ಕೋಲಾರ:ಜಿಲ್ಲಾ ಸಹಕಾರ ಒಕ್ಕೂಟದ ಕಚೇರಿಯಲ್ಲಿ 71ನೇ ಸ್ವಾತಂತ್ರ್ಯ ದಿನಾಚರಣೆ

Source: shabbir | By Arshad Koppa | Published on 16th August 2017, 8:12 AM | State News | Guest Editorial |

ಕೋಲಾರ,ಆ.15: ನಗರದ ಕೋಲಾರ ಜಿಲ್ಲಾ ಸಹಕಾರ ಒಕ್ಕೂಟದ ಕಚೇರಿಯಲ್ಲಿ 71ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಕರ್ನಾಟಕ ರಾಜ್ಯ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿರ್ದೇಶಕ ಯಲವಾರ ಸೊಣ್ಣೇಗೌಡ ಧ್ವಜಾರೋಹಣವನ್ನು ನರವೇರಿಸಿದರು. 


    ಈ ಸಂದರ್ಭದಲ್ಲಿ ಒಕ್ಕೂಟದ ನಿರ್ದೇಶಕರಾದ ಪೆಮ್ಮಶೆಟ್ಟಿಹಳ್ಳಿ ಸುರೇಶ್, ಹೆಚ್.ಕೃಷ್ಣಪ್ಪ, ಕೆ.ವಿ.ನಾರಾಯಣಸ್ವಾಮಿ, ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕರಾದ ಕೆ.ವಿ.ದಯಾನಂದ್, ನಾಗನಾಳ ಸೋಮಶೇಖರ್, ಸಹಕಾರ ಸಂಘದ ಉಪ ನಿಬಂಧಕ ಕೆ.ಎನ್.ನಂಜಂಡೇಗೌಡ, ಒಕ್ಕೂಟದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ ಭಾರತಿ ಡಿ.ಸಿ.ಸಿ ಬ್ಯಾಂಕ್, ಸಹಕಾರ ಇಲಾಖೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಉರ್ದು ಕಿರಿಯ ಪಾಥಮಿಕ ಶಾಲೆಯಲ್ಲಿ 71ನೇ ಸ್ವಾತಂತ್ರ್ಯ ದಿನಾಚರಣೆ

ಕೋಲಾರ,ಆ.15: ಕೋಲಾರ ನಗರದ ಶಾಹೀನ್‍ಷಾ ನಗರದಲ್ಲಿರುವ ಸರ್ಕಾರಿ ಉರ್ದು ಕಿರಿಯ ಪಾಥಮಿಕ ಶಾಲೆಯಲ್ಲಿ 71ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಎಸ್.ಡಿ.ಎಂ.ಸಿ ಅಧ್ಯಕ್ಷ ಚಾನ್‍ಪಾಷ ಧ್ವಜಾರೋಹಣವನ್ನು ನರವೇರಿಸಿದರು. 
     ಭಾರತೀಯ ಜನತಾ ಪಾರ್ಟಿಯ ರಾಜ್ಯ ವಿಶೇಷ ಆಹ್ವಾನಿತ ಬೆಗ್ಲಿ ಸಿರಾಜ್ ಶಾಲೆಯಲ್ಲಿ ಬಡ ಮತ್ತು ಕೂಲಿ ಕಾರ್ಮಿಕರ ಮಕ್ಕಳು ವ್ಯಾಸಾಂಗ ಮಾಡುತ್ತಿದ್ದು ಇದನ್ನು ಮನಗಂಡು, ಮಕ್ಕಳಿಗೆ ನೋಟ್ ಪುಸ್ತಕ ಮತ್ತು ಲೇಖನಿ ಸಾಮಗ್ರಿಗಳನ್ನು ವಿತರಿಸಿ ಮಾತನಾಡುತ್ತಾ ಸ್ವಾತಂತ್ರ್ಯಕ್ಕಾಗಿ ಮಹಾತ್ಮಗಾಂಧಿ, ಭಗತ್ ಸಿಂಗ್, ಮೌಲಾನಾ ಅಜಾದ್ ಇನ್ನು ಮುಂತಾದವರನ್ನೊಳಗೊಂಡಂತೆ  ಅನೇಕರು ಹೋರಾಟಗಳನ್ನು ನಡೆಸಿ ತಮ್ಮ ತ್ಯಾಗ ಬಲಿದಾನಗಳಿಂದ ಸ್ವತಂತ್ರ್ಯ ಲಭಿಸಿದ್ದು, ಅದನ್ನು ಉಳಿಸಿಕೊಳ್ಳಲು ನಾವೆಲ್ಲಾ ವಿದ್ಯಾವಂತರಾಗಬೇಕು ಎಂದು ಸಲಹೆ ನೀಡಿದರು.
    ಬಾಜಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಲುವನಹಳ್ಳಿ ಹೆಚ್. ಶ್ರೀನಿವಾಸ್ ಮಾತನಾಡಿ ಭಾರತ ದೇಶಕ್ಕೆ ಗುಲಾಮಗಿರಿಯಿಂದ ವಿಮುಕ್ತಿಗೊಳಿಸಿ ಸ್ವತಂತ್ರರಾಗಿ ಬಾಳಲು ಸ್ವತಂತ್ರ ಹೋರಾಟಗಾರರ ಶ್ರಮ ಶ್ಲಾಘನೀಯ ಎಂದರು. ಮುಖ್ಯ ಶಿಕ್ಷಕಿ ನಸೀಮುನ್ನೀಸಾ ಭಾಗವಹಿಸಿ ಸ್ವತಂತ್ರ ಹೋರಾಟದ ಬಗ್ಗೆ ತಿಳಿಸಿಕೊಟ್ಟರು. 
    ಈ ಸಂದರ್ಭದಲ್ಲಿ ಶಿಕ್ಷಕಿ ಫರ್ವೀನ್‍ಉನ್ನೀಸಾ, ಶಹೀನ್‍ತಾಜ್, ರೇಷ್ಮಾ ಭಾಗವಹಿಸಿದ್ದರು. ಅಮೀರ್‍ಪಾಷ, ಸೈಯದ್ ಆಶುಂ, ಯಾರುಬ್‍ಪಾಷ ಉಪಸ್ಥಿತರಿದ್ದರು. ಕನ್ನಡ ಶಿಕ್ಷಕ ವೈ.ವೆಂಕಟೇಶ್ ಸ್ವಾಗತಿಸಿದರು.
    ಇದೇ ಸಂದರ್ಭದಲ್ಲಿ ಶಾಲಾ ಆವರಣದಲ್ಲಿ ಸಸಿಗಳನ್ನು ನಡೆಲಾಯಿತು.

ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ

Read These Next

ಬಿಜೆಪಿ ಹಿಂದುಳಿದವರನ್ನು ತುಳಿಯುವ ಸಂಚು ರೂಪಿಸಿದೆ, ಭಟ್ಕಳದಲ್ಲಿ ಬಿಜೆಪಿ ವಿರುದ್ಧ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ

ಬಿಜೆಪಿ ಮೇಲ್ನೋಟಕ್ಕೆ ಅಲ್ಪಸಂಖ್ಯಾತರನ್ನು ವಿರೋಧಿಸುವ ಪಕ್ಷವಾಗಿ ಮೇಲ್ನೋಟಕ್ಕೆ ಕರೆಯಿಸಿಕೊಳ್ಳುತ್ತಿದೆಯಾದರೂ, ವಾಸ್ತವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...