ಕೋಲಾರ: ರೈತಸಂಘದಿಂದ ವಿನೂತನ ರೀತಿಯಲ್ಲಿ ಪ್ರತಿಭಟನೆ

Source: sonews | By sub editor | Published on 1st January 2018, 5:37 PM | State News | Special Report | Don't Miss |

ಕೋಲಾರ: ರೈತರ ಹೆಸರೇಳಿಕೊಂಡು ರಾಜಕಾರಣ ಮಾಡುವ ಸರ್ಕಾರಗಳು ವೈಜ್ಞಾನಿಕ ಬೆಲೆ ನಿಗದಿ ಮಾಡದೇ ರೈತನ ಬೆನ್ನೆಲಬು ಮುರಿದಿದ್ದರೆ, ಸ್ಥಳಿಯ ಜಿಲ್ಲಾಡಳಿತಗಳು ಕಾನೂನು ಚೌಕಟ್ಟಿನಲ್ಲಿ ಬೀಜದಿಂದ ಮಾರುಕಟ್ಟೆಯವರೆಗೂ ರೈತರ ರಕ್ತ ಹೀರುತ್ತಿದ್ದರೂ, ಕಂಡು ಕಾಣದಂತೆ ನಾಟಕವಾಡುವ ಅಧಿಕಾರಿ ವರ್ಗ ಈಗಲಾದರು ರೈತರ ರಕ್ತ ಹೀರುತ್ತಿರುವ ಜಿಲ್ಲೆಯ ವ್ಯವಸ್ಥೆಯನ್ನು ಸರಿಪಡಿಸಿ ರೈತನಿಂದ ಲಂಚ ಪಡೆಯುವುದಿಲ್ಲ ಎಂದು ಕಚೇರಿಗಳ ಮುಂದೆ ನಾಮ ಪಲಕ ಅಳವಡಿಸಿ  ತಾವು ಪಡೆಯುವ ವೇತನ ಮತ್ತು ತಿನ್ನುವ ಅನ್ನದ ಋಣಕ್ಕಾದರೂ ರೈತನ ಶೋಷಣೆ ತಪ್ಪಿಸಿ ಎಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ಅಧಿಕಾರಿಗಳಿಗೆ ಹಾಗೂ ಸಾರ್ವಜನಿಕರಿಗೆ ಉಚಿತ ತರಕಾರಿ ವಿತರಣೆ ಮಾಡುವ ಮೂಲಕ ಆಗ್ರಹಿಸಲಾಯಿತು. 

