ವಿಶ್ವ ಮಹಿಳಾ ದಿನಾಚರಣೆ ಯುವ ಜನ ಉದ್ಯಮಶೀಲ ತರಬೇತಿ

Source: sonews | By Staff Correspondent | Published on 9th March 2018, 11:30 PM | State News |

ಕೋಲಾರ : ಬಂಗಾರಪೇಟೆ ತಾಲ್ಲೂಕಿನ ಬೇತಮಂಗಲದ ಹರ್ಷ ಕಾಂಪ್ಲೆಕ್ಸ್‍ನಲ್ಲಿ ಪ್ರಕೃತಿ ಸೇವಾ ಸಂಸ್ಥೆ ಆವರಣದಲ್ಲಿ ತೇಜಶ್ವಿನಿ ಸಾಂಸ್ಕøತಿಕ ಕಲಾ ಸಂಘ, ಹೆಚ್.ಜಿ.ಕೋಟೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕೋಲಾರ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆ ಯುವ ಜನ ಉದ್ಯಮಶೀಲ ತರಬೇತಿ ಕಾರ್ಯಕ್ರಮವನ್ನು ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು.
    
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಧಿಕಾರಿ ಆರ್. ಗೀತಾ  ಉದ್ಯಮಶೀಲ ತರಬೇತಿಯನ್ನು ಹಳ್ಳಿಗಳಲ್ಲಿರುವ ಯುವಕ ಯುವತಿಯರು ಮನೆಗಳಲ್ಲಿರುವ ಮಹಿಳೆಯರು, ಎಸ್.ಎಸ್.ಎಲ್.ಸಿ. ಪಾಸ್, ಪೇಲ್ ಆದಂತಹವರು ಸಹ ಉದ್ಯಮೆದಾರರಾಗಲು ಈ ತರಬೇತಿಯು ಅನುಕೂಲವಾಗುತ್ತದೆ. ತರಬೇತಿ ಪಡೆದ ನಂತರ ಸಣ್ಣ ಉದ್ಯಮವನ್ನು ಯಾವ ರೀತಿ ಆರಂಭಿಸಬಹುದು ಎಂಬುದರ ಬಗ್ಗೆ ತಿಳಿಸಲಾಗುತ್ತದೆ. ಎಲ್ಲರೂ ಸ್ವಾವಲಂಭಿಗಳಾಗಿ ಬದುಕಿ ನಮ್ಮ ಇಲಾಖೆಯ ಪ್ರಯೋಜನ ಪಡೆಯಿರಿ ಎಂದರು.
    
ಜ್ಯೋತಿ ಬೆಳಗಿಸಿದ ಶಾಸಕರಿಯಾದ ವೈ.ರಾಮಕ್ಕ ಮಾತನಾಡಿ ತರಬೇತಿಯನ್ನು ಬೇತಮಂಗಲದ ಸುತ್ತ ಮುತ್ತಲ ಮಹಿಳೆಯರು, ನಿರುದ್ಯೋಗಿಗಳು ಪಡೆದುಕೊಂಡು ತಾಯಿ ತಂದೆ ಕೊಟ್ಟ ಜನ್ಮ, ಗುರು ಕೊಟ್ಟ ವಿದ್ಯೆ, ಸರ್ಕಾರದಿಂದ ಇಲಾಖೆಗಳಿಂದ ನಡೆಸುವ ಇಂತಹ ತರಬೇತಿಗಳನ್ನು ಎಲ್ಲಾರೂ ಪಡೆಯಬೇಕು. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ, ಮಹಿಳೆ ಮುಂದೆ ಬರಬೇಕಾಗಿದೆ. ನಮ್ಮ ಹಳ್ಳಿಗಳಲ್ಲಿನ ಎಲ್ಲಾ ಹೆಣ್ಣುಮಕ್ಕಳು ಚೆನ್ನಾಗಿರಬೇಕು, ಸಣ್ಣಪುಟ್ಟ ಉದ್ಯಮೆ ಮಾಡಿ ಹಣ ಸಂಪಾದನೆ ಮಾಡಿ ನಿಮ್ಮ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳಬೇಕು.
    
ತೇಜಶ್ವಿನಿ ಸಾಂಸ್ಕøತಿಕ ಕಲಾ ಸಂಘದ ಅಧ್ಯಕ್ಷೆ ಬಿ.ಕೆ. ರೇಣುಕಾ ಮತನಾಡಿ ಈ 5 ದಿನಗಳ ಕಾಲ ನಡೆಯುವ ಉದ್ಯಮ ಶೀಲ ತರಬೇತಿಯಲ್ಲಿ ಟೈಲರಿಂಗ್, ಬ್ಯೂಟಿಷಿಯನ್, ಸೀರೆಗೆ ಕುಚ್ಚುಕಟ್ಟುವುದು, ಸ್ವ-ಸಹಾಯ ಗುಂಪುಗಳ ರಚನೆ, ಬ್ಯಾಂಕ್ ವ್ಯವಹಾರ, ಹೈನುಗಾರಿಕೆ ಇನ್ನು ಮುಂತಾದ ತರಬೇತಿಗಳನ್ನು ಹಮ್ಮಿಕೊಂಡಿದ್ದು, ಬಂಗಾರಪೇಟೆ ತಾಲ್ಲೂಕಿನ ಹೆಣ್ಣು ಮಕ್ಕಳು ನಿರುದ್ಯೋಗಿಗಳು ಇದರ ಪ್ರಯೋಜನ ಪಡೆಯಲು ತಿಳಿಸಿದರು.
    
ತರಬೇತಿದಾರರ ಚಂದ್ರಶೇಖರ್ ಅಂಗಡಿ ಉದ್ಯಮಿ ಆರ್. ಪಂಕಜ, ಎಂ. ನಾಗೇಂದ್ರಕುಮಾರ್, ಗ್ರಾಮ ಪಂಚಾಯಿತಿ ಸದಸ್ಯ ವಿಜಿಕುಮಾರ್, ರೇಣುಕಾ ಪ್ರಿಂಟರ್ ಮಾಲೀಕ ಉಮೇಶ್, ಅಂಬರೀಶ್ ತಿಮ್ಮಾಪುರ, ಕಲಾವಿದ ಜನ್ನಘಟ್ಟಕೃಷ್ಣಮೂರ್ತಿ 5 ದಿನ ಕಾಲ ನಡೆಯುವ ಕಾರ್ಯಮ್ರದಲ್ಲಿ ಸಂಸ್ಕøತಿಕ ಜನಪದ, ರಾಗಿಬೀಸುವ ಪದ, ಸೋಬಾನೆ ಪದ, ಲಾವಣಿ, ಗೀಗೀ ಪದ, ಜಾನಪದ ನೃತ್ಯ ತರಬೇತಿಯನ್ನು ಉಚಿತವಾಗಿ ನೀಡಲಾಗುವುದು ಎಲ್ಲರೂ ಸದುಪಯೋಗ ಪಡೆದು ಕಲಾವಿದರಾಗಿ ಎಂದರು.

Read These Next

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಗದಗ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಸುಪಾರಿ ನೀಡಿದ ಮನೆಮಗ ಸಹಿತ 8 ಮಂದಿಯ ಬಂಧನ

ಮೂರು ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಎಂಟು ಮಂದಿ ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...