ದಮಾಮ್ : ಸೋಶಿಯಲ್ ಫೋರಮ್  ಆರ್ಟ್ ಬೀಟ್- ಸಂಭ್ರಮದ ಮಕ್ಕಳ ದಿನಾಚರಣೆ

Source: iff dammam | By Arshad Koppa | Published on 21st November 2016, 11:45 PM | Gulf News |

ದಮಾಮ್: ನವೆಂಬರ್ 14ರ ಮಕ್ಕಳ ದಿನಾಚರಣೆಯ ಪ್ರಯುಕ್ತ ಇಂಡಿಯನ್ ಸೋಶಿಯಲ್ ಫೋರಮ್ ಕರ್ನಾಟಕ ರಾಜ್ಯ ಸಮಿತಿಯು ಮಕ್ಕಳಿಗಾಗಿ ಆಯೋಜಿಸಿದ್ದ ''ಬಣ್ಣ ಹಚ್ಚುವ'' ಸ್ಫರ್ಧಾ ಕಾರ್ಯಕ್ರಮದಲ್ಲಿ 200ರಷ್ಟು ಮಕ್ಕಳು ಪಾಲ್ಗೊಳ್ಳುವುದರೊಂದಿಗೆ ಅರಬ್ ನಾಡಿನಲ್ಲಿ ಸಂಭ್ರಮದ ಮಕ್ಕಳ ದಿನಾಚರಣೆಗೆ ವೇದಿಕೆ ಕಲ್ಪಿಸಲಾಯಿತು. ''ಆರ್ಟ್ ಬೀಟ್'' ಹೆಸರಿನಲ್ಲಿ ಆಯೋಜಿಸಲಾದ ಚಿತ್ರಕ್ಕೆ ಬಣ್ಣ ಹಚ್ಚುವ ಸ್ಫರ್ಧೆಯಲ್ಲಿ ಎಲ್ ಕೆಜಿ , ಯುಕೆಜಿ ಮತ್ತು ಪ್ರಥಮ ತರಗತಿಯ ಚಿಣ್ಣರು ಭಾಗವಹಿಸಿದ್ದು, ಅರಬ್ ಜಗತ್ತಿನ ಹೆಸರಾಂತ ಮಳಿಗೆ ''ಲುಲು ಹೈಪರ್ ಮಾರ್ಕೆಟ್'' ಪ್ರಾಯೋಜಕತ್ವವನ್ನು ವಹಿಸಿಕೊಂಡಿತ್ತು. 
ನವೆಂಬರ್ 14ರಂದು ಸಂಜೆ 7 ಗಂಟೆಗೆ ಲುಲು ಹೈಪರ್ ಮಾರ್ಕೆಟ್- ಜುಬೈಲ್ ನಲ್ಲಿ ನಡೆಸಲಾದ  ಮಕ್ಕಳ ದಿನಾಚರಣೆ ''ಆರ್ಟ್ ಬೀಟ್- ಬಣ್ಣ ಹಚ್ಚುವ'' ಸ್ಪರ್ಧೆಯಲ್ಲಿ 81 ಮಕ್ಕಳು ಭಾಗವಹಿಸಿದ್ದು, ಕ್ರಮವಾಗಿ ಮಹೂಮ್ ಆರಿಫ್, ಎಲಿಜ಼ಬೆತ್ ಮತ್ತು ಜಿದಾ ಆಸಿಫ್ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ಪಡೆದರು. ಇಂಡಿಯನ್ ಸೋಶಿಯಲ್ ಫೋರಮ್ ಕೇಂದ್ರ ಸಮಿತಿಯ ಅಧ್ಯಕ್ಷ ವಾಸಿಮ್ ರಬ್ಬಾನಿ, ಜುಬೈಲ್ ಇಂಡಿಯನ್ ಇಂಟರ್ ನ್ಯಾಶನಲ್ ಸ್ಕೂಲ್ ಪ್ರಾಂಶುಪಾಲ ಡಾ. ಹಾಮಿದ್ ಹಾಗೂ ಲುಲು ಹೈಪರ್ ಮಾರ್ಕೆಟ್ ಜುಬೈಲ್ ಇದರ ಜನರಲ್ ಮ್ಯಾನೇಜರ್ ಅಕ್ಬರ್ ಸೈದು ಮುಹಮ್ಮದ್ ವಿಜೇತರಿಗೆ ಬಹುಮಾನ ವಿತರಿಸಿ ಶುಭಹಾರೈಸಿದರು. 


