ಕೋಲಾರ: ಮಾ.24 ರಂದು ಕ್ಷಯ ರೋಗ ದಿನ ಆಚರಣೆ-ಭಾರತ ದೇಶದಲ್ಲಿ ಪ್ರತಿ ಐದು ನಿಮಿಷಕ್ಕೆ ಇಬ್ಬರು ಕ್ಷಯ ರೋಗಕ್ಕೆ ಬಲಿ

Source: shabbir | By Arshad Koppa | Published on 24th March 2017, 7:41 PM | Special Report |

ಕೋಲಾರ, ಮಾರ್ಚ್ 23 : ವಿಶ್ವದಾಧ್ಯಂತ ಮಾ.24 ರಂದು ಕ್ಷಯ ರೋಗ ದಿನಾಚರಣೆಯನ್ನು ಆಚರಿಸಲಾಗುವುದು. ಅದರಂತೆ ಕ್ಷಯ ರೋಗದ ಬಗ್ಗೆ ಅರಿವು ಮೂಡಿಸಲು ಬೈಕ್ ಜಾಥಾ ಕಾರ್ಯಕ್ರಮವನ್ನು ಬೆಳಗ್ಗೆ 10 ಗಂಟೆಗೆ ನಗರದ ಪ್ರವಾಸಿ ಮಂದಿರದ ಬಳಿ ಹಮ್ಮಿಕೊಂಡಿದ್ದು ನಂತರ ಉದ್ಘಾಟನಾ ಕಾರ್ಯಕ್ರಮವನ್ನು ಮಧ್ಯಾಹ್ನ 12 ಗಂಟೆಗೆ ನಗರದ ಸರ್ಕಾರಿ ಪದವಿ ಕಲಾಜಿನ ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.  
    ಕ್ಷಯ ರೋಗವು ಒಂದು ಪುರಾತನ ಖಾಯಿಲೆಯಾಗಿದ್ದು ಸುಮಾರು 4 ಸಾವಿರ ವರ್ಷಗಳಿಂದಲೂ ಈ ಖಾಯಿಲೆಯು ಮಾನವರನ್ನು ಕಾಡುತ್ತಿದೆ. ವೇದಗಳ ಕಾಲದಿಂದಲೂ ಈ ಖಾಯಿಲೆ ಇದೆ ಎಂಬುದಕ್ಕೆ ಸಾಕಷ್ಟು ವಿವರಗಳು ಲಭ್ಯವಿದೆ.  ಈಜಿಪ್ಟಿನ ಮಮ್ಮಿಗಳಲ್ಲಿ ಸಹ ಕ್ಷಯರೋಗ ಸೋಂಕು ಇರುವುದು ಕಂಡುಬಂದಿರುತ್ತದೆ. ಪ್ರಪಂಚದಾದ್ಯಂತ ಎಲ್ಲಾ ವಯಸ್ಸಿನವರೆಗೂ ಈ ಖಾಯಿಲೆಯ ಸೋಂಕು ಹರಡುವ ಸಾಧ್ಯತೆ ಇರುತ್ತದೆ. 
     ವಿಶ್ವ ಆರೋಗ್ಯ ಸಂಸ್ಥೆ ಅಂದಾಜಿಸಿದಂತೆ  ಜಗತ್ತಿನಾದ್ಯಂತ ಒಟ್ಟು ಕಂಡುಬರುವ ಕ್ಷಯರೋಗಿಗಳ ಸಂಖ್ಯೆಯಲ್ಲಿ ನಾಲ್ಕರಲ್ಲಿ ಒಂದರಷ್ಟು ಭಾರತ ದೇಶದಲ್ಲಿ ಕಂಡುಬರುತ್ತಾರೆ.  ಭಾರತದಲ್ಲಿ ಪ್ರತಿ ವರ್ಷ 1 ಲಕ್ಷ ಜನಸಂಖ್ಯೆಯಲ್ಲಿ 217 ಕ್ಷಯರೋಗಿಗಳು ಇರುವ್ಯದಾಗಿ ಅಂದಾಜಿಸಲಾಗಿದೆ. ಹಾಗೂ 5.1 ಲಕ್ಷ ಜನ ಸಾವನ್ನಪ್ಪುತ್ತಿದ್ದಾರೆ. ಅಂದರೆ ಪ್ರತಿ 5 ನಿಮಿಷಕ್ಕೆ ಇಬ್ಬರು ಮರಣ ಹೊಂದುತ್ತಿದ್ದಾರೆ. 
