ಕೊಲ್ಕಾತಾ: ಚಾಲಕನಿಗೆ ಊಟ ನೀಡದ ’ಮೊಕಾಂಬೋ ರೆಸ್ಟೋರೆಂಟ್’- ಆನ್ಲೈನ್ ನಲ್ಲಿ ಹರಿದಾಟದ ಬಳಿಕ ಈಗ ಗಿರಾಕಿಗಳೇ ಇಲ್ಲ

Source: mid day | By Arshad Koppa | Published on 13th September 2016, 10:42 AM | National News | Incidents |

ಕೊಲ್ಕಾತಾ, ಸೆ ೧೩: ಟಾಟಾ ಮೋಟಾರ್ಸ್ ಸಂಸ್ಥೆಯ ಮಾರ್ಕೆಟಿಂಗ್ ಮ್ಯಾನೇಜರ್ ಆಗಿರುವ ದಿಲಾಶಿ ಹೇಮ್ನಾನಿ ಎಂಬ ಮಹಿಳೆಯೊಬ್ಬರು ಕೊಲ್ಕಾತಾದ ಖ್ಯಾತ ’ಮೊಕಾಂಬೋ’ ರೆಸ್ಟೋರೆಂಟ್ ನಲ್ಲಿ ರಾತ್ರಿ ಊಟಕ್ಕೆ ತಮ್ಮ ಚಾಲಕನನ್ನು ಕರೆದೊಯ್ದಿದ್ದು ಚಾಲಕನಿಗೆ ಊಟ ಬಡಿಸಲು ನಿರಾಕರಿಸಿದ ಘಟನೆ ಈಗ ಚರ್ಚೆಯ ವಿಷಯವಾಗಿದೆ.

ಸೆ ೯ ರಂದು ಅವರು ಕಾರ್ಯನಿಮಿತ್ತ ಹಲವೆಡೆ ಸಂಚರಿಸುವಾದ ಚಾಲಕ ಮನೀಷ್ ಭೈಯಾ ಮದ್ಯಾಹ್ನದ ಊಟವನ್ನೂ ತಪ್ಪಿಸಿಕೊಂಡಿದ್ದು ರಾತ್ರಿಯಾದರೂ ಹಸಿವಿನಿಂದಿದ್ದುದನ್ನು ಗಮನಿಸಿದ ಅವರು ರಾತ್ರಿಯೂಟಕ್ಕೆ ತಾವು ಊಟ ಮಾಡುವಲ್ಲಿಯೇ ಕರೆದೊಯ್ದಿದ್ದರು. ಇವರಿಗೆ ಹದಿನೈದು ನಿಮಿಷ ಕಾಯಲು ತಿಳಿಸಿ ನಲವತ್ತೈದು ನಿಮಿಷವಾದರೂ ಊಟ ಬಡಿಸದುದನ್ನು ಪ್ರಶ್ನಿಸಿದ ಅವರಿಗೆ ಹೋಟೆಲಿನ ಆಡಳಿತ ವರ್ಗ ನೀಡಿದ ಉತ್ತರ ಆಘಾತಕಾರಿಯಾಗಿತ್ತು.  "Ma'am we can’t give you a table” ಎಂಬ ಉತ್ತರ ಪಡೆದ ಅವರು ನಿರಾಶರಾಗಿ ಮರಳಿ ಬೇರೊಂದು ಕಡೆ ಊಟ ಮಾಡಿದರೂ ಈ ಪ್ರಸಂಗ ಅವರ ಮನ ಕೊರೆಯುತ್ತಿತ್ತು. ಇಡಿಯ ಪ್ರಸಂಗವನ್ನು ಅವರು ಫೇಸ್ ಬುಕ್ ಮೂಲಕ ತಮ್ಮ ಸ್ನೇಹಿತರೊಂದಿಗೆ ಹಂಚಿಕೊಂಡರು.

ಆದರೆ ಈ ಪ್ರಕರಣವನ್ನು ಗಮನಿಸಿದ ಇತರರು ಮಾನವೀಯತೆ ಪ್ರಕಟಿಸದ ಹೋಟೆಲ್ ಸಿಬ್ಬಂದಿಯ ಮೇಲೆ ತಮ್ಮ ಸಿಟ್ಟನ್ನು ಹರಿಹಾಯ್ದಿದ್ದು ಯಾರೂ ಈಗ ಈ ಹೋಟೆಲಿಗೆ ಹೋಗದಂತೆ ಆನ್ಲೈನ್ ಮೂಲಕ ಅಭಿಯಾನ ನಡೆಸುತ್ತಿದೆ. ಇದುವರೆಗೆ 14,677 ಜನರು ರೆಸ್ಟೋರೆಂಟಿನ ಈ ಕ್ರಮವನ್ನು ಖಂಡಿಸಿದ್ದಾರೆ. 
 
 

Read These Next

ದಾವಣಗೆರೆ: ಯುವಕನ ಬರ್ಬರ ಕೊಲೆ

ದಾವಣಗೆರೆ: ಯುವಕನೋರ್ವನನ್ನು ಮಾರಕಾಯುಧಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆಗೈದ ಘಟನೆ ಹರಿಹರ ತಾಲೂಕಿನ ವಿದ್ಯಾನಗರ ಎಂಬಲ್ಲಿ ಇಂದು ...

ವಿವಾಹಿತ ಮಹಿಳೆ ಆತ್ಮಹತ್ಯೆ

ಶ್ರೀನಿವಾಸಪುರ: ತಾಲ್ಲೂಕಿನ ಯಲ್ದೂರು ಗ್ರಾಮದಲ್ಲಿ ಬುಧವಾರ ರಾತ್ರಿ ವಿವಾಹಿತ ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ...