ಯೂನಿವರ್ಸಲ್ ಹೆಲ್ತ್ ಕಾರ್ಡ್; ರೈತಸಂಘದಿಂದ ಜನಜಾಗೃತಿ

Source: sonews | By Staff Correspondent | Published on 23rd March 2018, 11:38 PM | State News | Don't Miss |

ಕೋಲಾರ: ಬಡ ಜನರಿಗೆ  ಅನುಕೂಲವಾಗುವ ಯೂನಿವರ್ಸಲ್ ಹೆಲ್ತ್ ಕಾರ್ಡ್ ಪಡೆಯಲು ಪಂಚಾಯಿತಿಗೊಂದು ಕೇಂದ್ರ ತೆರೆಯಬೇಕು ಹಾಗೂ ಮದ್ಯವರ್ತಿಗಳ ಹಾವಳಿ ತಪ್ಪಿಸಿ, ಈ ಯೋಜನೆಯನ್ನು ಜನರಿಗೆ ತಲುಪಿಸಲು ಕರಪತ್ರ ಮೂಖಾಂತರ ಜನ ಜಾಗೃತಿ ಮೂಡಿಸಬೇಕೆಂದು ರೈತ ಸಂಘದಿಂದ ಜಿಲ್ಲಾ ವೈದ್ಯಾಧಿಕಾರಿಗಳಿಗೆ ಮನವಿ ನೀಡಿ ಆಗ್ರಹಿಸಲಾಯಿತು.
    
ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ ಸರ್ಕಾರ ಬಡವರಿಗೆ ಅನುಕೂಲವಾಗಲೆಂದು ನಾನಾ ಯೋಜನೆಗಳನ್ನು ಕೋಟ್ಯಾಂತರ ರೂ ಖರ್ಚು ಮಾಡಿ ಜಾರಿಗೊಳಿಸುತ್ತಿದೆ.ಆದರೆ ಈ ಯೋಜನೆಗಳು ಜಿಲ್ಲಾಡಳಿತದ ಮುಖಾಂತರ ಪಲಾನುಭವಿಗಳಿಗೆ ತಲುಪುತ್ತಿದೆಯೇ ಎಂಬುದನ್ನು ತಿಳಿದುಕೊಳ್ಳುವಲ್ಲಿ ಸರ್ಕಾರ ವಿಪಲವಾಗುತ್ತಿದೆ. ಸರ್ಕಾರದ ಯೋಜನೆಗಳು ಒಂದು ಕಡೆ ಅಧಿಕಾರಿಗಳ ಬೇಜವಾಬ್ದಾರಿಯಿಂದ ಮದ್ಯವರ್ತಿಗಳ ಹಣದ ದಂಧೆಗೆ ಮೂಲವಾಗುತ್ತಿವೆ ಇದನ್ನು ಸರಿಪಡಿಸಬೇಕಾದ ಅಧಿಕಾರಿಗಳು ತಮಗೆ ಗೊತ್ತಿಲ್ಲದ ರೀತಿ ಜಾರಿಕೊಳ್ಳುತ್ತಿದ್ಧಾರೆ. ಎಲ್ಲಾ ವರ್ಗದ ಜನರ ಆರೋಗ್ಯ ಕಾಪಾಡುವ ಉದ್ದೇಶದಿಂದ ಇತ್ತೀಚೆಗಷ್ಟೆ ಸರ್ಕಾರ ಖಾಸಗೀ ಸಂಸ್ಥೆಯ ಭಾಗಿತ್ವದಲ್ಲಿ ಯುನಿವರ್ಸಲ್ ಹೆಲ್ತ ಕಾರ್ಡ್ ಪ್ರತಿಯೊಬ್ಬ  ಬಡವನೂ ಆರೋಗ್ಯವಂತರಾಗಿರುವ ಉದ್ದೇಶದಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮೂಲಕ ಆರೋಗ್ಯ ಕರ್ನಾಟಕ ಯೋಜನೆಯನ್ನು ಸರ್ಕಾರ ಅನುಷ್ಠಾನಗೊಳಿಸಿತ್ತು ಈ ಯೋಜನೆ ಜಾರಿಯಾಗಿ ಇನ್ನೂ ಒಂದು ತಿಂಗಳಾಗಿಲ್ಲ ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಹೆಲ್ತಕಾರ್ಡ್ ಪಡೆಯಲು ಕೌಂಟರ್ ತೆರೆದಿದ್ದು ಸಾವಿರಾರು ಜನ ಈ ಯೋಜನೆಯನ್ನು ಪಡೆಯಲು ಸಾಲುಗಟ್ಟಲೆ ನಿಂತಿದ್ದರೂ ಸಿಬ್ಬಂಧಿ ಕೊರತೆ, ಧಾಖಲೆಗಳ ಕೊರತೆ ನೂರೊಂದು ನೆಪ ಹೇಳಿ ದೂರದ ಗ್ರಾಮೀಣ ಪ್ರದೇಶಗಳಿಂದ ಬಂದಿರುವ ಅಮಾಯಕರನ್ನು ವಂಚಿಸುವ ಒಂದು ತಂಡವೇ ಎಸ್.ಎನ್.ಆರ್ ಆಸ್ಪತ್ರೆಯ ಹೆಲ್ತಕಾರ್ಡ್ ಕೌಂಟರ್ ಬಳಿ ದಲ್ಲಾಳಿಗಳು ವ್ಯಾಪಾರಕ್ಕೀಳಿದ್ದಿದ್ದರೂ ಸಂಬಂದಪಟ್ಟ ಅಧಿಕಾರಿಗಳು ಮೌನವಾಗಿರುವುದು ನಾಚಿಕೆಗೇಡು ಎಂದು ಆಕ್ರೋಶ ವ್ಯಕ್ತಪಡಿಸಿದರು.