ನವೆಂಬರ್ 17ರಂದು ಸಂಜೆ 7 ಗಂಟೆಗೆ ಲುಲು ಹೈಪರ್ ಮಾರ್ಕೆಟ್- ಖೋಬರ್ ನಲ್ಲಿ ನಡೆದ ಮಕ್ಕಳ ದಿನಾಚರಣೆ ''ಆರ್ಟ್ ಬೀಟ್' ''ಬಣ್ಣ ಹಚ್ಚುವ'' ಸ್ಪರ್ಧೆಯಲ್ಲಿ 106 ಮಕ್ಕಳು ಭಾಗವಹಿಸಿದ್ದು, ಕ್ರಮವಾಗಿ ಸೆಜ಼ಾ ಮರ್ಯಮ್, ಸಾನ್ವಿ ಸಿ., ಅರೀಜ್ ಅಬ್ದುಲ್ ಮತೀನ್ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ಪಡೆದರು. ಮುಖ್ಯ ಅತಿಥಿಗಳಾಗಿ  ಇಂಡಿಯನ್ ಸೋಶಿಯಲ್ ಫೋರಮ್ ಕೇಂದ್ರ ಸಮಿತಿಯ ಅಧ್ಯಕ್ಷ ವಾಸಿಮ್ ರಬ್ಬಾನಿ, ಇಂಡಿಯನ್ ಇಂಟರ್ ನ್ಯಾಶನಲ್ ಸ್ಕೂಲ್ ಖೋಬರ್ ಪ್ರಾಂಶುಪಾಲ ಡಾ ಇ.ಕೆ. ಮುಹಮ್ಮದ್ ಶಾಫಿ ಹಾಗೂ ಲುಲು ಹೈಪರ್ ಮಾರ್ಕೆಟ್ ಖೋಬರ್ ಇದರ ಜನರಲ್ ಮ್ಯಾನೇಜರ್ ಮುಹಮ್ಮದ್ ರಫೀಕ್ ವಿಜೇತರಿಗೆ ಬಹುಮಾನ ವಿತರಿಸಿ ಶುಭಹಾರೈಸಿದರು.  ಅನಿವಾಸಿ ಭಾರತೀಯ ಮಕ್ಕಳಿಗೆ ಸಂಭ್ರಮದ ದಿನಾಚರಣೆ ನಡೆಸಲು ಸಹಕಾರ ನೀಡಿದ ಲುಲು ಹೈಪರ್ ಮಾರ್ಕೆಟ್ ಸಂಸ್ಥೆಯನ್ನು ಮತ್ತು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಇಂಡಿಯನ್ ಸ್ಕೂಲುಗಳ ಪ್ರಾಂಶುಪಾಲರನ್ನು ಇಂಡಿಯನ್ ಸೋಶಿಯಲ್ ಫೋರಮ್ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು.  

 
ಕಾರ್ಯಕ್ರಮವನ್ನು ಇಂಡಿಯನ್ ಸೋಶಿಯಲ್ ಫೋರಮ್ ಕರ್ನಾಟಕ ರಾಜ್ಯ ಸಮಿತಿಯ ಸದಸ್ಯ ಮುಹಮ್ಮದ್ ಅಜ಼ರುದ್ದೀನ್ ನಿರೂಪಿಸಿದರು.

Read These Next