಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಟಿ.ನಾಗೇಶ ಶೆಟ್ಟಿಯವರ ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕ ವಿಜಯ ಬಿರಾದಾರ ಹಾಗೂ ಉಪ ನಿರೀಕ್ಷಕ ಶ್ರೀಧರ್ ಎಸ್.ಆರ್‍ನೇತೃತ್ವದ ತಂಡ ದರೋಡೆ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.
  ದಕ್ಷಿಣ ಕನ್ನಡ ಜಿಲ್ಲೆ ಪುತ್ತುರು ತಾಲ್ಲೂಕಿನ ಚಾಲಕರಾದ ಇಬ್ರಾಹಿಂ ತಂದೆ ಸುಲೇಮಾನ (34),ನಜೀರ ಮೂಸಾ ಪಿ.ಕೆ(32), ಕೆ.ಫಾರುಕ್.ಕೆ.ಮಹಮ್ಮದ ಕರ್ಜಾಲ್(38), ಶಂಮುಶುದ್ದಿನ ಉಮೆರ್(32) ಈ ಆರೋಪಿತರನ್ನು ಮಾರ್ಚ 23 ರಂದು ಬಂಧಿಸಿ ದರೋಡೆಯಾದ ಹಣ, ಕೃತ್ಯಕ್ಕೆ ಉಪಯೋಗಿಸಿದ ಕಾರು ಹಾಗೂ ಮೊಬೈಲ್‍ಗಳನ್ನು ಪೊಲೀಸರು ಜಪ್ತಮಾಡಿದ್ದಾರೆ. ಆರೋಪಿತರಿಂದ 3,37 ಲಕ್ಷ ರೂ ನಗದು, 2 ಲಕ್ಷ ರೂಪಾಯಿ ಮೌಲ್ಯದ ಕಾರು, 6 ಮೊಬೈಲ್ ಸೆಟ್‍ಗಳನ್ನು ವಶಕ್ಕೆ ತೆಗೆದುಕೊಂಡು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರ ಪಡಿಸಿ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ.
  ಯಲ್ಲಾಪುರ ಠಾಣೆಯ ಪಿ.ಐ. ವಿಜಯ ಬಿರಾದಾರ, ಪಿಎಸ್‍ಐ ಶ್ರೀಧರ ಎಸ್.ಆರ್. ಪಿಎಸ್‍ಐ ಎ.ವೈ.ಕಾಂಬ್ಳೆ, ಎಎಸ್‍ಐ ಎನ್.ಆರ್.ರಾಠೋಡ್, ಹೆಡ್ ಕಾನಸ್ಟೇಬಲ್‍ಗಳಾದ ಗಜಾನನ ನಾಯ್ಕ, ನಾಗಪ್ಪ ಲಮಾಣಿ, ಉದಯ ಹರಿಕಂತ್ರ, ಕಾನ್ಸಟೆಬಲ್‍ಗಳಾದ ಹರೀಶ ನಾಯ್ಕ, ಬನವಾಸಿ ಠಾಣೆಯ ಮಹ್ಮದ್ ಶಫಿ, ಕಾರವಾರ ಠಾಣೆಯ ಬಬನ್ ಕದಂ, ಕಾರವಾರ ಟೆಕ್ನಿಕಲ್ ಸೆಲ್ ಹೆಡ್ ಕಾನ್ಸಟೇಬಲ್ ಸುಧೀರ ಮಡಿವಾಳ, ಯಲ್ಲಾಪುರ ಹೆಡ್ ಕಾನ್ಸಟೆಬಲ್ ಬಾಲಕೃಷ್ಣ ಕೊಂಡ್ಲಿ, ಜಗದೀಶ ನಾಯ್ಕ ಮುಂತಾದವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...