ಪತ್ರಕರ್ತರಿಗೆ ಸುಲಭದರದ ನಿವೇಶನ ಒದಗಿಸುವ ಯತ್ನ-ವರ್ತೂರು ಪ್ರಕಾಶ್  

Source: sonews | By sub editor | Published on 10th February 2018, 1:05 AM | State News | Don't Miss |

ಪತ್ರಕರ್ತರ ಸಂಘದಿಂದ ಅಕಾಡೆಮಿ ಪ್ರಶಸ್ತಿ ಪುರಸ್ಕøತರಿಗೆ ಆತ್ಮೀಯಸನ್ಮಾನ

ಕೋಲಾರ: ತಾವು ಮತ್ತು ಸಂಸದ ಕೆ.ಎಚ್.ಮುನಿಯಪ್ಪ ಜತೆಗೂಡಿ ಪತ್ರಕರ್ತರಿಗೆ ಸುಲಭದರದಲ್ಲಿ ನಿವೇಶನ ಕಲ್ಪಿಸುವ ಯೋಜನೆ ರೂಪಿಸುವುದಾಗಿ  ಶಾಸಕ ವರ್ತೂರು ಪ್ರಕಾಶ್ ತಿಳಿಸಿದರು.

ಶುಕ್ರವಾರ ನಗರದ ಪತ್ರಕರ್ತರ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ 2017ನೇ ಸಾಲಿನ ವಾರ್ಷಿಕ ಪ್ರಶಸ್ತಿ ವಿಜೇತರಾದ ಮಹಮದ್ ಯೂನುಸ್,ಕೋ.ನಾ.ಮಂಜುನಾಥ್, ಕೆ.ಯು.ಡ್ಲ್ಯೂ.ಜೆ ಪ್ರಶಸ್ತಿ ಪುರಸ್ಕøತ ವಿಶ್ವ ಕುಂದಾಪುರ, ಮೈಸೂರು ದಿಗಂತ ಪ್ರಶಸ್ತಿ ಪುರಸ್ಕøತ ಕಲಾವಿದ ವಿಷ್ಣು ಹಾಗೂ ಎಂಎಸ್ಸಿ ಪ್ರಥಮ ರ್ಯಾಂಕ್ ವಿಜೇತೆ ಸಿ.ಎಸ್.ಶ್ರೀಲತಾರನ್ನು ಸನ್ಮಾನಿಸಿ ಅವರು ಮಾತನಾಡುತ್ತಿದ್ದರು.

ಸುಮಾರು ಮಂದಿ ಪತ್ರಕರ್ತರಿಗೆ ಸ್ವಂತ ಸೂರಿಲ್ಲ, ಇವರಿಗೆ ಈ ಹಿಂದೆಯೇ ಸಹಕಾರ ಸಂಘಸ್ಥಾಪಿಸಿಕೊಂಡು ನಿವೇಶನ ಹಂಚುವ ಕುರಿತು ಸಂಘಕ್ಕೆ ಸೂಚಿಸಿದ್ದೆ ಎಂದ ಅವರು, ಆರ್ಥಿಕವಾಗಿಯೂ ಸಂಕಷ್ಟದಲ್ಲಿರುವ ಪತ್ರಕರ್ತರಿಗೆ ಸುಲಭದರದಲ್ಲಿ ನಿವೇಶನ ಸಿಗುವಂತೆ ಮಾಡಲು ಎಲ್ಲಾ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ಲೇಔಟ್ ಮಾಡಿ ನಿವೇಶನ ಮಾಡಿದರೂ ಕೊಳ್ಳುವ ಶಕ್ತಿ ಅನೇಕ ಪತ್ರಕರ್ತರಲ್ಲಿ ಇಲ್ಲ, ಇಂತಹ ಪತ್ರಕರ್ತರು ಸ್ವಂತ ಸೂರು ಮಾಡಿಕೊಳ್ಳಲು ಅಗತ್ಯ ರೀತಿಯ ನೆರವು ಒದಗಿಸುವ ಚಿಂತನೆ ಮಾಡುವುದಾಗಿ ತಿಳಿಸಿದರು.

