ಸಮಾಜದಲ್ಲಿ ಪ್ರತಿಯೊಬ್ಬರು ಜೀವನದ ಮೌಲ್ಯಗಳನ್ನು ಅರಿತು ಜೀವಿಸಿ

Source: sonews | By Staff Correspondent | Published on 7th July 2018, 12:33 AM | State News |

ಕೋಲಾರ : ಸಮಾಜದಲ್ಲಿ ಪ್ರತಿಯೊಬ್ಬರು ತಮ್ಮ ಜೀವನದ ಮೌಲ್ಯಗಳನ್ನು ಅರಿತಾಗ ದುಶ್ಚಟಗಳಿಗೆ ಬಲಿಯಾಗುವ ಸಾದ್ಯತೆಯಿರುವುದಿಲ್ಲ ವಿದ್ಯಾರ್ಥಿಗಳು ತಮ್ಮ 10ವರ್ಷದ ವಿದ್ಯಾರ್ಥಿ ಜೀವನವನ್ನು ವ್ಯರ್ಥಮಾಡದೆ. ಕಾಲಹರಣ ಮಾಡದೆ ಭವಿಷ್ಯದ ನಿರ್ದಿಷ್ಟ ಗುರಿಯನ್ನಿಟ್ಟುಕೊಂಡು ಅಡಿಪಾಯದೊಂದಿಗೆ ಗುರಿ ತಲುಪುವ ಹಾದಿಯಲ್ಲಿ ನಡೆಯಬೇಕು ಆಗಲೇ ತಮ್ಮ ಜೀವನ ಸಾರ್ಥಕತೆಯಾಗುದತದೆಂದು ಪರಿಸರ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ಜಿಲ್ಲಾ  ಅಧಿಕಾರಿಗಳಾದ ಸಿ.ಆರ್.ಮಂಜುನಾಥ್ ತಿಳಿಸಿದರು.

ನರಸಾಪುರದಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢಶಾಲಾ ವಿಭಾಗದಲ್ಲಿ ಕರ್ನಾಟಕ ರಕ್ಷಣ ಸಮಿತಿ ಮತ್ತು ಅಂಬೇಡ್ಕರ್ ಪ್ರಚಾರ ಅದ್ಯಯನ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ದಿ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಮಾಧಕ ವಸ್ತು ಮತ್ತು ಮಾನವ ಕಳ್ಳ ಸಾಗಣೆ ವಿರೋದಿ ಸಪ್ತಾಹ ಅಂಗವಾಗಿ ಏರ್ಪಡಿಸಿದ್ದ ಮಾಧಕ ದ್ರವ್ಯ ತೈಜಿಸಿ-ಆರೋಗ್ಯ ರಕ್ಷಿಸಿ-ಪರಿಸರ ಉಳಿಸಿ ಅರಿವು ಕಾರ್ಯಕ್ರಮವನ್ನು ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಮೊದಲು ನಾವು ನಮ್ಮ ತಂದೆ ತಾಯಿ ಗುರುಗಳನ್ನು ಗೌರವಿಸುವಂತಾಗಬೇಕು ಮತ್ತು ಅವರು ನಮ್ಮ ಜೀವನದುದ್ದಕ್ಕೂ ನಮಗಾಗಿ ಶ್ರಮಿಸಿರುವ ಬಗ್ಗೆ ಅರಿಯಬೇಕು ಆಗ ಇಂತಹ ಮಾಧಕ ವಸ್ತು ದ್ರವ್ಯ ಅನೈತಿಕ ಚಟುವಟಿಕೆಗಳತ್ತ ವಾಲುವ ಪ್ರಮೇಯ ಬರುವುದಿಲ್ಲ ಎಂದರು .

