ಕುಮಟಾ: ಅಲ್ ಇತ್ತಿಹಾದ್ ಯೂಥ್ ಕಮಿಟಿ - ನೂತನ ಸಮಿತಿಯ ಉದ್ಘಾಟನೆ

Source: so english | By Arshad Koppa | Published on 18th January 2017, 11:24 PM | Coastal News | Special Report |

ಕುಮಟಾ: ಅಲ್ ಇತ್ತಿಹಾದ್ ಯುವ ಸಮಿತಿ ಕುಮಟಾ ಎಂಬ ಹೊಸ ಸಂಸ್ಥೆಯು ಕುಮಟಾದ ಮದ್ರಾಸ ಇ ಮೊಹಮ್ಮದೀಯಾ ಸಭಾಂಗಣದಲ್ಲಿ 16 ಜನವರಿಯ ಸೋಮವಾರ ಇಷಾ ನಮಾಜ್ ನ ಬಳಿಕ ಅಸ್ತಿತ್ವಕ್ಕೆ ಬಂದಿದೆ. ಯುವಜನತೆಗೆ ಧಾರ್ಮಿಕ ಅಧ್ಯಯನ, ಕ್ರೀಡೆ, ಸಾಮಾಜಿಕ ಚಟುವಟಿಕೆಗಳು ಮತ್ತು ಶೈಕ್ಷಣಿಕ ಬೆಂಬಲ ಸೇವೆಗಳು ಒದಗಿಸುವುದು ಈ ಸಮಿತಿಯ ಮುಖ್ಯ ಧ್ಯೇಯೋದ್ದೇಶಗಳಾಗಿವೆ.

ಮೌಲಾನಾ ಶಕೀಲ್ ಅಹ್ಮದ್ ನದ್ವಿ ಹಾಗೂ ಮೌಲಾನಾ ಶಕೀಲ್ ಅಹ್ಮದ್ ನದ್ವಿಯವರು ಈ ಸಮಿತಿಯ ಅಧಿಕೃತ ಲಾಂಛನವನ್ನು ಬಿಡುಗಡೆ ಮಾಡುವ ಮೂಲಕ ಸಮಿತಿಗೆ ಚಾಲನೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಆಗಮಿಸಿದ್ದ ಮನ್ಕಿಯ ಜಾಮಿಯಾ ಮಸೀದಿಯ ಖತೀಬರಾದ ಮೌಲಾನಾ ಶಕೀಲ್ ಅಹ್ಮದ್ ನದ್ವಿಯವರು ಮಾತನಾಡಿ ಇಂದಿನ ಸಮುದಾಯ ಅಭಿವೃದ್ಧಿಯಲ್ಲಿ ಮುಸ್ಲಿಂ ಯುವಕರ ಪಾತ್ರದ ಪ್ರಾಮುಖ್ಯತೆಯನ್ನು ವಿವರಿಸಿದರು. ಎಲ್ಲಾ ಕ್ಷೇತ್ರಗಳಲ್ಲಿ ಒಗ್ಗಟ್ಟು ಸಾಧಿಸಲು ಹಾಗೂ ಸಮಿತಿಯ ಅಧ್ಯಕ್ಷರ ಹಾಗೂ ನೇತೃತ್ವ ವಹಿಸಿದವರ ನಿರ್ಧಾರಗಳನ್ನು ಅನುಸರಿಸಿ ಸಮಿತಿಯ ಧ್ಯೇಯೋದ್ದೇಶಗಳನ್ನು ಈಡೇರಿಸಲು ನೆರವಾಗಲು ಕೋರಿದರು. ಕುಮಟಾದಲ್ಲಿ ಧಾರ್ಮಿಕ ಮಾಹಿತಿಯ ಕೊರತೆ ಇದ್ದು ಈ ಸಮಿತಿ ಈ ಕೊರತೆಯನ್ನು ನೀಗಿಸಲಿದೆ, ಮುಂದಿನ ಜನಾಂಗದವರು ಈ ಬಗ್ಗೆ ಹೆಚ್ಚು ಹೆಚ್ಚು ಮಾಹಿತಿ ಪಡೆಯಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು. 

