ಕೋಲಾರ: ನಿಯಮಬಾಹಿರವಾಗಿ ಖಾಸಗಿ ಶಾಲೆಗೆ ಅನುಮತಿ; ರೈತಸಂಘದಿಂದ ಪ್ರತಿಭಟನೆ

Source: sonews | By sub editor | Published on 21st June 2018, 6:42 PM | State News | Don't Miss |

ಕೋಲಾರ , ಜೂ,20: ಶಿಕ್ಷಣ ಇಲಾಖೆಯ ಎಲ್ಲಾ ನಿಯಮಗಳನ್ನು  ಮೀರಿ ಪರವಾನಗಿ ಇಲ್ಲದೆ 150 ಶಾಲೆಗಳು ಜಿಲ್ಲೆಯಲ್ಲಿ ನಡೆಯುತ್ತಿದ್ದು, ಬಿ.ಇ.ಒ ಇಂದ ಡಿ.ಡಿ.ಪಿ.ಐ ವರೆಗೂ ಶಾಲೆಗೆ 10 ಲಕ್ಷ ಪಡೆದು ಅನದಿಕೃತವಾಗಿ ಶಾಲೆ ನಡೆಸಲು ಇಲಾಖೆಯ ಅಧಿಕಾರಿಗಳು ಖಾಸಗಿ ಶಾಲೆಗಳ ಗುಲಾಮರಾಗಿ ಡೊನೇಷನ್ ವಸೂಲಿಗೆ ಪ್ರೋತ್ಸಾಹ ನೀಡಿ ಅಕ್ರಮವೆಸೆಗುತ್ತಿರುವ ಅಧಿಕಾರಿಗಳ ಕಾರ್ಯವೈಕರ ಖಂಡಿಸಿ ಕೋಳಿಗಳ ಮೇಯಿಸಕ್ಕೂ ಇಲಾಖೆ ನಾಲಾಯಕ್ ಎಂದು ಡಿಡಿಪಿಐ ಕಚೇರಿ ಮುಂದೆ ಕೋಳಿಗಳನ್ನಿಟ್ಟು ಹೋರಾಟ ಮಾಡುವ ಮೂಲಕ  ಶಿಕ್ಷಣ ಇಲಾಖೆಯ ಗುಲಾಮಗಿರಿಯನ್ನು  ರೈತ ಸಂಘದಿಂದ  ಖಂಡಿಸಲಾಯಿತು. 

ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ ಖಾಸಗಿ ಶಾಲೆಗಳ ಮೂಲಭೂತ ಸೌಲಭ್ಯಗಳು, ಗುಣಮಟ್ಟ, ಶಿಕ್ಷಕರ ವಿದ್ಯಾಭ್ಯಾಸ, ಶಾಲೆಯ ಕಟ್ಟಡದ ಸ್ಥಳ, ಶಿಕ್ಷಣ ಇಲಾಖೆಯ ನಿಯಮಗಳನ್ನು ಅನುಸರಿಸದ ಎಲ್ಲಾ ಶಾಲೆಗಳ ಬಗ್ಗೆ ತನಿಖೆಯಾಗಬೇಕು. ಸರ್ಕಾರಿ ಶಾಲೆಗಳ ಮೂಲಭೂತ ಸೌಲಭ್ಯಗಳಿಗೆ ಬರುವ ಅನುಧಾನ ದುರುಪಯೋಗ ಬಗ್ಗೆ ತನಿಖೆಯಾಗಬೇಕು, ಕೋರ್ಟ್ ಆದೇಶವನ್ನು ಮೀರಿ ಹೆಚ್ಚಿನ ಶುಲ್ಕ ಪಡೆಯುತ್ತಿದ್ದು, ಶುಲ್ಕದ ದರ ಪಟ್ಟಿಯನ್ನು 4-10ರ ಅಳತೆಯಲ್ಲಿ ಖಾಸಗಿ ಶಾಲೆಗಳ ಮುಂದೆ ನಮೂದಿಸದ  ಸರ್ಕಾರಿ ಶುಲ್ಕಕ್ಕಿಂತ ಹೆಚ್ಚಿಗೆ ಪಡೆಯುವ ಶಾಲೆಯ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಮೂಲಭೂತ ಸೌಲಭ್ಯಗಳನ್ನು ಹೊಂದದ ಹಾಗೂ ನಿಯಮಗಳನ್ನು ಪಾಲಿಸದ ಶಾಲೆಗಳು ಮನಸ್ಸಿಗೆ ಬಂದಂತೆ  ಡೊನೇಷನ್ ಪಡೆಯುವ ಶಾಲೆಗಳ ಮಾನ್ಯತೆಯನ್ನು ರದ್ದು ಮಾಡಬೇಕು. ಆರ್.ಟಿ.ಇ ಸೀಟಿನ ಮಕ್ಕಳ ಬಳಿ ಶುಲ್ಕ ಪಡೆಯುವ ಶಾಲೆಗಳ ಬಗ್ಗೆ ಕ್ರಮ ಕೈಗೊಳ್ಳಬೇಕು. ಮತ್ತು ಪುಸ್ತಕ, ಬಟ್ಟೆ, ಬ್ಯಾಗ್, ಪೆನ್ನು ಇವುಗಳ ಹೆಸರಿನಲ್ಲಿ ಪೋಷಕರನ್ನು ಸುಲಿಗೆ ಮಾಡುವುದಲ್ಲದೆ ಜಿಲ್ಲೆಯ 150ಕ್ಕೂ ಹೆಚ್ಚು ಅನದಿಕೃತ ಶಾಲೆಗಳು ನಡೆಯುತ್ತಿದ್ದರೂ ಶಿಕ್ಷಣ ಇಲಾಖೆ ಅಧಿಕಾರಿಗಳು ಒಂದು ಶಾಲೆಗೆ 10 ಲಕ್ಷದಂತೆ ಲಂಚ ಪಡೆದು ಅನದಿಕೃತವಾಗಿ ನಡೆಯಲು ಪ್ರೋತ್ಸಾಹ ನೀಡುತ್ತಿದ್ದರೂ ಇದರ ಬಗ್ಗೆ ಕ್ರಮ ಕೈಗೊಳ್ಳಬೇಕಾದ ಇಲಾಖೆಯ ಅಧಿಕಾರಿಗಳು ಖಾಸಗೀ ಶಾಲೆಗಳ ಕಾವಲು ನಾಯಿಗಳಂತೆ ನಡೆದುಕೊಂಡು ಶಿಕ್ಷಣದ ಹೆಸರಿನಲ್ಲಿ ಲೂಟಿ ಮಾಡಲು ಹೊರಟಿರುವುದು ನಾಚಿಕೆಗೇಡು ಎಂದು ಆಕ್ರೋಶ ವ್ಯಕ್ತಪಡಿಸಿದರು.  

ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ ಮಾತನಾಡಿ ಮಕ್ಕಳನ್ನು ಕರೆದೊಯ್ಯುವ ವಾಹನಗಳಿಗೆ ಲಂಗು ಲಗಾಮು  ಇಲ್ಲದಾಗಿದ್ದು, ಇವುಗಳ ಆಜಾಗೃತೆ ಒಡಾಟದಿಂದ ಮಕ್ಕಳ ಪ್ರಾಣಕ್ಕೆ ಕುತ್ತಿದ್ದು, ಈ ವಾಹನಗಳ ತಪಾಸಣೆ ಮಾಡಿ ಕ್ರಮ ಕೈಗೊಳ್ಳಬೇಕು. ಶಿಕ್ಷಣ ಇಲಾಖೆಯ ಬಿ.ಇ.ಓಗಳು ಮತ್ತು ಸಿ.ಆರ್.ಪಿ.ಓ ಗಳು ಖಾಸಗಿ  ಶಿಕ್ಷಣ ಸಂಸ್ಥೆಗಳ  ಏಜೆಂಟರಂತೆ ವರ್ತಿಸುತ್ತಿದ್ದು,  ಖಾಸಗಿ ಶಾಲೆಗಳು ನೀಡುವ  ಹಣ ಜೇಬು ತುಂಬಿಸಿಕೊಳ್ಳುವ ಕಾಯಕ ಮಡಿಕೊಂಡು  ಡೋನೆಷನ್‍ಗೆ ಬೆಂಗವಾಲಾಗಿ ನಿಂತಿರುವ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಬೇಕು. ಸರ್ಕಾರಿ ಶಾಲೆಗಳಿಗೆ ಆಸ್ತಿಗಳು ಸಂಪೂರ್ಣ ಒತ್ತುವರಿಯಾಗಿದ್ದು, ಇವುಗಳ ಒತ್ತುವರಿ ತೆರವುಗೊಳಿಸಿ ಶಾಲೆಗೆ ಬರುವ ಅಭಿವೃದ್ದಿ ಹಣದ ಲೂಟಿಯನ್ನು ತಡೆಯಬೇಕು ಮತ್ತು ಶಿಕ್ಷಣ ಎಂಬುವುದು ವ್ಯಾಪಾರವಾಗಿದ್ದರೂ ಜಿಲ್ಲೆಯ ರಾಜಕಾರಣಿಗಳು ಮೌನವಾಗಿರುವುದು ನಾಚಿಕೆಗೇಡು ಎಂದು ಖಂಡಿಸಿದರು.
 ಮನವಿ ಸ್ವೀಕರಿಸಿ ಮಾತನಾಡಿದ ಉಪ ನಿರ್ದೇಶಕ ಕಚೇರಿಯ  ಖಾಸಗಿ ಶಾಲೆಗಳ ಡೋನೆಷನ್ ಹಾವಳಿಗೆ ಕಡಿವಾಣ ಹಾಕುವಲ್ಲಿ ವಿಪಲವಾಗಿರುವುದು ನಿಜ, ಆದರೆ ರಾಜಕೀಯ ಒತ್ತಡ ಮೇಲಾಧಿಕಾರಿಗಳ ಪ್ರೋತ್ಸಾಹ ಖಾಸಗೀ ಶಾಲೆಗಳಿಗಿರುವುದರಿಂದ ಅಸಹಾಯಕ ಸ್ಥಿತಿಯಲ್ಲಿದ್ದೇವೆ. ಶಿಕ್ಷಣ ಎಂಬುದು ವ್ಯಾಪಾರದ ವಸ್ತುವಾಗಿದೆ. ಇದಕ್ಕೆ ಮೊನ್ನೆ ಇಡೀ ಕುಟುಂಬ ಬಲಿಯಾಗಿರುವುದು ನೋವಿನ ಸಂಗತಿಯಾಗಿದೆ ಪರವಾನಗಿ ಇಲ್ಲದೆ ಜಿಲ್ಲೆಯಲ್ಲಿ ನೂರಾರು ಶಾಲೆ ನಡೆಯುತ್ತಿದ್ದರೂ ಹಾಗು ಡೊನೇಷನ್ ಸುಲಿಗೆಯಾಗುತ್ತಿದ್ದರೂ ಶಾಲೆಗಳ ತಂಟೆಗೆ ಹೋಗದಂತೆ ರಾಜಕಾರಣಿಗಳು ಮತ್ತು ಹಿರಿಯ ಅಧಿಕಾರಿಗಳ ಮುಖಾಂತರ ಒತ್ತಡ ತಂದು ಇಲಾಖೆಯ ಇದ್ದು ಇಲ್ಲದಂತಾಗಿದ್ದು, ಈ ಬಗ್ಗೆ   ಮನವಿಯಲ್ಲಿರುವ ಸಮಸ್ಯೆಗಳ ಪರಿಹಾರ ಕಂಡುಕೊಳ್ಳುವಂತೆ ಸಂಬಂದಪಟ್ಟ ಅದಿಕಾರಿಗಳು ಹಾಗೂ ಸಂಘಟನೆಗಳ ಸಭೆ ಕರೆದು ಚರ್ಚೆ ಮಾಡುವ ಭರವಸೆಯನ್ನು ನೀಡಿದರು.

