ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಸಿ.ಬಿ.ಐಗೆ ಒಪ್ಪಿಸುವಂತೆ ರೈತ ಸಂಘ ಆಗ್ರಹ

Source: sonews | By sub editor | Published on 30th May 2018, 11:32 PM | State News | Don't Miss |

ಕೋಲಾರ: ರೈತರ ಜೀವನಾಡಿ ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಸಿ.ಬಿ.ಐಗೆ ಒಪ್ಪಿಸಬೇಕು ತಪ್ಪಿತಸ್ಥ ಅಧಿಕಾರಿಗಳನ್ನು ಕೂಡಲೇ ಕೆಲಸದಿಂದ ವಜಾ ಮಾಡಿ, ಸಮಸ್ಯೆ ನಷ್ಟಕ್ಕೆ ಕಾರಣವಾಗಿರುವ ಅಧಿಕಾರಿಗಳ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ಒತ್ತಾಯಿಸಿ  ರೈತ ಸಂಘದಿಂದ ಹಾಲು ಒಕ್ಕೂಟದ ಮುಂದೆ ಧರಣಿ ಮಾಡಿ  ಆಗ್ರಹಿಸಲಾಯಿತು.  
    

ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ ಸಿಂಹ ಪತ್ರಿಕೆಯಲ್ಲಿ ಹಾಲು ಒಕ್ಕೂಟದ ಹಗರಣದ ಬಗ್ಗೆ ರಾಜಾರೋಷವಾಗಿ ಬರೆಯುತ್ತಿದ್ದರು ಅವರ ಬರಹ ಅಧಿಕಾರಿಗಳ ಹಾಗೂ ಸಂಸ್ಥೆಯ ನಷ್ಟದ ಇಂಚಿಂಚು ವರದಿ ಮಾಡಿದ್ದರೂ ಅದರ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದೆ ಮೌನವಾಗಿರುವುದಕ್ಕೆ ಕಾರಣವಾದರೂ ಏನು? ಇವರು ಹಗರಣ ಮಾಡದೇ ಇದ್ದರೇ ಪತ್ರಿಕೆ ಮಾಲೀಕರ ಮೇಲೆ ಸಾರ್ವಜನಿಕವಾಗಿ ಉತ್ತರ ಏಕೆ ಕೊಡುತ್ತಿಲ್ಲ ಎಂಬ ಪ್ರಶ್ನೇ ಸಾರ್ವಜನಿಕರಲ್ಲಿ ಮೂಡುತ್ತಿದೆ. ಹೈನೋದ್ಯಮದ ಹರಿüಕಾರ ದಿವಂಗತ ಎಂ.ವಿ.ಕೃಷ್ಣಪ್ಪ ಹಾಗೂ ಕ್ಷೀರಬ್ರಹ್ಮ ದಿವಂಗತ ಡಾ|| ವರ್ಗೀಸ್ ಕುರಿಯನ್ ರವರ ಕಠಿಣ ಪರಿಶ್ರಮದಿಂದ ಇಂದು ಗ್ರಾಮೀಣ ಪ್ರದೇಶಗಳ ಜೀವನಾಡಿ ಹೈನುಗಾರಿಕೆಯ ಸಂಸ್ಥೆ 1994 ರಲ್ಲಿ ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಸ್ಥಾಪನೆಯಾಗಿ 24 ವರ್ಷ ಕಳೆದು ಲಕ್ಷಾಂತರ ಕುಟುಂಬಗಳು ಹೈನುಗಾರಿಕೆಯನ್ನು ನಂಬಿ ಜೀವನ ಮಾಡುತ್ತಿವೆ.  