ರಾಜ್ಯ ಉಪಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ ಕಂದಾಯ, ಕೃಷಿ, ತೋಟಗಾರಿಕೆ, ರೇಷ್ಮೇ, ಗ್ರಾಮ ಪಂಚಾಯಿತಿಗಳ ಮುಂದೆ ಇಂದಿನಿಂದ ಜಿಲ್ಲೆಯಲ್ಲಿ ರೈತರ ಬಳಿ ಲಂಚ ಪಡೆಯದೇ ಕೆಲಸ ಮಾಡುತ್ತೇವೆಂದು ಹಾಗೂ ನಾವು ಲಂಚ ಪಡೆಯುವುದಿಲ್ಲ ಎಂದು ಕಚೇರಿಗಳ ಮುಂದೆ ನಾಮಪಲಕ ಹಾಕಲು ಜಿಲ್ಲಾಡಳಿತಕ್ಕೆ ಸಾದ್ಯವಾಗುತ್ತದೆಯೇ? ಎ.ಪಿ.ಎಂ.ಸಿ ಗಳಲ್ಲಿ ನಡೆಯುತ್ತಿರುವ ಕಮಿಷನ್ ದಂದೆ, ತರಕಾರಿ ಕಡಿತ, ಬೀಳಿ ಚೀಟಿ, ಇವುಗಳಿಗೆ ಕಡಿವಾಣ ಹಾಕಿ. ಬಿತ್ತನೆ ಬೀಜದಿಂದ ರೈತನ ಬೆಳೆ ನಷ್ಟವಾದರೆ ನೂರೊಂದು ಕಾನೂನು ಕೇಳದೆ ಬೀಜ ಕಂಪನಿಯಿಂದ ತಕ್ಷಣ ರೈತರಿಗೆ ಪರಿಹಾರ ನೀಡಿಸಿ. ಬೀಜ ಮತ್ತು ಗೊಬ್ಬರ ಹಾಗೂ ಔಷಧಿಗಳಿಗೆ ರಸೀದಿ ನೀಡದ ಹಾಗೂ ಅಧಿಕ ಬೆಲೆಗೆ ಮಾರುವ  ಅಂಗಡಿಯ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ. ಕೃಷಿ ಇಲಾಖೆಗೆ ಬರುವ ಕಾಂಪೋಸ್ಟ್ ಹಾಗೂ ಜೈವಿಕ ಗೊಬ್ಬರಗಳ ಕಳಪೆ ಗುಣಮಟ್ಟ ಕೃಷಿ ಮತ್ತು ತೋಟಗಾರಿಕೆ, ರೇಷ್ಮೇ ಇಲಾಖೆಯಲ್ಲಿ ನೀಡುವ ಹನಿ ನೀರಾವರಿ, ಯಂತ್ರೋಪಕರಣಗಳು ಅತ್ಯಂತ ಕಳಪೆಯಾಗಿದ್ದು, ಇವುಗಳಿಗೆ ಕೊಡುವ ಸಹಾಯದನವನ್ನು ರೈತರಿಗೆ ನೀಡಿದರೇ ಇದೇ ಯಂತ್ರೋಪಕರಣಗಳು ಕಂಪನಿಗಳು ಯಂತ್ರಗಳಿಗಿಂತ ಗುಣಮಟ್ಟವಾಗಿದ್ದು, ಬೆಲೆಯು 50ರಷ್ಟು ರೈತನಿಗೆ ಉಳಿತಾಯವಾಗುತ್ತದೆ ಆದರೆ ಅಧಿಕಾರಿಗಳ ಕುಮ್ಮಕ್ಕಿನಿಂದ ನಡೆಯುತ್ತಿರುವ  ಈ ಹಗಲು ಲೂಟಿಗೆ ಕಡಿವಾಣ ಹಾಕಲು ಜಿಲ್ಲಾಡಳಿತಕ್ಕೆ ತಾಕತ್ತಿದೆಯೇ ಎಂದು ಸವಾಲಾಕಿದರು. 

ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ ಮಾತನಾಡಿ 40 ವರ್ಷಗಳಿಂದ ಕೋಟಿಗಳ ಲೆಕ್ಕದಲ್ಲಿ ಲಾಭವಿದ್ದು, ರೈತರ ಉದ್ದಾರ ಮಾಡಬೇಕಾದ ಹಾಲು ಉತ್ಪಾದಕರ ಸಹಕಾರ ಸಂಘಗಳು ಹಾಲು ಕೊಡುವ ರೈತನಿಗೆ ವರ್ಷಕೊಮ್ಮೆ ಒಂದು ಬಿರಿಯಾನಿ 100 ರೂ ಬಿಂದಿಗೆ ಕೊಟ್ಟು, ನಾವು ಉತ್ತಮ ಸಹಕಾರಿಗಳು ಎಂದು ಪುಡಿಗಾಸು ಲೆಕ್ಕ ತೋರಿಸಿ, ಕೋಟಿಗಳ ಲೆಕ್ಕದಲ್ಲಿ ಅವ್ಯವಹಾರ ನಡೆದಿರುವ ಡೈರಿಗಳ ಬಗ್ಗೆ ಸಿ.ಬಿ.ಐ ತನಿಖೆಗೆ ಒಪ್ಪಿಸಬೇಕು. ಕೃಷಿ, ತೋಟಗಾರಿಕೆ ರೇಷ್ಮೇ ಇಲಾಖೆಗಳಲ್ಲಿ 10 ವರ್ಷಗಳಿಂದ ನೀಡಿರುವ ಎಲ್ಲಾ ಸಹಾಯದನದ ಅಂಕಿ ಅಂಶಗಳನ್ನು ಸ್ಥಳ ಪರೀಶೀಲನೆ ಮತ್ತು ಉನ್ನತ ಮಟ್ಟದ ತನಿಖೆ ಕೈಗೊಳ್ಳಬೇಕು. ಕಂದಾಯ ಮತ್ತು ಸರ್ವೇ ಇಲಾಖೆ ಹೆಜ್ಜೆ ಹೆಜ್ಜೆಗೂ ಲಂಚದ ರೂಪದಲ್ಲಿ ರೈತನ ರಕ್ತ ಹೀರುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕು. ವಿಮಾ ಸೌಲಭ್ಯ, ಬರ ಪರಿಹಾರ  ಇವುಗಳ ಹಗಲು ದರೋಡೆ ಬಗ್ಗೆ ತನಿಖೆ ಆಗಬೇಕು.  ಇಷ್ಟೇಲ್ಲಾ ಶೋಷಣೆಯೂ ರೈತರ ಪರ ರೈತರಿಗಾಗಿ ನಾವು ಎನ್ನುವ ಅಧಿಕಾರಿ ವ್ಯವಸ್ಥಯಲ್ಲಿಯೇ ರಾಜಾರೋಷವಾಗಿ ನಡೆಯುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ತಮಗೆ ಸಾಧ್ಯವಿದ್ದರೇ, ಕಡಿವಾಣ ಹಾಕಿ ಇಲ್ಲವಾದಲ್ಲಿ ರೈತನ ಶಾಪ ತಮ್ಮ ಅಧಿಕಾರ ವ್ಯವಸ್ಥೆಗೆ ತಗಲಿ ಸರ್ವನಾಶ ಆಗುತ್ತೀರೆಂದು ಆಕ್ರೋಶ ವ್ಯಕ್ತಪಡಿಸಿದರು. 
   
