ಆರ್ ಟಿ ಐ ನಿರ್ಲಕ್ಷ್ಯ:  ಕ್ಷೇತ್ರಶಿಕ್ಷಣಾಧಿಕಾರಿ ಗೆ ದಂಡ

Source: sonews | By Staff Correspondent | Published on 13th February 2018, 3:33 PM | State News |

ಕೋಲಾರ: ಆರ್ ಟಿ ಐ ಅರ್ಜಿಗೆ ಸಕಾಲದಲ್ಲಿ ಮಾಹಿತಿ ನೀಡದ ತಾಲೂಕಿನ ನಿರ್ಗಮಿತ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಜಗದೀಶ್ ರಿಗೆ ರಾಜ್ಯ ಮಾಹಿತಿ ಹಕ್ಕು ಆಯೋಗ ಮೂರು ಸಾವಿರ  ರೂಪಾಯಿಗಳ ದಂಡವನು ವಿಧಿಸಿದೆ.

ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಯಾಗಿದ್ದ ಬಿ.ಜಗದೀಶ್ ರ ಕಾರ್ಯವೈಖರಿ ಕುರಿತಂತೆ ಶ್ರೀನಿವಾಸಪುರ ಆರ್ ಟಿ ಐ ಮಾಹಿತಿ ಕಾರ್ಯಕರ್ತ ಶಬ್ಬೀರ್ ಆಹಮದ್ ಸುಮಾರು ಎರಡು ವರ್ಷಗಳ ಹಿಂದೆ ಮಾಹಿತಿ ಹಕ್ಕು ಆರ್ಜಿ ಸಲ್ಲಿಸಿದರು. ಅದರೆ ಕ್ಷೇತ್ರ ಶಕ್ಷಣಾಧಿಕಾರಿ ಬಿ.ಜಗದೀಶ್ ಈ ಅರ್ಜಿಯನ್ನು ನಿರ್ಲಕ್ಷಿಸಿದ್ದರು  ಈ ಕುರಿತು ಶಬ್ಬೀರ್ ಆಹಮದ್ ಮೇಲ್ಮನವಿ ಪ್ರಾಧಿಕಾರಕ್ಕೊ  ಅರ್ಜಿಯನ್ನು ಸಲ್ಲಿಸಿದ್ದರು. ಮೇಲ್ಮನವಿ  ಪ್ರಾಧಿಕಾರವು ಅರ್ಜಿದಾರರು ಕೇಳಿರುವ  ಮಾಹಿತಿಯನ್ನು ನೀಡುವಂತೆ ಸುಚಿಸಿದತ್ತು ಆದರೆ, ಕ್ಷೇತ್ರ  ಶಿಕ್ಷಣಾಧಿಕಾರಿ ಬಿ. ಜಗದೀಶ್ ಆದೇಶವನು ಪಾಲಿಸಿರಲಿಲ್ಲ ಈ ಹಿನ್ನೆಲೆಯಲ್ಲಿ  ಮಾಹಿತಿ ಹಕ್ಕು ಆಯೋಗಕ್ಕೆ ದೂರ ಸಲ್ಲಿಸಲಾಗಿತು. ಲಭ್ಯ  ಇದ್ದ ಮಾಹಿತಿ  ನೀಡಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಆಯೋಗವು ಪ್ರತಿವಾದಿಯು ಉದ್ದೇಶಪೂರ್ವಕವಾಗಿ ಅರ್ಜಿದಾರರಿಗೆ ಮಾಹಿತಿ ಒದಗಿಸಿರುವುದಿಲ್ಲವೆಂದು  ಪರಿಗಣಿಸಿ ಮಾಹಿತಿ ಹಕ್ಕು ಅಧಿನಿಯಮ 2005 ಕಲಂ 20 (1) ರನ್ವಯ ತನಗೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಪ್ರತಿವಾದಿಯದ ಬಿ. ಜಗದೀಶ್ ಹಿಂದಿನ  ಕ್ಷೇತ್ರ  ಶಿಕ್ಷಣಾಧಿಕಾರಿ ಕೋಲಾರ 

ಪ್ರಸ್ತುತ ಉಪನ್ಯಾಸಕರು  ಸರಕಾರಿ ಶಿಕ್ಷಣ, ಶಿಕ್ಷಣ ಮಹಾವಿದ್ಯಾಲಯ ವಸಂತಮಹಲ್  ಮೈಸೂರು ಸಂಸ್ಥೆಯಲ್ಲಿ  ಉಪನ್ಯಾಸಕರು  ಆಗಿರುವ ಬಿ. ಜಗದೀಶ್ ರಿಗೆ ರೂ 3 ಸಾವಿರ ದಂಡವನು ವಿಧಿಸಿದೆ. ಈ ದಂಡ ಮೊತ್ತ  ಸರ್ಕಾರದ ಲೆಕ್ಕ ಶೀರ್ಷಿಕೆ Head of Account 0070-60-118-0-03- Penalties under the Act under New minor 0070-60-118-0-00-receipts under the RTI Act ಪಾವತಿಸಿ ರಸೀದಿಯ ನಕಲು ಪ್ರತಿಯನ್ನು ಆಯೋಗದ ಕಾರ್ಯದರ್ಶಿಗಳಾದ ಡಾ ಸುನೀಲ್ ಪನ್ವಾರ್ ರವರಿಗೆ ಸಲ್ಲಿಸಿಬೇಕೆಂದು ಆಯೋಗ ಅದೇಶದಲ್ಲಿ ಸೂಚಿಸಿದೆ

Read These Next

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...