ಕುಂದಾಪುರ:ಅಕ್ರಮ ಮರಳು ದಂಧೆಗೆ ಮತ್ತೊಂದು ಬಲಿ-ನೀರಿಗೆ ಬಿದ್ದು ಉತ್ತರ ಪ್ರದೇಶದ ಮರಳು ಕಾರ್ಮಿಕನ ಸಾವು

Source: manju | By Arshad Koppa | Published on 4th November 2016, 12:07 PM | Coastal News | Incidents |

ಕುಂದಾಪುರ, ನ ೩: ಕರಾವಳಿಯೆಲ್ಲೆಡೆ ಅಕ್ರಮ ಮರಳುಗರಿಕೆ ನಡೆಯುತ್ತಿದೆ ಎನ್ನುವುದಕ್ಕೆ ಮತ್ತೊಂದು ಉದಾಹರಣೆಯಾಗಿ ಕಾರ್ಮಿಕನೊಬ್ಬ ಬಲಿಯಾಗಿದ್ದಾನೆ. ಅಕ್ರಮ ಮರಳುಗಾರಿಕೆ ಅಡ್ಡೆಗೆ ಪೊಲೀಸ್ ದಾಳಿಯ ಸಂದರ್ಭ ತಪ್ಪಿಸಿಕೊಳ್ಳಲೆತ್ನಿಸಿದ ಕಾರ್ಮಿಕನೊಬ್ಬ ನದಿಗೆ ಬಿದ್ದು ಸಾವನ್ನಪ್ಪಿದ ಘಟನೆ ಮಾಸುವ ಮುನ್ನವೇ ದೋಣ ಯಲ್ಲಿ ಸಾಗುತ್ತಿದ್ದ ಉತ್ತರ ಪ್ರದೇಶದ ಮರಳು ಕಾರ್ಮಿಕ ಆಯತಪ್ಪಿ ನೀರಿಗೆ ಬಿದ್ದು ಸಾವನ್ನಪ್ಪಿದ್ದಾನೆ. ನದಿಗೆ ಬಿದ್ದ ಸಾವನ್ನಪ್ಪಿದ ಮರಳು ದಂಧೆಯ ಕಾರ್ಮಿಕನನ್ನು ಉತ್ತರ ಪ್ರದೇಶದ ನಾನ್ಪುರ ತಾಲೂಕಿನ ಮೋತಿಪುರ್ ನಿವಾಸಿ ಬಿಂದಾಚಲ್ ಎಂಬಾತನ ಮಗ ರಾಮು (40) ಎಂದು ಗುರುತಿಸಲಾಗಿದೆ.


ಬುಧವಾರ ಸಂಜೆ ಸುಮಾರು ಮೂರು ಗಂಟೆಗೆ ನಡೆದಿದೆ ಎನ್ನಲಾಗಿದ್ದು, ಅಕ್ರಮ ಮರಳುಗಾರಿಕೆಗೆ ತೆರಳಿದ ಸಂದರ್ಭ ಆಯ ತಪ್ಪಿದ ರಾಮು ನೀರಿಗೆ ಬಿದ್ದು ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆಯಾದರೂ ಕಾನೂನಿನ ಸಮಸ್ಯೆಯುಂಟಾಗುವ ಹಿನ್ನೆಲೆಯಲ್ಲಿ ದೋಣಿ  ರಿಪೇರಿಗೆಂದು ಕೊಂಡೊಯ್ಯುತ್ತಿದ್ದ ವೇಳೆ ಘಟನೆ ನಡೆದಿದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದ್ದು, ಪೊಲೀಸರು ಅದೇ ರೀತಿ ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.