ಜಿಲ್ಲೆಯ ಪತ್ರಿಕಾ ರಂಗದ ಸ್ನೇಹಿತರು ನೇರ,ನಿಷ್ಟೂರತೆಗೆ ಹೆಸರಾಗಿದ್ದಾರೆ, ನಮ್ಮ ತಪ್ಪುಗಳನ್ನು ತೋರಿಸುವ ಶಕ್ತಿ ಹೊಂದಿದ್ದಾರೆ ಎಂದ ಅವರು, ಸಮಾಜದ ಅಂಕುಡೊಂಕು ತಿದ್ದುವ ಕೆಲಸದ ಬಗ್ಗೆ ತಮಗೆ ಅಭಿಮಾನವಿದೆ ಎಂದರು.

ಮುದ್ರಾಂಕ ಇಲಾಖೆ ರಾಜ್ಯ  ಐಜಿ ಹಾಗೂ ನಿಕಟಪೂರ್ವ ಜಿಲ್ಲಾಧಿಕಾರಿ ಡಾ.ಕೆ.ವಿ.ತ್ರಿಲೋಕ್ ಚಂದ್ರ ಸನ್ಮಾನ ಸ್ವೀಕರಿಸಿ, ಕೋಲಾರ ಜಿಲ್ಲೆಯಲ್ಲಿ ತಾವು ಮೂರು ವರ್ಷಗಳ ಸುಧೀರ್ಘಕಾಲ ಮಾಡಿದ ಕೆಲಸ ತೃಪ್ತಿ ತಂದಿದೆ ಎಂದರು.

ಕುಡಿಯುವ ನೀರು, ಅಂತರ್ಜಲ ವೃದ್ದಿಗೆ ಎಲ್ಲಾ ರೀತಿಯ ಕ್ರಮ ಕೈಗೊಂಡಿದ್ದಾಗಿ ತಿಳಿಸಿದ ಅವರು, 3 ಸಾವಿರ ಕೊಳವೆ ಬಾವಿಗಳಲ್ಲಿ ಅಂತರ್ಜಲ ಮರುಪೂರಣ ವಿನ್ಯಾಸ ಮಾಡಲು ಕ್ರಮ ಕೈಗೊಂಡಿದ್ದಾಗಿ ತಿಳಿಸಿದರು.

ಅಂತರ್ಜಲ ವೃದ್ದಿಗಾಗಿ ಜಲ್ಲೆಯಲ್ಲಿ ಚೆಕ್ ಡ್ಯಾಂಗಳ ನಿರ್ಮಾಣಕ್ಕೂ ಆದ್ಯತೆ ನೀಡಿದ್ದು, ಸತತ ಐದು ವರ್ಷದ ಬರಗಾಲದಲ್ಲಿಯೂ ಗೋಶಾಲೆ, ಮೇವು ಬ್ಯಾಂಕ್ ಆರಂಭಿಸುವಲ್ಲಿ ಮೇವು ಒದಗಿಸುವಲ್ಲಿ ನಮ್ಮ ಕಾರ್ಯಕ್ರಮ ರಾಷ್ಟ್ರೀಯ ಪಾಲಸಿಯಾಯಿತು ಎಂದರು.

ವೈಯುಕ್ತಿಕ ಹಾಗೂ ವೃತ್ತಿಪರ ಜೀವನದಲ್ಲೂ ಕೋಲಾರವನ್ನು ಮರೆಯುವಂತಿಲ್ಲ ಎಂದ ಅವರು, ಮತ್ತೊಮ್ಮೆ ಈ ಜಿಲ್ಲೆಯಲ್ಲಿ ಕೆಲಸ ಮಾಡುವ ಅವಕಾಶ ಸಿಗಲಿ ಎಂದು ಆಶಿಸಿದರು.

ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್, ಈ ಬಾರಿಯ ಬಜೆಟ್‍ನಲ್ಲೂ ಪತ್ರಕರ್ತರು ಮತ್ತು ಪತ್ರಿಕೆ ಹಂಚುವ ಹುಡುಗರಿಗೂ ನೆರವಾಗುವ ಎರಡು ಯೋಜನೆಗಳು ಇರುವ ಸಾಧ್ಯತೆ ಇದೆ ಎಂದು ಸುಳಿವು ನೀಡಿ, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಗಡಿ ಜಿಲ್ಲೆಯ ಸಣ್ಣಪತ್ರಿಕೆಗಳಿಗೂ ಹೆಚ್ಚಿನ ಸಹಕಾರ ನೀಡಿದ್ದಾರೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್, ಪತ್ರಕರ್ತರ ಭವನದ ಕಚೇರಿ ಸಭಾಂಗಣ ನಿರ್ಮಾಣ ಸೇರಿದಂತೆ ಉಳಿಕೆ ಕಾಮಗಾರಿಗಳಿಗೆ ಶಾಸಕ ವರ್ತೂರು ಪ್ರಕಾಶ್ ಅವರು ನೀಡಿದ ಸಹಕಾರವನ್ನು ಸ್ಮರಿಸಿ, ಶಾಸಕರ ನಿಧಿಯ ಹಣ ಬಿಡುಗಡೆಗೆ ಕ್ರಮ ಕೈಗೊಂಡ ನಿಕಟಪೂರ್ವ ಡಿಸಿ ತ್ರಿಲೋಕಚಂದ್ರ ವರಿಗೆ ಧನ್ಯವಾದ ಸಲ್ಲಿಸಿದರು.

ಕೆ.ವಿ.ತ್ರಿಲೋಕ ಚಂದ್ರ ಇಲ್ಲಿನ ಪರಿಸ್ಥತಿಯನ್ನು ಅಧ್ಯಯನ ಮಾಡಿ ಇಲ್ಲಿಗೆ ಅಗತ್ಯವಾದ ಯೋಜನೆಗಳ ದೂರದೃಷ್ಟಿ ಹೊಂದಿದ್ದರು ಎಂದು ತಿಳಿಸಿ, ಕೆಸಿವ್ಯಾಲಿ ಯೋಜನೆ ತ್ವರಿತಗತಿಯಲ್ಲಿ ಸಾಗಲು ಕೈಗೊಂಡ ಕ್ರಮಗಳನ್ನು ಸ್ಮರಿಸಿದರು.

