ಒರಿಸ್ಸಾದ ಕೇಂದ್ರ ಮೀಸಲು ಪಡೆ ಮುಳಬಾಗಿಲು ವಿದಾನಸಭಾ ಕ್ಷೇತ್ರದಲ್ಲಿ ಪಥ ಸಂಚಲನ

Source: sonews | By Staff Correspondent | Published on 12th April 2018, 12:08 AM | State News | Don't Miss |


ಕೋಲಾರ:ಕೋಲಾರ ಜಿಲ್ಲೆಯ ವಿಧಾನಸಭಾ ಚುನಾವಣಾ ಕ್ಷೇತ್ರದ ಸಂಖ್ಯೆ: 145 ಮುಳಬಾಗಿಲು ವಿಧಾನ ಸಭೆ ಕ್ಷೇತ್ರವನ್ನು ಅತಿಸೂಕ್ಷ್ಮ ಕ್ಷೇತ್ರವೆಂದು ಪರಿಗಣಿಸಲಾಗಿದ್ದು, ಈ ಕ್ಷೇತ್ರದಲ್ಲಿ ಚುನಾವಣೆ ಶಾಂತ ರೀತಿಯಿಂದ ನಡೆಯುವ ಸಲುವಾಗಿ ಚುನಾವಣಾ ನೀತಿ ಸಂಹಿತೆ ಸಮಯದಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಚುನಾವಣಾ ಸಮಯದಲ್ಲಿ ಬಂದೋಬಸ್ತ್ ಕರ್ತವ್ಯವನ್ನು ನಿರ್ವಹಿಸುವ ಸಲುವಾಗಿ ಒರಿಸ್ಸಾದಿಂದ ಕೇಂದ್ರ ಮೀಸಲು ಪೊಲೀಸ್ ಪಡೆಯ 4 ನೇ ಬೆಟಾಲಿಯನ್ ಪಡೆಯ ಒಬ್ಬ ಡೆಪ್ಯೂಟಿ ಕಮಾಂಡೆಂಟ್ ದರ್ಜೆಯ ಅಧಿಕಾರಿ ಇಬ್ಬರು ಸಬ್‍ಇನ್ಸ್‍ಪೆಕ್ಟರ್ ದರ್ಜೆಯ ಅಧಿಕಾರಿಗಳು ಹಾಗೂ 93 ಜನ ಯೋದರು ಆಗಮಿಸಿದ್ದು ಮುಳಬಾಗಿಲು ನಗರದಲ್ಲಿ ಮೊಕ್ಕಾಂ ಇರುತ್ತಾರೆ. 
    
ಸಾರ್ವಜನಿಕರು ನಿರ್ಭೀತಿಯಿಂದ ಮತ ಚಾಲಾಯಿಸಲು ನೈತಿಕ ಬೆಂಬಲ ನೀಡಲು ಇಂದು ಮುಳಬಾಗಿಲು ನಗರದ ಅಂಬೇಡ್ಕರ್‍ವೃತ್ತ, ಗುಣಿಗಂಟೆಪಾಳ್ಯ, ಸೋಮೇಶ್ವರಪಾಳ್ಯ, ಪಳ್ಳಿಗರಪಾಳ್ಯ, ಕುರುಬರಪೇಟೆ ಬಸ್ ನಿಲ್ದಾಣ. ಕೆ.ಇ.ಬಿ. ವೃತ್ತ ಮುಂತಾದ ನಗರದ ಸೂಕ್ಷ್ಮ ಹಾಗೂ ಪ್ರಮುಖ ರಸ್ತೆಗಳಲ್ಲಿ ಪಥಸಂಚಲನ ನಡೆಸಲಾಯಿತು, 
    
ಪಥ ಸಂಚಲನದಲ್ಲಿ ಸುಧಾಕರ್‍ರೆಡ್ಡಿ, ಸಿ.ಪಿ.ಐ. ಮುಳಬಾಗಿಲು ವೃತ್ತ, ಭೈರ ಪಿ.ಎಸ್.ಐ. ಮುಳಬಾಗಿಲು ನಗರ ಪೊಲೀಸ್ ಠಾಣೆ, ಕೇಂದ್ರ ಮೀಸಲು ಪೊಲೀಸ್ ಪಡೆಯ ಸಬ್ ಇನ್ಸ್‍ಪೆಕ್ಟರ್  ಭೈರಾಗಿ ಸ್ವೈನ್ ಮತ್ತು ಸಿಬ್ಬಂದಿಯವರು ಭಾಗವಹಿಸಿದ್ದರು.

Read These Next

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...