ಹಾಲು ಖರೀದಿ ದರ ಪರಿಷ್ಕರಣೆ 

Source: sonews | By Staff Correspondent | Published on 8th July 2018, 8:17 PM | State News | Public Voice |

ಹಾಲು ಖರೀದಿ ದರ ಪರಿಷ್ಕರಣೆ 
ಒಕ್ಕೂಟದಲ್ಲಿ ಲಾಭ ಗಳಿಸಿದಾಗ ಉತ್ಪಾದಕರಿಗೆ ಉತ್ತೇಜನ ನೀಡಲು ಹಾಲು ಖರೀದಿ ದರವನ್ನು ಹೆಚ್ಚಿಸುವುದು, ಅದೇ ರೀತಿ ಸುಗ್ಗಿ ಕಾಲದಲ್ಲಿ ಹಾಲು ಶೇಖರಣೆ ಅಧಿಕಗೊಂಡಾಗ ಹೆಚ್ಚುವರಿ ಹಾಲನ್ನು ಪರಿವರ್ತನೆಗೆ ಕಳುಹಿಸುವ ಸಂದರ್ಭಗಳಲ್ಲಿ ಒಕ್ಕೂಟವು  ನಷ್ಠ ಹೊಂದುವುದನ್ನು ಸರಿದೂಗಿಸಲು  ಹಾಲು  ಖರೀದಿ ದರ ಇಳಿಕೆ ಮಾಡುವ ಪದ್ದತಿ ಮೊದಲಿನಿಂದಲೂ ಕಹಾಮ/ಒಕ್ಕೂಟಗಳ ವ್ಯವಸ್ಥೆಯಲ್ಲಿ ರೂಡಿಯಲ್ಲಿರುತ್ತದೆ. ಈ ಹಿನ್ನಲೆಯಲ್ಲಿ ಒಕ್ಕೂಟವು 2017-18 ಸಾಲಿನಲ್ಲಿ ಗಳಿಸಿದ ಲಾಭಾಂಶವನ್ನು ಆಧರಿಸಿ ದಿನಾಂಕ 16.03.2018 ರಿಂದ 31.05.2018 ವರೆಗೆ ಹಾಲಿನ ಖರೀದಿ ದರವನ್ನು ರೂ.1/- ನ್ನು ಹೆಚ್ಚಿಸಿ ಹಾಲು ಉತ್ಪಾದಕರಿಗೆ ರೂ.24/- ಮತ್ತು ಸಂಘಕ್ಕೆ ರೂ.25.05 ಪ್ರತಿ ಲೀ.ಗೆ ಒಕ್ಕೂಟದಿಂದ ಪಾವತಿಸಲಾಗುತ್ತಿರುತ್ತದೆ.
ದಿನಾಂಕ 07.07.2018 ರಂದು ನಡೆದ ಒಕ್ಕೂಟದ ಆಡಳಿತ ಮಂಡಲಿ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಿ ಪ್ರಸ್ತುತ ರಾಜ್ಯದಲ್ಲಿ ಹಾಲಿನ ಹೊಳೆ ಹೆಚ್ಚಾಗಿದ್ದು, ನೆರೆಯ ಹಾಲು ಒಕ್ಕೂಟಗಳಲ್ಲೂ ಸಹ ಯತೇಚ್ಚವಾಗಿ ಹಾಲು ಶೇಖರಣೆಯಾಗುತ್ತಿರುವುದನ್ನು ಪರಿಗಣಿಸಿ ಪ್ರಸ್ತುತ ಹಾಲು ಉತ್ಪಾದಕರಿಗೆ ಬೆಂಗಳೂರು ಹಾಲು ಒಕ್ಕೂಟದಲ್ಲಿ ರೂ.22/-, ಮೈಸೂರು ಹಾಲು ಒಕ್ಕೂಟ ರೂ.22.50, ಮಂಡ್ಯ ಹಾಲು ಒಕ್ಕೂಟ ರೂ.22/- ತುಮಕೂರು ಹಾಲು ಒಕ್ಕೂಟ  ರೂ.22/- ಮತ್ತು ಹಾಸನ ಹಾಲು ಒಕ್ಕೂಟಗಳಲ್ಲಿ  ರೂ.22/- ಗಳಂತೆ ಪಾವತಿಸಲಾಗುತ್ತಿದೆ.
ಕೋಲಾರ-ಚಿಕ್ಕಬಳ್ಳಾಪುರ ಉಭಯ ಜಿಲ್ಲೆಗಳ ಹಾಲು ಉತ್ಪಾದಕರ ಹಿತದೃಷ್ಠಿಯಿಂದ ತಹಲ್ ವರೆಗೂ ಒಕ್ಕೂಟವು ಸಂಘಕ್ಕೆ ರೂ.25.05 ರಂತೆ ಮತ್ತು ಉತ್ಪಾದಕರಿಗೆ ರೂ.24/- ಪಾವತಿಸಿರುವುದರಿಂದ ಜೂನ್-18 ರ ಮಾಹೆ ಅಂತ್ಯಕ್ಕೆ ಒಕ್ಕೂಟಕ್ಕೆ ಅಂದಾಜು ರೂ.24.0 ಕೋಟಿಗಳು ನಷ್ಟ ಹೊಂದಿರುವುದನ್ನು  ಇಂದಿನ ಆಡಳಿತ ಮಂಡಲಿ ಸಭೆಯಲ್ಲಿ ಅವಲೋಕಿಸಿ  ಒಕ್ಕೂಟದ ವ್ಯಾಪ್ತಿಯಲ್ಲಿ ಪ್ರಸ್ತುತ 11.40 ಲಕ್ಷ ಲೀ. ಹಾಲು ಶೇಖರಣೆಯಾಗುತ್ತಿದ್ದು, ದಿನಂಪ್ರತಿ 3.3 ಲಕ್ಷ ಲೀ. ಹಾಲು ಪರಿವರ್ತನೆಗೆ ರವಾನಿಸುತ್ತಿರುದರಿಂದ ಹಾಗೂ ಮುಂದಿನ ದಿನಗಳಲ್ಲಿ ಮುಂಗಾರು ಚುರುಕಾದಲ್ಲಿ  ಇನ್ನೂ ಹೆಚ್ಚು ಹಾಲು ಶೇಖರಣೆ ನೀರೀಕ್ಷ್ಷಿಸಿ ಸಮಸ್ತ ಹಾಲು ಉತ್ಪಾದಕರಿಗೆ ಸಕಾಲದಲ್ಲಿ ಹಾಲಿನ ಹಣ ಬಟವಾಡೆ ಮಾಡಿ ಹಾಲು ಉತ್ಪಾದಕರ ಹಿತ ಕಾಯ್ದುಕೊಳ್ಳುವ ದೃಷ್ಟಿಯಿಂದ  ಪ್ರಸ್ತುತ ಖರೀದಿಸಲಾಗುತ್ತಿರುವ ಪ್ರತಿ ಲೀ. ಹಾಲಿನ ದರದಲ್ಲಿ ದಿನಾಂಕ 08.07.2018 ರ ಬೆಳಗಿನ ಸರತಿಯಿಂದ ಜಾರಿಗೆ ಬರುವಂತೆ ರೂ.2/- ರಂತೆ ಕಡಿತಗೊಳಿಸಿ ರೂ.22/- ರಂತೆ ಪಾವತಿಸಲು ಸರ್ವಾನುಮತದಿಂದ ತೀರ್ಮಾನಿಸಲಾಗಿರುತ್ತದೆ.
ಮಾಹಿತಿಯನ್ನು ಸಮಸ್ತ ಹಾಲು ಉತ್ಪಾದಕರ ಹಾಗೂ ಸಾರ್ವಜನಿಕರ ಮನವರಿಕೆಗಾಗಿ ತಮ್ಮ ಘನ ಪತ್ರಿಕೆಯಲ್ಲಿ ಪ್ರಕಟಣೆಗೊಳಿಸಲು ಕೋರಿದೆ.
ವಂದನೆಗಳೊಂದಿಗೆ,                        