ಅದೇ ರೀತಿ ಸಣ್ಣಪತ್ರಿಕೆಗಳ ಸಮಸ್ಯೆಗಳನ್ನು ಮುಖ್ಯಮಂತ್ರಿಗಳ ಹಂತದಲ್ಲಿ ನಿವಾರಣೆ ಮಾಡುವಲ್ಲಿ ಕೆಲಸ ಮಾಡಿದ ಜಿಲ್ಲೆಯವರೇ ಆದ ಸ್ನೇಹಿತ ಕೆ.ವಿ.ಪ್ರಭಾಕರ್ ಅವರ ನೆರವಿಗೆ ಧನ್ಯವಾದ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಪತ್ರಕರ್ತರ ಸಭಾಂಗಣಗಳ ನಿರ್ಮಾಣದಲ್ಲಿ ಹಣಕಾಸು ನೆರವು ಒದಗಿಸಿದ ಶಾಸಕ ವರ್ತೂರು ಪ್ರಕಾಶ್, ಹಣ ಬಿಡುಗಡೆ ಮಾಡಿದ ನಿಕಟಪೂರ್ವ ಡಿಸಿ ತ್ರಿಲೋಕ್ ಚಂದ್ರ, ಪತ್ರಕರ್ತರ ಭವನದ ಸಭಾಂಗಣ ನಿರ್ಮಾಣದಲ್ಲಿ ನೆರವಾದ ನಿರ್ಮಿತಿಕೇಂದ್ರದ ಮೇಸ್ತ್ರಿಗಳಾದ ಸೀನಪ್ಪ,ನಾರಾಯಣಸ್ವಾಮಿರನ್ನು ಸನ್ಮಾನಿಸಿ,ನೆನಪಿನ ಕಾಣಿಕೆ ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ ಜಿಲ್ಲಾ ರೈತಸಂಘದಿಂದಲೂ 2017ನೇ ಸಾಲಿನ ವಾರ್ಷಿಕ ಪ್ರಶಸ್ತಿ ವಿಜೇತರಾದ ಮಹಮದ್ ಯೂನುಸ್,ಕೋ.ನಾ.ಮಂಜುನಾಥ್, ಕೆ.ಯು.ಡ್ಲ್ಯೂ.ಜೆ ಪ್ರಶಸ್ತಿ ಪುರಸ್ಕøತ ವಿಶ್ವ ಕುಂದಾಪುರ, ಮೈಸೂರು ದಿಗಂತ ಪ್ರಶಸ್ತಿ ಪುರಸ್ಕøತ ಕಲಾವಿದ ವಿಷ್ಣು ಹಾಗೂ ಎಂಎಸ್ಸಿ ಪ್ರಥಮ ರ್ಯಾಂಕ್ ವಿಜೇತೆ ಸಿ.ಎಸ್.ಶ್ರೀಲತಾರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ವಿ.ಮುನಿರಾಜು ಸ್ವಾಗತಿಸಿ, ಸುರೇಶ್ ಕುಮಾರ್ ನಿರೂಪಿಸಿದ ಕಾರ್ಯಕ್ರಮದಲ್ಲಿ ರಾಜ್ಯ ಪತ್ರಕರ್ತರ ಸಂಘದ ಕಾರ್ಯಕಾರಿ ಸದಸ್ಯ ಮುನಿವೆಂಕಟೇಗೌಡ, ವಾರ್ತಾಧಿಕಾರಿ ಪಲ್ಲವಿ ಹೊನ್ನಾಪುರ,ನಗರಸಭಾ ಸದಸ್ಯರಾದ ಸೋಮಶೇಖರ್,ಮಂಜುನಾಥ್, ಜಿಲ್ಲಾ ನೌಕರರ ಸಂಘದ ಗೌರವಾಧ್ಯಕ್ಷ ರವಿಚಂದ್ರ,ಪ್ರಧಾನ ಕಾರ್ಯದರ್ಶಿ ಕೆ.ಬಿ.ಅಶೋಕ್, ರೈತಸಂಘದ ಮುಖಂಡರಾದ ಕೆ.ಶ್ರೀನಿವಾಸಗೌಡ, ಕೆ.ನಾರಾಯಣಗೌಡ, ಮುಖಂಡರಾದ ಇಕ್ಬಾಲ್ ಅಹಮದ್, ಸಜ್ಜಾದೌಲ ಮತ್ತಿತರ ವಿವಿಧ ಸಂಘಟನೆಗಳ ಮುಖಂಡರು, ಜಿಲ್ಲೆಯ ಎಲ್ಲಾ ಪತ್ರಕರ್ತರು ಹಾಜರಿದ್ದು, ಚಂದ್ರಶೇಖರ್ ಪ್ರಾರ್ಥಿಸಿದರು. 
 

Read These Next

ಕೂರ್ಮಗಡ ದೋಣಿ ದುರಂತ; ಇದುವರೆಗೆ ೧೪ ಮೃತದೇಹ ಪತ್ತೆ;  ೧೯ ಜನರ ರಕ್ಷಣೆ; ಇಬ್ಬರ ಮೃತದೇಹಕ್ಕಾಗಿ ಶೋಧ

ಕಾರವಾರ: ೨೦೧೯ನೇ ವರ್ಷದ ಆರಂಭದಲ್ಲೇ ಉತ್ತರಕನ್ನಡ ಜಿಲ್ಲೆಯ ಕೂರ್ಮಗಡ ದೋಣಿ ದುರಂತ ಅತ್ಯಂತ ಭಯಾನಕವಾಗಿದ್ದು ೧೬ಮಂದಿಯನ್ನು ...

