ಕೋಲಾರ:ಬಸವ ಭವನ ನಿರ್ಮಾಣಕ್ಕೆ 10 ಲಕ್ಷ ರೂ ಘೋಷಿಸಿದ ಕೆ.ಹೆಚ್.ಮುನಿಯಪ್ಪ

Source: shabbir | By Arshad Koppa | Published on 30th April 2017, 2:03 AM | State News |

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಹೊರತಂದ ಬಸವಣ್ಣ ಭಾವಚಿತ್ರಗಳ ಬಿಡುಗಡೆ

ಕೋಲಾರ, ಏಪ್ರಿಲ್ 29 :ಬಸವ ಭವನ ನಿರ್ಮಾಣಕ್ಕೆ 10 ಲಕ್ಷ ರೂಗಳನ್ನು ಸಂಸದರ ನಿಧಿಯಿಂದ ನೀಡುವುದಾಗಿ ಸಂಸದರಾದ ಕೆ.ಹೆಚ್.ಮುನಿಯಪ್ಪ ಅವರು ಘೋಷಿಸಿದರು. 
ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾಪಂಚಾಯತ್ ಮತ್ತು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಸಮಾಜ ಸುಧಾರಕ, ಶ್ರೀ ಜಗಜ್ಯೂತಿ ಬಸವೇಶ್ವರರ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. 
ಬಸವಣ್ಣನವರ ತತ್ವಗಳು ಪ್ರತಿದಿನ ಭವನದಲ್ಲಿ ಪಟಿಸುವುದರಿಂದ ಶಾಂತಿ ನೆಲೆಸುತ್ತದೆ. ಹಾಗಾಗಿ ಬಸವ ಭವನ ನಿರ್ಮಾಣವನ್ನು 1 ವರ್ಷದೊಳಗಾಗಿ ಮುಗಿಸಲು ಎಲ್ಲರೂ ಕೈ ಜೋಡಿಸಬೇಕು. ಒಂದು ತಿಂಗಳ ಒಳಗಾಗಿ ಭವನ ನಿರ್ಮಾಣದ ಅಡಿಪಾಯ ಹಾಕಲಾಗುವುದು ಎಂದರು. 
ನಗರಸಭೆ ವ್ಯಾಪ್ತಿಯಲ್ಲಿ ಸ್ಥಳವನ್ನು ಗುರುತಿಸಿ ಭವನ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಲಾಗುವುದು. ಇದಕ್ಕೆ ಸೂಕ್ತ ಸ್ಥಳವನ್ನು ಗುರುತಿಸಿಕೊಡಲು ಜಿಲ್ಲಾಧಿಕಾಗಳಿಗೆ ಸೂಚಿಸಲಾಗುವುದು. ವಿಶ್ವವಕ್ಕೆ ಮಾದರಿಯಾಗಿರುವ ಬಸವಣ್ಣವರ ವಚನಗಳನ್ನು ಭವನದಲ್ಲಿ ಬೋಧಿಸಲಾಗುವುದು ಎಂದು ತಿಳಿಸಿದರು. 
ಬಸವಣ್ಣನ ಭೋದನೆಗಳ ಕುರಿತು ಭರತ ಖಂಡದಲ್ಲಿ ಸರಿಯಾದ ಪ್ರಚಾರ ದೊರೆತಿದ್ದರೆ, ಹಿಂದೂ, ಮುಸ್ಲಿಂ, ಕ್ರೈಸ್ತ ಜಾತಿಗಳಲ್ಲಿ ಉಪಜಾತಿಗಳೇ ಇರುತ್ತಿರಲಿಲ್ಲ. ಸಮ ಸಮಾಜದ ನಿರ್ಮಾಣದ ಕನಸ್ಸನ್ನು ಅವರು ಕಂಡಿದ್ದರು. ಅಂಬಿಗರ ಚೌಡಯ್ಯ, ದೂಳಯ್ಯ, ಮಾರಯ್ಯ, ಅರಳಯ್ಯ ಸೇರಿದಂತೆ ಮುಂತಾದವರು ಇದೇ ಕನಸ್ಸನ್ನು ಕಂಡಿದ್ದವರಾಗಿದ್ದಾರೆ ಎಂದು ನುಡಿದರು. 
ಬಸವೇಶ್ವರರು ಅನುಭವ ಮಂಟಪವನ್ನು ಮಾಡಿದ್ದರು. ಅದು ಇಂದಿನ ಪಾರ್ಲಿಮೆಂಟ್‍ನಂತಿತ್ತು. ಅನುಭವ ಮಂಟಪದಲ್ಲಿ ಸಮ ಸಮಾಜದ ನಿರ್ಮಾಣ ಕುರಿತು ಹಾಗೂ ಕಟ್ಟಕಡೆಯ ವ್ಯಕ್ತಿಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕುರಿತು ಚರ್ಚೆಗಳನ್ನು ನಡೆಸಲಾಗುತ್ತಿತ್ತು ಎಂದರು. 
ಬಸವಣ್ಣನ ಚಿಂತನೆಗಳನ್ನು ಸರಿಯಾದ ರೀತಿಯಲ್ಲಿ ಪಾಲಿಸಿದ್ದೇ ಆಗಿದ್ದರೆ ಇಂದು ಜಗಜೀವನ್‍ರಾಮ್, ಅಂಬೇಡ್ಕರ್, ದೇವರಾಜ್ ಅರಸ್ ಸೇರಿದಂತೆ ಹಲವಾರು ಭವನಗಳು ಇರುತ್ತಿರಲಿಲ್ಲ. ಒಂದೇ ಭವನ ಇರುತ್ತಿತ್ತು. ಆ ಭವನದಲ್ಲೇ ಸಮಾಜದ ಏಳಿಗೆ ಕುರಿತು ಚರ್ಚೆಗಳು ನಡೆಯುತ್ತಿದ್ದವು ಎಂದು ಹೇಳಿದರು. 
ಗಾಂಧೀಜಿ ಅವರು ಎಲ್ಲಾ ಜಾತಿ ಮತ್ತು ಸಮುದಾಯಗಳನ್ನು ಒಂದೆಡೆಗೆ ತಂದರು. ಇದರಿಂದಲೇ ದೇಶಕ್ಕೆ ಸ್ವಾತಂತ್ರ್ಯ ಲಭಿಸಿತು ಎಂದ ಅವರು, ಬಸವಣ್ಣನವರ ಚಿಂತನೆಗಳನ್ನು ಜಗತ್ತಿಗೆ ಸಾರಬೇಕು. ಅವರ ವಚನಗಳು ಸೂರ್ಯ, ಚಂದ್ರ ಇರುವವರೆಗೂ ಪ್ರಸ್ತುತ ಮಾತ್ರವಲ್ಲ, ಎಲ್ಲಾ ಸಂವಿಧಾನಗಳಿಗೆ ದಾರಿದೀಪವಾಗಿದೆ ಎಂದರು. 
ಸಮಾಜ ಸುಧಾರಕ ಬಸವೇಶ್ವರ ಅವರು ಜಗತ್ತಿಗೆ ಮಾದರಿ. ಅವರ ಆದರ್ಶವನ್ನು ಪಾಲಿಸಿದ್ದೇ ಆದರೆ ಎಲ್ಲಾ ರಾಷ್ಟ್ರಗಳಲ್ಲಿಯೂ ಸಹ ಕಲಹ, ಕೋಮುವಾದ, ಅಟ್ರಾಸಿಟಿಗಳು ಇರುತ್ತಿರಲಿಲ್ಲ. ಇನ್ನು ಮುಂದೆಯಾದರೂ ಬಸಣ್ಣವರ ಆದರ್ಶಗಳನ್ನು ನಾವೆಲ್ಲಾ ಪಾಲಿಸಿ ಮುನ್ನಡೆಯೋಣ ಎಂದು ನುಡಿದರು. 
ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಸೂಲೂರು ಎಂ.ಆಂಜಿನಪ್ಪ ಮಾತನಾಡಿ, ಬಸವಣ್ಣನವರು ಸಾಮಾಜಿಕ ಕ್ರಾಂತಿಯನ್ನು ಪ್ರಾರಂಭಿಸಿದವರು. ಸಮಾಜದ ನಿರ್ಮಾಣ ಮಾಡಬೇಕೆಂಬ ಸದುದ್ದೇಶದಿಂದ ಅನುಭವ ಮಂಟಪವನ್ನು ನಿರ್ಮಿಸಿದ್ದರು ಎಂದು ತಿಳಿಸಿದರು. 
ಬಸವಣ್ಣನವರು 12 ನೇ ಶತಮಾನದಲ್ಲಿಯೇ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ಆಗಬೇಕೆಂದು ಸಾರಿದ್ದರು. ಆದರೆ ನಾವಿಂದು 21 ನೇ ಶತಮಾನದಲ್ಲಿದ್ದರೂ ಸಹ ಸಮಾಜದಲ್ಲಿ ಬದಲಾವಣೆ ಕಂಡಿಲ್ಲ. ಯುವಕರು ಈ ಕುರಿತು ಚಿಂತಿಸಬೇಕು. ಬಸವಣ್ಣನವರು ಹಾಕಿ ಕೊಟ್ಟಿರುವ ದಾರಿಯಲ್ಲಿ ನಡೆಯಬೇಕು ಎಂದರು. 
ಇದೇ ಸಂದರ್ಭದಲ್ಲಿ ಸರ್ಕಾರದ ನಿರ್ದೇಶನದಂತೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಹೊರತಂದಿರುವ ಬಸವಣ್ಣನವರ ಭಾವಚಿತ್ರವನ್ನು ಬಿಡುಗಡೆಗೊಳಿಸಲಾಯಿತು. 
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಷ್ಠಾಧಿಕಾರಿ ದಿವ್ಯಾಗೋಪಿನಾಥ್, ಜಿಲ್ಲಾ ಪಂಚಾಯತ್‍ನ ಉಪಕಾರ್ಯದರ್ಶಿ ಲಕ್ಷ್ಮೀನಾರಾಯಣ್, ತಹಶೀಲ್ದಾರ್ ವಿಜಯಣ್ಣ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಉಪನಿರ್ದೇಶಕ ಸಿದ್ರಾಂಸಿಂಧೆ, ನಗರಸಭೆ ಸದಸ್ಯರಾದ ಪ್ರಸಾದ್‍ಬಾಬು, ರಂಗಮಂದಿರ ನಾರಾಯಣಸ್ವಾಮಿ,  ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. 

ಬಂಗಾರಪೇಟೆ:ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಬವಸ ಜಯಂತಿ ಆಚರಣೆ


ಬಂಗಾರಪೇಟೆ ಏ. 29 : ಕೋಲಾರದ ಟ್ರಾಫಕ್ ಪೊಲೀಸ್ ಠಾಣೆಯಲ್ಲಿ ಬವಸ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
    ಠಾಣಾ ಪಿ.ಎಸ್.ಐ. ಭರ್ಕತ್‍ವುಲ್ಲಾ, ಎ.ಆರ್.ಎಸ್.ಐ. ಟೈಗರ್ ವೆಂಕಟೇಶ್, ಎ.ಎಸ್.ಐ.ಗಳಾದ ಬಸವರಾಜು, ಜಯಪ್ಪ, ಪೇದೆಗಳಾದ ವಿಜಯಕುಮಾರ್, ಸುಜ್ಞಾನಮೂರ್ತಿ ಸಿಬ್ಬಂದಿವರ್ಗ ಉಪಸ್ಥಿತರಿದ್ದರು.
    ಈ ಸಂದರ್ಭದಲ್ಲಿ ಮಾತನಾಡಿದ ಟೈಗರ್ ವೆಂಕಟೇಶ್  ಕಾಯವೇ ಕೈಲಾಸ, ಕರ್ತವ್ಯವೇ ದೇವರು ಬಸವಣ್ಣವರು ಹೇಳಿದ ಇನ್ನೂ ಹಲವು ವಾಕ್ಯಗಳನ್ನು ಸಿಬ್ಬಂದಿಗೆ ಮನವರಿಕೆ ಮಾಡಿಕೊಟ್ಟು, ಕರ್ತವ್ಯ ನಿಷ್ಠೆ ಪ್ರಾಮಾಣ ಕ ಸೇವೆಯನ್ನು ಜನರಿಗೆ ಒದಗಿಸಬೇಕೆಂದು ತಿಳಿಸಿದರು.

Read These Next

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...