ವೇಮಗಲ್ ಪೋಲಿಸ್ ಠಾಣೆ ಉಪ ನಿರೀಕ್ಷಕರಾದ ಲಕ್ಷ್ಮೀನಾರಾಯಣ ಮಾತನಾಡಿ ಮಾದಕ ವಸ್ತುಗಳನ್ನು ಬಳಸುವುದು ನಿಷೇದಿಸಿದ್ದರೂ ಕೆಲವು  ಕಡೆ ರಾಜಾರೋಷವಾಗಿ ಮಾರಾಟ ಮತ್ತು ಉಪಯೋಗಿಸುತ್ತಿರುವುದು ವಿಷಾದನೀಯವಾಗಿದೆ ,ಮನುಷ್ಯ ಮಾದಕ ವಸ್ತು ಸೇವನೆ ಮಾಡಿದಲ್ಲಿ ಅವು ನರಗಳಿಗೆ ಹೋಗಿ ಮತ್ತು ತರುವುದು ಮತ್ತು ಅದಕ್ಕೆ ದಾಸರಾದ ಮೇಲೆ ಅದನ್ನು ಬಿಟ್ಟರೂ ಅದು ನಿಮ್ಮನ್ನು ಬಿಡುವುದಿಲ್ಲ ಎಂಬುದನ್ನು ನಾವು ಅರಿಯಬೇಕಾಗಿದೆ ,ಕೆಲವು ಕಡೆ ಗಂಗಾ ಬೆಳೆಯನ್ನು ಅಕ್ರಮವಾಗಿ ಬೆಳೆಯುತ್ತಿದ್ದು ಇವುಗಳ ಬಗ್ಗೆ ಸಾಕಷ್ಟು ಪ್ರಕರಣಗಳು ಸಹ ದಾಖಲಾಗಿವೆ ಸಾರ್ವಜನಿಕರು ಇಂತಹ ಅಕ್ರಮ ಚಟುವಟಿಕೆಗಳಲ್ಲಿ ಪಾಲ್ಗೊಂಡಿರುವವರ ಬಗ್ಗೆ ಮಾಹಿತಿ ನೀಡಿದಲ್ಲಿ ಮಾದಕ ವಸ್ತು,ಗಾಂಜಾ,ಅಫೀಮು ಬಳಕೆಗೆ ಕಡಿವಾಣ ಹಾಕಿ ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡಲು ಸಾದ್ಯ ಎಂದರು ಮತ್ತು ಪೋಲಿಸ್ ಇಲಾಖೆಗೆ ಆಯ್ಕೆಯಾಗುವ ಬಗ್ಗೆ ವಿದ್ಯಾರ್ಥಿಗಳಿಗೆ ವಿವರಿಸಿದರು ಹಾಗೂ 8,9,10 ಮ್ತತು ಪ್ರಥಮ ಪಿ.ಯು.ಸಿ ಯಲ್ಲಿ ಉತ್ತಮ ಅಂಕಗಳಿಸಿರುವ ವಿದ್ಯಾರ್ಥಿಗಳಿಗೆ ಅಭಿನಂದಿಸಿ ಗೌರವಿಸಲಾಯಿತು .

ಭಾರತೀಯ ದಲಿತ ಸೇನೆ ರಾಜ್ಯಾದ್ಯಕ್ಷ ದಲಿತ್ ನಾರಾಯಣಸ್ವಾಮಿ ಮಾತನಾಡಿ ಬಂಗಿ ಸೇದುವುದು,ಬಟ್ಟಿ ಸಾರಾಯಿ ಮಾರುವುದು ಕುಡಿಯುವುದು ನಿಷೇದಿಸಲಾಗಿದೆ ಆದರೆ ಸಾರ್ವಜನಿಕರು ಸ್ಥಳಿಯವಾಗಿ ಸುಲಭ ರೀತಿಯಲ್ಲಿ ಸಿಗುವ ಬೇರೆ ರೀತಿಯ ಮಾದಕ ವಸ್ತು ಮತ್ತು ದ್ರವ್ಯ ಪದಾರ್ಥಗಳತ್ತ ವಾಲುತ್ತಿದ್ದಾರೆ ಇದಕ್ಕೂ ಸಹ ಸರ್ಕಾರ ಕಡಿವಾಣ ಹಾಕಬೇಕಾಗಿದೆ ಎಂದರು .

