ಅಭ್ಯರ್ಥಿಗಳ ಹಣ ವೆಚ್ಚದ ಮೇಲೆ ನಿಗಾ ವಹಿಸಿ  -    ಜಿ. ಸತ್ಯವತಿ 

Source: sonews | By Staff Correspondent | Published on 28th March 2018, 5:56 PM | State News |

ಕೋಲಾರ:  ಕರ್ನಾಟಕ ರಾಜ್ಯ 2018 ರ ವಿಧಾನ ಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆ ಚುನಾವಣೆ ಸಂಬಂಧಿಸಿದ ಹಾಗೆ ರಾಜಕೀಯ ನಾಯಕರ ಹಾಗೂ ಅವರ ಆದಾಯ ಮೂಲಗಳ ಬಗ್ಗೆ ಆದಾಯ ಅಧಿಕಾರಿಗಳು ಸಕಾಲದಲ್ಲಿ ನಿಗಾ ವಹಿಸಬೇಕು, ಸೂಕ್ತ ಮಾಹಿತಿಯನ್ನು  ಹೊಂದಿರಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಾದ ಜಿ. ಸತ್ಯವತಿ ರವರು ತಿಳಿಸಿದರು.   
ಇಂದು ಜಿಲ್ಲಾಧಿಕಾರಿಗಳ ನ್ಯಾಯಾಂಗ ಸಭಾಂಗಣದಲ್ಲಿ ನಡೆದ ಚುನಾವಣಾ ವೆಚ್ಚ ಅಧಿಕಾರಿಗಳು ಹಾಗೂ ಆದಾಯ ತೆರಿಗೆ  ಅಧಿಕಾರಿಗಳು ಹಾಗೂ ತೆರಿಗೆ ಸಭೆಯಲ್ಲಿ ಅವರು ಮಾತನಾಡಿ ಒಮ್ಮೆ ಚುನಾವಣಾ ನೀತಿ ಸಂಹಿತೆ ಜಾರಿಯಾದ ಮೇಲೆ ಅಭ್ಯರ್ಥಿಗಳ ಪ್ರತಿಯೊಂದು ವಿಷಯಗಳ ಬಗ್ಗೆ ಗಮನ ಹರಿಸಬೇಕಾಗಿರುತ್ತದೆ. ನಾಮಪತ್ರ ಸಲ್ಲಿಕೆಯಾಗಿರಬಹುದು, ನಾಮ ಪತ್ರ ಹಿಂತೆಗೆದುಕೊಳ್ಳವಿಕೆ ಹೀಗೆ ಚುನಾವಣೆಗೆ ಸಂಬಂಧ ಪಟ್ಟ ಯಾವದೇ ಅಂಶಗಳ ಬಗ್ಗೆ ಚುನಾವಣೆ ನೀತಿ ಸಂಹಿತೆಯು ನಿಗಾ ವಹಿಸಿರುತ್ತದೆ. 
ಈಗಾಗಲೇ ರಾಜ್ಯ ಚುನಾವಣೆಯ  ದಿನಾಂಕ ಪ್ರಕಟವಾಗಿದೆ. ನೀತಿ  ಸಂಹಿತೆ ಜಾರಿಯಾದ ಹಿನ್ನೆಲೆ ಎಲ್ಲಾ ನಿಯಮಗಳು ಚುನಾವಣೆ ಮುಗಿಯುವವರೆಗೂ ಚಾಲ್ತಿಯಲ್ಲಿರುತ್ತದೆ. ನಿಯಮ ಬಾಹಿರವಾಗಿ ಯಾವುದೇ ಘಟನೆಗಳು ನಡೆಯದಂತೆ ನೀತಿ ಸಂಹಿತೆ ಆಯೋಗ ಕಾರ್ಯ ನಿರ್ವಹಿಸುತ್ತದೆ. 
