ಕುವೈಟ್: ಆರು ಕೋಟಿ ರೂ ಮೌಲ್ಯದ ಅಕ್ರಮ ಮಾದಕ ವಸ್ತು ವಶಕ್ಕೆ

Source: so english | By Arshad Koppa | Published on 2nd September 2016, 9:12 AM | Gulf News |

ಕುವೈಟ್, ಸೆ ೨: ಇರಾನ್ ನಿಂದ ಕುವೈಟಿಗೆ ಸುಮಾರು 160 ಕೇಜಿಯಷ್ಟು ಹಶೀಷ್ ಮಾದಕ ಪದಾರ್ಥವನ್ನು ಕಳ್ಳಸಾಗಣೆ ಮಾಡಲು ನಡೆಸಿದ ಯತ್ನವನ್ನು ವಿಫಲಗೊಳಿಸಿ ವಶಪಡಿಸಿಕೊಳ್ಳಲಾಗಿದೆ.

ಮಾದಕ ವಸ್ತು ನಿಗ್ರಹ ದಳಕ್ಕೆ ಸಿಕ್ಕ ಚಿಕ್ಕ ಸುಳಿವಿನ ಮೇರೆಗೆ ಸಮುದ್ರ ಮಾರ್ಗದಲ್ಲಿ ಈ ದೊಡ್ಡ ಪ್ರಮಾಣದ ಮಾದಕ ಪದಾರ್ಥವನ್ನು ಕಳ್ಳಸಾಗಣೆ ಮಾಡುತ್ತಿದ್ದ ವೇಳೆ ಹಿಡಿಯಲಾಗಿದ್ದು ಮೂವರನ್ನು ಬಂಧಿಸಲಾಗಿದೆ. 

ಗಲ್ಫ್ ನಾಗರಿಕರೇ ಆದ ವ್ಯಕ್ತಿ ಈ ಜಾಲದ ನೇತೃತ್ವ ವಹಿಸಿದ್ದು ತನಿಖೆಯ ವೇಳೆ ಇನ್ನಿಬ್ಬರ ಬಗ್ಗೆ ವಿವರ ನೀಡಿದ್ದಾನೆ. ಆ ವಿವರಗಳ ಪ್ರಕಾರ ಇಬ್ಬರ ಮನೆಗೆ ಧಾಳಿ ಮಾಡಿ ಬಂಧಿಸಲಾಗಿದೆ. ಈ ಇಬ್ಬರ ಬಳಿ ಯಾವುದೇ ಅಧಿಕೃತ ದಾಖಲೆ ಇಲ್ಲದಿರುವುದರಿಂದ ಯಾವ ರಾಷ್ಟ್ರೀಯತೆಯನ್ನು ಹೊಂದಿದ್ದಾರೆ ಎಂದು ತಿಳಿದುಬಂದಿಲ್ಲ. ಮೇಲ್ನೋಟಕ್ಕೆ ಇವರು ಕುವೈಟಿನಲ್ಲಿ ಆಶ್ರಯ ಪಡೆದಿರುವ, ನಿರಾಶ್ರಿತ ಬೆದೂನ್ ರಂತೆ ಕಂಡುಬರುತ್ತಾರೆ. 

ವಶಪಡಿಸಿಕೊಂಡ ಮಾದಕ ಪದಾರ್ಥದ ಬೆಲೆ ಮೂರು ಲಕ್ಷ ಕುವೈಟ್ ದಿನಾರ್ (ಸುಮಾರು ಆರು ಕೋಟಿ - 6,63,76,500 ಭಾರತೀಯ ರೂ) ಆಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

Read These Next

ದುಬಾಯಿಯಲ್ಲಿ "ಗಲ್ಫ್ ಕರ್ನಾಟಕೊತ್ಸವ" ಯಶಸ್ವಿ; ಐತಿಹಾಸಿಕ ದಾಖಲೆಗೆ ಸಾಕ್ಷಿಯಾದ ಅನಿವಾಸಿ ಕನ್ನಡಿಗರು

ಕರ್ನಾಟಕದ 21 ಅತ್ಯಂತ್ ಪ್ರಭಾವಶಾಲಿ ವ್ಯಾಪಾರ  ಐಕಾನ್ ಗಳು ಗಲ್ಫ್ ಕರ್ನಾಟಕ ರತ್ನ ಪ್ರಶಸ್ತಿಗಳೊಂದಿಗೆ ಗೌರವಿಸಲಿಟ್ಟರು.