1.25 ಕೋಟಿ ವೆಚ್ಚದಲ್ಲಿ ಶಾಲಾ ಕೊಠಡಿಗಳ ನಿರ್ಮಾಣ – ರಾಜೇಂದ್ರ

Source: sonews | By sub editor | Published on 3rd April 2018, 12:53 AM | State News | Don't Miss |

ಕೋಲಾರ : 30 ಜುಲೈ 2018ರ ಒಳಗೆ ನೂತನ ಕಟ್ಟಡವನ್ನು ನೀಡುವುದಾಗಿ ಬೆಂಗಳೂರಿನ ಸ್ಯಾಮ್‍ಸಂಗ್ ಪೈನಾನ್ಸ್ ಮುಖ್ಯಸ್ಥರಾದ ರಾಜೇಂದ್ರ ರವರು ತಿಳಿಸಿದರು.

ಅವರು ಇಂದು ತಾಲ್ಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೆಂಬೋಡಿಯಲ್ಲಿ ನೂತನ ಕಟ್ಟಡ ಕಟ್ಟಲು ಭೂಮಿ ಪೂಜೆಯನ್ನು ನೆರವೇರಿಸಿ ಮಾತನಾಡುತ್ತಿದ್ದರು. ಇಲ್ಲಿ ಸುಮಾರು ವರ್ಷಗಳ ಹಳೆಯದಾದ ಕಟ್ಟಡವು ಬಿದ್ದು ಹೋಗಿದ್ದು, ವಿದ್ಯಾರ್ಥಿಗಳಿಗೆ ವ್ಯಾಸಂಗ ಮಾಡಲು ತೊಂದರೆಯನ್ನು ಕಂಡ ಸ್ಯಾಮ್‍ಸಂಗ್ ಗ್ರೂಪ್ಸ್ ಕಂಪನಿ ಮತ್ತು ಗೆಳೆಯರ ಬಳಗದ ಪದಾಧಿಕಾರಿಗಳು ಒಟ್ಟಾಗಿ ಚರ್ಚೆ ಮಾಡಿ ಸುಮಾರು 1.25 ಕೋಟಿ ವೆಚ್ಚದಲ್ಲಿ ಏಳು ಕೊಠಡಿಗಳನ್ನು ಆಧುನಿಕ ರೀತಿಯಲ್ಲಿ ಕಟ್ಟಿಕೊಡಲು ಒಪ್ಪಿಕೊಂಡಿರುತ್ತಾರೆ. ಈ ಸಂಬಂಧ ಈ ಹಿಂದೆಯೇ ಇಲಾಖಾ ಅಧಿಕಾರಿಗಳೊಂದಿಗೆ ಹಾಗೂ ಊರಿನ ಎಸ್.ಡಿ.ಎಂ.ಸಿ. ಮತ್ತು ಜನಪ್ರತಿನಿಧಿಗಳೊಂದಿಗೆ ಚರ್ಚಿಸಿರುತ್ತಾರೆ. ಇಂದು ಸ್ಯಾಮ್‍ಸಂಗ್ ಪೈನಾನ್ಸ್ ಮುಖ್ಯಸ್ಥರು ಹಾಗೂ ಇತರ ಅಧಿಕಾರಿಗಳೊಂದಿಗೆ  ಭೂಮಿ ಪೂಜೆಯನ್ನು ನೆರವೇರಿಸುತ್ತಾ ಅವರ ಗ್ರೂಪ್‍ನವರೇ ಕಟ್ಟಡ ನಿರ್ಮಾಣದ ಹೊಣೆಯನ್ನು ಹೊತ್ತುಕೊಂಡಿರುವುದಾಗಿ ತಿಳಿಸಿದರಲ್ಲದೆ ಗುಣಮಟ್ಟದ ಕಟ್ಟಡವನ್ನು ನಿರ್ಮಿಸುವುದಾಗಿ ತಿಳಿಸಿದರು.
    
68 ಲಕ್ಷ ವೆಚ್ಚದಲ್ಲಿ ಕೆಲವು ಸರ್ಕಾರಿ ಹಿರಿಯ/ಪ್ರೌಢ ಶಾಲೆಗಳಿಗೆ ಶುದ್ಧ ನೀರನ್ನು ಕೊಡುವ ಸಲುವಾಗಿ ಫಿಲ್ಟರ್‍ಗಳನ್ನು ಸಹ ನೀಡಿದ್ದು, ಅದನ್ನು ಶಿಕ್ಷಕರು ಒಳ್ಳೆಯ ರೀತಿಯಲ್ಲಿ ಸದುಪಯೋಗಪಡಿಸಿಕೊಂಡು ಮಕ್ಕಳಿಗೆ ಶುದ್ಧ ಕುಡಿಯುವ ನೀರನ್ನು ನೀಡಬೇಕೆಂದು ತಿಳಿಸಿದರು. ಜೊತೆಗೆ ನಾವು ನೀಡುವ ಎಲ್ಲಾ ಸೌಲತ್ತುಗಳನ್ನು ಬಳಸಿಕೊಳ್ಳುವುದರ ಜೊತೆಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಶಿಕ್ಷಕರು ನೀಡುವುದರಿಂದ ಮಕ್ಕಳ ಭವಿಷ್ಯವು ಬದಲಾಗುವುದಲ್ಲದೆ ಅವರೂ ಸಹ ಮುಂದೊಂದು ದಿನ ಸಮಾಜಕ್ಕೆ ಉತ್ತಮ ಕೊಡುಗೆಯನ್ನು ನೀಡಬಲ್ಲರು ಎಂದರು.
     
