ಕೋಲಾರ: ಪಿಲಿಪೀನ್ಸ್ ನಲ್ಲಿ ನಡೆಯಲಿರುವ ಏಷ್ಯಾ ಚಾಂಪಿಯನ್‍ಷಿಪ್ ನಲ್ಲಿ ಭಾಗವಹಿಸಲಿರುವ ಎ.ವಿ. ರವಿ

Source: shabbir | By Arshad Koppa | Published on 10th September 2017, 8:51 AM | State News | Sports News |

ಕೋಲಾರ.ಸೆ,9: ನಗರದ ಅಂತರಾಷ್ಟ್ರೀಯ ದೇಹದಾಢ್ರ್ಯ ಪಟು ಎ.ವಿ ರವಿ ರವರು ಪಿಲಿಪೀನ್ಸ್ ನಲ್ಲಿ ನಡೆಯಲಿರುವ ಏಷ್ಯಾ ಚಾಂಪಿಯನ್‍ಷಿಫ್, ಹಾಗೂ ಅಮೇರಿಕಾದಲ್ಲಿ ನಡೆಯಲಿರುವ ನ್ಯಾಚುರಲ್ ವಿಶ್ವ ಚಾಂಪಿಯನ್‍ಶಿಫ್ ಸ್ವರ್ಧೆಯಲ್ಲಿ ಮಾಸ್ಟರ್ ಕ್ಲಾಸ್ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
    
ಕೋಲಾರದ ಎ.ವಿ.ರವಿ ವಿದ್ಯಾರ್ಥಿ ದಿಸೆಯಿಂದಲೇ ದೇಹದಾಢ್ರ್ಯ ಸ್ವರ್ಧೆಗಳಲ್ಲಿ ಭಾಗವಹಿಸುತ್ತಾ 100 ಕ್ಕೂ ಹೆಚ್ಚು ರಾಷ್ಟ್ರೀಯ, ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ. ಸಿನಿಮಾ ನಟರು ಆಗಿರುವ ಇವರು ಕನ್ನಡ ಮತ್ತು ತೆಲಗು ಚಿತ್ರಗಳಲ್ಲಿ ನಟಿಸಿ ಜನಪ್ರಿಯರಾಗಿದ್ದಾರೆ. ಪ್ರಸ್ತುತ ಇವರು ಆದಾಯ ತೆರಿಗೆ ಇಲಾಖೆಯಲ್ಲಿ ಇನ್ಸ್‍ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
    
ಉದ್ದೀಪನಾ ಮದ್ದು ಸೇವಿಸಿ ದೇಹವನ್ನು ಬೆಳೆಸಿಕೊಳ್ಳುವುದನ್ನು ಪ್ರಬಲವಾಗಿ ವಿರೋಧಿಸುವ ಎ.ವಿ.ರವಿ ರವರು ನೈಸರ್ಗಿಕ ಆಹಾರವನ್ನು ಸೇವಿಸಿ ದೇಹವನ್ನು ಕಟ್ಟುಮಸ್ತುಗೊಳಿಸುವಲ್ಲಿ ವಿಶ್ವದಲ್ಲೇ ಜನಪ್ರಿಯರಾಗಿದ್ದಾರೆ.
    
52ನೇ ವಯಸ್ಸಿನಲ್ಲಿ ಯಾವುದೇ ಉದ್ಧಿಪನಾ ಮದ್ದು ಸೇವಿಸದೇ ಸಾಂಪ್ರದಾಯಿಕ ಭಾರತೀಯ ಭೋಜನಾ ಹಾಗೂ ನಿಯಮಿತವಾದ ಕಸರತ್ತಿನ ಸಾಧನೆಯ ಮೂಲಕ ದೇಹದಾಢ್ರ್ಯ ಕ್ಷೇತ್ರದಲ್ಲಿ ರವಿಯವರು ಅಪಾರ ಸಾಧನೆ ಮಾಡಿರುವುದು ಗಮನಾರ್ಹವಾಗಿದೆ.

 

ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ.
    
ಕಳೆದ ವರ್ಷ ಭಾರತ ದೇಹದಾಢ್ರ್ಯ ತಂಡದ ತರಬೇತುದಾರರಾಗಿ ಆಯ್ಕೆಯಾಗಿದ್ದ ಎ.ವಿ ರವಿ ಯವರು 2 ಬಾರಿ ಭಾರತ ಶ್ರೇಷ್ಟರಾಗಿ ಭಾರತ ಶ್ರೀ, ಮಿಸ್ಟರ್ ಯೂನಿವರ್ಸ್ ಮತ್ತಿತರ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ.
     
50 ವರ್ಷಗಳ ನಂತರವು ನೈಸರ್ಗಿಕ ದೇಹದಾಢ್ರ್ಯ ಸ್ವರ್ಧೆಯಲ್ಲಿ ಬಾಗವಹಿಸುತ್ತಿರುವ ಇವರ ಕ್ರೀಡಾ ಆಸಕ್ತಿ ಅನೇಕ ಯುವಕರಿಗೆ ಸ್ಪೂರ್ತಿಯಾಗಿದೆ. 

Read These Next

ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಸಂಪಾದಕರ ಸಂಘದ ನೂತನ ಆಡಳಿತ ಮಂಡಳಿ ಪದಾಧಿಕಾರಿಗಳ ನೇಮಕ

ಕೋಲಾರ: ಕೋಲಾರ ಮತ್ತು ಚಿಕ್ಕಬಳ್ಳಾಪುರ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಸಂಪಾದಕರ ಸಂಘದ ನೂತನ ಆಡಳಿತ ಮಂಡಳಿ ಪದಾಧಿಕಾರಿಗಳನ್ನು ...

ನಕಲಿ ಬಿತ್ತನೆ ಬೀಜ ಹಾಗೂ ಕೀಟ ನಾಶಕ ಕಂಪನಿಗಳ ವಿರುದ್ದ ಕ್ರಿಮಿನಲ್ ಮೊಕದ್ದಮೆ ಹೂಡುವಂತೆ ರೈತಸಂಘದಿಂದ ಮೌನ ಹೋರಾಟ

ಕೋಲಾರ: ರೈತರ ಮರಣ ಶಾಸನ ಬರೆಯುತ್ತಿರುವ ನಕಲಿ ಬಿತ್ತನೆ ಬೀಜ ಹಾಗೂ ಕೀಟ ನಾಶಕ ಕಂಪನಿಗಳ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ...

ಗೌನಿಪಲ್ಲಿ ಗ್ರಾಮ ಪಂಚಾಯಿತಿ ಅಧ್ಯರಾಗಿ ಕಾಂಗ್ರೆಸ್‌ನ ಶಂಕರಮ್ಮ ,ಉಪಾಧ್ಯರಾಗಿ ಮಂಜುನಾಥ ಆರಾಧ್ಯ

ಶ್ರೀನಿವಾಸಪುರ: ತಾಲ್ಲೂಕಿನ ಗೌನಿಪಲ್ಲಿ ಗ್ರಾಮ ಪಂಚಾಯಿತಿಗೆ ಗುರುವಾರ ನಡೆದ ಚುನಾವಣೆಯಲ್ಲಿ ಅಧ್ಯರಾಗಿ ಕಾಂಗ್ರೆಸ್‌ನ ಶಂಕರಮ್ಮ ...

ವಿಶ್ವಾಸಮತ ಯಾಚನೆಗೆ ವಿಪರೀತ ಅಡ್ಡಿಯಾದ ವಿಪ್​ ವಿಚಾರ; ಗದ್ದಲದ ನಡುವೆ ನಾಳೆಗೆ ಉಭಯ ಸದನಗಳ ಕಲಾಪ ಮುಂದೂಡಿಕೆ

ವಿಶ್ವಾಸಮತ ಯಾಚನೆಗೆ ವಿಪರೀತ ಅಡ್ಡಿಯಾದ ವಿಪ್​ ವಿಚಾರ; ಗದ್ದಲದ ನಡುವೆ ನಾಳೆಗೆ ಉಭಯ ಸದನಗಳ ಕಲಾಪ ಮುಂದೂಡಿಕೆ

ಹ್ಯಾಮರ್ ಥ್ರೋ; ಇಸ್ಲಾಮಿಯಾ ಆಂಗ್ಲೋ ಉರ್ದು ಪ್ರೌಢಶಾಲೆ ವಿದ್ಯಾರ್ಥಿ ರಾಷ್ಟ್ರಮಟ್ಟಕ್ಕೆ ಆಯ್ಕೆ

ಭಟ್ಕಳ: ಮಂಡ್ಯ ಜಿಲ್ಲೆಯ ಆದಿಚುಂಚನಗಿರಿಯಲ್ಲಿ ಬುಧವಾರ ನಡೆದ ಪ್ರೌಢಶಾಲಾ ವಿದ್ಯಾರ್ಥಿಗಳ ರಾಜ್ಯಮಟ್ಟದ ಅಥ್ಲೆಟಿಕ್ಸ್ ನಲ್ಲಿ ...

ಕ್ರೀಡಾ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಆಸಕ್ತಿ ವಹಿಸುವಂತೆ ಕ್ಷೇತ್ರಶಿಕ್ಷಣಾಧಿಕಾರಿ ಕರೆ

ಭಟ್ಕಳ:  ವಿದ್ಯಾರ್ಥಿಗಳು  ಪಟ್ಯಪುಸ್ತಕದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿ ವಹಿಸಿದ್ದಲ್ಲಿ ವಿದ್ಯಾರ್ಥಿಗಳ ಸರ್ವಾಂಗೀಣ ...