ಕೋಲಾರ: ಎಲ್‍ಎಂವಿ ವಾಹನ ಚಾಲನೆ ತರಬೇತಿ ನೀಡಲು ಸಂಸ್ಥೆಗಳಿಂದ ಅರ್ಜಿ ಆಹ್ವಾನ 

Source: shabbir | By Arshad Koppa | Published on 23rd November 2017, 8:28 AM | State News |

ಕೋಲಾರ, ಅಕ್ಟೋಬರ್ 21:        ಬಂಗಾರಪೇಟೆ ಪುರಸಭೆ ವ್ಯಾಪ್ತಿಯಲ್ಲಿ ಒಟ್ಟು 20 ಜನರಿಗೆ ಆರ್‍ಟಿಓ ರಿಜಿಸ್ಟ್ರರ್ ಎಲ್‍ಎಂವಿ ಡ್ರೈವಿಂಗ್ ಶಾಲೆಗಳಿಂದ ತರಬೇತಿಯನ್ನು ನೀಡಲು ಆರ್ಹ ಆಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು ತರಬೇತಿ ನೀಡಲು ಇಚ್ಚೆಯುಳ್ಳವರು ಪ್ರಸ್ತಾವನೆ ಸಲ್ಲಿಸಬಹುದಾಗಿದೆ.  
    ತರಬೇತಿ ನೀಡಲು ಇಚ್ಚೆಯುಳ್ಳಂತವರು ದಿನಾಂಕ: 30-11-2017 ಸಂಜೆ 5 ಗಂಟೆಯೊಳಗೆ ತಮ್ಮ ಆರ್ಹತೆಯನ್ನು ಸಾಭೀತುಪಡಿಸುವಂತಹ ಎಲ್ಲಾ ದೃಢೀಕೃತ ದಾಖಲೆಗಳೊಂದಿಗೆ ಪ್ರಸ್ತಾವನೆಯನ್ನು ಬಂಗಾರಪೇಟೆ ಪುರಸಭೆ ಮುಖ್ಯಾಧಿಕಾರಿಗಳಿಗೆ ಸಲ್ಲಿಸಬೇಕು. 
         ಪ್ರತಿ ಫಲಾನುಭವಿಗೆ ನಿಗದಿಪಡಿಸಿರುವ ಗರಿಷ್ಠ ತರಬೇತಿ ವೆಚ್ಚ ರೂ 4,750/- ಗಳಾಗಿದ್ದು, ಸದರಿ ಮೊತ್ತ ಅಥವಾ ಸದರಿ ಮೊತ್ತಕ್ಕಿಂತ ಕಡಿಮೆ ಧರಗಳನ್ನು ನಮೂದಿಸಿರುವ ಮತ್ತು ಆರ್ಹತೆ ಇರುವ ತರಬೇತಿ ಸಂಸ್ಥೆಯನ್ನು ಆಯ್ಕೆಮಾಡಿಕೊಳ್ಳಲಾಗುವುದು. ಹೆಚ್ಚಿನ ಮಾಹಿತಿಗಾಗಿ ಬಂಗಾರಪೇಟೆ ಪುರಸಭೆ ಮುಖ್ಯಾಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ.