ಈ ಹೋರಾಟದಲ್ಲಿ ಜಿಲ್ಲಾಧ್ಯಕ್ಷೆ ಎ.ನಳಿನಿ, ಜಿಲ್ಲಾದ್ಯಕ್ಷ ಮರಗಲ್ ಶ್ರೀನಿವಾಸ್, ಜಿಲ್ಲಾ ಸಂಚಾಲಕರು ಕೆ.ಶ್ರೀನಿವಾಸಗೌಡ, ಚಂಬೆ ರಾಜೇಶ್, ಸಾಗರ್, ಸುಪ್ರೀಂಚಲ, ಆಟೊ ಮಂಜುನಾಥ್, ಶಿವು, ನಾರಾಯಣ್, ಶೇಷು, ಮುದುವಾಡಿ ಚಂದ್ರಪ್ಪ, ಬಾಲು, ಪುರುಷೋತ್ತಮ್, ಮಂಗಸಂದ್ರ ರವಿ, ನಾಗೇಶ್, ಪುತ್ತೇರಿ ರಾಜು, ಮುರಳಿ, ಬರಾತ್‍ಬೂಷಣ್ ಮತ್ತಿತರರು ಉಪಸ್ಥಿತರಿದ್ದರು.
 

Read These Next

ಹಿರಿಯ ಸ್ವಾತಂತ್ರ‍್ಯ ಹೋರಾಟಗಾರ ಖ್ಯಾತ ಸಾಹಿತಿ ಕೋ.ಚೆನ್ನಬಸ್ಸಪ್ಪನವರು ಇನ್ನಿಲ್ಲ

ಬೆಂಗಳೂರು: ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ನಿವೃತ್ತ ನ್ಯಾಯಾಧಿಶ, ಕನ್ನಡದ ಖ್ಯಾತ ಸಾಹಿತಿ, ಚಿಂತಕ, ಕನ್ನಡದ ಸಾಕ್ಷಿ ಪ್ರಜ್ಞೆ ಎಂದೇ ...

ಬಯಲು ಸೀಮೆಯ ಹಾಲು ಒಕ್ಕೂಟದ ಭ್ರಷ್ಟಚಾರ ಹಾಗೂ ನೇಮಕಾತಿಗಳಲ್ಲಿ ಆಗಿರುವ ಹಗರಣವನ್ನು  ಸಿ.ಬಿ.ಐಗೆ ಒಪ್ಪಿಸುವಂತೆ ರೈತಸಂಘ ಆಗ್ರಹ

ಕೋಲಾರ: ಬಯಲು ಸೀಮೆಯ ಹಾಲು ಒಕ್ಕೂಟದ ಬ್ರಹ್ಮಾಂಡ ಭ್ರಷ್ಟಚಾರ ಹಾಗೂ ನೇಮಕಾತಿಗಳಲ್ಲಿ ಆಗಿರುವ ಹಗರಣವನ್ನು  ಸಿ.ಬಿ.ಐಗೆ ಒಪ್ಪಿಸಬೇಕು ...

ಹಿರಿಯ ಸ್ವಾತಂತ್ರ‍್ಯ ಹೋರಾಟಗಾರ ಖ್ಯಾತ ಸಾಹಿತಿ ಕೋ.ಚೆನ್ನಬಸ್ಸಪ್ಪನವರು ಇನ್ನಿಲ್ಲ

ಬೆಂಗಳೂರು: ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ನಿವೃತ್ತ ನ್ಯಾಯಾಧಿಶ, ಕನ್ನಡದ ಖ್ಯಾತ ಸಾಹಿತಿ, ಚಿಂತಕ, ಕನ್ನಡದ ಸಾಕ್ಷಿ ಪ್ರಜ್ಞೆ ಎಂದೇ ...

ಸುಸೂತ್ರವಾಗಿ ಆರಂಭಗೊಂಡ ಐಸಿಎಸ್‍ಇ ಪರೀಕ್ಷೆ; ಮೊದಲ ದಿನ ಎಲ್ಲ ವಿದ್ಯಾರ್ಥಿಗಳು ಹಾಜರು

ಭಟ್ಕಳ: ಇದೇ ಪ್ರಥಮ ಬಾರಿಗೆ ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಹೆಬಳೆ ಪಂಚಾಯತ್ ವ್ಯಾಪ್ತಿಯಲ್ಲಿರುವ ನ್ಯೂ ಶಮ್ಸ್ ಸ್ಕೂಲ್ ...