ವೈದ್ಯಾಧಿಕಾರಿಗಳು ಈ ಬಗ್ಗೆ ಎಲ್ಲಾ ತಾಲ್ಲೂಕಿನ ವೈಧ್ಯರ ಜೊತೆ ಚರ್ಚಿಸಿ ಬಡವರಿಗೆ ಅನುಕೂಲವಾಗುವ ಮಾರಕ ಕಾಯಿಲೆಗಳಿಗೆ ಸರ್ಕಾರದಿಂದ ಬರುವ ಹಣ ಪಡೆದು ಉತ್ತಮ ಆರೋಗ್ಯ ಹೊಂದುವ ಈ ಯೋಜನೆಯು ದಲ್ಲಾಳಿಗಳ ಪಾಲಾಗದೆ ಪ್ರತಿ ಪಂಚಾಯಿತಿಗೊಂದಂತೆ ಕೇಂದ್ರಗಳನ್ನು ತೆರೆದು ಅದಕ್ಕೆ ಬೇಕಾಗುವ ದಾಖಲೆಗಳ ವಿವರವನ್ನು ಸಾರ್ವಜನಿಕವಾಗಿ ಅಳವಡಿಸಿ ಇಲ್ಲವೆ ಕರಪತ್ರದ ಮುಖಾಂತರ ಜಾಗೃತಿ ಮೂಡಿಸಿ ಆರೋಗ್ಯ ಕಾರ್ಡಿಗೂ ಹಣ ಪಡೆಯುವ ದಲ್ಲಾಳಿಗಳ ವಿರುದ್ಧ ಕ್ರಿಮಿನಲ್ ಮೊಕ್ಕದಮೆ ದಾಖಲಿಸಿ ಜನಪರ ಯೋಜನೆಯನ್ನು ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಜಾರಿಗೊಳಿಸಬೇಕೆಂದು ಆಗ್ರಹಿಸಲಾಯಿತು. 

ಮನವಿ ಸ್ವೀಕರಿಸಿ ಮಾತನಾಡಿದ ವೈದ್ಯಾಧಿಕಾರಿಗಳು ಈ ದಲ್ಲಾಳಿಗಳ ಹಾವಳಿ ಬಗ್ಗೆ ನನ್ನ ಗಮನಕ್ಕೆ ಬಂದಿದ್ದು, ಇದರ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಹೆಲ್ತ್ ಕಾರ್ಡ ಎಲ್ಲಾ ಜನರಿಗೂ ಸಿಗುವಂತೆ ಕೂಡಲೇ ವ್ಯವಸ್ಥೆ ಮಾಡುತ್ತೇನೆಂದು ಭರವಸೆ ನೀಡಿದರು 

ಈ ನೀಯೋಗದಲ್ಲಿ ಜಿಲ್ಲಾದ್ಯಕ್ಷೆ ಎ.ನಳಿನಿಗೌಡ, ಜಿಲ್ಲಾದ್ಯಕ್ಷ ಮರಗಲ್ ಶ್ರೀನಿವಾಸ್,  ರಂಜಿತ್, ಸುರೇಶ್, ಸುಪ್ರೀಂಚಲ,ಶಿವ, ನಾರಾಯಣ, ಐತಾಂಡಹಳ್ಳಿ ಅಂಬರೀಶ್, ಮುಂತಾದವರಿದ್ದರು.
 

Read These Next

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...

ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 19 ಅಭ್ಯರ್ಥಿಗಳಿಂದ 36 ನಾಮಪತ್ರ ಸಲ್ಲಿಕೆ.

ಕಾರವಾರ :12- ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ , ನಾಮಪತ್ರಗಳ ಸಲ್ಲಿಕೆಗೆ ಕೊನೆಯ ದಿನವಾದ ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...