ಕುಷ್ಟಗಿ:ಅಂತರಂಗ ಬಹಿರಂಗ ಶುದ್ಧಿಯೇ ಧರ್ಮದ ಗುರಿ - ಶ್ರೀ ರಂಭಾಪುರಿ ಜಗದ್ಗುರುಗಳು

Source: balanagoudra | By Arshad Koppa | Published on 26th October 2016, 8:01 PM | State News |

ಕುಷ್ಟಗಿ-ಅಕ್ಟೋಬರ್-25: ಧರ್ಮಗಳು ಹಲವು. ಆಚರಣೆಗಳು ಹಲವು. ಆದರೆ ಎಲ್ಲ ಧರ್ಮಗಳ ಧ್ಯೇಯ ಮಾನವ ಕಲ್ಯಾಣ. ಸಮೃದ್ಧ ಸಾರ್ಥಕ ಬದುಕಿಗೆ ಧರ್ಮ ಪರಿಪಾಲನೆ ಅವಶ್ಯಕ. ಅಂತರಂಗ ಬಹಿರಂಗ ಶುದ್ಧಿ ವೀರಶೈವ ಧರ್ಮದ ಪರಮ ಗುರಿಯಾಗಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯಪಟ್ಟರು. 
     ಅವರು ತಾಲೂಕಿನ ಚಳಗೇರಿ ಹಿರೇಮಠದ ಲಿಂ. ಶ್ರೀ ವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮಿಗಳ 2ನೇ ವರ್ಷದ ಪುಣ್ಯಸ್ಮರಣೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
    ಬದುಕಿಗೆ ಭಗವಂತ ಕೊಟ್ಟ ಕೊಡುಗೆ ಅಪಾರ ಅಮೂಲ್ಯ. ಏನೆಲ್ಲವನ್ನು ಕೊಟ್ಟ ಭಗವಂತನನ್ನು ಬದುಕಿನಲ್ಲಿ ನೆನಪಿಸಿಕೊಳ್ಳುವುದು ಮುಖ್ಯ. ಹುಟ್ಟು ಸಾವು ಯಾರನ್ನು ಬಿಟ್ಟಿಲ್ಲ. ಜೀವನ ತೆರೆದಿಟ್ಟ ಪುಸ್ತಕ. ಅದರ ಮೊದಲ ಪುಟದಲ್ಲಿ ಹುಟ್ಟು ಕೊನೆ ಪುಟದಲ್ಲಿ ಸಾವು ಭಗವಂತ ಬರೆದು ಕಳಿಸಿದ್ದಾನೆ. ಈ ಹುಟ್ಟು ಸಾವುಗಳ ಮಧ್ಯದ ಬದುಕು ಶ್ರೀಮಂತ ಮತ್ತು ಸಮೃದ್ಧಗೊಳಿಸಿಕೊಳ್ಳಬೇಕಾದದ್ದು ಅವರವರ ಜವಾಬ್ದಾರಿ. ಅರಿವಿನ ಜನ್ಮದಲ್ಲಿ ಹುಟ್ಟಿ ಪರಮ ಗುರುವಿನ ಕಾರುಣ್ಯದಿಂದ ಸಂಸ್ಕಾರವಂತನಾಗಿ ಬಾಳಿದರೆ ಬದುಕು ಸಾರ್ಥಕಗೊಳ್ಳುತ್ತದೆ. ವೀರಶೈವ ಧರ್ಮದಲ್ಲಿ ಮೃತ್ಯುವನ್ನು ಮಹಾನವಮಿ ಎಂದು ಲಿಂಗಾಂಗ ಸಾಮರಸ್ಯ ಸಾಯುಜ್ಯವೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ನಿರೂಪಿಸಿದ್ದನ್ನು ಮರೆಯಲಾಗದು. ಲಿಂ. ಶ್ರೀ ವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮಿಗಳು ಬದುಕಿನುದ್ದಕ್ಕೂ ಆಚಾರವಂತರಾಗಿ ಗುರುಪೀಠದ ಸಂಸ್ಕøತಿ ಸಂಸ್ಕಾರಗಳನ್ನು ಬೆಳೆಸುವ ಮಹತ್ಕಾರ್ಯ ಮಾಡಿದರು. ಶ್ರೀಗಳವರ ಸ್ಮರಣೋತ್ಸವ ಸಮಾರಂಭವನ್ನು ವಿಧಾಯಕ ರೀತಿಯಲ್ಲಿ ಆಚರಿಸುತ್ತಿರುವುದು ಸಂತೋಷ ತಂದಿದೆ ಎಂದರು. 