ಈ ಸಂದರ್ಭದಲ್ಲಿ ಸ್ಯಾಮ್‍ಸಂಗ್ ಪೈನಾನ್ಸ್ ಗ್ರೂಪಿನ ಸಂತೋಷ್, ರಾಧಾಕೃಷ್ಣ, ಆನಂದ್, ಇಲಾಖೆಯ ಶಿಕ್ಷಣ ಸಂಯೋಜಕ ಆರ್. ಶ್ರೀನಿವಾಸನ್, ಸಿ.ಆರ್.ಪಿ. ಸುಜಾತ, ಬಸವರಾಜ್, ಭಡ್ತಿ ಮುಖ್ಯಶಿಕ್ಷಕರ ಸಂಘದ ಉಪಾಧ್ಯಕ್ಷ ಜಿ. ಶ್ರೀನಿವಾಸ್, ಗ್ರಾಮ ಪಂಚಾಯಿತಿ ಸದಸ್ಯ ಚಲಪತಿ, ಎಸ್.ಡಿ.ಎಂ.ಸಿ. ಅಧ್ಯಕ್ಷ ನಾಗೇಶ್  ಗೆಳೆಯರ ಬಳಗದ ಪದಾಧಿಕಾರಿಗಳಾದ ಎಸ್.ನಾರಾಯಣಸ್ವಾಮಿ, ಈರಣ್ಣಗೌಡ, ಚಂದ್ರಪ್ಪ, ಮುಖ್ಯಶಿಕ್ಷಕಿ ಚೌಡಮ್ಮ, ಮುನಿಸ್ವಾಮಿ, ಶೋಭ, ವೇದಾವತಿ, ಚಂದ್ರಿಕಾ, ವೈ.ಜಯಂತಿ, ಸರಸ್ಪತಿ ಮುಂತಾದವರು ಉಪಸ್ಥಿತರಿದ್ದರು.
            
                                    

Read These Next

ಶುಕ್ರವಾರದ ನಮಾಝ್ ನಲ್ಲಿ ಮುಸ್ಲಿಮ್ ಸಮುದಾಯದಿಂದ ಹುತಾತ್ಮ ಯೋಧರಿಗಾಗಿ ವಿಶೇಷ ಪ್ರಾರ್ಥನೆ ​​​​​​​

ಉಡುಪಿ: ಕಾಶ್ಮೀರದ ಪುಲ್ವಾಮ ಜಿಲ್ಲೆಯ ಅವಂತಿಪೋರದಲ್ಲಿ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಯೋಧರಿಗಾಗಿ ಗಂಗೊಳ್ಳಿ ...

ಉ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಅರಣ್ಯ ಪರಿಸ್ಥಿತಿ ಕುರಿತ ರಾಜ್ಯ ಮಟ್ಟದ ವಿಚಾರ ಸಂಕೀರಣ

ಭಟ್ಕಳ: ಪರಿಸರ ಪರಿಸ್ಥಿತಿ, ಸಂರಕ್ಷಣೆ, ಸವಾಲು ಹಾಗೂ ಪರಿಹಾರದ ಬಗ್ಗೆ ಹಮ್ಮಿಕೊಂಡಿದ್ದ ಕಾರ್ಯಾಗಾರದಿಂದ ಜನರು ತಮ್ಮಲ್ಲಿನ ಪರಿಸರದ ...

ಹೆದ್ದಾರಿ ಅಗಲಿಕರಣ; 45ಮೀ ವಿಸ್ತರಣೆಗೆ ಆಗ್ರಹಿಸಿ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ

ಭಟ್ಕಳ: ತಾಲೂಕಿನ ಶಿರಾಲಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ 66 ಅಗಲೀಕರಣವನ್ನು 30 ಮೀಟರ್‍ಗೆ ಸೀಮಿತಗೊಳಿಸುವ ...

ಸದಸ್ಯರ ಪ್ರಶ್ನೆಗೆ ಉತ್ತರಿಸಲಾಗದೆ ಸಭೆಯಿಂದ ಹೊರನಡೆದ ಪಂಚಾಯತ್ ಅಭಿವೃದ್ಧಿ ಅಧಿಕಾರಿ

ಭಟ್ಕಳ: ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಸದಸ್ಯರ ಪ್ರಶ್ನೆಯೊಂದಕ್ಕೆ ಉತ್ತರಿಸಲಾಗದೇ ಗ್ರಾಮ ಪಂಚಾಯತ್  ಪಂಚಾಯತ್ ಅಭಿವೃದ್ದಿ ...