ಐಪಿಎಲ್ ಬೆಟ್ಟಿಂಗ್ ದಂಧೆಗೆ ಕಡಿವಾಣ ಹಾಕಲು ರೈತಸಂಘ ದಿಂದ ಮನವಿ

Source: sonews | By Staff Correspondent | Published on 10th April 2018, 5:22 PM | State News | Don't Miss |

ಕೋಲಾರ: ಗ್ರಾಮೀಣ ಮತ್ತು ನಗರ ಪ್ರದೇಶದ ಬಡ ಕೂಲಿಕಾರ್ಮಿಕರನ್ನು ಮತ್ತು ಯುವ ಜನರನ್ನು ಆತ್ಮಹತ್ಯೆಗೆ ಹಾಗೂ ಅವರ ಕುಟುಂಬಗಳನ್ನು ಬೀದಿಪಾಲು ಮಾಡುವ ಐ.ಪಿ.ಎಲ್. ಬೆಟ್ಟಿಂಗ್ ದಂದೆಗೆ ಕಡಿವಾಣ ಹಾಕಿ, ಬೆಟ್ಟಿಂಗ್ ನಡೆಸುವ ದಂದೆಕೋರರ ವಿರುದ್ಧ ಗೂಂಡಾಕಾಯ್ದೆಯಡಿಯಲ್ಲಿ ಕೇಸು ದಾಖಲಿಸಿ, ಬೆಟ್ಟಿಂಗ್ ದಂದೆಯಿಂದ ಯುವ ಜನತೆ ಹಾಳಾಗದಂತೆ ಕ್ರಮ ವಹಿಸಬೇಕೆಂದು ರೈತ ಸಂಘದಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ  ಮನವಿ ನೀಡಿ, ಆಗ್ರಹಿಲಾಯಿತು.

ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ  ಐ.ಪಿ.ಎಲ್. ಕ್ರಿಕೆಟ್ ಆಟ ಮೇಲ್ನೋಟಕ್ಕೆ ಮನರಂಜನೆ ಆಟದಂತೆ ಕಾಣುತ್ತಿದ್ದರೂ ಇತ್ತೀಚೆಗೆ ಬಂದ ಬ್ಲೂವೆಲ್ ಗೇಮ್‍ಗಿಂತ ಮಾರಕವಾದ ಆಟ ಇದಾಗಿದೆ. ಬ್ಲೂವೆಲ್ ಆಟದಲ್ಲಿ ಸಾವು ಕಾಣಿಸಿಕೊಂಡರೆ, ಈ ಐ.ಪಿ.ಎಲ್. ಆಟದ ಬೆಟ್ಟಿಂಗ್‍ನಲ್ಲಿ ಸಾವಿರಾರು ಕುಟುಂಬಗಳು ಬೀದಿಗೆ ಬೀಳುವ ಜೊತೆಗೆ ಯುವ ಪೀಳಿಗೆಯನ್ನು ಸಾಲ ಮಾಡಿ, ಬೆಟ್ಟಿಂಗ್ ಆಡಿ, ಗೆಲವು ಕಾಣದೆ ಸಾಲ ಹೆಚ್ಚಾಗಿ ಆತ್ಮಹತ್ಯೆಗೆ ಶರಣಾಗಿ ಅವರನ್ನೇ ನಂಬಿದ್ದ ಕುಟುಂಬಗಳು ಬೀದಿಪಾಲಾಗುವ ಜೊತೆಗೆ ಈ ದಂದೆ ಗ್ರಾಮೀಣ ಮತ್ತು ನಗರ ಪ್ರದೇಶದಲ್ಲೂ ಆವರಿಸಿದೆ. ರೈತರ ಕೂಲಿ ಕಾರ್ಮಿಕರ ಜಮೀನನ್ನು ಅಡ ಇಟ್ಟು, ಕಡೆಗೆ ತಮ್ಮ ಜೀವವನ್ನು ಕಳೆದುಕೊಳ್ಳುವ ಈ ಆಟಕ್ಕೆ ಕೋಲಾರ ಜಿಲ್ಲಾದ್ಯಂತ ಪ್ರತಿಷ್ಠಿತ ಬಾರ್ & ರೆಸ್ಟೋರೆಂಟ್‍ಗಳು, ಲಾಡ್ಜ್‍ಗಳು, ಸರ್ಕಾರಿ ಅರಣ್ಯ ಪ್ರದೇಶಗಳು, ಅಡ್ಡಗಳಾಗಿ ಪರಿಣಮಿಸುವ ಜೊತೆಗೆ ಮೊಬೈಲ್ ಮೂಲಕ ಬುಕ್ಕಿಗಳು, ಅಮಾಯಕರನ್ನು ಯಾಮಾರಿಸಿ ಈ ಮಾರಕವಾದ ಐ.ಪಿ.ಎಲ್. ಬೆಟ್ಟಿಂಗ್ ದಂದೆಗೆ ನೂಕಿ ಅವರ ಜೀನವನ್ನು ಸರ್ವನಾಶ ಮಾಡಲು ರೆಡಿಯಾಗಿರುವ ಐ.ಪಿ.ಎಲ್. ದಂದೆಗೆ ಕೆಲವೇ ಕೆಲವು ಅಧಿಕಾರಿಗಳು ಸಾತ್‍ನೀಡಿರುವುದು ಸತ್ಯವಾದ ಮಾತು. ಮಾರಕವಾಗಿರುವ ಈ ಬೆಟ್ಟಿಂಗ್ ದಂದೆಯಲ್ಲಿ ತೊಡಗಿರುವ ದಂದೆಕೋರರ ವಿರುದ್ಧ ಗೂಂಡಾಕಾಯ್ದೆಯಡಿಯಲ್ಲಿ ಕೇಸು ದಾಖಲಿಸಿ, ಜಿಲ್ಲೆಯಿಂದ ಗಡಿಪಾರು ಮಾಡಿ, ಅಮಾಯಕ ಯುವ ಪೀಳಿಗೆಯನ್ನು ರಕ್ಷಿಸಬೇಕೆಂದು ಆಗ್ರಹಿಸಲಾಯಿತು. 