ಕೋಲಾರ:ಕೃಷಿ ಯಂತ್ರೋಪಕರಣ ಸೇವಾ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ
ಕೋಲಾರ, ಅಕ್ಟೋಬರ್ 21 :        ಗ್ರಾಮೀಣ ಯುವಕರನ್ನು ಕೃಷಿಯ ಕಡೆಗೆ ಆಕರ್ಷಿಸಲು ಮತ್ತು ಸ್ಥಳೀಯವಾಗಿ ಸಣ್ಣ ಕೃಷಿ ಉಪಕರಣಗಳ ತಯಾರಿಕೆ ಸೌಲಭ್ಯದೊಂದಿಗೆ ಕೃಷಿ ಯಂತ್ರಗಳ ಬಳಕೆಯನ್ನು ಪ್ರೋತ್ಸಾಹಿಸಲು ಮತ್ತು ಯುವ ರೈತರನ್ನು ಕೃಷಿಯಲ್ಲೇ ಉಳಿಸಿಕೊಳ್ಳಲು ಅವರಿಗೆ ಉದ್ಯೋಗವಕಾಶ ಸೃಷ್ಠಿಸುವ ನಿಟ್ಟಿನಲ್ಲಿ ಗ್ರಾಮೀಣ ಕೃಷಿ ಯಂತ್ರೋಪಕರಣ/ಸೇವಾ ಕೇಂದ್ರಗಳ ಸ್ಥಾಪನೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. 
        ಕೇಂದ್ರಗಳಲ್ಲಿ ಟ್ಯಾಕ್ಟರ್, ಪವರ್‍ಟಿಲ್ಲರ್, ಪಂಪ್ ಸೆಟ್, ಸಸ್ಯ ಸಂರಕ್ಷಣಾ ಉಪಕರಣಗಳು, ಸೂಕ್ಷ್ಮ ನೀರಾವರಿ ಘಟಗಳನ್ನು ಮತ್ತು ಬೋರ್‍ವೆಲ್‍ಗಳ ದುರಸ್ಥಿಗಳನ್ನೊಳಗೊಂಡಂತೆ ಕೃಷಿ ಚಟುವಟಿಕೆಗಳ ಬೇಕಾದ ಎಲ್ಲಾ ಯಂತ್ರೋಪಕರಣಗಳ ದುರಸ್ಥಿಯನ್ನು ಮಾಡಲಾಗುವುದು.
    ಸೇವಾ ಕೇಂದ್ರ ಸ್ಥಾಪನೆಗೆ ಕೃಷಿ ಇಂಜನಿಯರಿಂಗ್‍ನಲ್ಲಿ ಡಿಪ್ಲಾಮೋ ಹೊಂದಿರುವವರಿಗೆ ಮೊದಲ ಆದ್ಯತೆ ನೀಡಲಾಗುವುದು. ನಂತರ ಕ್ರಮವಾಗಿ ಕೃಷಿಯಲ್ಲಿ ಡಿಪ್ಲಮೋ, ಆಟೋಮೋಬೈಲ್‍ನಲ್ಲಿ ಡಿಪ್ಲಮೋ, ಮೆಕ್ಯಾನಿಕಲ್ ಡಿಪ್ಲಮೋ, ಐಟಿಐ ಹಾಗೂ ಪಿಯುಸಿ ತೇರ್ಗಡೆ ಹೊಂದಿದವರಿಗೆ ಆದ್ಯತೆ ನೀಡಲಾಘುವುದು.
ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ಶೇಕಡಾ 50 ರಷ್ಟು ಗರಿಷ್ಟ ರೂ 5 ಲಕ್ಷಗಳು ಮತ್ತು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಫಲಾನುಭವಿಗಳಿಗೆ ಶೇಕಡಾ 75 ರಷ್ಟು ಅಥವಾ ಗರಿಷ್ಟ 7.50 ಲಕ್ಷಗಳ ಮಿತಿಯೊಳಗೆ ಇವರೆಡರಲ್ಲಿ ಯಾವುದು ಕಡಿಮೆಯೋ ಅದನ್ನು ಸಹಾಯಧನವಾನ್ನಾಗಿ ಬ್ಯಾಂಕ್ ಲೋನ್ ಆಧಾರದ ಮೇರೆಗೆ ಒಂದು ಬಾರಿ ಮಾತ್ರ (ಬ್ಯಾಕ್ ಎನ್‍ಡೆಂಡ್ ಸಬ್ಸಿಡಿ) ನೀಡಲಾಗುವುದು. ಅಭ್ಯರ್ಥಿಗಳ ವಯಸ್ಸು ಕನಿಷ್ಟ 18 ವರ್ಷ ಮತ್ತು ಗರಿಷ್ಟ 45 ವರ್ಷ ಮೀರಿರಬಾರದು. ಈ ಯೋಜನೆಗೆ ಸ್ಥಳೀಯರಿಗೆ ಆದ್ಯತೆ ನೀಡಲಾಗುವುದು
      ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿದ ಅರ್ಜಿಗಳನ್ನು ದಿನಾಂಕ: 28-11-2017 ರ ಸಾಯಂಕಾಲ 5.00 ಗಂಟೆಯೊಳಗಾಗಿ ಸಂಬಂಧಿಸಿದ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಸಲ್ಲಿಸಲು ಕೋರಿದೆ. 
ಹೆಚ್ಚಿನ ಮಾಹಿತಿ ಹಾಗೂ ಅರ್ಜಿ ನಮೂನೆಗಳಿಗಾಗಿ ಸಂಬಂಧಪಟ್ಟ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರುಗಳ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಶಿವಕುಮಾರ್ ತಿಳಿಸಿದ್ದಾರೆ.

Read These Next