ಕುಮಟಾ ಜಾಮಿಯಾ ಮಸೀದಿಯ ಖತೀಬರಾದ ಮೌಲಾನಾ ಮಿನ್ನತುಲಾ ಕಾಸಿಮಿಯವರು ಮಾತನಾಡಿ ಈ ಸಮಿತಿಗೆ ಆಯ್ದುಕೊಂಡ ಹೆಸರನ್ನು ಪ್ರಥಮವಾಗಿ ಶ್ಲಾಘಿಸಿದರು. "ಯೂನಿಟಿ" ಇದರರ್ಥ ಒಗ್ಗಟ್ಟು, ಒಂದು ಸಂಸ್ಥೆಯ ಉತ್ತಮ ಮತ್ತು ಪರಿಣಾಮಕಾರಿ ಹೆಸರಿನ ಆಯ್ಕೆಯಲ್ಲಿದ್ದು ಇದನ್ನು ಹೇಳಿಕೊಳ್ಳಲು ಯುವಕರ ಹೆಮ್ಮೆ ಪಡುತ್ತಾರೆ. ಯುವಜನತೆಯಲ್ಲಿ ಒಗ್ಗಟ್ಟು ಇಂದಿನ ಅಗತ್ಯವಾಗಿದೆ ಹಾಗೂ ಅವರು ಸಮುದಾಯದ ಹಿರಿಯ ನಾಯಕರ ಸಲಹೆಗಳು ಮತ್ತು ಅಭಿಪ್ರಾಯಗಳನ್ನು ಪರಿಗಣಿಸಿ ಆ ಪ್ರಕಾರ ಕಾರ್ಯನಿರ್ವಹಿಸಲು ಕರೆ ನೀಡಿದರು. 

ಕುಮಟಾ ಮುಸ್ಲಿಂ ಅಸೋಸಿಯೇಷನ್ ಮತ್ತು NKMUF ಕುಮಟಾ ಘಟಕದ ಅಧ್ಯಕ್ಷರಾದ ಮುಹಮ್ಮದ್ ಅಕ್ಬರ್ ಮುಲ್ಲಾ ಮತ್ತು ಸಮುದಾಯದ ಹಿರಿಯ ನಾಯಕ, ಬಸ್ತಿ ಅಬ್ದುಲ್ ಮಲಿಕ್ ಸಾಹೇಬ್ ಸಹಾ ಈ ಸಂದರ್ಭದಲ್ಲಿ ಮಾತನಾಡಿ ತಮ್ಮ ವಿಚಾರಗಳನ್ನು ಮಂಡಿಸಿದರು. 

ಕುಮಟಾ ಜಮಾತ್-ಉಲ್-ಮುಸ್ಲಿಮೀನ್ ಉಪಾಧ್ಯಕ್ಷ   ಮತ್ತು ಉತ್ತರ ಕೆನರಾ ಮುಸ್ಲಿಂ ಸಂಯುಕ್ತ ವೇದಿಕೆಯ ಕಾರ್ಯದರ್ಶಿಯಾಗಿರುವ ಮುಹಮ್ಮದ್ ಮೊಹ್ಸಿನ್ ಕಾಜಿ ಯವರು ಮಾತನಾಡಿ ಸಮುದಾಯ ಹಿರಿಯ ನಾಯಕರು ನಾಡಿನ ಅಭಿವೃದ್ಧಿ ಚಟುವಟಿಕೆಗಳಿಗೆ ಸದಾ ಮುಂದೆ ಇದ್ದು ನಾಡಿನ ಅಭಿವೃದ್ದಿಯ ನಿಟ್ಟಿನಲ್ಲಿ ಮುಂದೆ ಬರುವ ಯುವಕರಿಗೆ ತಮ್ಮ ನೆರವನ್ನು ಸದಾ ನೀಡುತ್ತಾರೆ ಎಂದು ಹೇಳಿದರು ಪಟ್ಟಣದಲ್ಲಿ. ಸಮಿತಿಯ ಎಲ್ಲಾ ಉತ್ತಮ ಕಾರ್ಯಗಳಿಗೆ ಎಲ್ಲಾ ಮುಸ್ಲಿಂ ಸಂಘಟನೆಗಳು ತಮ್ಮ ಬೆಂಬಲ ನೀಡಲಿವೆ ಎಂದು ತಿಳಿಸಿದರು.

