ಶಿವಮೊಗ್ಗ: ಬ್ಯಾಂಕುಗಳು ಆರ್ಥಿಕವಾಗಿ ದುರ್ಬಲಗೊಂಡವರನ್ನು ಮೇಲೆತ್ತಲಿ- ಶ್ರೀ ರಂಭಾಪುರಿ ಜಗದ್ಗುರುಗಳು

Source: balanagoudra | By Arshad Koppa | Published on 26th October 2016, 8:06 PM | State News |

ಶಿವಮೊಗ್ಗ-ಅಕ್ಟೋಬರ್-26:ಆರ್ಥಿಕವಾಗಿ ದುರ್ಬಲಗೊಂಡ ಬಡ ಜನತೆಗೆ ಬ್ಯಾಂಕುಗಳು ಸಹಕರಿಸಿ ಮೇಲೆತ್ತುವ ಕಾರ್ಯ ಮಾಡಬೇಕೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯಪಟ್ಟರು. 
     
ಅವರು ತಿಲಕ ನಗರದ ಆರ್ಕಿಸ್ ಆರ್ಕೇಡ ಕಟ್ಟಡದಲ್ಲಿ ಟಿ.ಜಿ.ಎಂ.ಸಿ. ಬ್ಯಾಂಕಿನ 27ನೇ ಶಾಖೆಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
    
ಕೈಗಾರಿಕೆಗಳಿಗೆ ಕೊಡುವಷ್ಟೇ ಪ್ರಾಧಾನ್ಯತೆಯನ್ನು ಕೃಷಿರಂಗ ಹಾಗೂ ಗುಡಿ ಕೈಗಾರಿಕೆಗಳಿಗೆ ಬ್ಯಾಂಕಗಳು ನೀಡಿ ಸಹಕರಿಸಿದರೆ ಆರ್ಥಿಕವಾಗಿ ದುರ್ಬಲಗೊಂಡ ಬಡಜನತೆಯ ಜೀವನ ಮಟ್ಟವನ್ನು ಸುಧಾರಿಸಲು ಸಾಧ್ಯವಾಗುವುದು. ರಾಜ್ಯದ ಅತ್ಯುತ್ತಮ ಸಹಕಾರಿ ಬ್ಯಾಂಕ ಪ್ರಶಸ್ತಿಗೆ ಪುರಸ್ಕøತಗೊಂಡಿರುವ ತುಮಕೂರು ಗ್ರೈನ ಮರ್ಚಂಟ್ಸ ಕೋ ಆಪರೇಟಿವ್ ಬ್ಯಾಂಕ ಲಿ. ಇದು ಶಿವಮೊಗ್ಗದಲ್ಲಿ ತನ್ನ 27ನೇ ಶಾಖೆಯನ್ನು ಪ್ರಾರಂಭಿಸಿರುವುದು ಬ್ಯಾಂಕಿನ ಕ್ರಿಯಾಶೀಲತೆಗೆ ಮತ್ತು ದಕ್ಷತೆಗೆ ಸಾಕ್ಷಿಯಾಗಿದೆ. ಮಲೆನಾಡಿನ ಈ ಪ್ರಾಂತದಲ್ಲಿ ಬ್ಯಾಂಕ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುವುದೆಂಬ ಆತ್ಮ ವಿಶ್ವಾಸ ವ್ಯಕ್ತಪಡಿಸಿದರು.
    
ಕೈಗಾರಿಕೋದ್ಯಮಿ ಎಸ್.ರುದ್ರೇಗೌಡ ಎ.ಟಿ.ಎಂ.ಉದ್ಘಾಟಿಸಿ ಕಂಪ್ಯೂಟರ್ ಗೆ  ಚಾಲನೆ ನೀಡಿದರು. ಸೋನಾ ಗ್ರುಪ್ ಆಫ್ ಫಿಲ್ಮ್ಸ ಮ್ಯಾನೇಜಿಂಗ ಪಾರ್ಟನರ್ ಇಕ್ಬಾಲ್ ಹಬೀಬ್ ಭದ್ರತಾ ಕೊಠಡಿ ಮತ್ತು ಸೇಫ್ ಲಾಕರ್‍ಗಳನ್ನು ಉದ್ಘಾಟಿಸಿದರು. ಟಿ.ಜಿ.ಎಂ.ಸಿ.ಬ್ಯಾಂಕ ಅಧ್ಯಕ್ಷ ಎನ್.ಆರ್. ಜಗದೀಶ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಹೆಚ್.ಎಂ. ದಿವ್ಯಾನಂದ ಮೂರ್ತಿ ಮೊದಲ್ಗೊಂಡು ಕಾರ್ಯಕಾರಿ ಮಂಡಳಿಯ ಎಲ್ಲ ಸದಸ್ಯರಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆ ನೀಡಿ ಶುಭ ಹಾರೈಸಿದರು. ಮುಖ್ಯ ಕಾರ್ಯ ನಿರ್ವಾಹಕ ರಘುನಂದನ್ ಆರ್.ಎಸ್. ಸ್ವಾಗತಿಸಿದರು.
 

Read These Next

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಗದಗ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಸುಪಾರಿ ನೀಡಿದ ಮನೆಮಗ ಸಹಿತ 8 ಮಂದಿಯ ಬಂಧನ

ಮೂರು ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಎಂಟು ಮಂದಿ ...