ಶಿಕ್ಷಕರ ಪ್ರತಿಭಾ ಪರಿಷತ್ ನಿಂದ ಕೋಲಾರಮ್ಮ ಕೆರೆಯಲ್ಲಿ ಸ್ವಚ್ಚತಾ ಶ್ರಮದಾನ

Source: sonews | By sub editor | Published on 12th April 2018, 12:00 AM | State News | Don't Miss |

 

ಕೋಲಾರ : ಕೋಲಾರಮ್ಮ ಕೆರೆಯ ಜೊಂಡು ಸ್ವಚ್ಚತಾ ಶ್ರಮದಾನದ ಆಂದೋಲನ 79ನೇ ದಿನದ “ನಮ್ಮ ಕೆರೆ ನಮ್ಮ ಹಕ್ಕು” “ನಮ್ಮ ನೀರು ನಮ್ಮ ಹಕ್ಕು” ಕೆರೆ ನೀರು ಉಳಿಸುವ ಕಾರ್ಯದಲ್ಲಿ ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ ಜಿಲ್ಲಾ ಘಟಕದ ಪದಾಧಿಕಾರಿಗಳು ಭಾಗವಹಿಸಿದ್ದರು.
    
ಪರಿಷತ್ತಿನ ಜಿಲ್ಲಾಧ್ಯಕ್ಷ ಎಸ್.ಆರ್. ಈರೇಗೌಡ ಮಾತನಾಡಿ ಬೇರೆಲ್ಲಾ ಸೇವೆಗಳಿಗಿಂತ ನೀರನ್ನು ಉಳಿಸುವ ಸೇವೆ ಉತ್ತಮವಾಗಿದ್ದು, ಇಂದಿನ ಜೊಂಡು ಸ್ವಚ್ಚತಾ ಆಂದೋಲನದಲ್ಲಿ ಭಾಗವಹಿಸಿರುವುದು ನೆಮ್ಮದಿ ತಂದಿದೆ. ಪ್ರತಿದಿನ ಮೈದಾನದಲ್ಲಿ ಹೋಗಿ ವಾಕಿಂಗ್ ಮಾಡುವ ಬದಲಾಗಿ ಕೆರೆಯಲ್ಲೇ ಶ್ರಮದಾನ ಮಾಡುವುದು ಉತ್ತಮ ವ್ಯಾಯಾಮವಾಗಿದೆ. ಪ್ರತಿದಿನ ನಾವು ಆಂದೋಲನದಲ್ಲಿ ಪಾಲ್ಗೊಳ್ಳುತ್ತೇವೆ ಎಂದರು.
    
ಶಿಕ್ಷಕ ಅಶ್ವಥ್ ನಾರಾಯಣ ಮಾತನಾಡಿ ಮಳೆಯ ನೀರನ್ನು ಉಳಿಸಿಕೊಳ್ಳುವುದು ಬಹಳ ಮುಖ್ಯವಾದ ಜವಾಬ್ದಾರಿಯಾಗಿದ್ದು, ನೀರನ್ನು ಕೇಳುವ ನಾವು ಇರುವ ನೀರನ್ನು ಉಳಿಸಿಕೊಳ್ಳಲು ಪ್ರಯತ್ನಪಡುವುದು ಅತ್ಯಗತ್ಯ. ಹನಿ ನೀರಿಗೂ ಸಂಕಷ್ಟಪಡುವ ನಾವು ಮಳೆ ಬಂದು ಕೆರೆ ತುಂಬಿದ್ದು, ನೀರನ್ನು ಜೊಂಡು ಕುಡಿದು ಖಾಲಿ ಮಾಡುತ್ತಿದ್ದು, ನೀರನ್ನು ರಕ್ಷಿಸಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಅಭಿಪ್ರಾಯಪಟ್ಟರು.
    
ಶ್ರಮದಾನದಲ್ಲಿ ಉಪಾಧ್ಯಕ್ಷ ಎನ್.ವಿ.ಮುನಿಸ್ವಾಮಿರೆಡ್ಡಿ, ಖಜಾಂಚಿ ಬಸವರಾಜು, ಮುಳಬಾಗಿಲು ತಾಲ್ಲೂಕು ಅದ್ಯಕ್ಷ ಸೋಮಶೇಖರ್, ಕೋಲಾರ ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಗೋವಿಂದು, ಕೋಲಾರ ತಾಲ್ಲೂಕು ಘಟಕ ಖಜಾಂಚಿ ಸಿ.ಎಂ.ನಾರಾಯಣಸ್ವಾಮಿ, ಸದಸ್ಯರುಗಳಾದ ಸ್ಕೌಟ್ ಬಾಬು, ದನಂಜಯ, ಅಮರನಾಥ್, ಕೆಂಬೋಡಿ ಮಂಜುನಾಥ್, ಶಿವಕುಮಾರ್, ಎ.ಇ.ಎಸ್.ಮಂಜುನಾಥ್, ರವಿಕುಮಾರ್, ಸಿ.ಆರ್.ಪಿ.ವೆಂಕಟರೆಡ್ಡಿ, ಪರಮೇಶ್ ಇವರೊಂದಿಗೆ ಪುಟಾಣಿ ಮಕ್ಕಳು ಭಾಗವಹಿಸಿದ್ದರು.

Read These Next

ಬಯಲು ಸೀಮೆಯ ಹಾಲು ಒಕ್ಕೂಟದ ಭ್ರಷ್ಟಚಾರ ಹಾಗೂ ನೇಮಕಾತಿಗಳಲ್ಲಿ ಆಗಿರುವ ಹಗರಣವನ್ನು  ಸಿ.ಬಿ.ಐಗೆ ಒಪ್ಪಿಸುವಂತೆ ರೈತಸಂಘ ಆಗ್ರಹ

ಕೋಲಾರ: ಬಯಲು ಸೀಮೆಯ ಹಾಲು ಒಕ್ಕೂಟದ ಬ್ರಹ್ಮಾಂಡ ಭ್ರಷ್ಟಚಾರ ಹಾಗೂ ನೇಮಕಾತಿಗಳಲ್ಲಿ ಆಗಿರುವ ಹಗರಣವನ್ನು  ಸಿ.ಬಿ.ಐಗೆ ಒಪ್ಪಿಸಬೇಕು ...

ಶುಕ್ರವಾರದ ನಮಾಝ್ ನಲ್ಲಿ ಮುಸ್ಲಿಮ್ ಸಮುದಾಯದಿಂದ ಹುತಾತ್ಮ ಯೋಧರಿಗಾಗಿ ವಿಶೇಷ ಪ್ರಾರ್ಥನೆ ​​​​​​​

ಉಡುಪಿ: ಕಾಶ್ಮೀರದ ಪುಲ್ವಾಮ ಜಿಲ್ಲೆಯ ಅವಂತಿಪೋರದಲ್ಲಿ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಯೋಧರಿಗಾಗಿ ಗಂಗೊಳ್ಳಿ ...

ಸುಸೂತ್ರವಾಗಿ ಆರಂಭಗೊಂಡ ಐಸಿಎಸ್‍ಇ ಪರೀಕ್ಷೆ; ಮೊದಲ ದಿನ ಎಲ್ಲ ವಿದ್ಯಾರ್ಥಿಗಳು ಹಾಜರು

ಭಟ್ಕಳ: ಇದೇ ಪ್ರಥಮ ಬಾರಿಗೆ ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಹೆಬಳೆ ಪಂಚಾಯತ್ ವ್ಯಾಪ್ತಿಯಲ್ಲಿರುವ ನ್ಯೂ ಶಮ್ಸ್ ಸ್ಕೂಲ್ ...