ಈ ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷರಾದ ಮರಗಲ್ ಶ್ರೀನಿವಾಸ್, ಮಹಿಳಾ ಜಿಲ್ಲಾಧ್ಯಕ್ಷೆ ನಳಿನಿ, ಜಿಲ್ಲಾ ಕಾರ್ಯಾಧ್ಯಕ್ಷ ಸಪ್ತಗಿರಿ ಮಂಜುನಾಥ್, ಹುಲ್ಕೂರು ಹರಿಕುಮಾರ್, ರಂಜೀತ್‍ಕುಮಾರ್ ಆನಂದ ಸಾಗರ್, ಲಾಯರ್ ಸುಬ್ರಮಣಿ ಶಿವು, ಕೆಂಬೋಡಿ ಕೃಷ್ಣೇಗೌಡ, ಸುಪ್ರೀಂಚಲ, ನಗವಾರ ಭರತ್, ಸುರೇಶ್, ಈಕಂಬಳ್ಳಿ ಮಂಜುನಾಥ್, ಕೋರಗಂಡಹಳ್ಳಿ ಮಂಜು, ಎಂ.ಹೊಸಹಳ್ಳಿ ಚಂದ್ರಪ್ಪ, ಕ್ಯಾಸಂಬಳ್ಳಿ ಪ್ರತಾಪ್ ಮುಂತಾದವರು ಉಪಸ್ಥಿತರಿದ್ದರು.

 

Read These Next

ಶುಕ್ರವಾರದ ನಮಾಝ್ ನಲ್ಲಿ ಮುಸ್ಲಿಮ್ ಸಮುದಾಯದಿಂದ ಹುತಾತ್ಮ ಯೋಧರಿಗಾಗಿ ವಿಶೇಷ ಪ್ರಾರ್ಥನೆ ​​​​​​​

ಉಡುಪಿ: ಕಾಶ್ಮೀರದ ಪುಲ್ವಾಮ ಜಿಲ್ಲೆಯ ಅವಂತಿಪೋರದಲ್ಲಿ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಯೋಧರಿಗಾಗಿ ಗಂಗೊಳ್ಳಿ ...

ರಾಷ್ಟ್ರೀಯ ಹೆದ್ದಾರಿ ಅಗಲೀಕರಣದಿಂದಾಗಿ ಭಟ್ಕಳದಿಂದ ಕಾಲು ಕೀಳಲು ಸಿದ್ಧವಾಗಿರುವ ದೂರದರ್ಶನ ಕೇಂದ್ರ..?