     ಕ್ಷಯರೋಗವು ಎಲ್ಲಾ ವರ್ಗದ ಜನರಲ್ಲಿ ಕಂಡು ಬರಬಹುದಾದ ಒಂದು ಖಾಯಿಲೆಯಾಗಿದೆ. ಚಿಕಿತ್ಸೆ ನೀಡದಿದ್ದ ಪಕ್ಷದಲ್ಲಿ ಒಬ್ಬ ಕಫದಲ್ಲಿ ಕ್ಷಯ ಕ್ರಿಮಿಗಳುಳ್ಳ ಕ್ಷಯರೋಗ ವ್ಯಕ್ತಿಯು ಒಂದು ವರ್ಷದ ಅವಧಿಯಲ್ಲಿ ಸುಮಾರು 10-15 ಜನರಿಗೆ ಖಾಯಿಲೆಯನ್ನು ಹರಡಿಸಲು ಶಕ್ತನಾಗಿರುತ್ತಾನೆ.  
    ಕ್ಷಯರೋಗಕ್ಕೆ ಮೈಕೋ ಬ್ಯಾಕ್ಟೀರಿಯಂ ಟ್ಯೂಬರುಕ್ಯುಲೈ ಎಂಬ ಸೂಕ್ಷ್ಮ ರೋಗಾಣು ಕಾರಣವಾಗಿದ್ದು ಇದು ಮುಖ್ಯವಾಗಿ ಶ್ವಾಸಕೋಶವನ್ನು ಬಾಧಿಸುವ ಖಾಯಿಲೆಯಾಗಿರುತ್ತದೆ.  ಕ್ಷಯ ರೋಗಿಯು ಕೆಮ್ಮಿದಾಗ ಅಥವಾ ಸೀನಿದಾಗ ಹೊರಬರುವ ತುಂತುರುಗಳಿಂದ ಈ ರೋಗಾಣುಗಳು ಗಾಳಿಯ ಮೂಲಕ ಆರೋಗ್ಯವಂತನ ವ್ಯಕ್ತಿಯ ಶ್ವಾಸಕೋಶ ಸೇರಿ ಅವನಿಗೆ ಸೋಂಕು ಉಂಟಾಗುತ್ತದೆ. 
    ಕ್ಷಯರೋಗವನ್ನು 2 ವಿಧಗಳಾಗಿ ವರ್ಗೀಕರಿಸಿದ್ದು ಶ್ವಾಸಕೋಶದ ಕ್ಷಯ ಒಂದಾದರೆ ಶ್ವಾಸಕೋಶೇತರ ಕ್ಷಯ ಮತ್ತೊಂದಾಗಿದೆ. ಶ್ವಾಸಕೋಶದ ಕ್ಷಯ ಎಂದರೆ ಕಫದಲ್ಲಿ ಕ್ರಿಮಿಗಳಿರುವ ಅಥವಾ ಕಫದಲ್ಲಿ ಕ್ರಿಮಿಗಳಿಲ್ಲದ ಶ್ವಾಸಕೋಶವನ್ನು ಮಾತ್ರ ಬಾಧಿಸುವ ಕ್ಷಯವನ್ನು ಶ್ವಾಸಕೋಶದ ಕ್ಷಯವೆಂದು ಕರೆಯುತ್ತಾರೆ.  ಇದರ ಪತ್ತೆಗಾಗಿ 2 ಕಫ ಮಾದರಿಗಳನ್ನು ಪರೀಕ್ಷೆ ಮಾಡುವುದರಿಂದ ಕಫದಲ್ಲಿ ಕ್ಷಯ ಕ್ರಿಮಿಗಳನ್ನು ಪತ್ತೆ ಮಾಡಲಾಗುವುದು.  ಮತ್ತು ಕ್ಷ ಕಿರಣವನ್ನು (ಘಿ-ಡಿಚಿಥಿ) ಬಳಸಿ ಪತ್ತೆಹಚ್ಚಬಹುದಾಗಿರುತ್ತದೆ. 