    ಶಾಸಕ ದೊಡ್ಡನಗೌಡ ಪಾಟೀಲ ಸಮಾರಂಭವನ್ನು ಉದ್ಘಾಟಿಸಿ ಲಿಂ. ಶ್ರೀ ವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮಿಗಳವರು ಭಕ್ತ ಸಮೂಹಕ್ಕೆ ನೀಡಿದ ಕೊಡುಗೆಯನ್ನು ಮರೆಯುವಂತಿಲ್ಲ ಎಂದರು. ಮಾಜಿ ಸಚಿವ ಅಮರೇಗೌಡ ಪಾಟೀಲ ಬಯ್ಯಾಪುರ, ಮಾಜಿ ಶಾಸಕ ಕೆ. ಶರಣಪ್ಪ, ಹಸನಸಾಬ ದೋಟಿಹಾಳ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
    ಉಪದೇಶಾಮೃತ ನೀಡಿದ ಎಮ್ಮಿಗನೂರು ವಾಮದೇವ ಮಹಂತ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ವೀರಶೈವ ಧರ್ಮ ಕೊಟ್ಟಷ್ಟು ಸಂಸ್ಕಾರಗಳನ್ನು ಬೇರಾವ ಧರ್ಮಗಳು ಕೊಟ್ಟಿಲ್ಲ. ಆದರ್ಶ ಚಿಂತನಗಳನ್ನು ಭಕ್ತ ಸಮುದಾಯಕ್ಕೆ ತಲುಪಿಸುವ ಕಾರ್ಯ ಮಾಡಬೇಕಾಗಿದೆ ಎಂದರು. ನೇತೃತ್ವ ವಹಿಸಿದ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ಅಧ್ಯಕ್ಷರಾದ ಮುಕ್ತಿಮಂದಿರ ಕ್ಷೇತ್ರದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯರು ಮಾತನಾಡಿ ಲಿಂ. ಶ್ರೀ ವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮಿಗಳವರ ಕ್ರಿಯಾಕರ್ತೃತ್ವ ಶಕ್ತಿ ದೊಡ್ಡದು. ಸಮಾಜಕ್ಕೆ ಉತ್ತಮವಾದ ಮಾರ್ಗದರ್ಶನ ಕೊಟ್ಟ ಸಂಸ್ಕಾರ ಯಾರೂ ಮರೆಯುವಂತಿಲ್ಲ ಎಂದರು. ಅಧ್ಯಕ್ಷತೆ ವಹಿಸಿದ      ವೀರಸಂಗಮೇಶ್ವರ ಶಿವಾಚಾರ್ಯರು ಮಾತನಾಡಿ ಲಿಂ. ಶ್ರೀ ವಿರೂಪಾಕ್ಷಲಿಂಗ ಶ್ರೀಗಳವರ ಪುಣ್ಯಸ್ಮರಣೋತ್ಸವ ನಿಮಿತ್ಯ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ನಡೆಯುತ್ತಿರುವುದು ಅತ್ಯಂತ ಸಂತೋಷ ತಂದಿದೆ. ಶ್ರೀಗಳವರ ಹೆಸರಿನಲ್ಲಿ ಹಲವಾರು ರಚನಾತ್ಮಕ ಕಾರ್ಯ ಮಾಡಬೇಕೆಂಬುದು ನಮ್ಮ ಗುರಿಯಾಗಿದೆ ಎಂದರು. 
     ಚಳಗೇರಿ ಗ್ರಾಮದಲ್ಲಿ ಬೆಳಿಗ್ಗೆ ಲಿಂಗೈಕ್ಯ ಶ್ರೀ ವಿರೂಪಾಕ್ಷಲಿಂಗ ಶ್ರೀಗಳವರ ಭಾವಚಿತ್ರದ ಪಲ್ಲಕ್ಕಿ ಮಹೋತ್ಸವ ಸಂಭ್ರಮದಿಂದ ಜರುಗಿತು. ಸಮಾರಂಭದಲ್ಲಿ ಹಲವಾರು ಮಠಾಧೀಶರು ಮತ್ತು ಗಣ್ಯರು ಪಾಲ್ಗೊಂಡಿದ್ದರು. ಆಗಮಿಸಿದ ಎಲ್ಲ ಭಕ್ತರಿಗೆ ಅನ್ನ ದಾಸೋಹ ಜರುಗಿತು. 
ಉಚಿತ ಆರೋಗ್ಯ ತಪಾಸಣಾ ಶಿಬಿರ: ಮುಂಡರಗಿಯ ಅಗಸ್ತ್ಯ ಆಯುರ್ವೇದ ಸಂಶೋಧನಾ ಕೇಂದ್ರದವರಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಜರುಗಿತು.
 

Read These Next

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...