ಇತ್ತೀಚೆಗೆ ಅಧಿಕಾರಿಗಳ ಹಣದ ದಾಹ ರಾಜಕೀಯ ಬಲದಿಂದ ಸಂಸ್ಥೆ ದಿನದಿಂದ ದಿನಕ್ಕೆ ನಷ್ಟದತ್ತ ಮುಖಮಾಡುತ್ತಿದೆ. ಸಂಸ್ಥೆಯಲ್ಲಿ ಇತ್ತೀಚೆಗೆ ನಡೆಯುತ್ತಿರುವ ಹಗರಣಗಳ ಸರಮಾಲೆಗೆ ಕಡಿವಾಣವಿಲ್ಲದಾಗಿದೆ. ಪ್ರಮುಖವಾಗಿ ಅವಶ್ಯಕತೆ ಇಲ್ಲದ ನೇಮಕಾತಿಗಳು ನೇವiಕಾತಿಗಳಲ್ಲಿ ಹೆಚ್ಚಿನ ಹುದ್ದೆಗಳನ್ನು ಸೃಷ್ಠಿಸಿ, ಕೋಟಿ ಕೋಟಿ ಹಣ ಲೂಟಿ ಶಿಬಿರ ಕಛೇರಿಗಳ ಕಟ್ಟಡಗಳ ಹಗರಣ, ಗುಣಮಟ್ಟದ ಕೊರತೆ, ಹಾಲಿನ ರೂಟ್‍ಗಳ ಕಿಲೋಮೀಟರ್ ದಂದೆ, ತುಪ್ಪದ ಜಾರುಗಳ ಯಂತ್ರೋಪಕರಣಗಳ ಕೋಟ್ಯಾಂತರ ರೂಪಾಯಿ ದುಂದುವೆಚ್ಚ, ಯು.ಹೆಚ್.ಟಿ ವಿಭಾಗದ ಯಂತ್ರಗಳ ದುಂದುವೆಚ್ಚ, ತರಬೇತಿ ಕೇಂದ್ರಕ್ಕಾಗಿ 50 ಎಕರೆ ಜಮೀನಿನ ಅಕ್ರಮಗಳ ದಂಧೆ, ರೈತರಿಗೆ ಸೇರಬೇಕಾದ 4 ರೂ. ಪ್ರೋತ್ಸಾಹ ಧನದ ಹಗಲು ದರೋಡೆ ಮತ್ತು ಕೋಲಾರ ಜಿಲ್ಲಾಧ್ಯಂತ ಅಂಗವಿಕಲರಿಗೆ ಹಾಲಿನ ಕೇಂದ್ರಗಳನ್ನು ಅವಕಾಶ ಕೊಡದೆ ಬಲಾಡ್ಯರಿಗೆ ನೀಡಿ ಇದಕ್ಕೆ ಉದಾ: ಪಂಚವಟಿ ಸರ್ಕಲ್ ಮತ್ತು ಕೋರ್ಟ್ ಸರ್ಕಲ್‍ನ ಹಾಲಿನ ಕೇಂದ್ರಗಳ ಭ್ರಷ್ಟಾಚಾರತೆ 1994 ರಲ್ಲಿ 6 ಜನ ಅಧಿಕಾರಿಗಳ ಕಾನೂನುಬಾಹಿರ ನೇಮಕಾತಿ ರದ್ದುಗೊಳಿಸದೆ, ಮುಂದುವರೆಸುತ್ತಿರುವುದು, ಯಂತ್ರೋಪಕರಣಗಳು ಇದ್ದರೂ ಗುತ್ತಿಗೆ ಆದಾರದ ಮೇಲೆ ಕಾರ್ಮೀಕರನ್ನು ನೇಮಕ ಮಾಡಿಕೊಳ್ಳುತ್ತಿರುವುದು ಗುಣಮಟ್ಟ ಕೊರತೆ ಎಂದು 14-01-2018 ರಂದು ಟೆಟ್ರೋಪ್ಯಾಕ್‍ನಲ್ಲಿ ಉತ್ಪಾದನೆಯಾದ ಸುಮಾರು 1.75 ಲಕ್ಷ ಲೀಟರ್ ಹಾಲು ಮೋರಿಗೆ ಬಿಟ್ಟಿರುವುದು ಇನ್ನು ಹಲವು ಹಗರಣಗಳು ಕಣ್ಮುಂದೆ ಇದ್ದರೂ, ಇದನ್ನು ಕೇಳುವ ಗೋಜಿಗೆ ಯಾರು ಹೋಗುತ್ತಿಲ್ಲ. ರಾಜಕೀಯ ವ್ಯಕ್ತಿಗಳು ಮತ್ತು ಅಧಿಕಾರಿಗಳು ಹಣದ ದಂದೆಯಲ್ಲಿ ತೊಡಗಿ ದಿನದಿಂದ ದಿನಕ್ಕೆ ಸರ್ಕಾರಿ ಸಂಸ್ಥೆಯಾದ ಹಾಲು ಒಕ್ಕೂಟವನ್ನು ನಷ್ಟದತ್ತ ತಂದು ನಿಲ್ಲಿಸಿ, ಲಕ್ಷಾಂತರ ಕುಟುಂಬಗಳ ಜೀವನವನ್ನು ಬೀದಿಪಾಲು ಮಾಡಲು ಅಧಿಕಾರಿಗಳು, ತುದಿಗಾಲಲ್ಲಿ ನಿಂತ್ತಿದ್ದಾರೆ. ಸಾವಿರಾರು ಕೋಟಿಯ ಈ ಹಗರಣಗಳನ್ನು ಸಾರ್ವಜನಿಕವಾಗಿ ಪ್ರಶ್ನೆ ಮಾಡದೇ ಇದ್ದರೆ, ಹಾಲು ಒಕ್ಕೂಟಕ್ಕೆ ಕೆಲವೇ ದಿನಗಳಲ್ಲಿ ಬೀಗ ಮುದ್ರೆ ಬೀಳುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿರುವುದರಿಂದ ಈ ಸಭೆಯಲ್ಲಿ ಭಾಗವಹಿಸುವ ಹಿನ್ನಲೆಯಲ್ಲಿ ಸಾರ್ವಜನಿಕವಾಗಿ ಒಕ್ಕೂಟದ ಅವ್ಯವಹಾರವನ್ನು ಸಿ.