ಶಾಶ್ವತ ನೀರಿಗಾಗಿ ಆಗ್ರಹಿಸಿ ಪ್ರಧಾನಿ ಮೋದಿಗೆ  ಇಪ್ಪುತ್ತು ಸಾವಿರ ಪತ್ರ ರವಾನೆ

Source: sonews | By sub editor | Published on 4th February 2018, 11:34 PM | State News | Special Report | Don't Miss |

ಕೋಲಾರ : ಕೋಲಾರ ಜಿಲ್ಲೆಯ ನೀರಾವರಿ ಹೋರಾಟಗಾರರಿಂದ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಶಾಶ್ವತ ನೀರಿಗಾಗಿ ಆಗ್ರಹಿಸಿ ದೇಶದ ಪ್ರಧಾನಿ ನರೇಂದ್ರ ಮೋದಿಗೆ ಇಪ್ಪತ್ತು ಸಾವಿರ ಪತ್ರಗಳನ್ನು ಬರೆಯಲಾಗಿದೆ.

ಜನವರಿ 20ರಂದು ಕೋಲಾರ ಕ್ರೀಡಾಭಿವೃದ್ಧಿ ಅಕಾಡೆಮಿಯವರು ನಗರದ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ ಸಂಗೀತ ಸಾರ್ವಭೌಮ ಹೆಸರಾಂತ ಗಾಯಕ ಡಾ||ಎಸ್.ಪಿ. ಬಾಲಸುಬ್ರಮಣ್ಯಂರವರು ನಡೆಸಿಕೊಟ್ಟ ಮ್ಯೂಜಿಕಲ್ ನೈಟ್ಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಇಪ್ಪತ್ತು ಸಾವಿರ ಪ್ರೇಕ್ಷಕರಿಂದ ನೀರಾವರಿ ಹೋರಾಟಗಾರರೇ ಹೆಚ್ಚಾಗಿದ್ದ ಈ ಅಕಾಡೆಮಿಯ ಸದಸ್ಯರ ಮನವಿಯ ಮೇರೆಗೆ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಶಾಶ್ವತ ನೀರಿಗಾಗಿ ಆಗ್ರಹಿಸಿ ಇಪ್ಪತ್ತು ಸಾವಿರ ಅಂಚೆ ಪತ್ರಗಳನ್ನು ನೆರೆದಿದ್ದ ಜನ ಸಹಿ ಮಾಡಿದ್ದರು.

ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಶಾಶ್ವತ ನೀರಿಗಾಗಿ ಎಸ್.ಬಿ. ಬಾಲಸುಬ್ರಮಣ್ಯಂ, ಗಾಯಕಿ ಅನುರಾಧ ಬಟ್, ಗಾಯಕ ಚಿನ್ಮಯಿ, ಹೆಸರಾಂತ ತಬಲ ಕಲಾವಿದ ವೇಣು, ಜಾನಪದ ಕಲಾವಿದ ಗೋ.ನಾ.ಸ್ವಾಮಿ ಸಹಿ ಮಾಡಿದ್ದರು. ಇವರೊಟ್ಟಿಗೆ ಕಾರ್ಯಕ್ರಮದ ಅತಿಥಿಗಳಾದ ಕೋಲಾರ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗಣೇಶ್, ಓಂ ಶಕ್ತಿ ಚಲಪತಿ, ಕೆ.ವಿ.ಶಂಕರಪ್ಪ, ಕನ್ನಡ ರಕ್ಷಣಾ ವೇದಿಕೆಯ ರಾಘವೇಂದ್ರ, ಸಿ.ಎಂ.ಆರ್. ಶ್ರೀನಾಥ್ ಸಹಿ ಮಾಡಿದ ಪತ್ರಗಳು ಮತ್ತು ಇತರೆ ಎಲ್ಲಾ 20,000 ಪತ್ರಗಳನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ 3ನೇ ಫೆಬ್ರವರಿ ಶನಿವಾರ ಕೋಲಾರ ಪ್ರಧಾನ ಅಂಚೆ ಕಛೇರಿಯ ಮುಖಾಂತರ  ಕಳುಹಿಸಿಕೊಡಲಾಯಿತು.

ಈ ಸಂದರ್ಭದಲ್ಲಿ ಕುರುಬರಪೇಟೆ ವೆಂಕಟೇಶ್, ಚಿನ್ನಿಶ್ರೀನಿವಾಸ್, ಚಂದ್ರಕಾಂತ್ ಸೂರ್ಯವಂಶಿ, ಮಾಯಂಡಿ ಮನೋಹರ್, ಕನ್ನಡ ಪ್ರಕಾಶ್, ಮಧುಕರ್.ಕೆ.ವಿ, ಮಲ್ಲಿಕಾ ಪ್ರಕಾಶ್, ಮಂಜುನಾಥ್, ಐ.ಟಿ.ಐ. ಶಿವು, ನಟರಾಜ್ ಹಾಗೂ ಅಕಾಡೆಮಿಯ ನೀರಾವರಿ ಹೋರಾಟಗಾರರು ಉಪಸ್ಥಿತರಿದ್ದರು.

                             

Read These Next

ಯಾರ ಸಮುದ್ರ? ಯಾರ ಕರಾವಳಿ?

ಕಳೆದ ಐದು ವರ್ಷಗಳಿಂದ ಮುಂಬೈನ ಸ್ಥಳೀಯ ಮೀನುಗಾರ ಸಮುದಾಯವು ವಿವಾದಾಸ್ಪದವಾದ ಕರಾವಳಿ ರಸ್ತೆ ಯೋಜನೆಯನ್ನು ತಾವು ಹಲವು ...