ಭೂ ಮಂಜೂರಾತಿಯಲ್ಲಿ ಅಕ್ರಮ ಭಾಗಿ; ಭೂ ಕಂದಾಯ ಕಾಯ್ದೆಯಂತೆ ಮೊಕದ್ದಮೆ ದಾಖಲಿಸಲು ರೈತ ಸಂಘ ಆಗ್ರಹ

Source: sonews | By Staff Correspondent | Published on 7th April 2018, 6:08 PM | State News | Don't Miss |

ಕೋಲಾರ:   ಕೋಲಾರ  ತಹಶೀಲ್ದಾರ್ ಕಚೇರಿಯಲ್ಲಿ  ದರಖಾಸ್ತ್ ಭೂ ಮಂಜೂರಾತಿಯಲ್ಲಿ ಶಾಸಕ ವರ್ತೂರ್ ಪ್ರಕಾಶ್ ದರ್‍ಖಾಸ್ತ್ ಸಮಿತಿಯ ಅಧ್ಯಕ್ಷ ಬೆಗ್ಲಿ ಪ್ರಕಾಶ್ ನೂರಾರು ಎಕರೆ ಸುಳ್ಳು ದಾಖಲೆಗಳನ್ನು ಸೃಷ್ಠಿಸಿ ಭೂ ಮಂಜೂರಾತಿ ಮಾಡಿದ್ದಾರೆ. ಎಂದು ಕಾಗ್ರೇಂಸ್ ಸರ್ಕಾರದ ನಾಯಕರು ಆರೋಪ ಮಾಡುತ್ತಿದ್ದು, ತಾಲ್ಲೂಕಿನಲ್ಲಿ ನಡೆದಿರುವ ಹತ್ತುವರ್ಷಗಳ ಭೂ ಮಂಜೂರಾತಿ ಕಡತಗಳನ್ನು ಸಿ.ಒ.ಡಿ ತನಿಖೆಗೆ ಒಪ್ಪಿಸಿ  ಭೂ ಮಂಜೂರಾತಿಯಲ್ಲಿ ಅಕ್ರಮದಲ್ಲಿ ಭಾಗಿಯಾಗಿರುವ ಎಲ್ಲರ ವಿರುದ್ದ ಭೂ ಕಂದಾಯ ಕಾಯ್ದೆಯಂತೆ ಮೊಕದ್ದಮೆ ದಾಖಲಿಸಬೇಕೆಂದು ರೈತ ಸಂಘದಿಂದ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿ ಆಗ್ರಹಿಸಲಾಯಿತು. 

ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ ಕಾಗ್ರೇಂಸ್ ಸರ್ಕಾರದ ನಾಯಕರು ಹಾಗೂ ಜನಪ್ರತಿನಿದಿಗಳೇ ಬಹಿರಂಗವಾಗಿ ಪತ್ರಿಕಾ ಮತ್ತು ಮಾದ್ಯಮದ ಮೂಲಕ ಶಾಸಕ ವರ್ತೂರ್ ಪ್ರಕಾಶ್ ಮತ್ತು ಬೆಗ್ಲಿ ಪ್ರಕಾಶ್‍ರವರು ನೂರಾರು ಎಕರೆ ಗೋಮಾಳ ಜಮೀನನ್ನು ಸುಳ್ಳು ದಾಖಲೆಯನ್ನು ಸೃಷ್ಠಿಸಿ, ಮಂಜೂರಾತಿಯ ಹೆಸರಿನಲ್ಲಿ ಅಧಿಕಾರಿಗಳ ಜೊತೆ ಸೇರಿ ಸರ್ಕಾರಿ ಆಸ್ತಿಯನ್ನು ಕಬಳಿಸಿರುವ ಬಗ್ಗೆ ದಾಖಲೆಗಳು ನಮ್ಮ ಬಳಿ ಇವೆ ಎಂದು ದೊಡ್ಡ ಮಟ್ಟದ ಸುದ್ದಿ ರಾಜ್ಯದಲ್ಲಿ ಹರಡಿ ಜಿಲ್ಲೆಯ ಮಾನ ಮೂರು ಕಾಸಿಗೆ ಹರಾಜಾಗುತ್ತಿದೆ. ಆಡಳಿತ  ಸರ್ಕಾರದ ಶಾಸಕರೇ ಈ ರೀತಿ ಲೂಟಿಗಿಳಿದರೇ ಸಾರ್ವಜನಿಕರ ಪರಿಸ್ಥತಿಯೇನು. ಈಗಾಗಲೆ ಕೋಲಾರ ತಹಸೀಲ್ದಾರ್ ಕಚೇರಿಯಲ್ಲಿ ಹತ್ತಾರು ಎಕರೆ ಗುಂಡು ತೋಪು, ಕಾಯ್ದಿರಿಸಿದ ಖರಾಬು, ಹಕ್ಕುದಾರಿ ತೋಪು, ಇವುಗಳು ರಾಜಾರೋಷವಾಗಿ ಮಾರಾಟವಾಗಿರುವ ಬಗ್ಗೆ ದೂರುಗಳು ಜಿಲ್ಲಾಡಳಿತದಲ್ಲಿ ದಾಖಲಾಗಿವೆ. ಈಗ ಸರ್ಕಾರದ ಜನಪ್ರತಿನಿಧಿಗಳೇ ನೇರವಾಗಿ ಕಂದಾಯ ಇಲಾಖೆಯ ತಹಸೀಲ್ದಾರ್ ವಿಜಯಣ್ಣ ಭ್ರಷ್ಟರ ದೊರೆ ಎಂದು ಆರೋಪ ಮಾಡುತ್ತಿದ್ದು, ಇದು ಸತ್ಯ ಎನಿಸುತ್ತಿದೆ. ಈ ಬಗ್ಗೆ ದರಖಾಸ್ತು ಭೂ ಮಂಜೂರಾತಿಯಲ್ಲಾಗಿರುವ ಅವ್ಯವಹಾರದ ಬಗ್ಗೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಲು ರಾಜಕೀಯ ಒತ್ತಡವಿರುವ ಕಾರಣ ಈ ಪ್ರಕರಣವನ್ನು ಸಿ.ಒ.ಡಿ ತನಿಖೆಗೆ ಒಪ್ಪಿಸಬೇಕೆಂದು ಆಗ್ರಹಿಸಿದರು.
 