ಬಿ.ಐ. ತನಿಖೆಗೆ ಒಪ್ಪಿಸಿ ನಷ್ಟಕ್ಕೆ ಕಾರಣರಾಗಿರುವ ಅಧಿಕಾರಿಗಳನ್ನು ಕೆಲಸದಿಂದ ವಜಾ ಮಾಡಬೇಕೆಂದು ಸಾರ್ವಜನಿಕವಾಗಿ ಉತ್ತರ ಕೇಳಿದಾಗ ಉತ್ತರ ನೀಡದ ಅಧಿಕಾರಿಗಳು ಮೌನವಾಗಿದ್ದರಿಂದ ಅವರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. 
    ಜಿಲ್ಲಾದ್ಯಕ್ಷ ಮರಗಲ್ ಶ್ರೀನಿವಾಸ್  ಮಾತನಾಡಿ, ಇನ್ನೂ 2 ತಿಂಗಳಲ್ಲಿ ಅಧಿಕಾರ ನಿವೃತ್ತಿ ಹೊಂದುವ ವ್ಯವಸ್ಥಾಪಕ ನಿರ್ದೇಶಕರಾದ ಹನುಮೇಶ್ ಯಾವುದೇ ಕಾರಣಕ್ಕೂ ಸಂಸ್ಥೆಯಲ್ಲಿ ಮುಂದುವರಿಸದೆ ಬೇರೆ ಕಡೆ ವರ್ಗಾವಣೆ ಮಾಡಬೇಕು. ಹಾಗೂ ಚುನಾವಣೆ ನೀತಿಸಂಹಿತೆ ಜಾರಿಯಾಗುತ್ತದೆ ಎಂಬ ಮಾಹಿತಿ ಇದ್ದರೂ ನಂದಿಕ್ರಾಸ್‍ಬಳಿ ಇರುವ ಮೆಗಾ ಡೇರಿಯ ಉದ್ಘಾಟನೆಗೆ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಕೋಟ್ಯಾಂತರ ರೂ. ಹಣ ದುರುಪಯೋಗ ಪಡಿಸಿಕೊಂಡು, ಲಕ್ಷಾಂತರ ಕುಟುಂಬಗಳ ಜೀವನಾಡಿಯಾಗಿರುವ ಹಾಲು ಒಕ್ಕೂಟವನ್ನು ಕೆಲವೇ ಕೆಲವು ಅಧಿಕಾರಿಗಳು, ರಾಜಕೀಯ ವ್ಯಕ್ತಿಗಳು ಹಂಚಿಕೊಂಡು ಬಡವರ ಜೀವನವನ್ನು ಬೀದಿಪಾಲು ಮಾಡುವ ಅಧಿಕಾರಿಗಳನ್ನು ಪ್ರಶ್ನಿಸಲು ಹೋದರೆ, ರಾಜಕೀಯ ಬಲ ನಮಗಿದೆ. ನಮ್ಮನ್ನು ಏನು ಮಾಡುವುದಕ್ಕೂ ಆಗುವುದಿಲ್ಲ. ನಮಗೆ ಇಷ್ಟಾಬಂದ ರೀತಿಯಲ್ಲಿ ನೇಮಕಾತಿಯನ್ನು ಮಾಡುತ್ತೇವೆಂಬ ದೌರ್ಜನ್ಯದ ಮಾತುಗಳು ಕೇಳಿ ಬಿರುತ್ತಿವೆ. ಈ ಹೋರಾಟದ ಮುಖಾಂತರ ಸಾರ್ವಜನಿಕವಾಗಿ ಅಧಿಕಾರಿಗಳು ನಮಗೆ ಉತ್ತರ ಕೊಡಬೇಕಾಗಿದೆ. ಇಲ್ಲವಾದರೆ ಈ ಹಗರಣಗಳನ್ನು ಸಿ.ಬಿ.ಐಗೆ ಒಪ್ಪಿಸುವಂತೆ ಆಹೋರಾತ್ರಿ ದರಣಿಯನ್ನು ಹಮ್ಮಿಕೊಂಡು ಹಿರಿಯ ಅಧಿಕಾರಿಗಳ ಸ್ಥಳಕ್ಕೆ ಬಂದು ಸಾರ್ವಜನಿಕವಾಗಿ ಉತ್ತರ ನೀಡುವವರೆಗೂ ಯಾವುದೇ ಕಾರಣಕ್ಕೂ ಹೋರಾಟವನ್ನು ಹಿಂಪಡೆಯುವ ಪ್ರಶ್ನೆಯ ಇಲ್ಲವೆಂದು ಹಾಲು ಒಕ್ಕೂಟದ ಅಧಿಕಾರಿಗಳಿಗೆ ಎಚ್ಚರಿಕೆಯನ್ನು ನೀಡಿದರು.
