ಕೋಲಾರ: ಹಾಳಾದ ಸ್ಥಿತಿಯಲ್ಲಿ ದೊರೆತಿರುವ ವಾಹನಗಳು-ಗುರುತಿಸಿ ಪಡೆದುಕೊಳ್ಳಲು ಕರೆ

Source: shabbir | By Arshad Koppa | Published on 24th March 2017, 7:44 PM | State News |

ಕೋಲಾರ, ಮಾರ್ಚ್ 23:ಕೋಲಾರ ಗ್ರಾಮಾಂತರ ಪೋಲೀಸ್‍ಠಾಣಾ ವ್ಯಾಪ್ತಿಯಲ್ಲಿ ದೊರೆತಂತಹ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳು ಹಾಳಾದ ಸ್ಥಿತಿಯಲ್ಲಿ ನಿಂತಿದ್ದನ್ನು ಪರಿಶೀಲಿಸಲಾಗಿದ್ದು ಅವುಗಳಿಗೆ ನೊಂದಣಿ ಸಂಖ್ಯೆಗಳು ಇಲ್ಲವಾಗಿದೆ.
     ಇಂಜಿನ್ ಮತ್ತು ಚಾಸಿಸ್ ನಂಬರುಗಳು ಉಜ್ಜಿದಂತೆ ಕಾಣುತ್ತಿದ್ದು ಸಂಖ್ಯೆಗಳು ಸ್ಪಷ್ಟವಾಗಿ ಗೋಚರಿಸದಿರುವ ಸ್ಥಳದಲ್ಲಿ ಸುತ್ತಮುತ್ತಲಿನ ಸಾರ್ವಜನಿಕರನ್ನು ಪ್ರಶ್ನಿಸಲಾಗಿದೆ. ಸುಮಾರು ದಿನಗಳಿಂದ ಸದರಿ 05 ತ್ರಿಚಕ್ರ ವಾಹನಗಳನ್ನು ಮತ್ತು 15 ದ್ವಿಚಕ್ರ ವಾಹನಗಳನ್ನು ಅದರ ವಾರಸುದಾರರ ಹಾಗೂ ಸದರಿ ಸ್ಥಿತಿಯಲ್ಲಿರುವ ಕಾರಣರಾದವನ್ನು ಇದುವರೆಗೂ ನಾವು ಹಾಗೂ ಸಿಬ್ಬಂದಿಗಳು ಕೋಲಾರ ನಗರ ಠಾಣಾ ವ್ಯಾಪ್ತಿಯಲ್ಲಿ ಹುಡುಕಲಾಗಿ ಇದುವರೆಗೂ ಪತ್ತೆಯಾಗಿರುವುದಿಲ್ಲ. 
    ಠಾಣಾ ಆವರಣದಲ್ಲಿರುವ ವಾಹನಗಳು ಮಳೆಯಲ್ಲಿ ನೆಂದು ಬಿಸಿಗೆ ಒಣಗಿ ತುಕ್ಕು ಹಿಡಿದು ಸ್ಥಳದಲ್ಲಿಯೇ ನಾಶವಾಗುತ್ತಿದೆ. ಆದ ಕಾರಣ ಕಳೆದು ಹೋಗಿರುವ ಹಾಗೂ ಕಳ್ಳತನವಾಗಿರುವ ವಾಹನಗಳ ವಾರಸುದಾರರು ಯಾರಾದರೂ ಇದ್ದಲ್ಲಿ ಕೋಲಾರ ಗ್ರಾಮಾಂತರ ಠಾಣೆಗೆ ಬಂದು ವಾಹನಗಳನ್ನು ಗುರ್ತಿಸಿ ವಾಹನಗಳಿಗೆ ಸಂಬಂಧಿಸಿದ ದಾಖಲೆಗಳನ್ನು ನೀಡಿ ಬಿಸಿಕೊಳ್ಳಬಹುದಾಗಿದೆ ಎಂದು ಕೋಲಾರ ಗ್ರಾಮಾಂತರ ಠಾಣೆಯ ಸಬ್‍ಇನ್ಸ್‍ಪೆಕ್ಟರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 
 

Read These Next

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...