ಕಂದಾಯ ಅಧಿಕಾರಿಗಳು ರಾಜಕಾರಣಿಗಳ  ಗುಲಾಮರಾಗಿ ಕಂದಾಯ ಇಲಾಖೆಯನ್ನು ಮಾರಾಟಕ್ಕೆ ಇಟ್ಟಿದ್ದಾರೆ ಎಂಬ ಅನುಮಾನಗಳು ಸಾರ್ವಜನಿಕ ವಲಯದಲ್ಲಿ ಹುಟ್ಟಿಕೊಂಡಿದ್ದವು ರಾಜಕೀಯ ನಾಯಕರ ಹೇಳಿಕೆಗೂ ತಾಲ್ಲೂಕು ಕಚೇರಿಯಲ್ಲಿ ನಡೆಯುತ್ತಿರುವ ಲಂಚಬಾಕತನಕ್ಕೂ ಸಂಪೂರ್ಣ ಸಾಮ್ಯತೆ ಕಂಡು ಬರುತ್ತಿದ್ದು, ಅತಿ ಹೆಚ್ಚಾಗಿ ವೇಮಗಲ್ ಮತ್ತು ನರಸಾಪುರ ಹೋಬಳಿಗಳಲ್ಲಿ ಈ ಅವ್ಯವಹಾರ ನಡೆದಿದ್ದು, ಅದರಲ್ಲೂ ತಾಲ್ಲೂಕು ಕಚೇರಿಯ ಜವಾನನಿಂದ ಹಿಡಿದು ತಹಸೀಲ್ದಾರರ ವರೆಗೂ 6 ವರ್ಷಗಳಿಂದ ಲಂಚವಿಲ್ಲದೆ ಸಾರ್ವಜನಿಕರ ಕೆಲಸ ಹಾಗುವುದಿಲ್ಲವೆಂಬ ಮಟ್ಟಕ್ಕೆ ಇಲಾಖೆ ಇಳಿದಿತ್ತು.  ಈ ಬಗ್ಗೆ ಕಾಂಗ್ರೆಸ್‍ನ ಅನೀಲ್‍ಕುಮಾರ್, ಚಂದ್ರಾರೆಡ್ಡಿ, ನಜೀರ್ ಅಹಮದ್ ಆಧಾರ ಸಮೇತ ಪತ್ರಿಕಾ ಮಾದ್ಯಮದ ಮುಂದೆ ಹೇಳಿದ್ದೇವೆ ಎನ್ನುವ ನಾಯಕರನ್ನು ಸೇರಿಸಿ ಮತ್ತು ಆರೋಪಕ್ಕೊಳಪಟ್ಟಿರುವ ಶಾಸಕ ಮತ್ತು ಆತನ ಸ್ನೇಹಿತ ಬೆಗ್ಲಿ ಪ್ರಕಾಶ್‍ರವರ ಹೇಳಿಕೆಗಳನ್ನು ಜಿಲ್ಲಾಡಳಿತ ದಾಖಲಿಸಿಕೊಂಡು ಶಾಸಕ ವರ್ತೂರ್ ಪ್ರಕಾಶ್ 10ವರ್ಷಗಳ ಅವದಿಯ ಎಲ್ಲಾ ದರಕಾಸ್ತ್ ಮಂಜೂರಾತಿ ಕಡತಗಳ ದಾಖಲೆಗಳ ಪರೀಶೀಲನೆ ಹಾಗೂ ಈ ಭೂಮಂಜೂರಾತಿಗೆ ಸಹಕರಿಸಿದ ಎಲ್ಲಾ ಕಂದಾಯ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಲು ಹಾಗೂ ತಹಸೀಲ್ದಾರ್ ಕಚೇರಿಯಲ್ಲಿ ನಡೆಯುತ್ತಿರುವ ಲಂಚದ ಹಾವಳಿ ಹಾಗೂ ಸರ್ಕಾರಿ ಅಕ್ರಮ ಭೂ ಮಂಜೂರಾತಿಯನ್ನು ಕೂಡಲೆ  ಸಿ.ಒ.ಡಿ. ತನಿಖೆಗೆ ಕೂಡಲೆ ಒಪ್ಪಿಸಬೇಕೆಂದು ಆಗ್ರಹಿಸಲಾಯಿತು. 
ಮನವಿ ಸ್ವೀಕರಿಸಿ ಮಾತನಾಡಿದ ಎಡಿಸಿರವರು ಈ ¨ಗ್ಗೆ ಸಾಕಷ್ಟು ದೂರುಗಳು ಬಂದಿದ್ದು, ಅದರಲ್ಲೂ ಕೆಲವು ದಾಖಲೆಗಳು ತಿದ್ದುಪಡಿಯಾಗಿರುವ ಬಗ್ಗೆ ಜಿಲ್ಲಾಡಳಿತ ಗಮನಕ್ಕೆ ಬಂದಿದ್ದು, ಹಾಗೂ ದರಖಾಸ್ತು ಭೂ ಮಂಜೂರಾತಿಯ ವೇಮಗಲ್ ಮತ್ತು ನರಸಾಪುರ ಹೋಬಳಿಗಳ ಪ್ರಕರಣಗಳನ್ನು ವಿಶೇಷವಾಗಿ ಪರಿಗಣಿಸಿ ತನಿಖೆಗೆ ಆದೇಶಿಸಿ ಕ್ರಮ ಕೈಗೊಳ್ಳುತ್ತೇವೆಂದು ಭರವಸೆ ನೀಡಿದರು.

ಈ ನಿಯೋಗದಲ್ಲಿ ಜಿಲ್ಲಾಧ್ಯಕ್ಷೆ ನಳಿನಿಗೌಡ, ಹಸಿರುಸೇನೆ ಜಿಲ್ಲಾಧ್ಯಕ್ಷ ಹುಲ್ಕೂರು ಹರಿಕುಮಾರ್, ಪಾರೂಕ್‍ಪಾಷಾ, ಆನಂದ್‍ಸಾಗರ್, ಕೆಂಬೋಡಿ ಕೃಷ್ಣೇಗೌಡ, ಈಕಾಂಬಳ್ಳಿ ಮಂಜು, ವೇಮಗಲ್ ಅಮರನಾರಾಯಣಸ್ವಾಮಿ, ರಂಜೀತ್‍ಕುಮಾರ, ಸುಪ್ರಿಂಚಲ, ಎಂ.ಹೊಸಹಳ್ಳಿ ಚಂದ್ರಪ್ಪ, ಶಿವು, ಭರತ್, ಕೊಮ್ಮನಹಳ್ಳಿ ಮೀಸೆ ವೆಂಕಟೇಶಪ್ಪ ಭರತ್ ಇದ್ದರು.
 

Read These Next

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...