ಕಾರ್ಯಕ್ರಮದ ಅದ್ಯಕ್ಷತೆ ವಹಿಸಿ ಮಾತನಾಡಿದ ಕಾಲೆಜಿನ ಪ್ರಾಂಶುಪಾಲರಾದ ಕ್ರಿಷ್ಟಿ ಜಯಂ ನಮ್ಮ ಶಾಲೆಯಲ್ಲಿ ಇಂದಹ ಅರಿವು ,ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಾಗಾಗ್ಗೆ ಹಮ್ಮಿಕೊಂಡು ವಿದ್ಯಾರ್ಥಿಗಳಿಗೆ ಒಳ್ಳೆಯ ಮಾರ್ಗದಶ್ನ ನೀಡಬೇಕು ಹಾಗೂ ವಿದ್ಯಾರ್ಥಿಗಳು ತಮಗೆ ನೀಡಿರುವ ಮಾರ್ಗದರ್ಶನವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತಾಗಬೇಕು.

ಕರ್ನಾಟಕ ರಕ್ಷಣಾ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಆರ್.ಚೇತನ್ ಬಾಬು ಪ್ರಾಸ್ತಾವಿಕವಾಗಿ ಮಾತನಾಡಿ ನಮ್ಮ ಸಂಘ ಸಂಸ್ಥೆಗಳು ಇಂತಹ ಅರಿವು ಮತ್ತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿದ್ದು ಪರಿಸರ ಉಳಿವಿಗಾಗಿ ಶಾಲಾ ಕಾಲೇಜು ಮಟ್ಟದಲ್ಲಿ ವಿವಿಧ ರೀತಿಯ ಗಿಡಗಳನ್ನು ಸಹ ನೀಡಿ ಪ್ರೋತ್ಸಾಹಿಸುತ್ತಿದ್ದೇವೆ ಉತ್ತಮ್ಮ ಪರಿಸರವಿದ್ದಲ್ಲಿ ಉತ್ತಮ ಶಿಕ್ಷಣ ಲಭಿಸಲು ಸಾದ್ಯವಾಗುತ್ತದೆ ಆಗ ಯಾವುದೇ ಕೆಟ್ಟ ಆಲೋಚನೆಗಳತ್ತ ನಮ್ಮ ಮನಸ್ಸು ವಾಲುವುದಿಲ್ಲ ಎಂದು ಹೇಳಿದರು .
ಕಾರ್ಯಕ್ರಮದಲ್ಲಿ ಬೆಳ್ಳು ಗ್ರಾಮ ಪಂಚಾಯತಿ ಸದ್ಯಸ ನರಸಿಂದ.ಕರ್ನಾಟಕ ರಕ್ಷಣ ಸಮಿತಿ ಕೋಲಾರ ನಗರ ಘಟಕ ಅದ್ಯಕ್ಷ ಎನ್ ಹರೀಶ್ , ಪ್ರೌಢಶಾಲೆಯ ಪ್ರಭಾರ ಮುಖ್ಯೋಪಧ್ಯಾಯರಾದ ಶಿವಪ್ರಸಾದ್,ಕಾಲೇಜಿನ ಶಿಕ್ಷಕ ಶಿಕ್ಷಕಿಯರು ಸಿಬ್ಬಂದಿ ಪಾಲ್ಗೊಂಡಿದ್ದರು. ನಾರಾಯಣಸ್ವಾಮಿ ಸ್ವಾಗತಿಸಿ ನಿರೂಪಿಸಿದರು, ಮೈಥಿಲಿ ವಂದಿಸಿದರು .

Read These Next

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಗದಗ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಸುಪಾರಿ ನೀಡಿದ ಮನೆಮಗ ಸಹಿತ 8 ಮಂದಿಯ ಬಂಧನ

ಮೂರು ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಎಂಟು ಮಂದಿ ...