ಶರೀರದ ಇತರೆ ಭಾಗಗಳಲ್ಲಿ ಕಂಡುಬರುವ ಗ್ರಂಥಿಗಳು, ಮೂಳೆ ಮತ್ತು ಕೀಲುಗಳ ಜನನೇಂದ್ರಿಯಗಳು ಮತ್ತು ನರಮಂಡಲ ಹಾಗೂ ಕರಳುಗಳಿಗೆ ಕ್ಷಯರೋಗ ಬಂದಿರುವುದನ್ನು ಶ್ವಾಸಕೋಶೇತರ ಕ್ಷಯವೆಂದು ವರ್ಗೀಕರಿಸಲಾಗಿದೆ.  ಇದರ ಪತ್ತೆಗೆ ತಜ್ಞ ವೈದ್ಯರಿಂದ ತಪಾಸಣೆ ಹಾಗೂ ಹಲವಾರು ವಿಶೇಷ ಪರೀಕ್ಷೆಗಳಿಗೆ ರೋಗಿಯು ಒಳಪಡಬೇಕಾಗುತ್ತದೆ.
    ಈ ಕ್ಷಯ ರೋಗವನ್ನು ಸಂಪೂರ್ಣವಾಗಿ ಗುಣಪಡಿಸಬಹುದು, ಭಾರತ ಸರ್ಕಾರವು ಕ್ಷಯರೋಗದಿಂದ ಆಗುತ್ತಿರುವ ಸಮಸ್ಯೆಯನ್ನು ಗಮನಿಸಿ, ಕ್ಷಯರೋಗದ ನಿವಾರಣೆಗಾಗಿ ಪರಿಷ್ಕøತ ರಾಷ್ಟ್ರೀಯ ಕ್ಷಯರೋಗ ನಿವಾರಣ ಕಾರ್ಯಕ್ರಮವನ್ನು (ಆರ್.ಎನ್.ಟಿ.ಸಿ.ಪಿ) ದೇಶದಾದ್ಯಂತ ಅನುಷ್ಠಾನಗೊಳಿಸಿದೆ. ಇದರಲ್ಲಿ ನೇರ ನಿಗಾವಣೆ ಅಲ್ಪಾವಧಿ ಚಿಕಿತ್ಸೆ (ಡಾಟ್ಸ್) ಮೂಲಕ ಚಿಕಿತ್ಸೆಯನ್ನು ಕ್ಯಾಟ್-1 ಮತ್ತು ಕ್ಯಾಟ್-2 ವರ್ಗಗಳಂತೆ ವರ್ಗೀಕರಿಸಿ ಚಿಕಿತ್ಸೆ ನೀಡಲಾಗುವುದು.  ಈ ಚಿಕಿತ್ಸೆಯನ್ನು 6 ರಿಂದ 9 ತಿಂಗಳ ಅವಧಿಯಲ್ಲಿ ನಿಗಧಿಯಂತೆ ಕ್ರಮವಾಗಿ ಸೇವಿಸಲು ಕ್ಷಯರೋಗಿಗಳಿಗೆ ತಿಳಿಸಲು ಸಾರ್ವಜನಿಕರ ಸಹಕಾರ ಬಹಳ ಅಗತ್ಯ.  
    1962 ರಲ್ಲಿ ರಾಷ್ಟ್ರೀಯ ಕ್ಷಯರೋಗ ನಿವಾರಣ ಕಾರ್ಯಕ್ರಮವು ನಮ್ಮ ದೇಶದಲ್ಲಿ ಅನುಷ್ಠಾನಗೊಂಡಿದ್ದು ಸೈದ್ದಾಂತಿಕವಾಗಿ ಹಾಗೂ ಕ್ರಮವಿಲ್ಲದಂತೆ ಈ ಕಾರ್ಯಕ್ರಮ ನಡೆಯುತ್ತಿದ್ದು 1992 ರಲ್ಲಿ ಪರಿಶೀಲಿಸಿ ಮತ್ತು ಪುನರ್ ಆಯೋಜಿಸಿ ಈ ಕಾರ್ಯಕ್ರಮವನ್ನು ಪರಿಷ್ಕøತ ರಾಷ್ಟ್ರೀಯ ಕ್ಷಯರೋಗ ನಿವಾರಣ ಕಾರ್ಯಕ್ರಮವೆಂದು ಪುನರ್  ಅನುಷ್ಠಾನಗೊಳಿಸಿರುತ್ತಾರೆ.
