ಕೋಲಾರ ಜಿಲ್ಲಾ ಕಾಂಗ್ರೇಸ್ ಮಹಿಳಾ ಘಟಕದ ಪದಾಧಿಕಾರಿಗಳ ನೇಮಕ

Source: sonews | By sub editor | Published on 5th April 2018, 11:09 PM | State News |

ಕೋಲಾರ:    ಕೋಲಾರ ಜಿಲ್ಲಾ ಕಾಂಗ್ರೇಸ್ ಸಮಿತಿ ಕಾರ್ಮಿಕ ಘಟಕ ಮಹಿಳಾ ವಿಭಾಗದ ಸಭೆ   ಜಿಲ್ಲಾಧ್ಯಕ್ಷೆ ನಜೀಬುನ್ನೀಸಾ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಜಿಲ್ಲಾ ಹಾಗೂ ವಿವಿಧ ತಾಲೂಕು   ಪದಾಧಿಕಾರಿಗಳ ಆಯ್ಕೆಯನ್ನು ಮಾಡಲಾಯಿತು.
    
ಸಂಸದ ಕೆ.ಹೆಚ್.ಮುನಿಯಪ್ಪ, ಜಿಲ್ಲಾಧ್ಯಕ್ಷ ಕೆ.ಚಂದ್ರಾರೆಡ್ಡಿ, ಕೆ.ಪಿ.ಸಿ.ಸಿ ಕಾರ್ಮಿಕ ಘಟಕದ ರಾಜ್ಯಾಧ್ಯಕ್ಷ ಡಾ.ಎಸ್.ಎಸ್. ಪ್ರಕಾಶಂ, ಕೆ.ಪಿ.ಸಿ.ಸಿ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಕೆ.ವಿ.ಸುರೇಶ್‍ಕುಮಾರ್, ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಎಲ್.ಉಮಾದೇವಿ, ರಾಜ್ಯ ಕಾರ್ಯದರ್ಶಿ ಮಮತ ರವರ ಆದೇಶದ ಮೆರೆಗೆ ನಗರದ ಕಾಂಗ್ರೇಸ್ ಭವನದಲ್ಲಿ ಸಭೆ ನಡೆಸಿ ಮಹಿಳಾ ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
    
ಕೋಲಾರ ಜಿಲ್ಲಾ ಕಾಂಗ್ರೇಸ್ ಮಹಿಳಾ ಘಟಕ ಕಾರ್ಮಿಕ ವಿಭಾಗದ ಉಪಾಧ್ಯಕ್ಷರಾಗಿ ಜಯನಗರದ ಎನ್.ಯಶೋಧಮ್ಮ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಗದ್ದೆಕಣ್ಣೂರು ವಿ.ಎಸ್.ಆಯೇಷಾ, ಕಾರ್ಯದರ್ಶಿಗಳಾಗಿ ಹೊಗರಿ ಎನ್.ವರಲಕ್ಷ್ಮಿ, ಕುರುಬರಪೇಟೆ ಗಿರಿಜಮ್ಮ,  ಕಾರ್ಮಿಕ ವಿಭಾಗದ ಮುಳಬಾಗಿಲು ತಾಲೂಕು ಅಧ್ಯಕ್ಷೆಯಾಗಿ ಸಾದಿಯಾ ಸುಲ್ತಾನ, ಕೋಲಾರ ತಾಲೂಕು ಅಧ್ಯಕ್ಷರಾಗಿ ಮಿಲ್ಲತ್‍ನಗರದ ಷಮೀಮ್ ಉನ್ನೀಸಾ, ಬಂಗಾರಪೇಟೆ ತಾಲೂಕು ಅಧ್ಯಕ್ಷರಾಗಿ ಸೌಭಾಗ್ಯಲಕ್ಷ್ಮಿ ರವರನ್ನು ಆಯ್ಕೆ ಮಾಡಲಾಗಿದೆ.
    
ಈ ಸಂದರ್ಭದಲ್ಲಿ ಆಯ್ಕೆಯಾದ ಪದಾಧಿಕಾರಿಗಳಿಗೆ ಆದೇಶಪತ್ರಗಳನ್ನು ನೀಡಿ ಮಾತನಾಡಿದ ಕೋಲಾರ ಜಿಲ್ಲಾ ಕಾಂಗ್ರೇಸ್ ಕಾರ್ಮಿಕ ಘಟಕದ ಮಹಿಳಾ ವಿಭಾಗದ ಜಿಲ್ಲಾಧ್ಯಕ್ಷೆ ನಜೀಬುನ್ನೀಸಾ ಜಿಲ್ಲಾದ್ಯಂತ ಕಾಂಗ್ರೇಸ್ ಪಕ್ಷವನ್ನು ಬಲಿಷ್ಟಗೊಳಿಸಲು ಪ್ರಾಮಾಣಿಕವಾಗಿ ಇಂದಿನಿಂದಲೇ ಕಾರ್ಯೋನ್ಮಖರಾಗುವಂತೆ ಅವರು ತಿಳಿಸಿದರು.


 

Read These Next

ಶುಕ್ರವಾರದ ನಮಾಝ್ ನಲ್ಲಿ ಮುಸ್ಲಿಮ್ ಸಮುದಾಯದಿಂದ ಹುತಾತ್ಮ ಯೋಧರಿಗಾಗಿ ವಿಶೇಷ ಪ್ರಾರ್ಥನೆ ​​​​​​​

ಉಡುಪಿ: ಕಾಶ್ಮೀರದ ಪುಲ್ವಾಮ ಜಿಲ್ಲೆಯ ಅವಂತಿಪೋರದಲ್ಲಿ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಯೋಧರಿಗಾಗಿ ಗಂಗೊಳ್ಳಿ ...