ಕುವೈತ್: ಬದ್ರ್ ಸಹಯೋಗದೊಂದಿಗೆ ಐಎಸ್ಎಫ್ ವತಿಯಿಂದ ಉಚಿತ ವೈದ್ಯಕೀಯ ಶಿಬಿರ

Source: isf kuwait | By Arshad Koppa | Published on 23rd August 2017, 8:21 AM | Gulf News | Special Report |

ಅನಿವಾಸಿ ಭಾರತೀಯರ ಸಾಮಾಜಿಕ ಸಾಂಸ್ಕೃತಿಕ ಸಂಘಟನೆ ಇಂಡಿಯನ್ ಸೋಶಿಯಲ್ ಫೋರಮ್ ಕುವೈತ್, ಬದ್ರ್ ಅಲ್ ಸಮಾ ಮೆಡಿಕಲ್ ಸೆಂಟರ್ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಂಡಿದೆ. ದಿನಾಂಕ 25 ಆಗಸ್ಟ್ 2017ರ ಶುಕ್ರವಾರ ಬೆಳಿಗ್ಗೆ 7.30 ರಿಂದ ಅಪರಾಹ್ನ 3 ಗಂಟೆಯವರೆಗೆ ಫರ್ವಾನಿಯಾ ಬದ್ರ್ ಅಲ್ ಸಮಾ ಮೆಡಿಕಲ್ ಸೆಂಟರ್'ನಲ್ಲಿ ನಡೆಯುವ ಶಿಬಿರದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಐಎಸ್ಎಫ್ ಕೇಳಿಕೊಂಡಿದೆ.

ಮಧುಮೇಹ, ರಕ್ತದೊತ್ತಡ, ಕೊಲೆಸ್ಟ್ರಾಲ್, SGPT (ಲಿವರ್ ಸ್ಕ್ರೀನಿಂಗ್), ಕ್ರಿಯೇಟಿನೈನ್ (ಮೂತ್ರಪಿಂಡಗಳ ಪರೀಕ್ಷೆ) ಮುಂತಾದ ಪರೀಕ್ಷೆಗಳು ಶಿಬಿರದಲ್ಲಿ ಒಳಗೊಂಡಿರುವುದು. ಅಲ್ಲದೆ ಜನರಲ್ ಮೆಡಿಸಿನ್, ಮಕ್ಕಳ ವಿಭಾಗ, ಸ್ತ್ರೀ ರೋಗ ವಿಭಾಗ, ದಂತ ಚಿಕಿತ್ಸಾ ವಿಭಾಗ, ಮೂಳೆ ಚಿಕಿತ್ಸಾ ವಿಭಾಗ, ಶಸ್ತ್ರಚಿಕಿತ್ಸಾ ವಿಭಾಗ ಒಳಗೊಂಡಂತೆ ವಿವಿಧ ಕ್ಷೇತ್ರಗಳ ತಜ್ಞ ವೈದ್ಯರಿಂದ ಸಂದರ್ಶನವೂ ಉಚಿತವಾಗಿ ಲಭ್ಯವಿರಲಿದೆ.

ಕುವೈಟಿನಲ್ಲಿರುವ ಭಾರತೀಯ ಸಮುದಾಯವು ವಿಶೇಷವಾಗಿ ತಳಮಟ್ಟದ ಕಾರ್ಮಿಕ ವರ್ಗವು ಈ ವೈದ್ಯಕೀಯ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಇಂಡಿಯನ್ ಸೋಶಿಯಲ್ ಫೋರಮ್ ಕುವೈಟ್ ಪತ್ರಿಕಾ ಪ್ರಕಟಣೆಯಲ್ಲಿ ಕೇಳಿಕೊಂಡಿದೆ. ಮುಂಚಿತ ನೋಂದಣಿಗಾಗಿ  99502159/60499055/69911631 ಮೊಬೈಲ್ ಸಂಖ್ಯೆಗಳಿಗೆ ವಾಟ್ಸಪ್, ಎಸ್.ಎಮ್.ಎಸ್. ಅಥವಾ ಕರೆ ಮಾಡಲು ಕೋರಿದೆ.

Read These Next

ಭಟ್ಕಳ-ಹೊನ್ನಾವರ ವಿಧಾನಸಭಾ ಚುನಾವಣೆ; ಕಾಂಗ್ರೇಸ್ ಬೆಂಬಲಕ್ಕೆ ನಿಂತ ಕೆನರಾ ಕಲೀಝ್ ಕೌನ್ಸಿಲ್

ಭಟ್ಕಳ: ಕರಾವಳಿಯ ಶರಾವತಿ ನದೀ ತೀರದ ಸುಮಾರು 29ಕ್ಕೂ ಹೆಚ್ಚು ಜಮಾಅತ್ ಗಳ ಒಕ್ಕೂಟವಾಗಿರುವ ಗಲ್ಫ್‍ನಲ್ಲಿ ಸ್ಥಾಪಿತ ಕೆನರಾ ಮುಸ್ಲಿಮ್ ...