ಶಿರಾಲಿ ಹೆದ್ದಾರಿ ಅಗಲಿಕರಣ;ಸಾರ್ವಜನಿಕರ ಬೇಡಿಯಂತೆ 30 ರ ಬದಲು 45ಮೀಟರ್ ವಿಸ್ತರಣೆ-ಕೇಂದ್ರ ಸಚಿವ ಅನಂತ್ ಭರವಸೆ

ಭಟ್ಕಳ: ಶಿರಾಲಿ ಭಾಗದ ಗ್ರಾಮಸ್ಥರ ಬೇಡಿಕೆಯಂತೆ ರಾ.ಹೆ.66 ರ ಅಗಲೀಕರಣವನ್ನು 30ಮೀಟರ್ ಬದಲು 45ಮೀಟರ್ ಗೆ ವಿಸ್ತರಿಸಲು ಅಗತ್ಯ ಕ್ರಮಗಳನ್ನು ...

ಮಾನವೀಯತೆಯ ಸೌಧದಡಿ ಸಮಾನತೆಯ ಸಮಾಜ ಕಟ್ಟಿದ ಕಾಯಕ ಯೋಗಿ ಡಾ.ಶಿವಕುಮಾರ ಸ್ವಾಮೀಜಿ ಇನ್ನಿಲ್ಲ

ತುಮಕೂರು: ಪದ್ಮಭೂಷಣ, ಕರ್ನಾಟಕ ರತ್ನ, ಕಾಯಕ ಯೋಗಿ, ಶತಾಯುಷಿ ಶ್ರೀ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಅವರು ಸೋಮವಾರ ಬೆಳಗ್ಗೆ ...

ಕೂರ್ಮಗಡ ದೋಣಿ ದುರಂತ; ಇದುವರೆಗೆ ೧೪ ಮೃತದೇಹ ಪತ್ತೆ;  ೧೯ ಜನರ ರಕ್ಷಣೆ; ಇಬ್ಬರ ಮೃತದೇಹಕ್ಕಾಗಿ ಶೋಧ

ಕಾರವಾರ: ೨೦೧೯ನೇ ವರ್ಷದ ಆರಂಭದಲ್ಲೇ ಉತ್ತರಕನ್ನಡ ಜಿಲ್ಲೆಯ ಕೂರ್ಮಗಡ ದೋಣಿ ದುರಂತ ಅತ್ಯಂತ ಭಯಾನಕವಾಗಿದ್ದು ೧೬ಮಂದಿಯನ್ನು ...

ತ್ರಿವಿಧ ದಾಸೋಹಿ ಡಾ.ಶಿವಕುಮಾರ್ ಶಿವಯೋಗಿಗಳ ನಿಧನಕ್ಕೆ ರಾಬ್ತಾ ಮಿಲ್ಲತ್ ತೀವ್ರ ಸಂತಾಪ

ಭಟ್ಕಳ: ತ್ರಿವಿಧ ದಾಸೋಹಿ ಜ್ಞಾನಯೋಗಿ ಸಿದ್ದಗಂಗಾ ಶ್ರೀಗಳ ನಿಧನಕ್ಕೆ ರಾಬ್ತಾ-ಇ-ಮಿಲ್ಲತ್ ಸಂಸ್ಥೆಯ ಜಿಲ್ಲಾಧ್ಯಕ್ಷ ನ್ಯಾಯಾವಾದಿ ...

ಮಾನವೀಯತೆಯ ಸೌಧದಡಿ ಸಮಾನತೆಯ ಸಮಾಜ ಕಟ್ಟಿದ ಕಾಯಕ ಯೋಗಿ ಡಾ.ಶಿವಕುಮಾರ ಸ್ವಾಮೀಜಿ ಇನ್ನಿಲ್ಲ

ತುಮಕೂರು: ಪದ್ಮಭೂಷಣ, ಕರ್ನಾಟಕ ರತ್ನ, ಕಾಯಕ ಯೋಗಿ, ಶತಾಯುಷಿ ಶ್ರೀ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಅವರು ಸೋಮವಾರ ಬೆಳಗ್ಗೆ ...