10 ಲಕ್ಷಕ್ಕಿಂತ ಹೆಚ್ಚಿನ ಮೊತ್ತ ಹಣವನ್ನು ಡ್ರಾ ಮಾಡಿದಾಗ ಅತಂಹ ಅಕೌಂಟ್‍ನ್ನು ನಾವು ಮುಟ್ಟುಗೋಳು ಹಾಕಿಕೊಳ್ಳಬೇಕು. ಇದರ ಪ್ರಕಾರವಾಗಿಯೇ ಅನಧಿಕೃತವಾಗಿ ಮನೆಗಳಲ್ಲಿ ಕೂಡಿ ಇಟ್ಟುರುವತಂಹ ಹಣವನ್ನು ತತ್‍ಕ್ಷಣವೇ ನಾವು ಮುಟ್ಟುಗೋಲು ಮಾಡಬಹುದು. 
ಚುನಾವಣೆ ನೀತಿ ಸಂಹಿತೆ ಅನ್ವಯ ರಾಜಕೀಯ ಅಭ್ಯರ್ಥಿಗಳಿಗೆ ಹಣವನ್ನು ಖರ್ಚು ಮಾಡಲು 28 ಲಕ್ಷಗಳ  ನಿಗದಿತ ಆದಾಯ ಮಿತಿಯನ್ನು ಹೊಂದಿರುತ್ತಾರೆ. ಆ ಕಾರಣಕ್ಕಾಗಿ ಪ್ರತಿಯೊಬ್ಬರ ಖಾತೆಗಳ ಬಗ್ಗೆ ಆದಾಯ ತೆರಿಗೆ ಅಧಿಕಾರಿಗಳು ನಿಗಾ ವಹಿಸಬೇಕು. ದಾಖಲೆ ರಹಿತ ಯಾವುದೇ ಹಣವನ್ನು ತಕ್ಷಣವೇ ಮುಟ್ಟುಗೋಲು ಹಾಕಿಕೊಂಡು ಚುನಾವಣೆಯಲ್ಲಿ ಯಾವುದೇ ಅಕ್ರಮಗಳಿಗೆ ಅನುವು ಮಾಡಿಕೊಡದ ಹಾಗೇ ಪ್ರತಿಯೊಬ್ಬ ಅಧಿಕಾರಿಗಳು ತಮ್ಮ ಕರ್ತವ್ಯಗಳನ್ನು ನಿರ್ವಹಿಸಬೇಕು. 
ಪ್ರತಿಯೊಬ್ಬ ಬ್ಯಾಂಕ್ ಅಧಿಕಾರಿಗಳ ತಾವು ತುರ್ತಾಗಿ ಈ ಮಾಹಿತಿಯನ್ನು ಜಿಲ್ಲೆಯ ಪ್ರತಿಯೊಂದು ಬ್ಯಾಂಕ್‍ಗಳಿಗೆ ತಲುಪಿಸಬೇಕು. ಅಧಿಕೃತವಾಗಿ ಎಲ್ಲಾ ದಾಖಲೆ ಹೊಂದಿದ್ದು ಹಣ ಸಂದಾಯವಾದರೆ ಅದಕ್ಕೆ ಯಾವುದೇ ಅಭ್ಯಂತರವನ್ನು ಹಾಕಲು ಹೋಗಬೇಡಿ. ಸೂಕ್ತ ದಾಖಲೆ ಹೊಂದಿದ್ದು ಅಂತಹ ಹಣವನ್ನು ತಾವು ವರ್ಗಾವಣೆ ಮಾಡಬಹುದು ಎಂದು ಹೇಳಿದರು.  
ಸಭೆಯಲ್ಲಿ ಆದಾಯ ತೆರಿಗೆ ಉಪಯುಕ್ತರಾದ ಗುರುಪ್ರಸಾದ್ ಅವರು ಉಪಸ್ಥಿತರಿದ್ದರು. 
 

Read These Next

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...