ಕೋಲಾರ:ವಿಶ್ವ ವಿಕಲಚೇತನರ ದಿನಾಚರಣೆ: 

Source: shabbir | By Arshad Koppa | Published on 23rd November 2017, 8:32 AM | State News | Sports News |

ಕೋಲಾರ, ಅಕ್ಟೋಬರ್ 21 :2017 ನೇ ಸಾಲಿನ ವಿಶ್ವ ವಿಕಲಚೇತನರ ದಿನಾಚರಣೆ ಅಂಗವಾಗಿ ಇಂದು  ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ವಿವಿಧ ವಿಕಲಚೇತನರಿಗೆ ಹಲವು ರೀತಿಯ ಕ್ರೀಡಾ ಹಾಗೂ ಸಾಂಸ್ಕøತಿಕ ಸ್ಪರ್ಧೆಗಳು ಯಶಸ್ವಿಯಾಗಿ ನಡೆದವು.


6 ರಿಂದ 45 ವರ್ಷ ವಯೋಮಾನದ 350ಕ್ಕೂ ಹೆಚ್ಚು ಸ್ಪರ್ಧಾಳುಗಳು ಅತ್ಯಂತ ಉತ್ಸಾಹದಿಂದ ಈ ಕ್ರೀಡೆ ಹಾಗೂ ಸಾಂಸ್ಕøತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾದ ಸೂಲೂರು ಎಂ.ಆಂಜಿನಪ್ಪ, ಯುವಜನ ಸೇವಾ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕರು ಗೀತಾ.ಎಂ, ವಿಕಲಚೇತನರ ಶಾಲೆಗಳನ್ನು ನಡೆಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳು, ಸಾರ್ವಜನಿಕ ಶಿಕ್ಷಣ ಇಲಾಖಾ ವತಿಯಿಂದ ಸಾಮಾನ್ಯ ಶಾಲೆಗಳನ್ನು ಅಭ್ಯಸಿಸುತ್ತಿರುವ ವಿಕಲಚೇತನರ ಮಕ್ಕಳು ಪಾಲ್ಗೊಂಡಿದ್ದರು ಎಂದು ಹಿರಿಯ ನಾಗರೀಕರ ಹಾಗೂ ವಿಕಲಚೇತನರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳಾದ ಹೆಚ್.ಸಿ.ನಾಗಮಣ  ಅವರು ತಿಳಿಸಿದ್ದಾರೆ.

ಕೋಲಾರ:ನಂ.29 ರಂದು ಕುರುಗಲ್ ಗ್ರಾಮ ಪಂಚಾಯಿತಿಯ ಗ್ರಾಮಸಭೆ 
ಕೋಲಾರ, ಅಕ್ಟೋಬರ್ 21:         ಕೋಲಾರ ತಾಲ್ಲೂಕಿನ ವೇಮಗಲ್ ಹೋಬಳಿ ಸೇರಿದ  ಕುರುಗಲ್ ಗ್ರಾಮ ಪಂಚಾಯಿತಿಯ 2018-19 ನೇ ಸಾಲಿನ ವಾರ್ಡ್ ಸಭೆ ಮತ್ತು ಗ್ರಾಮ ಸಭೆಗಳನ್ನು ಏರ್ಪಡಿಸಲಾಗಿದೆ. 
ದಿನಾಂಕ 22-11-2017 ರಿಂದ 24-11-2017 ರವರೆಗ ವಾರ್ಡ್ ಸಭೆಯನ್ನು ಹಾಗೂ ದಿನಾಂಕ 29-11-2017 ರಂದು ಕುರಗಲ್ ಗ್ರಾಮ ಪಂಚಾಯಿತಿಯಲ್ಲಿ ಗ್ರಾಮ ಸಭೆಯನ್ನು ನಡೆಸಲಾಗುವುದು.
       ಈ ಸಭೆಗಳನ್ನು ಗ್ರಾಮ ಪಂಚಾಯಿತಿಯ ವಾರ್ಡ್ ಸದಸ್ಯರು, ಹಾಗೂ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಮತ್ತು ನೋಡಲ್ ಅಧಿಕಾರಿಗಳ ಉಸ್ತುವಾರಿಯಲ್ಲಿ ಏರ್ಪಡಿಸಲಾಗಿದೆ. ಸಭೆಯಲ್ಲಿ ಸಾರ್ವಜನಿಕ ಕುಂದು ಕೊರತೆಗಳು, ಮಹಾತ್ಮ ಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಅಭಿವೃದ್ಧಿ ಕಾಮಗಾರಿಗಳು, ವ್ಯಕ್ತಿಗತ ಕಾಮಗಾರಿಗಳು, ಪ್ಯಾಕೇಜ್ ಕಾಮಗಾರಿಗಳು, ವಸತಿ ರಹಿತ  ಫಲಾನುಭವಿಗಳ ಪಟ್ಟಿ, ಮತ್ತು ವಿವಿಧ ಇಲಾಖೆಗಳಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಆಯ್ಕೆ ಪಟ್ಟಿ ಮಾಡಲಾಗುತ್ತದೆ.  

Read These Next

ನ್ಯಾಯಾಲಯಗಳು ಫಿರ್ಯಾದುದಾರರ ಅನುಕೂಲತೆಗಳನ್ನು ಗಮನಿಸಬೇಕೇ ವಿನಃ ಸರ್ಕಾರಗಳದ್ದಲ್ಲ

ಗೋವಾದಲ್ಲಿ ಅಧಿಕಾರಕ್ಕೆ ಬಂದ ಎಲ್ಲಾ ಸರ್ಕಾರಗಳು ಸುಸ್ಥಿರ ಪರಿಸರದ ಬಗೆಗೆ ಯಾವ ಪರಿಕಲ್ಪನೆಯೂ ಇಲ್ಲದೆ ಜಾರಿಗೆ ತರಲೆತ್ನಿಸಿದ ...

ಕೋಲಾರ: ರಾಜ್ಯಮಟ್ಟದ ಪ್ರೌಢಶಾಲಾ ಅಥ್ಲೇಟಿಕ್ಸ್ ಕೋಲಾರದಿಂದ 58 ವಿದ್ಯಾರ್ಥಿಗಳು ಭಾಗಿ

ರಾಜ್ಯಮಟ್ಟದ ಪ್ರೌಢಶಾಲಾ ಮಟ್ಟದ ಅಥ್ಲೆಟಿಕ್ಸ್‍ನಲ್ಲಿ ಪಾಲ್ಗೊಳ್ಳಲು ಕೋಲಾರದಿಂದ 58 ವಿದ್ಯಾರ್ಥಿಗಳು ಶನಿವಾರ ಸಂಜೆ ಬೆಳಗಾವಿಗೆ ...