ಶಿಕ್ಷಕರು ತನು ಮನ ಧಾರೆಯೆರೆದರೆ ನಮ್ಮ ಜೀವನ ಸಾರ್ಥಕ –ರಾಮಕೃಷ್ಣಪ್ಪ

Source: sonews | By Staff Correspondent | Published on 17th September 2018, 10:53 PM | Coastal News |

ಕೋಲಾರ : ಶಾಲೆಯೇ ದೇವಾಲಯವಾಗಿದ್ದು ಮಕ್ಕಳೇ ಮೂರ್ತಿಗಳಾಗಿರುವಾಗ ಶಿಕ್ಷಕರಾದ ನಾವು ಮಕ್ಕಳ ವೈಭವೀಕರಣಕ್ಕಾಗಿ ತನು ಮನ ಧಾರೆಯೆರೆದರೆ ಸಾರ್ಥಕ ಜೀವನವಾದಿತೇಂದು ಕ್ಷೇತ್ರ ಸಮನ್ವಧಿಕಾರಿ ರಾಮಕೃಷ್ಣಪ್ಪ ತಿಳಿಸಿದರು.

ಅವರು ಇಂದು ತಾಲ್ಲೂಕಿನ ಹೊಗರಿ ಗೊಲ್ಲಹಳ್ಳಿ ಸ.ಹಿ.ಪ್ರಾ.ಶಾಲೆಯಲ್ಲಿ ಇ.ಸಿ.ಓಗಳಾದ ಗೋಪಿಕೃಷ್ಣ ಮತ್ತು ಸಿ.ಆರ್.ಪಿ ಜಗದೀಶರಯ್ಯ ನವರನ್ನು ಸನ್ಮಾಸಿ ಮಾತನಾಡುತ್ತಿದ್ದರು. ಶಿಕ್ಷಕರಾದ ನಾವು ಪ್ರಸ್ತುತ ಇತರೆ ಹೆಚ್ಚು ಚಟುವಟಿಕೆ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದರಿಂದ ಮಕ್ಕಳ ಕಲಿಕೆಗೆ ಎಲ್ಲೂ ಧಕ್ಕೆ ಬರದ ಹಾಗೆ ನೋಡಿಕೊಳ್ಳಬೇಕು. ಬರೀ ಕಾಗದ, ಭಾಷಣದಲ್ಲಿಯೇ ಅಲ್ಲದೆ ಕಾರೂಪಕ್ಕೆ ತರುವಂತಹ ಪ್ರಯತ್ನ ಬಹಳ ಮುಖ್ಯವಾದುದು. ಪ್ರಯತ್ನ ನಿಶ್ಕ್ರಿಯವಾದಾಗ ಮಕ್ಕಳ ಕಲಿಕೆ ಹಿಂದುಳಿಯಲು ಕಾರಣವಾಗುತ್ತದೆ. ನಾವು ವ್ಯವಸ್ಥೆಯ ಬದಲಿಸುವ ಕಡೆ ಪ್ರಯತ್ನಿಸಬೇಕು ಎಂದರು. 

ಶಿಕ್ಷಣ ಸಂಯೋಜಕ ಆರ್. ಶ್ರೀನಿವಾಸನ್ ಮಾತನಾಡಿ ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಣದಿಂದ ವಂಚಿತರಾದ ಪೋಷಕರ ಮಕ್ಕಳು ಇಂದು ಸರ್ಕಾರಿ ಶಾಲೆಗಳಿಗೆ ದಾಖಲಾಗುತ್ತಿದ್ದು, ಆ ಮಕ್ಕಳ ಸ್ಥಿತಿಗಳನ್ನು ಅರಿತು ಶಿಕ್ಷಕರು ಉತ್ತಮ ಶಿಕ್ಷಣ ನೀಡಬೇಕಾಗಿದೆ. ಇಲಾಖೆಯ ಪ್ರೋತ್ಸಾಹಗಳನ್ನು ಅವರಿಗೆ ತಲುಪಿಸಿ ದಾಖಲಾತಿಗಳನ್ನು ಉತ್ತಮಪಡಿಸಿಕೊಳ್ಳಬೇಕೆಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಗೋಪಿಕೃಷ್ಣರವರು ತಮಗೆ ನೀಡಿದ ಯಾವುದೇ ಕೆಲಸವಾಗಲೀ ಕರ್ತವ್ಯ ನಿಷ್ಠೆಯಿಂದ ನಿರ್ವಹಿಸಿದಾಗ ಮಾತ್ರ ನ್ಯಾಯ ಸಿಗುವುದೆಂದು ತಿಳಿಸಿದರಲ್ಲದೆ ನನಗೆ ಸಹಕಾರ ನೀಡಿದ ಎಲ್ಲಾ ಶಿಕ್ಷಕರಿಗೂ ಧನ್ಯವಾದಗಳೆಂದರು.

ಈ ಸಂದರ್ಭದಲ್ಲಿ ವೆಂಕಟಶಿವಪ್ಪ, ಜಗದೀಶಯ್ಯ, ಜಗಧೀಶ್, ಬಸವರಾಜ, ಸೌಮ್ಯಲತ, ಪ್ರೀತಿ ಹಾಗೂ ಕ್ಲಸ್ಟರ್ ಮುಖ್ಯ ಶಿಕ್ಷಕರು , ಸಹ ಶಿಕ್ಷಕರು ಭಾಗವಹಿಸಿದ್ದರು. 
                                        

Read These Next

ಕೇಂದ್ರದಲ್ಲಿ ನಮ್ಮದೇ ಸರ್ಕಾರ, ನಮ್ಮದೇ ಪ್ರಧಾನಿ ಡಾ. ಅಂಜಲಿ ನಿಂಬಾಳ್ಕರ್ ಮಂತ್ರಿಯಾಗ್ತಾರೆ- ಸಚಿವ ಮಾಂಕಾಳ್ ಭವಿಷ್ಯ

ಭಟ್ಕಳ: ನಾವು ಸುಳ್ಳು ಹೇಳುವುದಿಲ್ಲ. ಹೇಳಿದನ್ನು ಮಾಡಿ ತೋರಿಸಿದ್ದೇವೆ. ನುಡಿದಂತೆ ನಡೆದಿದ್ದೇವೆ. ರಾಜ್ಯದಲ್ಲಿ ಐದು ...