    ನಮ್ಮ ಕೋಲಾರ ಜಿಲ್ಲೆಯಲ್ಲಿ ಈ ಕಾರ್ಯಕ್ರಮವು 2003 ಮಾರ್ಚ್ ತಿಂಗಳಲ್ಲಿ ಅನುಷ್ಠಾನಗೊಂಡಿದ್ದು ಜಿಲ್ಲೆಯಲ್ಲಿ ಒಟ್ಟು 05 ಚಿಕಿತ್ಸಾ ಘಟಕಗಳಿದ್ದು, ಇವುಗಳಡಿಯಲ್ಲಿ  ಒಟ್ಟು 15 ನಿಗಧಿತ ಪ್ರಯೋಗಶಾಲಾ ಕೇಂದ್ರ (ಡಿ.ಎಂ.ಸಿ) ಗಳಿದ್ದು ಈ ಎಲ್ಲಾ ಕೆಂದ್ರಗಳಲ್ಲಿ ಕಫ ಪರೀಕ್ಷೆಯನ್ನು ಉಚಿತವಾಗಿ ಮಾಡಲಾಗುತ್ತದೆ.  ಅಲ್ಲದೇ ತಾಲ್ಲುಕು ಮಟ್ಟದ ಆಸ್ಪತ್ರೆ ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಕ್ಷ-ಕಿರಣ ಪರೀಕ್ಷೆಯನ್ನು ಸಹ ಉಚಿತವಾಗಿ ಮಾಡಲಾಗುತ್ತದೆ. 
    ಜಿಲ್ಲೆಯಲ್ಲಿ ಆರ್.ಎನ್.ಟಿ.ಸಿ.ಪಿ ಕಾರ್ಯಕ್ರಮದಡಿಯಲ್ಲಿ 2016ನೇ ವರ್ಷದಲ್ಲಿ ಒಟ್ಟು 13050 ಜನರಿಗೆ ಕ್ಷಯರೋಗ ಪತ್ತೆಗಾಗಿ ಕಫ ಪರೀಕ್ಷೆಯನ್ನು ಮಾಡಿದ್ದು, ಅವರಲ್ಲಿ 804 ಕಫದಲ್ಲಿ ಕ್ರಿಮಿಗಳಿರುವ ಹೊಸ ಕ್ಷಯರೋಗಿಗಳನ್ನು, 225 ಕಫದಲ್ಲಿ ಕ್ರಿಮಿಗಳಿಲ್ಲದಿರುವ ಹೊಸ ಕ್ಷಯರೋಗಿಳುನ್ನು, 284 ಶ್ವಾಸಕೋಶೇತರ ಕ್ಷಯ ಹಾಗೂ 212 ಚಿಕಿತ್ಸೆಯನ್ನು ಪುನರಾರಂಭಿಸಿದ ಕ್ಷಯರೋಗಿಗಳನ್ನು ಪತ್ತೆ ಹಚ್ಚಲಾಗಿದೆ. 
    ಆರ್.ಎನ್.ಟಿ.ಸಿ.ಪಿ ಅಡಿಯಲ್ಲಿ 2015ನೇ ವರ್ಷದಲ್ಲಿ ಒಟ್ಟು 1233 ರೋಗಿಗಳು ಚಿಕಿತ್ಸೆಯನ್ನ ಪೂರ್ಣಗೊಳಿಸಿ ಗುಣಮುಖರಾಗಿರುತ್ತಾರೆ. 85 ರೋಗಿಗಳು ಚಿಕಿತ್ಸೆಯನ್ನು ಅರ್ಧದಲ್ಲಿ ನಿಲ್ಲಿಸಿರುತ್ತಾರೆ, 103 ರೋಗಿಗಳು ಕ್ಷಯರೋಗದಿಂದಾಗಿ ಮರಣ ಹೊಂದಿರುತ್ತಾರೆ.
    ಆರ್.ಎನ್.ಟಿ.ಸಿ.ಪಿ ಮಾರ್ಗಸೂಚಿಯಂತೆ ಚಿಕಿತ್ಸೆಯನ್ನು ಪೂರ್ಣಗೊಳಿಸದೇ ಬಿಟ್ಟಂತಹ ರೋಗಿಗಳು, ಪದೇ ಪದೇ ಕ್ಷಯರೋಗದ ಸೋಂಕಿಗೊಳಗಾಗುವ ರೋಗಿಗಳು ಮಲ್ಟಿ ಡ್ರಗ್ ರೆಸಿಸ್ಟೆಂಟ್ (ಎಂ.ಡಿ.ಆರ್.) ಟಿ.ಬಿ. ರೋಗಿಗಳಾಗಿ ಶಂಕಿಸಲಾಗಿರುತ್ತದೆ. ಮೇ-2011 ರಿಂದ ಆರ್.ಎನ್.ಟಿ.ಸಿ.ಪಿ ಕಾರ್ಯಕ್ರಮದಡಿಯಲ್ಲಿ ಶಂಕಿತ ರೋಗಿಗಳ ಕಫ ಮಾದರಿಗಳನ್ನು ಸಂಗ್ರಿಹಿಸಿ ಬೆಂಗಳೂರಿನ ಲ್ಯಾಬೋರೇಟರಿಯಲ್ಲಿ ಪರೀಕ್ಷೆ ಮಾಡಿಸಿ ಎಂ.ಡಿ.ಆರ್. ಪಾಸಿಟಿವ್ ಬರುವ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿರುತ್ತದೆ. ಇದು ಒಟ್ಟು 02 ವರ್ಷಗಳ ಚಿಕಿತ್ಸೆಯಾಗಿದ್ದು,  ಇದುವರೆವಿಗೂ ಒಟ್ಟು 678 ರೋಗಿಗಳ ಕಫ ಮಾದರಿಗಳನ್ನು ಸಂಗ್ರಹಿಸಿ ಕಳುಹಿಸಿಕೊಡಲಾಗಿರುತ್ತದೆ. ಪಾಸಿಟಿವ್ ಬಂದಿರುವ ಒಟ್ಟು 58 ಪ್ರಕರಣಗಳಲ್ಲಿ 22 ರೋಗಿಗಳು ಚಿಕಿತ್ಸೆಯಲ್ಲಿದ್ದು 17 ರೋಗಿಗಳು ಗುಣಮುಖಹೊಂದಿರುತ್ತಾರೆ. 13 ರೋಗಿಗಳು ಮರಣ ಹೊಂದಿರುತ್ತಾರೆ.
    ಈ ಖಾಯಿಲೆಗೆ ಕಾರಣವಾದ ಮೈಕೋ ಬ್ಯಾಕ್ಟೀರಿಯಂ ಟುಬೆರ್‍ಕುಲೆ ಎಂಬ ಕ್ಷಯರೋಗಾಣುವನ್ನು ರಾಬರ್ಟ್ ಕಾಕ್ ಎಂಬ ವಿe್ಞÁನಿ 1882 ರ ಮಾರ್ಚ್-24 ರಂದು ರೋಗಾಣುವನ್ನು ಕಂಡುಹಿಡಿದ ವಿಷಯವನ್ನು ಜಗತ್ತಿಗೆ ತಿಳಿಸಿಕೊಟ್ಟನು.  ಇದರಿಂದ ಮಾರಕವಾಗಿದ್ದ ಕ್ಷಯರೋಗದ ಚಿಕಿತ್ಸೆ ಮತ್ತು ನಿರ್ಮೂಲನೆಗೆ ಅತ್ಯಂತ ಉಪಕಾರಿಯಾಯಿತು. ಇವರ ನೆನಪಿಗಾಗಿ ಪ್ರತಿ ವರ್ಷವೂ ಇಡೀ ವಿಶ್ವದಲ್ಲಿ ಪ್ರತಿ ವರ್ಷ ಮಾರ್ಚ್ 24 ರಂದು ವಿಶ್ವ ಕ್ಷಯರೋಗ ದಿನಾಚರಣೆಯನ್ನು ಆಚರಿಸುತ್ತಾ ಬಂದಿರುತ್ತಾರೆ. ಇದೇ ರೀತಿ ನಮ್ಮ ಜಿಲ್ಲೆಯಲ್ಲಿ 24 ಮಾರ್ಚ್ 2017 ರ ಈ ದಿನ  ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಜಿಲ್ಲಾ ಮಟ್ಟದಲ್ಲಿ ನಿಗಧಿತ ಪ್ರಯೋಗಶಾಲಾ ಕೇಂದ್ರ, ಎಸ್.ಎನ್.ಆರ್ ಆಸ್ಪತ್ರೆ ಸಭಾಂಗಣ ಕೋಲಾರ ಇಲ್ಲಿ ಹಮ್ಮಿಕೊಳ್ಳಲಾಗಿದೆ.
    ವಿಶ್ವ ಆರೋಗ್ಯ ಸಂಸ್ಥೆಯ 2035 ಕ್ಕೆ ಕ್ಷಯರೋಗವನ್ನು ಕೊನೆಗಾಣ ಸುವ ನಿರ್ಣಯ ಕೈಗೊಂಡಿದ್ದು ಭಾರತವು ಸದರಿ ತಂತ್ರಗಾರಿಕೆಯ ಸಹಿಕಾರನಾಗಿರುತ್ತದೆ. ಈ ನಿಟ್ಟಿನಲ್ಲಿ ಈಗಾಗಲೇ ಕ್ರಮಗಳನ್ನು ಕೈಗೊಂಡಿದ್ದು ಅದರಂತೆ 2025 ಕ್ಕೆ ಕೊನೆಗಾಣ ಸುವ ಪಣ ತೊಟ್ಟಿರುತ್ತದೆ  ಅದ ಕಾರಣ ಈ ಸಾಲಿನ ವಿಶ್ವ ಕ್ಷಯರೋಗ ದಿನಾಚರಣೆಯ ಘೋಷ ವಾಕ್ಯ  “ಕ್ಷಯರೋಗವನ್ನು ಕೊನೆಗಾಣ ಸಲು ಒಂದಾಗೋಣ“ ಎಂಬುವುದಾಗಿದೆ. 
    
ಕೋಲಾರ:ಕರ್ತವ್ಯ ಹಾಜರಾಗದೇ ಹೋದಲ್ಲಿ ಶಿಸ್ತು ಕ್ರಮ

ಕೋಲಾರ, ಮಾರ್ಚ್ 23: ಕೆ.ಜಿ.ಎಫ್ ನಗರಸಭೆಯಲ್ಲಿ ಪೌರಕಾರ್ಮಿಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅಂಕಯ್ಯ ಅವರು 2013 ಡಿಸೆಂಬರ್ 20 ರಿಂದ ಕೆಲಸಕ್ಕೆ ಸತತವಾಗಿ ಗೈರು ಹಾಜರಾಗಿರುತ್ತಾರೆ. ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ನೋಟಿಸ್ ಜಾರಿಮಾಡಿದ್ದರೂ ಸಹ ಕೆಲಸಕ್ಕೆ ಹಾಜರಾಗಿಲ್ಲ. ಅಂಕಯ್ಯ ಅವರು ಕೂಡಲೇ ಕೆಲಸಕ್ಕೆ ಹಾಜರಾಗಬೇಕು. ಇಲ್ಲವಾದರೆ 1957 ರ ನಿಯಮ 11 ರಡಿ ಕ್ರಮ ಜರುಗಿಸಲಾಗುವುದು ಎಂದು ಕೆ.ಜಿ.ಎಫ್. ನಗರಸಭೆ ರಾಬರ್ಟ್ ಸನ್‍ಪೇಟೆಯ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  

Read These Next

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...