ಭಟ್ಕಳ: ಪ್ರಸಕ್ತ ಕಾಲಘಟ್ಟದಲ್ಲಿ ಭಟ್ಕಳ ಎಂಬ ಪುಟ್ಟ ಊರು ಬೆಳೆದು ನಿಂತಿದೆ. ಅಂತರಾಷ್ಟ್ರೀಯ ಆವಿಷ್ಕಾರಗಳನ್ನು ಕಾಣುವ ತವಕ ...

ಉತ್ತರಪ್ರದೇಶದಲ್ಲಿ ವಿರೋಧ ಪಕ್ಷಗಳ ಚುನಾವಣಾ ರಣತಂತ್ರಉತ್ತರಪ್ರದೇಶದಲ್ಲಿ ವಿರೋಧ ಪಕ್ಷಗಳ ಚುನಾವಣಾ ರಣತಂತ್ರ

ಇತ್ತೀಚೆಗೆ ಉತ್ತರಪ್ರದೇಶದಲ್ಲಿ ನಡೆದ ಬೆಳವಣಿಗೆಗಳು ಕೇಂದ್ರದಲ್ಲಿ ಹಾಲೀ ಅಧಿಕಾರದಲ್ಲಿರುವ ಪಕ್ಷದ ಆಳ್ವಿಕೆಯ ವಿರುದ್ಧ ...

ಹವಾಮಾನ ಬದಲಾವಣೆ ಮತ್ತು ಬಡವರು

ಹವಾಮಾನ ಬದಲಾವಣೆಯು ಒಂದು ತುರ್ತುಸ್ಥಿತಿಯನ್ನೇ ಸೃಷ್ಟಿಸಿದ್ದು ಈ ಭೂಮಿಗೆ ಮತ್ತು ಇದರ ಮೇಲೆ ವಾಸಿಸುತ್ತಿರುವ ಮಾನವ, ಸಸ್ಯ ಮತ್ತು ...

ಸಾವಿನ ಕೂಪ ದ ಲ್ಲಿ ಗಣಿಗಾರಿಕೆ

ಮೇಘಾಲಯದಲ್ಲಿ ಇತ್ತೀಚೆಗೆ ಸಂಭವಿಸಿದ ಗಣಿಕಾರ್ಮಿಕರ ಸಾವುಗಳು ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂಬ ಘೋಷಣೆಯ ಪ್ರತಿಪಾದಕರಿಗೆ ನಾಚಿಕೆ ...

ಉ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಅರಣ್ಯ ಪರಿಸ್ಥಿತಿ ಕುರಿತ ರಾಜ್ಯ ಮಟ್ಟದ ವಿಚಾರ ಸಂಕೀರಣ

ಭಟ್ಕಳ: ಪರಿಸರ ಪರಿಸ್ಥಿತಿ, ಸಂರಕ್ಷಣೆ, ಸವಾಲು ಹಾಗೂ ಪರಿಹಾರದ ಬಗ್ಗೆ ಹಮ್ಮಿಕೊಂಡಿದ್ದ ಕಾರ್ಯಾಗಾರದಿಂದ ಜನರು ತಮ್ಮಲ್ಲಿನ ಪರಿಸರದ ...

ಹೆದ್ದಾರಿ ಅಗಲಿಕರಣ; 45ಮೀ ವಿಸ್ತರಣೆಗೆ ಆಗ್ರಹಿಸಿ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ

ಭಟ್ಕಳ: ತಾಲೂಕಿನ ಶಿರಾಲಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ 66 ಅಗಲೀಕರಣವನ್ನು 30 ಮೀಟರ್‍ಗೆ ಸೀಮಿತಗೊಳಿಸುವ ...

ಸದಸ್ಯರ ಪ್ರಶ್ನೆಗೆ ಉತ್ತರಿಸಲಾಗದೆ ಸಭೆಯಿಂದ ಹೊರನಡೆದ ಪಂಚಾಯತ್ ಅಭಿವೃದ್ಧಿ ಅಧಿಕಾರಿ

ಭಟ್ಕಳ: ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಸದಸ್ಯರ ಪ್ರಶ್ನೆಯೊಂದಕ್ಕೆ ಉತ್ತರಿಸಲಾಗದೇ ಗ್ರಾಮ ಪಂಚಾಯತ್  ಪಂಚಾಯತ್ ಅಭಿವೃದ್ದಿ ...