ಮುಹಮ್ಮದ್ ಮೊಹ್ಸಿನ್ ಕಾಜಿಯವರ ಅಧ್ಯಕ್ಷತೆಯಲ್ಲಿ ನಡೆದ  ಕಾರ್ಯಕ್ರಮ  ಮೌಲಾನಾ ಮಿನ್ನತುಲ್ಲಾ ಖಾಸಿಮಿಯವರು ಪವಿತ್ರ ಖುರಾನ್ ಅನ್ನು ಪಠಿಸುವ ಮೂಲಕ  ಪ್ರಾರಂಭವಾಯಿತು.

ಸಜ್ಜಾದ್ ಕಾಜಿಯವರು ಸ್ವಾಗತಿಸಿದರು, ರಿಯಾಜ್ ಖಾನ್ ಕಾರ್ಯಕ್ರಮವನ್ನು ನಿರೂಪಿಸಿದರು ಹಾಗೂ ಅಮ್ಜದ್ ಶೇಖ್ ವಂದನಾರ್ಪಣೆ ಸಲ್ಲಿಸಿದರು. 

ಸಮಿತಿಯ ಸದಸ್ಯರ ವಿವರಗಳು:
ಇಫ್ತಿಖಾರ್ ಶೇಖ್ (ಅಧ್ಯಕ್ಷ)

ಬಾಷಾ ಶೇಖ್ (ಉಪಾಧ್ಯಕ್ಷರು)

ರಿಯಾಜ್ ಖಾನ್

ಮೆಹ್ತಾಬ್ ಅಲಿ ಇಸ್ಮಾಯಿಲ್

ರಷಾದ್ ಖಾಜಿ

ಸಲೀಂ ಖಾಜಿ

ಮುಖ್ತಿಯಾರ್ ಬೇಗ್

ಗುಲ್ಜಾರ್ ಅಹ್ಮದ್

ಮುಜಾಫರ್ ಸಬ್

ಅಮೀನ್ ಸಬ್

ಜಮೀರ್ ಸಬ್

ಅಬಿದ್ ಸೈಯದ್

ಮುದಸ್ಸಿರ್ ಪಾಶಾ

ರಿಜ್ವಾನ್ ಖಾನ್

ಫಿರೋಜ್ ಖಾನ್

ಆಸಿಫ್ ಸೌದಾಗರ್

Read These Next

ಕೇಂದ್ರದಲ್ಲಿ ನಮ್ಮದೇ ಸರ್ಕಾರ, ನಮ್ಮದೇ ಪ್ರಧಾನಿ ಡಾ. ಅಂಜಲಿ ನಿಂಬಾಳ್ಕರ್ ಮಂತ್ರಿಯಾಗ್ತಾರೆ- ಸಚಿವ ಮಾಂಕಾಳ್ ಭವಿಷ್ಯ

ಭಟ್ಕಳ: ನಾವು ಸುಳ್ಳು ಹೇಳುವುದಿಲ್ಲ. ಹೇಳಿದನ್ನು ಮಾಡಿ ತೋರಿಸಿದ್ದೇವೆ. ನುಡಿದಂತೆ ನಡೆದಿದ್ದೇವೆ. ರಾಜ್ಯದಲ್ಲಿ ಐದು ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...