ಐ.ಪಿ.ಎಲ್ ಪಿಡುಗು ಈಗಾಗಲೇ ಸಾಕಷ್ಟು ಯುವಕರನ್ನು ಸರ್ವನಾಶ ಮಾಡಿದೆ. ಈ ದಂದೆ ಒಂದು ವ್ಯವಸ್ಥಿತವಾಗಿ ದೊಡ್ಡಮಟ್ಟದಲ್ಲಿ ನಡೆಯುತ್ತಿದ್ದು, ಇದಕ್ಕೆ ಹೆಚ್ಚಾಗಿ ಬಲಿಯಾಗುತ್ತಿರುವುದು 16-30ವರ್ಷದ ಯುವಕರೇ ಹೆಚ್ಚಾಗಿದ್ದಾರೆ. ಬೆಟ್ಟಿಂಗ್ ದಂದೆಯ ಬಗ್ಗೆ ಪೋಷಕರ ಗಮನಕ್ಕೆ ಬಂದರೂ ಮಾರ್ಯಾದೆಗೆ  ಅಂಜಿ ಸುಮ್ಮನೆಯಿರುವಂತಾಗಿರುವದೇ ಈ ಕರಾಳ ದಂದೆ ಇನ್ನಷ್ಟು ವ್ಯಾಪಿಸಲು ಕಾರಣವಾಗಿದೆಂದು ತಿಳಿಸಿದರು. 

ಮನವಿ ಸ್ವೀಕರಿಸಿದ ಪೊಲೀಸ್ ವರಿಷ್ಠಾಧಿಕಾರಿಗಳು ಜಿಲ್ಲಾಧ್ಯಂತ ಐ.ಪಿ.ಎಲ್. ಬೆಟ್ಟಿಂಗ್‍ದಂದೆ ನಡೆಯುತ್ತಿರುವುದು ನಮ್ಮ ಗಮನಕ್ಕೂ ಬಂದಿದೆ. ಹಾಗೂ ಈ ದಂದೆ ವ್ಯವಸ್ಥಿತವಾಗಿ ಕೋಡ್ ವರ್ಕ್ ಮತ್ತು ಸನ್ನೆಗಳ ಮೂಲಕ ನಡೆಯುವುದರಿಂದ ಪತ್ತೆ ಹಚ್ಚುವುದು ಪೋಲಿಸ್ ಇಲಾಖೆಗೂ ಸವಾಲಿನ ಕೆಲಸವಾಗಿದೆ. ಬಾರ್ & ರೆಸ್ಟೋರೆಂಟ್‍ಗಳು, ಲಾಡ್ಜ್‍ಗಳು ಡಾಬಾಗಳು ಮೇಲೆ ನಿಗಾವಹಿಸಿ ಈ ದಂದೆಗೆ ಸಂಪೂರ್ಣ ಕಡಿವಾಣ ಹಾಕಿ ಅಮಾಯಕರ ಜೀವ ಉಳಿಸುವ ಭರವಸೆ ನೀಡಿದರು.  ಜೊತೆಗೆ ಸಾರ್ವಜನಿಕರು, ಸಂಘ ಸಂಸ್ಥೆಗಳ ಗಮನಕ್ಕೆ ನಡೆಯುತ್ತಿರುವ ಅಡ್ಡಗಳ ವಿವರ ಗೊತ್ತಾದರೆ, ಕೂಡಲೇ ನಮಗೆ ಅಥವಾ ನಮ್ಮ ಕಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡದರೆ, ಕೂಡಲೇ ಅಂತಹ ಅಡ್ಡಗಳ ಮೇಲೆ ದಾಳಿ ಮಾಡಲಾಗುವುದೆಂದು ಭರವಸೆ ನೀಡಿದರು. 

ಈ ಮನವಿ ನೀಡುವಾಗ ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ನರಸಾಪುರ ಪುರುಶೋತ್ತಮ್, ಸುಪ್ರಿಂ ಚಲ, ಸಾಗರ್, ರಂಜಿತ್, ಈಕಂಬಳ್ಳಿ ಮಂಜುನಾಥ, ಫಾರುಕ್‍ಪಾಷ, ಯಲವಳ್ಳಿ ಪ್ರಭಾಕರ್, ಮೂರಾಂಡಹಳ್ಳಿ ಶಿವಾರೆಡ್ಡಿ, ಕೃಷ್ಣೇಗೌಡ ಮುಂತಾದ ಜಿಲ್ಲಾ ಮತ್ತು ತಾಲ್ಲೂಕು ಮುಖಂಡರು ಹಾಜರಿದ್ದರು.
 

Read These Next

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...

ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 19 ಅಭ್ಯರ್ಥಿಗಳಿಂದ 36 ನಾಮಪತ್ರ ಸಲ್ಲಿಕೆ.

ಕಾರವಾರ :12- ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ , ನಾಮಪತ್ರಗಳ ಸಲ್ಲಿಕೆಗೆ ಕೊನೆಯ ದಿನವಾದ ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...