ಮನವಿ ಸ್ವೀಕರಿಸಿದ  ಕೋಚಿಮುಲ್ ಅಧ್ಯಕ್ಷರು ಬ್ಯಾಟಪ್ಪ ಮತ್ತು ನಿರ್ಧೇಶಕರಾದ ಹನುಮೇಶ್ ಮಾತನಾಡಿ ಗ್ರಾಮೀಣ ಪ್ರದೇಶದ ಜೀವನಾಡಿಯಾಗಿರುವ ಸಂಸ್ಥೆಯನ್ನು ಉಳಿಸಬೇಕಾದ ನಮ್ಮ ನಿಮ್ಮೆಲ್ಲರ ಹೊಣೆ ಈ ಕೂಡಲೆ ಸಭೆ ಕರೆದು ನಿಮ್ಮ ಆರೋಪದ ಅಂಶಗಳನ್ನು ಅಕಾರಿಗಳ ಗಮನಕ್ಕೆ ತಂದು ಹಾಲು ಓಕ್ಕೂಟದ ಸಮಸ್ಯೆಗಳನ್ನು ಬಗೆಹರಿಸುತ್ತೆವೆ  ಎಂದು ಭರವಸೆ ನೀಡಿದರು.
ಈ ಹೋರಾಟದಲ್ಲಿ ಜಿಲ್ಲಾಧ್ಯಕ್ಷ ಮರಗಲ್ ಶ್ರೀನಿವಾಸ್, ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ರಾಯಲ್ಪಾಡ್ ಹರೀಶ್, ಭರತ್, ರಂಜಿತ್,  ಸಾಗರ್, ಸುಪ್ರಿಂಚಲ, ಕೆಂಬೋಡಿ ಕೃಷ್ಣೇಗೌಡ, ನರಸಾಪುರ ಪುರುಶೋತ್ತಮ್, ಶಿವ, ಕ್ಯಾಸಂಬಳ್ಳಿ ಪ್ರತಾಪ್, ಬೇತಮಂಗಲ ಮಂಜು, ಕಣ್ಣೂರು ಗಣೇಶ್, ವಡ್ಡಹಳ್ಳಿ ಮಂಜುನಾಥ್, ವೇಮಗಲ್ ಅಮರನಾರಾಯಣಸ್ವಾಮಿ, ಐತಂಡಹಳ್ಳಿ ಅಂಬರೀಶ್,  ನರಸಾಪುರ ರೆಹಮಾನ್, ಮಂಜುನಾಥರೆಡ್ಡಿ, ಟಿಪ್ಪು, ಪುತ್ತೇರಿ ರಾಜು, ಸುಬ್ರಮಣಿ, ಸುರೇಂದ್ರ, ಅಶೋಕ್ ಜಿಲ್ಲಾ ಮತ್ತು ತಾಲ್ಲೂಕು ಮುಖಂಡರು ಹಾಜರಿದ್ದರು. 
 

Read These Next

ಬಿಜೆಪಿ ಹಿಂದುಳಿದವರನ್ನು ತುಳಿಯುವ ಸಂಚು ರೂಪಿಸಿದೆ, ಭಟ್ಕಳದಲ್ಲಿ ಬಿಜೆಪಿ ವಿರುದ್ಧ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ

ಬಿಜೆಪಿ ಮೇಲ್ನೋಟಕ್ಕೆ ಅಲ್ಪಸಂಖ್ಯಾತರನ್ನು ವಿರೋಧಿಸುವ ಪಕ್ಷವಾಗಿ ಮೇಲ್ನೋಟಕ್ಕೆ ಕರೆಯಿಸಿಕೊಳ್ಳುತ್ತಿದೆಯಾದರೂ, ವಾಸ್ತವಾಗಿ ...