ಮೃತ ರಾಮು ವಿವಾಹಿತನಾಗಿದ್ದು, ಪತ್ನಿ ಹಾಗೂ ಆರು ಜನ ಮಕ್ಕಳನ್ನು ಅಗಲಿದ್ದಾನೆ. ಬಿಜ್ ಮಾಲ್(20), ಬಿಜಂದಾರ್(17), ಅನಿತಾ(9), ಗೋಲು(5), ಕಾಜಲ್(3) ಹಾಗೂ ಏಳು ದಿನಗಳ ಪ್ರಾಯದ ಗಂಡು ಮಗು ಇದ್ದು ಎಲ್ಲರೂ ಊರಲ್ಲಿಯೇ ಇದ್ದಾರೆ ಎಂದು ತಿಳಿದು ಬಂದಿದೆ. ಮರಳು ಕಾರ್ಮಿಕರಾಘಿ ಸಾವಿರಾರು ಕಾರ್ಮಿಕರು ಕರಾವಳಿಗೆ ಆಗಮಿಸಿದ್ದು, ಕೆಲವು ವರ್ಷಗಳಿಂದ ಇಲ್ಲಿ ಕೆಲಸ ಮಾಡಿದ ಅನುಭವವಿದ್ದವರು ದೋಣ ಗಳನ್ನು ಬಾಡಿಗೆಗೆ ಪಡೆದು ಸ್ವತಃ ಮರಳು ದಂಧೆ ನಡೆಸುತ್ತಿರುವ ಆತಂಕಕಾರಿ ಅಂಶವೂ ಈ ಘಟನೆಯ ಬಳಿಕ ಬೆಳಕಿಗೆ ಬಂದಿದ್ದು, ಇದೇ ತಂಡದಲ್ಲಿದ್ದ ಗುಡ್ಡು ಎಂಬ ಉತ್ತರ ಪ್ರದೇಶದ ಕಾರ್ಮಿಕ ಎರಡು ದೋಣ ಗಳಲ್ಲಿ ಮರಳುಗಾರಿಕೆ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ. ಗಣ  ಇಲಾಖೆ ಹಾಗೂ ಜಿಲ್ಲಾಡಳಿತ ಇಂತಹಾ ಅಕ್ರಮಗಳಿಗೆ ಕಡಿವಾಣ ಹಾಕದೇ ಹೋದರೆ ಮುಮದಿನ ದಿನಗಳಲ್ಲಿ ಇನ್ನಷ್ಟು ಕಾರ್ಮಿಕರು ಬಲಿಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

Read These Next

ಪಿ.ಯು.ಕಾಲೇಜ್ ಸಹಪಠ್ಯ ಚಟುವಟಿಕೆ; ಇಂಗ್ಲಿಷ್ ಚರ್ಚಾ ಸ್ಪರ್ಧೆಯಲ್ಲಿ ಶಿಹಾಬುದ್ದೀನ್ ಪ್ರಥಮ

ಭಟ್ಕಳ: ಪದವಿ ಪೂರ್ವ ಶಿಕ್ಷಣ ಇಲಾಖೆ ಹಮ್ಮಿಕೊಂಡ ತಾಲೂಕಾ ಮಟ್ಟದ ಸಾಂಸ್ಕತಿಕ ಸಹ ಪಠ್ಯೇತರ ಚಟುವಟಿಕೆಗಳ ಸ್ಪರ್ಧೆಗಳಲ್ಲಿ ದಿ.ನ್ಯೂ ...

ದಾವಣಗೆರೆ: ಯುವಕನ ಬರ್ಬರ ಕೊಲೆ

ದಾವಣಗೆರೆ: ಯುವಕನೋರ್ವನನ್ನು ಮಾರಕಾಯುಧಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆಗೈದ ಘಟನೆ ಹರಿಹರ ತಾಲೂಕಿನ ವಿದ್ಯಾನಗರ ಎಂಬಲ್ಲಿ ಇಂದು ...

ವಿವಾಹಿತ ಮಹಿಳೆ ಆತ್ಮಹತ್ಯೆ

ಶ್ರೀನಿವಾಸಪುರ: ತಾಲ್ಲೂಕಿನ ಯಲ್ದೂರು ಗ್ರಾಮದಲ್ಲಿ ಬುಧವಾರ ರಾತ್ರಿ ವಿವಾಹಿತ ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ...