ಚಿರತೆ ದಾಳಿಗೆ 30 ಕುರಿಗಳ ಬಲಿ

Source: sonews | By Sub Editor | Published on 10th March 2018, 11:09 PM | State News | Don't Miss |


 ಬಡರೈತ ಮಹಿಳೆಯ ಕುಟುಂಬಕ್ಕೆ ಸೂಕ್ತ ಪರಿಹಾರಕ್ಕೆ ರೈತ ಸಂಘ ಒತ್ತಾಯ

ಕೋಲಾರ: ಕ್ಯಾಲನೂರು ಗ್ರಾಮದಲ್ಲಿ ಬಡರೈತ ಮಹಿಳೆ ಸುನಂದಮ್ಮನವರ ಮನೆಯ ಮುಂದೆ ಇದ್ದ ಕುರಿದೊಡ್ಡಿಯಲ್ಲಿ ಚಿರತೆಗಳು ದಾಳಿ ಮಾಡಿ ಸುಮಾರು 20 ಕುರಿಗಳು ಸಾವನ್ನಪ್ಪದ್ದು, ಇನ್ನೂ ಹತ್ತು ಕುರಿಗಳು ಜೀವನ್ಮರಣದಲ್ಲಿ ನರಳಾಡುತ್ತಿದೆ.     
    
ಅರಣ್ಯ ಇಲಾಖೆಯವರ ನಿರ್ಲಕ್ಷ್ಯವೇ ಇದಕ್ಕೆ ಕಾರಣ. ಯಥೇಚ್ಯವಾಗಿ ಬೆಟ್ಟಗಳಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದರೂ ಅದನ್ನು ನಂದಿಸಲು ಪ್ರಯತ್ನಿಸದೇ ಇರುವುದು, ಇದರಿಂದ ಬೆಟ್ಟಗಳಲ್ಲಿರಬೇಕಾದ ಪ್ರಾಣಿಗಳು ಊರಿನ ಮನೆಗಳ ಮುಂದೆ ಓಡಾಡುವಂತಾಗಿದೆ. ಈ ಹಿಂದೆ ವೇಮಗಲ್, ತೋಕಲಘಟ್ಟ, ರಾಜಕಲ್ಲಹಳ್ಳಿ ಮುಂತಾದ ಕಡೆ ಸುಮಾರು ಮೂರು ನಾಲ್ಕು ಕಡೆ ಇದೇ ರೀತಿಯ ಪ್ರಕರಣಗಳಾಗಿದ್ದು, ಇಂತಹ ಪ್ರಕರಣಗಳು ಮತ್ತೆ, ಮತ್ತೆ ಮರುಕಳಿಸುತ್ತಿರುವುದರಿಂದ ಇದಕ್ಕೆ ಅರಣ್ಯ ಇಲಾಖೆಯ ಬೇಜವಾಬ್ದಾರಿಯೇ ಕಾರಣ ಎಂದು ರೈತ ನಾಯಕ ಪ್ರೋಪೆಸರ್ ನಂಜುಂಡಸ್ವಾಮಿ ಸ್ಥಾಪಿತ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ತೀವ್ರವಾಗಿ ಖಂಡಿಸುತ್ತದೆ.
    
ನೆನ್ನೆ ರಾತ್ರಿ ಕ್ಯಾಲನೂರು ಗ್ರಾಮದ ಹತ್ತಿರವಿರುವ ಬೆಟ್ಟದಲ್ಲಿ ಬಿದ್ದ ಬೆಂಕಿಯಿಂದ ಚಿರತೆಯೂ ಊರಿನ ಒಳಕ್ಕೆ ಬರಲು ಕಾರಣವಾಗಿದೆ. ಮತ್ತು ಸುಮರು ಒಂದು ವಾರದಿಂದ ಅಂತರಗಂಗೆ ಬೆಟ್ಟ, ತಲಗುಂದ, ನರಸಾಪುರ, ಅರಾಬಿಕೊತ್ತನೂರು, ಮಡೇರಹಳ್ಳಿ, ಕೊಂಡರಾಜನಹಳ್ಳಿ ಇನ್ನು ಸುಮಾರು ಬೆಟ್ಟಗಳಲ್ಲಿ ನಿರಂತರವಾಗಿ ಬೆಂಕಿ ಹುರಿಯುತ್ತಿದ್ದರೂ ಅರಣ್ಯ ಇಲಾಖೆಯು ಬೆಂಕಿ ನಂದಿಸುವಲ್ಲಿ ವಿಫಲವಾಗಿರುತ್ತದೆ.
    
ಈ ಬಡ ಕುಟುಂಬಕ್ಕೆ ಇಲ್ಲಿಯವರೆಗೂ ಪಂಚಾಯಿತಿ ಮನೆಯಾಗಲಿ, ಸರ್ಕಾರದಿಂದ ಬರುವ ದನದ ಕೊಟ್ಟಿಗೆಯಾಗಲೀ ಯಾವುದೂ ಇಲ್ಲಿಯವರೆಗೂ ಮಂಜೂರು ಮಾಡಿಕೊಟ್ಟಿರುವುದಿಲ್ಲ. ಇವರ ಮನೆಯಲ್ಲಿ ಮನೆ ಯಜಮಾನಿ ವಿದವೆ, ಆಕೆಯ ಸೊಸೆ ಯೂ ಸಹ ವಿದವೆ. ಇವರಿಬ್ಬರ ಜೀವನೋಪಾಯಕ್ಕೆ ಇದ್ದಂತಹ ಕುರಿಗಳು ಚಿರತೆಯ ದಾಳಿಯಿಂದ ಎಲ್ಲಾ ನಾಶವಾಗಿದೆ. ಜೀವನೋಪಾಯಕ್ಕೆ ಇದ್ದಂತಹ ಕುರಿಗಳು ಸಾವನ್ನು ನೋಡಿ ಮನೆಯವರ ರೋಧನೆಯನ್ನು ಕಂಡು ಗ್ರಾಮಸ್ಥರು ಅರಣ್ಯ ಇಲಾಖೆಗೆ ಇಡಿ ಶಾಪ ಹಾಕಿದರು. 
    
ಆದ್ದರಿಂದ ಕೂಡಲೇ ಅರಣ್ಯ ಇಲಾಖೆಯಾಗಲೀ, ಜಿಲ್ಲಾಡಳಿತವಾಗಲೀ ಈ ಬಡ ಕುಟುಂಬಕ್ಕೆ ಸೂಕ್ತವಾದ ಪರಿಹಾರ ಕೊಟ್ಟು ಕುರಿಗಳ ಕೊಟ್ಟಿಗೆಯೊಂದನ್ನು ಕಟ್ಟಿಕೊಡಬೇಕೆಂದು ಸಂಘಟನೆಯ ಒತ್ತಾಯಿಸುತ್ತದೆ.
    
ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಕಲ್ವಮಂಜಲಿ ರಾಮುಶಿವಣ್ಣ, ಜಿ. ನಾರಾಯಣಸ್ವಾಮಿ, ಕ್ಯಾಲನೂರು ರಾಮಕೃಷ್ಣಪ್ಪ, ಪ್ರಕಾಶ್, ಬಿಜೆಪಿ ಮುಖಂಡ ವೆಂಕಟರೆಡ್ಡಿ, ರತ್ನಮ್ಮ, ಚೇತನ್‍ಬಾಬು, ಕುರುಬರಹಳ್ಳಿ ಶಂಕರಪ್ಪ, ಕೊಲದೇವಿ ಗೋಪಾಲಕೃಷ್ಣಮೂರ್ತಿ, ಪ್ರೆಸ್ ಗಣೇಶ್, ಜಬೀವುಲ್ಲಾ, ನಂದಕುಮಾರ್, ಶ್ರೀನಾಥ್, ಬಾಬು, ನಾರಾಯಣಮೂರ್ತಿ  ಉಪಸ್ಥಿತರಿದ್ದರು.

                                    
 

Read These Next

ಕಡಲಾಳದಲ್ಲಿ ಸಹಸ್ರಮಾನ ಮತದಾರ

ಕಾರವಾರ : ಜನವರಿ 1, 2000ನೇ  ಇಸವಿಯಲ್ಲಿ ಜನಿÀಸಿದ ಸಹಸ್ರಮಾನ ಮತದಾರರಿಗೆ ಉತ್ತರ ಕನ್ನಡ ಜಿಲ್ಲಾಡಳಿತದಿಂದ ಕಾರವಾರ ಅರಬ್ಬಿ ಸಮುದ್ರದ ...

ಕಂಪ್ಯೂಟರ್ ಆಫೀಸ್ ಆಟೋಮೇಶನ್  ಪರೀಕ್ಷೆಯಲ್ಲಿ ದ್ವಾರಕನಾಥ್ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ

ಶ್ರೀನಿವಾಸಪುರ: ಕಳೆದ ಜನವರಿ  ಮಾಹೆಯಲ್ಲಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ 6 ತಿಂಗಳ  ಕಂಪ್ಯೂಟರ್ ಆಫೀಸ್ ಆಟೋಮೇಶನ್ ...

ಕಡಲಾಳದಲ್ಲಿ ಸಹಸ್ರಮಾನ ಮತದಾರ

ಕಾರವಾರ : ಜನವರಿ 1, 2000ನೇ  ಇಸವಿಯಲ್ಲಿ ಜನಿÀಸಿದ ಸಹಸ್ರಮಾನ ಮತದಾರರಿಗೆ ಉತ್ತರ ಕನ್ನಡ ಜಿಲ್ಲಾಡಳಿತದಿಂದ ಕಾರವಾರ ಅರಬ್ಬಿ ಸಮುದ್ರದ ...

ಕಂಪ್ಯೂಟರ್ ಆಫೀಸ್ ಆಟೋಮೇಶನ್  ಪರೀಕ್ಷೆಯಲ್ಲಿ ದ್ವಾರಕನಾಥ್ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ

ಶ್ರೀನಿವಾಸಪುರ: ಕಳೆದ ಜನವರಿ  ಮಾಹೆಯಲ್ಲಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ 6 ತಿಂಗಳ  ಕಂಪ್ಯೂಟರ್ ಆಫೀಸ್ ಆಟೋಮೇಶನ್ ...