ಕೋಲಾರ:ಹೆರಿಗೆಗೆ ದಾಖಲಾದ ತಾಯಂದಿರಿಗೆ ರಗ್ಗು ವಿತರಿಸಿ ವಿಷ್ಣು ಹುಟ್ಟುಹಬ್ಬ

Source: shabbir | By Arshad Koppa | Published on 19th September 2017, 8:26 AM | State News |


ನಾಡು,ನುಡಿಗೆ ನೀಡಿದ ಕೊಡುಗೆ ಅಪಾರ-ಬ್ಯಾಲಹಳ್ಳಿ ಗೋವಿಂದಗೌಡ

ಕೋಲಾರ:- ಕನ್ನಡದ ಮೇರುನಟರಾಗಿದ್ದ ವಿಷ್ಣುವರ್ಧನ್ ತಮ್ಮ ಚಿತ್ರಗಳಿಂದ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಮೂಲಕ ಕನ್ನಡ ಚಿತ್ರ ರಸಿಕರ ಹೃದಯದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ ಎಂದು ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದರು.
ಸೋಮವಾರ ನಗರದ ಜಿಲ್ಲಾಸ್ಪತ್ರೆಯ ಹೆರಿಗೆ ವಾರ್ಡಿನಲ್ಲಿ ದಾಖಲಾಗಿದ್ದ ನೂರಕ್ಕೂ ಹೆಚ್ಚು ತಾಯಂದಿರಿಗೆ ವಿಷ್ಣಸೇನಾಸಮಿತಿ ಆಶ್ರಯದಲ್ಲಿ ದಿವಂಗತ ಚಿತ್ರನಟ ವಿಷ್ಣುವರ್ಧನ್‍ರ 68ನೇ ಹುಟ್ಟು ಹಬ್ಬದ ಅಂಗವಾಗಿ ಹೊದಿಕೆ (ರಗ್ಗು) ವಿತರಿಸಿ ಅವರು ಮಾತನಾಡುತ್ತಿದ್ದರು.


ಸುಮಾರು 200 ಚಿತ್ರಗಳಲ್ಲಿ ನಟಿಸಿರುವ ವಿಷ್ಣುವರ್ಧನ್‍ರ ಪ್ರತಿ ಚಿತ್ರವೂ ದಾರಿತಪ್ಪುತ್ತಿದ್ದ ಸಮಾಜಕ್ಕೆ ಬೆಳಕು ತೊರುವ ನೀತಿ ಒಳಗೊಂಡಿದೆ, ಅವರು ನಮ್ಮ ಕನ್ನಡ ಸಂಸ್ಕøತಿಗೆ ನೀಡಿರುವ ಕೊಡುಗೆ ಅಪಾರವಾಗಿದೆ ಎಂದರು. 
ಕನ್ನಡ ನಾಡು,ನುಡಿ,ನೆಲದ ರಕ್ಷಣೆಗಾಗಿ ನಡೆದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ವಿಷ್ಣುವರ್ಧನ್ ಸ್ವತಃ ಗಾಯಕರಾಗಿಯೂ ಅನೇಕ ಹಾಡುಗಳ ಮೂಲಕ ಚಿತ್ರ ರಸಿಕರಿಗೆ ರಸದೌತಣ ನೀಡಿದ್ದಾರೆ ಎಂದರು.
ಸಮಾಜದಲ್ಲಿನ ಅನ್ಯಾಯ,ಭ್ರಷ್ಟಾಚಾರದ ವಿರುದ್ದ ತಮ್ಮ ಅನೇಕ ಚಿತ್ರಗಳಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿರುವ ವಿಷ್ಣುವರ್ಧನ್, ಸ್ನೇಹಜೀವಿಯಾಗಿ ಹೆಸರು ಗಳಿಸಿದವರು ಎಂದರು.
ಕನ್ನಡ ನಾಡು,ನುಡಿಗಾಗಿ ನಡೆದ ಅನೇಕ ಹೋರಾಟಗಳಲ್ಲೂ ಮುಂಚೂಣಿಯಲ್ಲಿರುತ್ತಿದ್ದ ವಿಷ್ಣುವರ್ಧನ್ ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದ ಶಿಸ್ತು, ಸಂಯಮವೇ ಇಂದಿನ ಸಮಾಜಕ್ಕೆ ಆದರ್ಶ ಎಂದರು.
ಇಂತಹ ಮನನೀಯ ಕಲಾವಿದರ ಹುಟ್ಟುಹಬ್ಬವನ್ನು ಅಭಿಮಾನಿಗಳು ಕಷ್ಟದಲ್ಲಿರುವವರಿಗೆ ನೆರವಾಗುವ ಮೂಲಕ ಆಚರಿಸಿ ಸಮಾಜಕ್ಕೆ ಮಾದರಿಯಾಗಬೇಕಾಗಿದೆ ಎಂದರು.
ವಿಷ್ಣು ಅಭಿಮಾನಿ ಸಂಚಾರಿ ಪಿಎಸ್‍ಐ ಬಿ.ಆರ್.ಜಗದೀಶ್, ಸರ್ಕಾರಿ ಆಸ್ಪತ್ರೆಗಳಿಗೆ ಬರುವವರು ಬಡವರೇ ಹೊರತೂ ಶ್ರೀಮಂತರಲ್ಲ, ಅಂತಹ ಮಹಿಳೆಯರಿಗೆ ನೆರವಾಗುವ ಮೂಲಕ ವಿಷ್ಣುವರ್ಧನ್‍ರ ಹುಟ್ಟುಹಬ್ಬವನ್ನು ಅಭಿಮಾನಿಗಳು ಅರ್ಥಪೂರ್ಣವಾಗಿ ಆಚರಿಸುತ್ತಿರುವುದು ಸಂತಸ ತಂದಿದೆ ಎಂದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್, ಇಂದಿನ ಸಿನಿಮಾಗಳು ಯುವಜನತೆಯನ್ನು ದಾರಿ ತಪ್ಪಿಸುತ್ತಿವೆ ಆದರೆ ರಾಜ್‍ಕುಮಾರ್,ವಿಷ್ಣುವರ್ಧನ್‍ರು ನೀಡಿದ ಚಿತ್ರಗಳು ಇಡೀ ಸಮಾಜದ ಸ್ವಾಸ್ಥ್ಯಕ್ಕೆ ನೀಡಿದ ಕೊಡುಗೆ ಮರೆಯಲಾಗದು ಎಂದು ತಿಳಿಸಿ ಹೆರಿಗೆ ವಾರ್ಡಿನಲ್ಲಿನ ತಾಯಂರಿಗೆ ಬ್ಯಾಲಹಳ್ಳಿ ಗೋವಿಂದಗೌಡರು ರಗ್ಗುಗಳನ್ನು ಕೊಡುಗೆಯಾಗಿ ನೀಡಿ ವಿಷ್ಣು ಅಭಿಮಾನ ಮೆರೆದಿದ್ದಾರೆ ಎಂದರು.

ವಿಕಲಚೇತನರಿಗೆ ಅನ್ನಸಂತರ್ಪಣೆ
ವಿಷ್ಣುಸೇನಾ ಸಮಿತಿಯಿಂದ ಮಧ್ಯಾಹ್ನ ನಗರದ ಅಂತರಗಂಗಾ ವಿಕಲಚೇತನ ಮಕ್ಕಳ ಶಾಲೆಯಲ್ಲಿ ಮಕ್ಕಳಿಗೆ ಅನ್ನಸಂತರ್ಪಣೆ ಮಾಡುವ ಮೂಲಕ ವಿಷ್ಣುವರ್ಧನ್ ಹುಟ್ಟುಹಬ್ಬ ಆಚರಿಸಲಾಯಿತು. 

ಕಾರ್ಯಕ್ರಮದಲ್ಲಿ ಜಿಲ್ಲಾಶಸ್ತ್ರಚಿಕಿತ್ಸಕ ಡಾ.ಹೆಚ್.ಆರ್.ಶಿವಕುಮಾರ್, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಕಾಶಿವಿಶ್ವನಾಥ್,ವಿಷ್ಣುಸೇನಾ ಸಮಿತಿಯ ಮಲ್ಲಿಕಾಪ್ರಕಾಶ್, ಪಿಸಿಬಡಾವಣೆಯ ಕೆ.ಗಣೇಶ್, ಕೋಲಾರಮ್ಮ ಡ್ರೈವಿಂಗ್ ಶಾಲೆಯ ಆರ್.ಗೋಪಾಲ್, ಅಭಿಮಾನಿಗಲಾದ ಮದನ್,ಗಾಜಲದಿನ್ನೆ ಅರುಣ್, ಅನಿಲ್, ಅನಂತಕುಮಾರ್, ಸರ್ವೇಶ್ ಮಿತ್ರಬಳಗದ ಸದಸ್ಯರು, ಭರತ್ ಮತ್ತಿತರರು ಉಪಸ್ಥಿತರಿದ್ದರು.
 

ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ

Read These Next

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!