ತಮ್ಮ ವಿಶ್ವಾಸಿ,
                           

 ಸಹಿ/-
ವ್ಯವಸ್ಥಾಪಕ ನಿರ್ದೇಶಕರು
 

Read These Next

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಗದಗ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಸುಪಾರಿ ನೀಡಿದ ಮನೆಮಗ ಸಹಿತ 8 ಮಂದಿಯ ಬಂಧನ

ಮೂರು ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಎಂಟು ಮಂದಿ ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...

“ಬೋಧನಾ ಪ್ರಬುದ್ಧತೆ, ಪ್ರತಿಭಾ ಪೋಷಣೆ, ಸಮಾಜಿಕ ಬದಲಾವಣೆ”-ಐಟಾ ದಿಂದ ರಾಷ್ಟ್ರೀಯ ಶೈಕ್ಷಣಿಕ ಅಭಿಯಾನ

ಬೋಧನಾ ಪ್ರಬುದ್ಧತೆ, ಪ್ರತಿಭಾ ಪೋಷಣೆ ಮತ್ತು ಸಮಾಜಿಕ ಬದಲಾವಣೆ ಈ ಮೂರು ಅಂಶಗಳು ಪರಸ್ಪರ ಸಂಬಂಧ ಹೊಂದಿವೆ. ಬೋಧನಾ ಪ್ರಬುದ್ಧತೆಯು ...